ಶ್ರೀನಿವಾಸಪುರ:ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶಬರಿಮಲೆ ಮಾದರಿಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. 18 ಮೆಟ್ಟಿಲುಗಳನ್ನು ನಿರ್ಮಿಸಿ, ಅಯ್ಯಪ್ಪ ಕುಳಿತಿರುವಂತೆ ಯೋಗಾ ಗಣಪನನ್ನು ಪ್ರತಿಷ್ಟಾಪಿಸಿದ್ದಾರೆ.
ಭಕ್ತರಿಗೆ ವಿಭಿನ್ನ ಧಾರ್ಮಿಕ ಅನುಭವ ನೀಡುವ ಉದ್ದೇಶದಿಂದ ಗಣೇಶೋತ್ಸವದ ಸಂಭ್ರಮ ಹೆಚ್ಚಿಸುವ ಆಲೋಚನೆಯಲ್ಲಿ ಶಬರಿಮಲೆ ಕ್ಷೇತ್ರದ ಶೈಲಿಯನ್ನು ಹೋಲುವಂತೆ 18 ಮೆಟ್ಟಿಲುಗಳನ್ನು ಅಳವಡಿಸಲಾಗಿದೆ.

18 ಮೆಟ್ಟಿಲುಗಳು ಅದಕ್ಕೆ ಅಳವಡಿಸಿರುವ ದೀಪಾಲಂಕಾರ ಭಕ್ತರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಶಬರಿಮಲೆ ಯಾತ್ರೆಯಲ್ಲಿ 18 ಪವಿತ್ರ ಮೆಟ್ಟಿಲುಗಳಿಗೆ ವಿಶೇಷ ಮಹತ್ವವಿದೆ. ಇದೇ ಪರಿಕಲ್ಪನೆಯನ್ನು ಗಣೇಶೋತ್ಸವದಲ್ಲೂ ಅಳವಡಿಸುವ ಮೂಲಕ ಶಬರಿಮಲೆ ಯಾತ್ರೆಯ ಅನುಭವವನ್ನು ಸ್ಥಳೀಯವಾಗಿ ಮೂಡಿಸುವ ಪ್ರಯತ್ನ ಮಾಡಿದ್ದಾರಂತೆ. ಗಣೇಶೋತ್ಸವದಲ್ಲಿ ಹೊಸತನದೊಂದಿಗೆ ಧಾರ್ಮಿಕ ಭಾವನೆಯನ್ನು ಮೂಡಿಸಿ ಭಕ್ತಿಯ ವಾತಾವರಣ ಸೃಷ್ಟಿಸಿದ್ದು ಗಣೇಶನ ಮೂರ್ತಿ ಹಾಗೂ ಅಲಂಕಾರಗಳೊಂದಿಗೆ ಈ ವಿಶೇಷ ವ್ಯವಸ್ಥೆ ಉತ್ಸವಕ್ಕೆ ಮತ್ತಷ್ಟು ಮೆರುಗು ತಂದಿದೆ. ಶಬರಿಮಲೆ ಕ್ಷೇತ್ರ ನೋಡದವರಿಗೆ 18 ಮೆಟ್ಟಿಲುಗಳ ಅಲಂಕಾರ ದೃಶ್ಯ ಗಮನ ಸೆಳೆಯುತ್ತಿದ್ದು
ಗಣೇಶನ ದರ್ಶನ ಪಡೆಯುತ್ತಿರುವ ಭಕ್ತರಿಗೆ ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡಿದ ಅನುಭವವ ನೀಡುತ್ತಿದಿಯಂತೆ.



