ಶ್ರೀನಿವಾಸಪುರ: ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಸರ್ಕಾರಿ ಕಚೇರಿಗಳ ಆವರಣವೇ ರಾತ್ರಿ ವೇಳೆಯಲ್ಲಿ ಕಾರ್ಗತ್ತಲಿನಲ್ಲಿ ಮುಳುಗಿರುವುದು ಸಾರ್ವಜನಿಕರಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ. ಕಚೇರಿ ಆವರಣದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಭದ್ರತೆ ಹಾಗೂ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.
ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಸಂರಕ್ಷಣೆ, ಕತ್ತಲಲ್ಲಿ ಆಗುತ್ತದ ಎಂಬುದು ಸಾರ್ವಜನಿಕರ ಮಾತು.
ರಾತ್ರಿ ವೇಳೆಯಲ್ಲಿ ಕಚೇರಿ ಆವರಣದಲ್ಲಿ ಸೂಕ್ತ ವಿದ್ಯುತ್ ದೀಪಗಳ ವ್ಯವಸ್ಥೆ ಇರಬೇಕಾಗಿರುವುದು ಸಾಮಾನ್ಯ ಭದ್ರತಾ ಕ್ರಮವಾಗಿದೆ. ಈ ಅವರಣದಲ್ಲಿ ಸರ್ಕಾರದ ಎರಡು ಕಚೇರಿಗಳು ಇವೆ ಅಲ್ಲಿ ರಾತ್ರಿ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ, ಕಚೇರಿಯ ಪ್ರವೇಶ ದ್ವಾರ, ವಾಹನ ನಿಲುಗಡೆ ಪ್ರದೇಶ, ಹಿಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಕು ಇಲ್ಲದಾಗ, ಅನಧಿಕೃತ ಪ್ರವೇಶ ಸೇರಿದಂತೆ ವಿವಿಧ ಅಹಿತಕರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗಬಹುದು ಎಂಬ ಆತಂಕ ಎಲ್ಲರನ್ನೂ ಕಾಡುವುದು ಸಹಜ.
ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE), ಲೋಕೋಪಯೋಗಿ ಇಲಾಖೆ (PWD) ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE), ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪವಿಭಾಗದ ಕಚೇರಿಗಳಿವೆ. ಆದರೆ ಈ ಕಚೇರಿಗಳ ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪವಿಭಾಗದ ಕಚೇರಿಗಳು ಗ್ರಾಮೀಣ ಪ್ರದೇಶಗಳ ರಸ್ತೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಕಾಮಗಾರಿಗಳ ತಾಂತ್ರಿಕ ಪರಿಶೀಲನೆ ಮತ್ತು ನಿರ್ವಹಣೆ ಸೇರಿದಂತೆ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ. ಇಂತಹ ಪ್ರಮುಖ ಇಲಾಖೆಗಳ ಕಚೇರಿ ಆವರಣದಲ್ಲೇ ಬೆಳಕಿನ ಕೊರತೆ ಕಂಡುಬರುವುದು ವಿಪರ್ಯಾಸ್ಯವೆ ಸರಿ.
ಸಿಸಿ ಟಿವಿ ಅಳವಡಿಸಿ ಜಾಗ್ರತೆ ವಹಿಸುವ ಕಾಲದಲ್ಲೂ ಕಾರ್ಗತ್ತಲ
ಸಿಸಿ ಟಿವಿಗಳನ್ನು ಅಳವಡಿಸಿ ನಿಗಾ ವ್ಯವಸ್ಥೆಯ ವಹಿಸುವ ಕಾಲಘಟ್ಟದಲ್ಲಿ ಸರ್ಕಾರಿ ಕಚೇರಿಗಳ ಆವರಣಕ್ಕೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣ ಎನ್ನುವುಂತಾಗಿದೆ.
ಕಚೇರಿ ಆವರಣಕ್ಕೆ ಬೆಳಕು ಒದಗಿಸುವಂತಹ ಮೂಲಭೂತ ವ್ಯವಸ್ಥೆಯನ್ನೇ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಅಧಿಕಾರಿಗಳ ಆಡಳಿತದ ಕಾರ್ಯವೈಖರಿ ಹೇಗಿರುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ.
ಸರ್ಕಾರಿ ಕಚೇರಿ ಅದು ಕಟ್ಟಡವಲ್ಲ; ಅದು ಸಾರ್ವಜನಿಕರ ವಿಶ್ವಾಸದ ಕೇಂದ್ರ. ಆ ವಿಶ್ವಾಸದ ಕೇಂದ್ರವೇ ಕಾರ್ಗತ್ತಲಿನಲ್ಲಿ ಇದೆ ಎನ್ನುವುದಾದರೆ ತಾಲೂಕು ಆಡಳಿತ ವ್ಯವಸ್ಥೆಯ ಬಗ್ಗೆ ಹಲವು ಅನುಮಾಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಕಚೇರಿ ಆವರಣದಲ್ಲಿ ಹೈಮಾಸ್ಟ್ ಅಥಾವ ಎಲ್ಇಡಿ ದೀಪಗಳನ್ನು ಅಳವಡಿಸಿ, ಸಿಸಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ರಾತ್ರಿ ವೇಳೆಯ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯ.
Trending
- ಶ್ರೀನಿವಾಸಪುರ: ಸರ್ಕಾರಿ ಕಚೇರಿಗಳ ಆವರಣವೇ ಕಾರ್ಗತ್ತಲು: ಸರ್ಕಾರಿ ವ್ಯವಸ್ಥೆ ಇದೇನಾ?
- ನಾಯಿ ಕಾಟ ತಡೆಯಿರಿ:ಕಮಿಷನರ್ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ!
- ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!
- ಬಿಜೆಪಿ ಶಾಸಕನ ಹೊತ್ತು ಮೆರೆದ ಪೊಲೀಸರು; ವಿಡಿಯೋ ವೈರಲ್,ಸಿಬ್ಬಂದಿ ವರ್ಗಾವಣೆ!
- ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
- ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
Saturday, September 19



