ನ್ಯೂಜ್ ಡೆಸ್ಕ್:ಪುರುಷ ಧೋರಣೆಯ ಪ್ರಪಂಚದಲ್ಲಿ ನ್ಯಾಯವಾದಿಯೊಬ್ಬ ಜೀವನ ಸಂಗಾತಿಯನ್ನು ಹೊರಗಿನ ಪ್ರಪಂಚದಿಂದ ದೂರವಾಗಿ ಹೊರಗೆ ಕಳಿಸದೆ 14 ವರ್ಷ ಕಾಲ ಗೃಹ ಬಂಧನದಲ್ಲಿ ಇರಿಸುವ ಮೂಲಕ ನರಕಯಾತನೆ ತೊರಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.!
14 ವರ್ಷ ದಾಂಪತ್ಯದಲ್ಲಿ ಗೃಹಣಿ ಸುಪ್ರಿಯಾಗೆ ಗಂಡನ ಮನೆ ಬಿಟ್ಟು ಬೇರೊಂದು ಪ್ರಪಂಚವೇ ಅರಿಯದ ಪರಿಸ್ಥಿತಿ ಕಥೆ ಕೇಳಿದವರು ಬೆಚ್ಚಿ ಬೀಳುವಂತಾಗಿದೆ.ಆಕೆಯನ್ನು ವಿವಾಹವಾಗಿರುವ ಶ್ಯಾಡಿಸ್ಟ ಗಂಡ ಆಂಧ್ರಪ್ರದೇಶದ ವಿಜಯನಗರದ ಗೋದಾವರಿ ಮಧುಸೂದನ್ ಎಂದು ಗುರುತಿಸಲಾಗಿದೆ.
ಆಂಧ್ರದ ಪುಟ್ಟಪುರ್ತಿ ಮೂಲದ ಸಾಯಿ ಸುಪ್ರಿಯಾ ಎಂಬಾಕೆಯನ್ನು ಗೋದಾವರಿ ಮಧುಸೂದನ್ ಎಂಬ ವಕೀಲ 2008 ರಲ್ಲಿ ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ.ಮಧುಸೂದನ್ ಅವರ ತಾಯಿ ಗೋದಾವರಿ ಉಮಾಮಹೇಶ್ವರಿ ಮತ್ತು ಕಿರಿಯ ಸಹೋದರ ದುರ್ಗಾಪ್ರಸಾದ್ ಅವರೊಂದಿಗೆ ವಾಸಿಸುತ್ತಿದ್ದು,ಮದುವೆಯಾಗಿ ಮೂರು ವರ್ಷಗಳ ಚನ್ನಾಗಿಯೇ ಇದ್ದ ಮಧುಸೂದನ್-ಸುಪ್ರಿಯಾ ದಂಪತಿ ನಂತರದಲ್ಲಿ ಅತ್ತೆ ಮನೆಯವರ ಮಾನಸೀಕ ಕಿರುಕುಳ ನಿಂದನೆಯ ಮಾತುಗಳಿಂದ ಸುಪ್ರಿಯಾರವರನ್ನು ಮನೆಯಿಂದ ಹೊರಗೆ ಕಳುಹಿಸದೆ ಆಕೆಗೆ ಭಾಹ್ಯ ಪ್ರಪಂಚದ ಸಂಪರ್ಕವನ್ನು ಕಡಿತ ಗೊಳಿಸಿ ಮನೆಗೆ ಸೀಮಿತವಾಗಿಸಿದ ಮಧುಸೂದನ್ ಮತ್ತು ಅವರ ತಾಯಿ ನರಕಯಾತನೆ ತೊರೆಸಿದ್ದಾರೆಂದು ಆರೋಪಿಸಲಾಗಿದೆ.
ಎಂ.ಎ.ಲಿಟ್ರೆಚರ್ ನಂತಹ ಮಾಸ್ಟರ್ ಡಿಗ್ರಿ ಮಾಡಿದ್ದ ಸುಪ್ರಿಯಾರನ್ನು ಮನೆಗೆ ಸೀಮಿತವಾಗಿಸಿ ತವರು ಮನೆಯವರ ಸಂಪರ್ಕಕ್ಕೂ ಸಿಗದಂತೆ,ಫೋನ್ ನಂತಹ ಸೌಲಭ್ಯ ಸಹ ನೀಡದೆ, ಮಾನಸಿಕ ಕ್ಷೋಬೆಗೆ ಒಳಪಡಿಸಿ ಸಾರ್ವಜನಿಕ ಪ್ರಪಂಚವನ್ನು ಕಾಣದಂತೆ ಹನ್ನೆರಡು ವರ್ಷಗಳ ಕಾಲ ನರಕಯಾತನೆ ನೀಡಿದ್ದು, ಸುಪ್ರಿಯಾ ತನ್ನ ತವರು ಮನೆಯ ತಂದೆ-ತಾಯಿಯ ವಾತ್ಸಲ್ಯದಿಂದಲೂ ವಂಚಿತರನ್ನಾಗಿಸಿ ನೋವು ಉಣಿಸಿದ್ದಾರೆ.ಮನೆಯಲ್ಲಿ ಮನೆಗೆಲಸದ ಆಳಾಗಿ ದುಡಿಯುತ್ತ ಮನೆಯಲ್ಲಿ ಎಲ್ಲರೂ ಉಂಡ ನಂತರ ಅಳಿದುಳಿದ ಊಟವನ್ನು ಅತ್ತೆ ಕೊಟ್ಟರಷ್ಟೆ ತಿನ್ನುತ್ತ ಸಾಲುತ್ತೊ ಇಲ್ಲವೊ ಅದೆ ಹಾಗು ಅಷ್ಟೆ ಊಟ ಇದೇ ಜೀವನ ಎಂದು ಕಾಲ ಕಳೆಯುತ್ತಿದ್ದಳು ಎನ್ನುತ್ತಾರೆ.
14 ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತ ಅತ್ತೆ ಮನೆಯಂಬ ಸೆರೆವಾಸದಲ್ಲಿದ್ದ ಸುಪ್ರಿಯಾರನ್ನು ಆಕೆಯ ಪೋಷಕರು ಧ್ಯರ್ಯ ಪೋಲಿಸರಿಗೆ ದೂರು ನೀಡಿ ಪೋಲಿಸರ ಸಹಕಾರದಿಂದ ಸುಪ್ರಿಯಾ ಮನೆಯಿಂದ ಹೊರಗೆ ಕರೆ ತಂದಿದ್ದಾರೆ.ಈ ಬಗ್ಗೆ ಸ್ವತಃ ಸುಪ್ರಿಯಾ ಮಾಧ್ಯಮಗಳ ಮುಂದೆ ತನ್ನ ನೋವು ಅನುಭವಿಸಿದ ಯಾತನೆಯನ್ನು ಹಂಚಿಕೊಂಡಿದ್ದಾರೆ.
ಆಕೆಯ ಮಾತುಗಳಲ್ಲಿ ನಂಬಲಾಗದ ಸತ್ಯಗಳು ಬೆಳಕಿಗೆ ಬಂದಿದೆ..? ಮದುವೆಯಾದ ನಂತರ ಒಂದೇರಡು ಬಾರಿ ಹುಟ್ಟಿದ ಮನೆಗೆ ಹೋಗಿದ್ದೆ ಎನ್ನುವ ಸುಪ್ರಿಯಾ ಹಿಂದಿನದನ್ನು ಗದ್ಗದಿತರಾಗಿ ನೆನಪಿಸಿಕೊಳ್ಳುತ್ತಾರೆ ಅತ್ತೆಯ ಚಿತಾವಣೆಯಿಂದ ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರ ಉಳಿದು ನನ್ನನ್ನು ನನ್ನ ಕುಟುಂಬ ಶತ್ರುವಿನಂತೆ ನಡೆಸಿಕೊಂಡಿದೆ,ಪತಿ ಮಧುಸೂದನ್ ಕೂಡ ತನ್ನ ತಾಯಿ ಮಾತು ಕೇಳುತ್ತಿದ್ದ ಎಂದು ಕಣ್ಣೀರು ಹಾಕಿದರು. ಆದರೆ ತಮ್ಮ ಮಕ್ಕಳನ್ನು ತನ್ನ ಅತ್ತೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆದರೆ ನನ್ನ ಬಳಿಗೆ ಕಳುಹಿಸುತ್ತಿರಲಿಲ್ಲ ಅಗತ್ಯ ಇದ್ದಾಗಷ್ಟೆ ತನ್ನ ಇಬ್ಬರು ಮಕ್ಕಳು ನನ್ನ ಬಳಿ ಬರುತ್ತಿದ್ದರು ಅದರೆ ಅವರಿಗೆ ನನಗಿಂತ ನನ್ನ ಅತ್ತೆಯೊಂದಿಗೆ ಹೆಚ್ಚು ಬಾಂಧವ್ಯ ಹೊಂದಿದ್ದರು ಎನ್ನುತ್ತಾರೆ ಸುಪ್ರಿಯಾ.
Breaking News
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
- ಮುತ್ತಕಪಲ್ಲಿ ಪಂಚಾಯಿತಿ ಅಕ್ರಮಗಳ ತನಿಖೆಗೆ ಆಗ್ರಹ
Saturday, October 12