ಶ್ರೀನಿವಾಸಪುರ:ಕುಮಾರಸ್ವಾಮಿ,ಬೊಮ್ಮಾಯಿ ಬಿಜೆಪಿ ಕುರಿತಾಗಿ ನಾನು ಮಾತನಾಡಲ್ಲ ಅವರ ಬಗ್ಗೆ ಮಾತನಾಡಿದಷ್ಟು ವೇಸ್ಟ್ ಅವರನ್ನು ಬಿಟ್ಟು ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ತರುವ ಬಗ್ಗೆ ಮಾತನಾಡೋಣ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಕ್ಷದ ಶಾಸಕಾಂಗ ಪಕ್ಷದ ನಿಯಾಮವಳಿಗಳಂತೆ ಶಿವಕುಮಾರ್ ಅಥಾವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಆದರೆ ದೇಶಾದ್ಯಂತ ಹಾಗು ರಾಜ್ಯದಲ್ಲಿ ಜನತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ ಅದನ್ನು ನಾವ್ಯಾರು ತಡೆಯಲು ಸಾಧ್ಯವಾಗಿವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ಬುಧವಾರ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಜೋಡೊ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತೆಲಗು ಭಾಷೆಯಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಭಾವನಾತ್ಮಕವಾದ ಭಾಷಣ ಮಾಡಿದ ರಮೇಶ್ ಕುಮಾರ್ ಭಾಷಣದ ಉದ್ದಕ್ಕೂ ಸಿದ್ದರಾಮಯ್ಯನವರ ಕಾರ್ಯಕ್ರಮಗಳು, ಇಂದಿರಾಗಾಂಧಿಯವರ ಹತ್ಯೆ ರಾಜೀವ್ ಗಾಂಧಿ ಹತ್ಯೆ ನೆಹರು ಕುಟುಂಬದ ತ್ಯಾಗದ ಚರಿತ್ರೆ ಕುರಿತಾಗಿ ರಾಹುಲ್ ಗಾಂಧಿ ಬಾಲ್ಯದಲ್ಲಿ ಅನುಭವಿಸಿದ…
Author: Srinivas_Murthy
ಶ್ರೀನಿವಾಸಪುರ: ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ಸಮಾಜದಲ್ಲಿ ಗುರುತಿಸಕೊಳ್ಳಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಸಣ್ಣ ಸಮುದಾಯಗಳಲ್ಲಿನ ಆಂತರಿಕ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದಲ್ಲಿ ವಿಭಿನ್ನರಾಗಿ ಗೌರವಿತರಾಗಿ ಗುರುತಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗು ನಾಮಧಾರಿ ಶೆಟ್ರ ಸಮುದಾಯದ ಹಿರಿಯ ಮುಖಂಡ ಇಂದಿರಾಭವನ್ ರಾಜಣ್ಣ ಕರೆ ಇತ್ತರು ಅವರು ತಾಲೂಕಿನ ಅರಿಕೆರೆ ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಅವರಣದಲ್ಲಿ ಅಯೋದ್ಯ ನಗರ ನಾಮಧಾರಿ ಶೆಟ್ರು ಸಮಾಜ ಆಯೋಜಿಸಿದ್ದ 2021-22 ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾತಂತ್ರ‍್ಯ ಹೋರಾಟದಲ್ಲಿ ನಾಯಕತ್ವದ ಮುಂಚೂಣಿಯಲ್ಲಿದ್ದ ನಮ್ಮ ಸಮುದಾಯ ಜಾತಿ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಇದೊಂದು ದುರಂತ ಎಂದ ಅವರು ತೀರಾ ಹಿಂದುಳಿದ ಅತ್ಯಂತ ಚಿಕ್ಕ ಸಮುದಾಯವಾಗಿರುವ ನಮ್ಮ ಸಮಾಜದ ಬಂಧುಗಳು ಇವತ್ತಿನ ವ್ಯವಸ್ಥೆಯಲ್ಲಿ ಕೂಲಿ ಹಾಗು ಕೃಷಿ ಕಾರ್ಮಿಕರಾಗಿ ಸಣ್ಣ ಪುಟ್ಟ ಗೂಡಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ ನಮ್ಮ ಸಮುದಾಯದಲ್ಲಿ ಯಾರು ಸರ್ಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿಲ್ಲ ಅದು…
ಶ್ರೀನಿವಾಸಪುರ: ರಥಸಪ್ತಮಿ ದಿನದಂದು ಸೂರ್ಯೋದಯಕ್ಕೂ ಮುನ್ನ ಶೂಚಿರಭೂತರಾಗಿ ಸೂರ್ಯ ನಮಸ್ಕಾರ ಮಾಡಿದರೆ ಮಾನಸಿಕ ನೆಮ್ಮದಿ ಮಾನಸಿಕ ದೈಹಿಕ ಸಮತೋಲನ ವೃದ್ಧಿಯಾಗುತ್ತದೆ ಕಾಯಿಲೆಗಳಿಂದ ದೂರವಾಗಿರುತ್ತಾರೆ ಎಂದು ಯೋಗಗುರು ಚೌಡಪ್ಪ ಹೇಳಿದರು.ಅವರು ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿನ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.ಸೂರ್ಯ ಭಗವಾನನ ಜನುದಿನವಾಗಿ ರಥಸಪ್ತಮಿಯನ್ನು ಆಚರಿಸುವುದು ನಮ್ಮ ಸಂಪ್ರದಾಯ ಸಂಕ್ರಾಂತಿಗೆ ದಕ್ಷಿಣಾಯನದಿಂದ ಉತ್ತರಾಯಣ ಕಡೆ ಪ್ರಯಾಣಿಸುವ ಸೂರ್ಯ ಸಂಪೂರ್ಣ ಉತ್ತರ ದಿಕ್ಕಿಗೆ ತಿರುಗುತ್ತಾನೆ. ಕೊಟ್ಯಾನು ಕೋಟಿ ದೇವತೆಗಳು ಸೂರ್ಯನ ಪತ ಸಂಚಲನಕ್ಕೆ ಸಾಕ್ಷೀಭೂತರಾಗಿರುತ್ತಾರೆಂದು ಪ್ರಕೃತಿ ಪರಂಪರೆ ಸಾರುತ್ತದೆ.ಪತ ಸಂಚಲನ ಬದಲಾವಣೆಯಿಂದ ಕೇವಲ ಆಧ್ಯಾತ್ಮಿಕವಾದವಷ್ಟೆ ಅಲ್ಲ ಪ್ರಾಕೃತಿಕವಾಗಿ ಪರಿಸರಸದ ಮೇಲು ಬದಲಾವಣೆ ಕಾಣಬಹುದಾಗಿದೆ ಸೂರ್ಯನ ಪ್ರಖರತೆ ಹೆಚ್ಚುತ್ತದೆ ಮರಗಿಡ ಸಸ್ಯ ಶ್ಯಾಮಲದ ಮೇಲೆ ಪರಿಣಾಮ ಬೀರುತ್ತದೆ ಪ್ರಕೃತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಕಾಣಸಿಗುತ್ತದೆ ಜೊತೆಗೆ ಮನುಷ್ಯರಿಗೆ ದೈಹಿಕ ಕಾಯಿಲೆಗಳು ದೂರವಾಗಲು ಸೂರ್ಯಕಿರಣಗಳು ಶಕ್ತಿ ನೀಡುತ್ತದೆ. ಬೀಜ ಮಂತ್ರಗಳೊಂದಿಗೆ…
ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಬಯಕೆ ನನಗೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ YANಹೊಸದಾಗಿ ಬಾಂಬ್ ಸಿಡಿಸಿದ್ದಾರೆ. ಅವರು ತಾಲೂಕಿನಲ್ಲಿ ನಡೆದಂತ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಂತರ ತಮ್ಮ ಸ್ವಗ್ರಾಮ ಯಚ್ಚನಹಳ್ಳಿಯ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಅಭ್ಯರ್ಥಿಯಾಗುವ ಬಯಕೆ ವ್ಯಕ್ತಪಡಿಸಿದರು, ನಾನೇನು ರಾಜಕೀಯ ಸನ್ಯಾಸಿಯಲ್ಲಾ ಎಂದ ಅವರು ಭಾರತೀಯ ಜನತಾ ಪಕ್ಷ, ಪ್ರಾದೇಶಿಕ ಪಕ್ಷ ಅಲ್ಲ ರಾಷ್ಟ್ರೀಯ ಪಕ್ಷ, ಪಕ್ಷದ ಸಿದ್ದಾಂತ ಇರುವಂತವರನ್ನು ಗುರುತಿಸಿ ಟಿಕೆಟ್ ಕೋಡಲಾಗುತ್ತದೆ, ಕುಟುಂಬ ರಾಜಕಾರಣದ ಪ್ರಾದೇಶಿಕ ಪಕ್ಷಗಳಾದರೆ ಅಪ್ಪ ಮಕ್ಕಳು ಕೂತು ಸೇರಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ ಇಲ್ಲಿ ಅದೇಲ್ಲ ನಡೆಯಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹಣದ ಚೀಲ ಹೊತ್ತು ಕ್ಷೇತ್ರದಲ್ಲಿ ತಿರುಗುತ್ತಿರುವರಿಗೆ ಟಾಂಗ್ ನೀಡಿದರು.ಕಾಂಗ್ರೇಸ್…
ಶ್ರೀನಿವಾಸಪುರ: ಗಣರಾಜ್ಯೋತ್ಸವ ಆಚರಿಸಲು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಿಕ್ಷಕನಿಗೆ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿರುತ್ತಾರೆ.ಬೆಂಗಳೂರು-ಕಡಪಾ ರಸ್ತೆಯ ಲಕ್ಷ್ಮಿಪುರ ಕ್ರಾಸ್ ಬಳಿ ಅಪಘಾತ ನಡೆದಿದ್ದು ಗಾಯಗೊಂಡಿರುವ ಶಿಕ್ಷಕನನ್ನು ದೇವಲಪಲ್ಲಿ ಅಶೋಕ್ ಎಂದು ಗುರುತಿಸಲಾಗಿದೆ ಇವರು ತಾಲೂಕಿನ ರಾಯಲ್ಪಾಡು ಪ್ರೌಡಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದುತಮ್ಮ ಶಾಲೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ತಮ್ಮ ಗ್ರಾಮದಿಂದ ರೋಣೂರು,ಲಕ್ಷ್ಮೀಪುರ ಮಾರ್ಗವಾಗಿ ಹೋಗಿ ಲಕ್ಷ್ಮಿಪುರ ಕ್ರಾಸ್ ಬಳಿ ಬೆಂಗಳೂರು-ಕಡಪ ಹೆದ್ದಾರಿಗೆ ಹೋಗುವಾಗ ವೇಗವಾಗಿ ಬಂದ ಸಿಮೆಂಟ್ ಟ್ಯಾಂಕರ್ ಬಡಿದು ಶಿಕ್ಷಕ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಅಪಘಾತ ವಾಗುತ್ತಿದ್ದಂತೆ ಸ್ಥಳಿಯರು ಅಂಬುಲೆನ್ಸ್ ಮೂಲಕ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಗಂಬೀರವಾಗಿ ಗಾಯಗೊಂಡಿರುವ ಶಿಕ್ಷಕನ ಎರಡು ಕಾಲುಗಳು ಮುರಿದಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿದೆ ಆದರೆ ಪ್ರಾಣಪಾಯ ಇಲ್ಲ ಎನ್ನಲಾಗಿದೆ,ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಜ್ ಡೆಸ್ಕ್: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರಾಜ್ಯದ ಪ್ರಖ್ಯಾತ ತಮಟೆ ಕಲಾವಿದ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ.ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮಟೆ ವಾದಕಾರದ ಕಥೆವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿಯಾಗಿರುವ 77 ವರ್ಷದ ಮುನಿವೆಂಕಟಪ್ಪ ಗ್ರಾಮದ ದಿವಂಗತ ಪಾಪಣ್ಣ, ಹಾಗು ದಿವಂಗತ ಮುನಿಗಂಗಮ್ಮ ನವರ ಪುತ್ರ ಮುನಿವೆಂಕಟಪ್ಪ ಅವರಿಗೆ 17 ವರ್ಷವಿದ್ದಾಗ ತಂದೆ ಪಾಪಣ್ಣ ಅಪಘಾತದಲ್ಲಿ ನಿಧನ ಹೊಂದುತ್ತಾರೆ ತಾಯಿ ಮುನಿಗಂಗಮ್ಮ ವಯೋಸಹಜ ಕಾಯಿಲೆಯಿಂದಾಗಿ 7 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ.ಮುನಿವೆಂಕಟಪ್ಪ 4ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು ಕನ್ನಡ ಓದಲು ಬರೆಯಲು ಬರುತ್ತೆ.ಮುನಿವೆಂಕಟಪ್ಪನವರಿಗೆ 17 ವರ್ಷದ ಪ್ರಾಯ ಇದ್ದಾಗ ಅವರ ತಂದೆ ಪಾಪಣ್ಣ ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮದಲ್ಲಿ ತಮಟೆ ಬಾರಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಗ್ರಾಮಸ್ಥರ ಮನವಿಯಂತೆ ಮುನಿವೆಂಕಟಪ್ಪ ತಮಟೆ ಬಾರಿಸಲು ಆರಂಭಿಸುತ್ತಾರೆನಂತರ ದಿನಗಳಲ್ಲಿ ಅದು ವೃತ್ತಿಯಾಗುತ್ತದೆ ತಮಟೆ ಭಾರಿಸುವುದು ಗಂಡು ಕಲೆ ನಾದದ ಗತ್ತು ಹಿಡಿದು…
ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ AAP ಆಮ್ ಆದ್ಮಿ ಪಕ್ಷ ಗಟ್ಟಿಯಾಗಿ ನೆಲೆ ನಿಲ್ಲಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಪ್ರತಿ ಗ್ರಾಮದಲ್ಲೂ ಮತದಾರರನ್ನು ಜಾಗೃತ ಗೊಳಿಸುವಂತ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು AAP ಆಮ್ ಆದ್ಮಿ ಪಕ್ಷದ ಚುನಾವಣಾ ಆಕಾಂಕ್ಷಿ ಡಾ.ವೆಂಕಟಾಚಲ ಹೇಳಿದರು ಅವರು ಪಟ್ಟಣದ ಶ್ರೀ ಮಾರುತಿ ಸಭಾ ಭವನದಲ್ಲಿ ಆಯೋಜಿಸಿದ್ದ ಚುನಾವಣೆ ಸಿದ್ದತಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಬದಲಾವಣೆಗೆ ಜನತೆ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಕೋರಿದ ಅವರುಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಗಳಾಗಿ ಬದಲಾವಣೆ ತಂದಿರುತ್ತಾರೆ ದೆಹಲಿಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ವ್ಯವಸ್ಥೆಯನ್ನು ಮೀರಿಸಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಈಗಾಗಲೆ ತಾಲೂಕಿನಾದ್ಯಂತ ಸಾರ್ವಜನಿಕ ಸಂಪರ್ಕ ಅಭಿಯಾನ ಶುರುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸೂಚನೆಯಂತೆ ತಾಲೂಕಿನ ಐವತ್ತು ಸಾವಿರ ಜನ ಸಂಖ್ಯೆಗೆ ಒಂದು ಘಟಕ ಎಂದು ಹತ್ತು ಸಾವಿರ ಜನ ಸಂಖ್ಯೆಗೆ ಒಂದು ವೃತ್ತ ಎಂದು ವಿಂಗಡನೆ ಮಾಡುವ ಮೂಲಕ ದೆಹಲಿ…
ಶ್ರೀನಿವಾಸಪುರ: ಗ್ರಾಮೀಣ ಜನರ ಹಾಗೂ ರೈತರ ಅನುಕೂಲಕ್ಕಾಗಿ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು ಇದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜು ಹೇಳಿದರು ಅವರು ತಾಲೂಕು ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಪಂಚಾಯಿತಿ ಅಲವಾಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಜನರ ಸಣ್ಣಪುಟ್ಟ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿಯನ್ನು ನಿವಾರಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯಾಗಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿಕಾರ್ಯಕ್ರಮ ರೂಪಿಸಿ ಸ್ಥಳದಲ್ಲಿಯೆ ಪರಿಹಾರ ಸೂಚಿಸಲಾಗುತ್ತಿದೆ ಎಂದರು.ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ಈ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಕೊಡಬಹುದು ಸಾದ್ಯವಾದರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಗುವುದು ಸಾದ್ಯವಾಗದಿದ್ದರೆ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.ತಹಶೀಲ್ದಾರ್ ಶರೀನ್ ತಾಜ್ ಮಾತನಾಡಿ, ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡ…
ಶ್ರೀನಿವಾಸಪುರ:ಕೆಸಿ ವ್ಯಾಲಿ ಯೋಜನೆಯನ್ನು ಮೂರನೆ ಹಂತದಲ್ಲಿ ಶುದ್ಧಿಕರಿಸಿ ಹರಿಸಲಾಗುವುದು ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು ಅವರು ತಾಲೂಕಿನ ಯಲ್ದೂರಿನಲ್ಲಿ ನಡೆದ ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದರ ಜೊತೆಗೆ ಎತ್ತಿನ ಹೊಳೆ ನೀರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ನೀಡಲಾಗುವುದು ಎಂದ ಅವರು ಕೆ.ಸಿ ವ್ಯಾಲಿ ನೀರು ಮೂರನೇ ಹಂತದಲ್ಲಿ ಶುದ್ದೀಕರಿಸಲು ಈಗಾಗಲೇ ಪೂರ್ವ ತಯಾರಿಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಮಾಡೇ ಮಾಡುತ್ತೇವೆ 400 ಎಂ.ಎಲ್.ಡಿ ಯಿಂದ 600 ಎಂ.ಎಲ್.ಡಿ ಗೆ ಹೆಚ್ಚಿಸುತ್ತೇವೆ ಎಂದರು.ಬದಲಾದ ಕಾಲಘಟ್ಟದಲ್ಲಿ ಮೌಲ್ಯಗಳು ಇಲ್ಲದ ಜೀವನ ಸಾಗುತ್ತಿದೆ ಅಧುನಿಕತೆ ಹೆಚ್ಚಾದಷ್ಟು ಮಾನವೀಯತೆ ಸತ್ತುಹೊಗುತ್ತಿದೆ ಮಾನವೀಯ ಸಂಬಂಧಗಳನ್ನು ಹಾಳುಮಾಡುತ್ತಿದೆ ಅವಮಾನವೀಯತೆ ಅವಸ್ತಾವಿಕತೆ ಮೆರೆಯುತ್ತಿದೆ ಮಕ್ಕಳಿಗೆ ಗೋವಿನ ಮಾತು,ನೀತಿ, ಅರಣ್ಯದಲ್ಲಿನ ಹುಲಿಯ ಗೋವಿನ ಔದಾರ್ಯತೆ ಇಂತಹ ನೀತಿಕಥೆಗಳನ್ನು ತಿಳಿಸುವರು ಯಾರು ಮೊಬೈಲ್ ಟಿವಿಗಳು ವಿದ್ಯಾರ್ಥಿಗಳಿಗೆ ಸ್ವಲ್ಪ ಉಪಕಾರಿಯಾದರೆ ದೊಡ್ಡಮಟ್ಟದಲ್ಲಿ ಅಪಾಯಕಾರಿಯಾಗಿ ಕಾಡುತ್ತಿದೆ ಪ್ರಸ್ತುತ ದಿನಗಳಲ್ಲಿ ನೀತಿ ನ್ಯಾಯ…
ಶ್ರೀನಿವಾಸಪುರ:ಶ್ರೀನಿವಾಸಪುರದ ಶಾಸಕ ರಮೇಶಕುಮಾರ್ ಮಾತನಾಡುವುದಕ್ಕೂ ಅವರ ನಡವಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ ಎಂದು ಜೆಡಿಎಸ್ ಯುವ ಮುಖಂಡ ಹಾಗು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಯುವ ಜನತಾದಳದ ಕಾರ್ಯಕರ್ತರ ಯುವಘರ್ಜನೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರಮೇಶ್ ಕುಮಾರ್ ನಡವಳಿಕೆಯಂತೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಮಾಣ ಮಾಡಿದ್ದರು ಆದರೆ ಅವರು ಹರಸಿದ್ದು ಕೊಳಚೆ ನೀರು ಹೇಳುವುದು ಮಾತ್ರ ಶುದ್ಧವಾದ ಮಾತಾಗಿರುತ್ತದೆ ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಆದರೆ ಅವರನ್ನು ಕರೆತರುವಲ್ಲಿ ಮುಂಚೂಣಿಯಲ್ಲಿರುವ ರಮೇಶ್ ಕುಮಾರ್ ಸತತವಾಗಿ ಎರಡು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿದ್ದವರು ಇನ್ನೂ ಕೆಲ ಕಾಂಗ್ರೆಸ್‌ನ ಶಾಸಕರಿದ್ದರು, ಸಿದ್ದರಾಮಯ್ಯ ಬಂದು ಅಭಿವೃದ್ಧಿ ಮಾಡುವ ಹಾಗಿದ್ದರೆ ಇದುವರಿಗೂ ಇವರೇನು ಮಾಡ್ತಾ ಇದ್ದರು ಯಾಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿಶ್ರೀನಿವಾಸಪುರದ ಮಾವಿನ ಬೆಳೆಗಾರರು ಸಮಸ್ಯಯಲ್ಲಿದ್ದಾಗ…


