ನ್ಯೂಜ್ ಡೆಸ್ಕ್:ಬೀದಿ ನಾಯಿಗಳ ಕಾಟ ತಡೆಯುವಂತೆ ಒತ್ತಾಯಿಸಿ ಸಾರ್ವಜನಿಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ ನಗರದಲ್ಲಿ ನಡೆದಿದೆ. ನಿಫಾಡ್ Niphad ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿರುವ ಜನರು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ನಗರ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ನಾಯಿಗಳನ್ನು ಚೀಲಗಳಲ್ಲಿ ತುಂಬಿಕೊಂಡು ತಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತದ ವೈಫಲ್ಯವನ್ನು ಖಂಡಿಸಿ ಯುವಸೇನಾ ಕಾರ್ಯಕರ್ತರು ನಗರದ ಮುಖ್ಯಾಧಿಕಾರಿಯ ಕಚೇರಿಗೆ ಬೀದಿ ನಾಯಿಗಳನ್ನು ಟೇಬಲ್ ಮೇಲೆಯೇ ಬಿಟ್ಟು ಆಕ್ರೋಶ ಹೊರಹಾಕಿದ್ದಾರೆ. ನಿಫಾಡ್ ನಗರ ಪಂಚಾಯಿತಿ ಕಚೇರಿಯಲ್ಲಿ ಸ್ಥಳೀಯ ಶಿವಸೇನೆಯ ಯುವ ಘಟಕದ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಈ ಹೈಡ್ರಾಮಾ ನಡೆಸಿದ್ದಾರೆ.
ನಿಫಾಡ್ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದು, ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಹಲವು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದರೂ ನಗರ ಪಂಚಾಯತ್ ಆಡಳಿತ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಿಗಳು ಟೇಬಲ್ ಮೇಲೆಲ್ಲಾ ಓಡಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅಧಿಕಾರಿಯ ಮೇಜಿನ ಮೇಲೆ ನೋಟುಗಳ ಹಾರವನ್ನಿಟ್ಟ ಶಿವಸೇನಾ ಕಾರ್ಯಕರ್ತರು ಅಪಹಾಸ್ಯ ಮಾಡಿದ್ದಾರೆ.
ಗಣೇಶೋತ್ಸವಕ್ಕೂ ನಾಯಿ ಕಾಟ
ಪ್ರಸ್ತುತ ನಡೆಯುತ್ತಿರುವ ಗಣೇಶೋತ್ಸವದ ಸಂದರ್ಭದಲ್ಲೂ ಬೀದಿ ನಾಯಿಗಳ ಕಾಟ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗಣೇಶ ಪೆಂಡಾಲ್ಗಳಿಗೆ ಭೇಟಿ ನೀಡುವ ಭಕ್ತರು ಹಾಗೂ ಸಾರ್ವಜನಿಕರು ನಾಯಿಗಳ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಂಧವೆ ಆರೋಪಿಸಿದ್ದಾರೆ.
ನಗರದಲ್ಲಿ ತಕ್ಷಣವೇ ನಾಯಿಗಳ ಸಂತಾನಹರಣ ಚಿಕಿತ್ಸೆ ಅಭಿಯಾನ ಆರಂಭಿಸಬೇಕು. ನಾಯಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆ ಮಾಡಬೇಕು ಹಾಗೂ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಮುಖಂಡರು ಒತ್ತಾಯಿಸಿದ್ದಾರೆ.
Trending
- ನಾಯಿ ಕಾಟ ತಡೆಯಿರಿ:ಕಮಿಷನರ್ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ!
- ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!
- ಬಿಜೆಪಿ ಶಾಸಕನ ಹೊತ್ತು ಮೆರೆದ ಪೊಲೀಸರು; ವಿಡಿಯೋ ವೈರಲ್,ಸಿಬ್ಬಂದಿ ವರ್ಗಾವಣೆ!
- ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
- ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
- ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
- ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
- ಶ್ರೀನಿವಾಸಪುರ:ತಾಲೂಕು ಶಿಕ್ಷಕರ ಸಂಘದಲ್ಲಿ ಗುಂಪುಗಾರಿಕೆ,ಭುಗಿಲೆದ್ದ ಭಿನ್ನಮತ!
Friday, September 18



