ಶ್ರೀನಿವಾಸಪುರ: ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ಮೂರು ವರ್ಷಗಳಿಂದ ಮಾಲೂರಿನ ಸಿ.ಲಕ್ಷ್ಮೀನಾರಾಯಣ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇವರು ಸಚಿವ ಕೆ.ಎಚ್.ಮುನಿಯಪ್ಪ ಬಣದವರಾಗಿ ಗುರುತಿಸಿಕೊಂಡಿದ್ದು ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿದ್ದು ಎಂದು ಮೂಲಗಳು ತಿಳಿಸಿವೆ.ಮೇಕಲ ನಾರಾಯಣಸ್ವಾಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿರುವುದು ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಾಗಿರುವ,
ಮೇಕಲ ನಾರಾಯಣಸ್ವಾಮಿ ಈದುವರಿಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿದ್ದು ಈಗ ಅಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ಗೆ ಮೇಕಲ ನಾರಾಯಣಸ್ವಾಮಿ ಸಾರಥ್ಯ ಪಕ್ಷ ಸಂಘಟನೆಗೆ ಹೊಸ ಚೈತನ್ಯದ ನಿರೀಕ್ಷೆ ಇದೆ. ಶ್ರೀನಿವಾಸಪುರ ಯುವ ಕಾಂಗ್ರೆಸ್ ನಲ್ಲಿ ಸಂಭ್ರಮ
ನೂತನ ಜಿಲ್ಲಾಧ್ಯಕ್ಷರಾಗಿ ಮೇಕಲ ನಾರಯಣಸ್ವಾಮಿ ಆಯ್ಕೆಯಾಗಿ ಶ್ರೀನಿವಾಸಪುರಕ್ಕೆ ಆಗಮಿಸಿದ ಅವರನ್ನು ತಾಲೂಕಿನ ಕಾಂಗ್ರೆಸ್ ಯುವ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಸ್ವಾಗತಿಸಿ ಸಂಭ್ರಮಿಸಿದರು.
Trending
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
- ಶ್ರೀನಿವಾಸಪುರ:ತಾಲೂಕು ಶಿಕ್ಷಕರ ಸಂಘದಲ್ಲಿ ಗುಂಪುಗಾರಿಕೆ,ಭುಗಿಲೆದ್ದ ಭಿನ್ನಮತ!
- ನಮ್ಮ ಜಮೀನು ನಮಗೆ ವಾಪಸ್ಸು ಕೋಡಿ DFO ಕಚೇರಿ ಮುಂದೆ ಪ್ರತಿಭಟನೆ!
- ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೊತ್ತೂರು ಮಂಜುನಾಥ್ ಅವಿರೋಧ ಆಯ್ಕೆ!
- ಶ್ರೀನಿವಾಸಪುರ: ಶಿಕ್ಷಕನ ವಿರುದ್ಧ ದೂರು ವಿರೋಧಿಸಿ ನೌಕರರ ಸಂಘದ ಬೃಹತ್ ಪ್ರತಿಭಟನೆ!
- ಹಿಂದುಳಿದ ಜಾತಿಗಳ ಜನಜಾಗೃತಿ ಸಮಾವೇಶಕ್ಕೆ ಶ್ರೀನಿವಾಸಪುರದಿಂದ ಜನ!
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
Saturday, September 12



