ನ್ಯೂಜ್ ಡೆಸ್ಕ್: ಪೊಲೀಸ್ ಸಿಬ್ಬಂದಿ ಬಿಜೆಪಿ ಶಾಸಕನನ್ನು ಹೊತ್ತು ಕುಣಿದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವೇಳ ಬಿಜೆಪಿ ಶಾಸಕನನ್ನು ಹೊತ್ತು ಕುಣಿದ ಇಬ್ಬರು ಸಂಚಾರಿ ಪೊಲೀಸರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ಎಲ್ಲಿ ನಡೆದಿರುವುದು
ಇದು ಕರ್ನಾಟಕದ ಶಿವಮೊಗ್ಗ ನಗರದಲ್ಲಿ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವೇಳ ಬಿಜೆಪಿ ಶಾಸಕ ಚೆನ್ನಬಸಪ್ಪರನ್ನು ಹೊತ್ತು ಕುಣಿದ ಇಬ್ಬರು ಸಂಚಾರಿ ಪೊಲೀಸರನ್ನು ಬೇರೆಡೆಗೆ ಎತ್ತಂಗಡಿ ಮಾಡಲಾಗಿದೆ.
ಇಬ್ಬರು ಪೋಲಿಸರ ವರ್ಗಾವಣೆ
ಶಿವಮೊಗ್ಗ ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಬಳಿ ಸಾಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಚನ್ನಬಸಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಯೂನಿಫಾರ್ಮ್ ಧರಿಸಿದ್ದ ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಗಣೇಶ್ ಹಾಗೂ ಪ್ರಕಾಶ್.ಎಂಬ ಇಬ್ಬರು ಪೋಲಿಸರು ಶಾಸಕ ಚೆನ್ನಬಸಪ್ಪರನ್ನು ಹೊತ್ತು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗಣೇಶ್ ರನ್ನ ತೀರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಗೆ, ಪ್ರಕಾಶ್.ಎ.ಕೆ ರನ್ನ ಸೊರಬದ ಆನವಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಎಸ್ಪಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣಪತಿಯನ್ನ ಪ್ರತಿಷ್ಟಾಪಿಸಲಾಗಿತ್ತು. ಪೂಜೆಯ ಬಳಿಕ ಅದೇ ದಿನ ಸಂಜೆ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆ ಮೆರವಣಿಗೆ ಆಯೋಜಿಸಲಾಗಿತ್ತು.
Trending
- ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!
- ಬಿಜೆಪಿ ಶಾಸಕನ ಹೊತ್ತು ಮೆರೆದ ಪೊಲೀಸರು; ವಿಡಿಯೋ ವೈರಲ್,ಸಿಬ್ಬಂದಿ ವರ್ಗಾವಣೆ!
- ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
- ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
- ಶ್ರೀನಿವಾಸಪುರ:ತಾಲೂಕು ಶಿಕ್ಷಕರ ಸಂಘದಲ್ಲಿ ಗುಂಪುಗಾರಿಕೆ,ಭುಗಿಲೆದ್ದ ಭಿನ್ನಮತ!
- ನಮ್ಮ ಜಮೀನು ನಮಗೆ ವಾಪಸ್ಸು ಕೋಡಿ DFO ಕಚೇರಿ ಮುಂದೆ ಪ್ರತಿಭಟನೆ!
Wednesday, September 16



