ತುಮಕೂರು:ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ ಸಂಘ ಪರಿವಾರ ಮೂಲದ ಕಳ್ಳಂ ಬೆಳ್ಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಲೆಕ್ಕಾಚಾರದಲ್ಲಿ ಬಿಜೆಪಿ ತೊರೆದಿದ್ದಾರೆ.ಆರ್ ಎಸ್ ಎಸ್ ಕಟ್ಟಾಳು ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಜೊತೆ ಗುರುತಿಸಿಕೊಂಡು ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಅವರ ಸೋಲಿಸಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಕೆ.ಎಸ್.ಕಿರಣ್‍ಕುಮಾರ್ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಬಿಜೆಪಿ ಸಖ್ಯ ತೊರೆಯುತ್ತಿರುವುದು ತುಮಕೂರು ಜಿಲ್ಲೆಯ ಬಿಜೆಪಿಗೆ ಮರ್ಮಾಘಾತದ ಸುದ್ದಿಯಾಗಿದೆ.ಸಂಘಪರಿವಾರ ಮೂಲದ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಅವರು 2004 ರಲ್ಲಿ ಕಳ್ಳಂಬೆಳ್ಳ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ತಮ್ಮ ಪ್ರತಿ ಸ್ಪರ್ದಿ ನಾಲ್ಕು ಬಾರಿ ಶಾಸಕರಾಗಿ ಪ್ರಭಾವಿ ಮಂತ್ರಿಯಾಗಿದ್ದ ಟಿ.ಬಿ.ಜಯಚಂದ್ರ ಅವರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರು.ಕ್ಷೇತ್ರ…
Author: Srinivas_Murthy
ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ರಥೋತ್ಸವ ಸಾಂಪ್ರದಾಯಕವಾಗಿ ನಡೆಯಿತು.ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಎರಡು ದಿನಗಳ ಜಾತ್ರಾ ಮಹೋತ್ಸವ ಇಂದು ಶನಿವಾರ ಆರಂಭವಾಯಿತು ಇಂದು ಬೆಳೆಗ್ಗೆ ವಿಶೇಷ ಹೋಮ ಹವನ ಹಾಗು ಗಿರಿಜಾ ಕಲ್ಯಾಣ ನಡೆಯಿತು,ಮಧ್ಯಾಹ್ನ ಶ್ರೀ ನಾಗನಾಥೇಶ್ವರ ಬ್ರಹ್ಮರಥೋತ್ಸವ ಸಂಪ್ರದಾಯದಂತೆ ದೇವಾಲಯದ ಧರ್ಮಾಧಿಕಾರಿ ರಮೇಶಬಾಬು ನೇತೃತ್ವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನಿತರಾದರು, ವಿಶೇಷ ಪೂಜಾ ಕಾರ್ಯಗಳು ಹಾಗು ಉತ್ಸವಗಳಲ್ಲಿ ಸಾವಿರಾರು ಭಕ್ತರು ಪಾಲ್ಗೋಂಡು ಭಕ್ತಿಭಾವ ಮೆರೆದರು.ರಥೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ರಾಜಣ್ಣ, ಮುಖಂಡ ಗುಂಜೂರುಶ್ರೀನಿವಾಸರೆಡ್ಡಿ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ,ಪುರಸಭೆ ಸದಸ್ಯ ಭಾಸ್ಕರ್,ಮಾಜಿ ಸದಸ್ಯ ಸಿಮೆಂಟ್ ರಮೇಶ್,ಆದ್ಯಾತ್ಮಿಕ ಚಿಂತಕ ಬಾಬಾಅಂಕಲ್ ನಾಗರಾಜ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು,ಅತ್ತಿಕುಂಟೆ ರಾಜಶೇಖರೆಡ್ದಿ, ಮುಖಂಡರಾದ,ಲಕ್ಷ್ಮೀಸಾಗರ ಆಶೋಕ್,ಡೈರಿ ಶ್ರೀನಿವಾಸ ಶೆಟ್ಟಿ,ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಗೌಡ,ಜಗದೀಶ್,ಮಾಜಿ ಸದಸ್ಯ ವೆಂಕಟರಮಣಪ್ಪ,ಪುಟ್ಟರಾಜು,ಜೈಕುಮಾರ್ ಸೇರಿದಂತೆ ಮುಂತಾದವರು ಇದ್ದರು. ವೇದ ಬ್ರಹ್ಮ ಉಮಾಶಂಕರ ಶರ್ಮಾ ಅವರ…
ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಇತ್ತಿಚಿಗೆ ಬೈಕ್ ವೀಲಿಂಗ್ ಪುಂಡರ ಹಾವಳಿ ದಿನೆ ದಿನೆ ಹೆಚ್ಚುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಶ್ರೀನಿವಾಸಪುರ ಪೋಲಿಸರು ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡನೊರ್ವನನ್ನು ಬಂಧಿಸಿ ವೀಲಿಂಗ್ ಮಾಡುತ್ತಿದ್ದ ಬೈಕ್ ಅನ್ನು ವಶಕ್ಕೆ ಪಡೆದಿರುತ್ತಾರೆ.ಶ್ರೀನಿವಾಸಪುರ ಪಟ್ಟಣದ ಪುಂಗನೂರು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೈಕ್ ವೀಲಿಂಗ್ ಮಾಡುತಿದ್ದ ಶ್ರೀನಿವಾಸಪುರ ಪಟ್ಟಣದ ಅಜಾದ್ ರಸ್ತೆ ನಿವಾಸಿ ಎಜಾಜ್ ಖಾನ್ ಅವರ ಮಗ ಜಾಕಿರ್ ಖಾನ್ ಎಂಬ ಪುಂಡನನ್ನು ವಾಹನ ಸಮೇತ ಕರೆತಂದು ಪ್ರಕರಣ ದಾಖಲಿಸಿ ಪುಂಡನನ್ನು ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿ ವಾಹನವನ್ನು ನ್ಯಾಯಾಲಯದ ವಶಕ್ಕೆ ನೀಡಿರುತ್ತಾರೆ.ಪಟ್ಟಣದಲ್ಲಿ ಇತ್ತಿಚಿಗೆ ಪುಂಡರ ಬೈಕ್ ವೀಲಿಂಗ್ ಮಾಡುವರು ಕರ್ಕಶವಾವಗಿ ಸದ್ದುಮಾಡುತ್ತ ಅತಿಯಾದ ವೇಗದಿಂದ ರಸ್ತೆಯಲ್ಲಿ ಅಡ್ಡಾದಿಡ್ದಿ ಬೈಕ್ ಒಡಿಸುವುದು ಹೆಚ್ಚುತ್ತಿದೆ ಇದರಿಂದ ಸಂಜೆ ಸಮಯದಲ್ಲಿ ಊರುಗಳಿಗೆ ದ್ವಿಚಕ್ರವಾಹನ ಅಥಾವ ಬೈಕ್ ನಲ್ಲಿ ಹೋಗುವಂತ ಹಳ್ಳಿಜನಕ್ಕೆ ತೊಂದರೆಯಾಗುತ್ತಿದ್ದು ಗ್ರಾಮೀಣ ಭಾಗದ ಜನತೆ ಭಯದಿಂದ ತಮ್ಮ ಜೀವಭಯದಿಂದ ದ್ವಿಚಕ್ರವಾಹನ ಒಡಿಸುತ್ತಿದ್ದರು ಎನ್ನಲಾಗಿದೆ. ಅಪ್ರಾಪ್ತರ ಬೈಕ್ ಸವಾರಿಗೆ…
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಎ.ಪಿ ಮಾಜಿ ಮಂತ್ರಿ ಕಾಪು ಸಮುದಾಯದ ಪ್ರಭಾವಿ ಮುಖಂಡ ಕನ್ನಲಕ್ಷ್ಮೀನಾರಾಯಣ ಕಮಲ ಪಾಳಯಕ್ಕೆ ಗುಡ್ ಬೈ ಹೇಳಿದ್ದಾರೆ ಅವರ ನಿರ್ಧಾರದಿಂದ ಆಂಧ್ರಪ್ರದೇಶ ರಾಜಕೀಯದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಕೆಲ ದಿನಗಳಿಂದ ಕನ್ನ ಲಕ್ಷ್ಮೀನಾರಯಣ್ ಅವರು ಬಿಜೆಪಿ ಬಿಡುವ ಬಗ್ಗೆ ಪ್ರಚಾರ ಇತ್ತಾದರು ಇಷ್ಟೊಂದು ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಯಾರು ಉಹಿಸಿರಲಿಲ್ಲ ಇದು ಕಮಲ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ಬಿಜೆಪಿ ಯಲ್ಲಿದ್ದಾಗ ತಮ್ಮದೇ ಪಕ್ಷದ ನಾಯಕರನ್ನು ಟೀಕಿಸುತ್ತಿದ್ದರು.ಕನ್ನಾ ಲಕ್ಷ್ಮೀನಾರಾಯಣ ಪವನ್ ಕಲ್ಯಾಣ್ ಕುರಿತಾಗಿ ಪ್ರತಿಕ್ರಿಯಿಸಿ ಪವನ್ ಅವರನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಬಿಜೆಪಿಗೆ ಮುಜುಗರ ತಂದಿದ್ದರು. ಕಳೆದ ಡಿಸೆಂಬರ್ 14 ರಂದು ಜನಸೇನಾ ಪ್ರಮುಖ ನಾಯಕ ನಾದೆಂಡ್ಲಾ ಮನೋಹರ್ ಅವರನ್ನು ಭೇಟಿಯಾಗಿದ್ದ ಕನ್ನಾ ಅವರ ನಡೆ ಕುರಿತಾಗಿ ಜನಸೇನಾ ಪಕ್ಷ ಸೇರುತ್ತಾರೆ ಎಂಬ ಪ್ರಚಾರವೂ ನಡೆದಿತ್ತು. ನಂತರದಲ್ಲಿ ಆಂಧ್ರ ಬಿಜೆಪಿ ಅಧ್ಯಕ್ಷ ಸೋಮು…
ನ್ಯೂಜ್ ಡೆಸ್ಕ್:ಕರ್ನಾಟಕ ವಿಧಾನಸಭೆ ಚುನಾವಣಾ ವೇಳಾಪಟ್ಟಿಯ ದಿನಾಂಕ ಪ್ರಕಟವಾಗಿದೆ ಎಂದು ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಮಾಹಿತಿಯುಳ್ಳ ವೇಳಾಪಟ್ಟಿಯ ಪೋಸ್ಟರ್ ಸತ್ಯಾಸತ್ಯತೆ ಇಲ್ಲಿದೆ.ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಿದ್ದತೆಗಳು ನಡೆಯುತ್ತಿದೆ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಂಡಿದ್ದು ಎಲ್ಲಡೇ ವೈರಲ್ ಆಗಿದ್ದು ನಕಲಿ ವೇಳಾಪಟ್ಟಿಯಲ್ಲಿರುವಂತೆ ಚುನಾವಣೆ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿ, ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟ, ಏಪ್ರಿಲ್ 26 ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ, ಏಪ್ರಿಲ್ 27 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ,ಮೇ12 ಕ್ಕೆ ಮತದಾನ ನಡೆಯಲಿದ್ದು, ಮೇ 15ಕ್ಕೆ ಮತ ಎಣಿಕೆ ಕಾರ್ಯನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬ ಮಾಹಿತಿ ಇರುವಂತ ಪೋಸ್ಟ್‌ರ್ ಹರಿದಾಡುತ್ತಿದೆ.ನಕಲಿ ವೇಳಾಪಟ್ಟಿಯಂತೆ ಇಡಿ ಕರ್ನಾಟಕದಲ್ಲಿ ಒಂದೇ ಹಂತದ ಚುನಾವಣೆ ನಡೆಯುವ ರಿತಿ ಇದೆ.ಆದರೆ ಅದರ ಸತ್ಯಾಸತ್ಯತೆ ಇಲ್ಲಿದೆಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವಂತ 2023ರ ಚುನಾವಣಾ ವೇಳಾ ಪಟ್ಟಿಯ ನಿಜಾಂಶ ಪರಿಶೀಲಿಸಿದರೆ ನಕಲಿ ವೇಳಾ…
ಶ್ರೀನಿವಾಸಪುರ: ಬೋರ್ ವೆಲ್ ಕೇಬಲ್ ಕಳುವು ಮಾಡುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿದ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೋಣೂರು ಗ್ರಾಮದಲ್ಲಿ ನಡೆದಿದೆರೈತ ಅನಿಲ್ ಎನ್ನುವರ ತೋಟದಲ್ಲಿ ಕಳ್ಳರು ಕೇಬಲ್ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಗ್ರಾಮಸ್ತರು ಕಳ್ಳರನ್ನು ಹಿಡದಿದ್ದು ಕಳ್ಳರನ್ನು ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದ ಮುಜಾಹಿದ್,ಇಂತಿಯಾಜ್ ಎಂದು ಹೇಳಲಾಗಿದ್ದು,ಕಳ್ಳರನ್ನು ಹಿಡಿದ ಗ್ರಾಮಸ್ಥರು ಅವರನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡುತ್ತಿದ್ದಾಗ ಗ್ರಾಮಕ್ಕೆ ಪೊಲೀಸರು ಆಗಮಿಸಿ ಕಳ್ಳರನ್ನು ಕಾನುನಾತ್ಮಕವಾಗಿ ತಮಗೆ ಒಪ್ಪಿಸುವಂತೆ ಹೇಳಿರುತ್ತಾರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಈ ಹಿಂದೆ ಕೆಬಲ್ ಕದ್ದಿರುವ ಕಳ್ಳರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿರುವ ಆರೋಪ ಮಾಡಿ ಪೊಲೀಸರನ್ನು ಗ್ರಾಮಸ್ತರು ತರಾಟೆಗೆ ತೆಗೆದುಕೊಂಡಿರುತ್ತಾರೆ ಈ ಸಂದರ್ಭದಲ್ಲಿ ಪೋಲಿಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮುಕಿ ನಡೆಯುತ್ತದೆ ಹೆಚ್ಚುಸಂಖ್ಯೆಯಲ್ಲಿದ್ದ ಆಕ್ರೋಶಭರಿತ ಗ್ರಾಮಸ್ಥರು ಪೋಲಿಸರ ಜೀಪನ್ನು ಬಡಿದು ಸದ್ದುಮಾಡಿದಾಗ ಪೋಲಿಸರು ಗ್ರಾಮಸ್ಥರನ್ನು ಚದರಿಸುವ ಪ್ರಯತ್ನ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಜನರ ಕೂಗಾಟದಿಂದ ಪರಿಸ್ಥಿತಿ…
ಶ್ರೀನಿವಾಸಪುರ: ಕೋಲಾರ ಹಾಲು ಒಕ್ಕೂಟದ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿ ವಿಚಾರದಲ್ಲಿ ಯಾವುದೆ ಅವ್ಯವಹಾರ ಅಥವ ಅಕ್ರಮ ನಡೆದಿಲ್ಲ ಎಲ್ಲವೂ ನಿಯಮಾವಳಿಗಳಂತೆ ಕಾನೂನಾತ್ಮಕವಾಗಿ ಪಾರದರ್ಶಕತೆಯಿಂದ ನಡೆದಿದೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹನುಮೇಶ್ ಹೇಳಿದರು ಇಂದು ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂ ಭೈರಾರೆಡ್ದಿ ಆರೋಪಿಸಿರುವಂತೆ ಏನು ಅಕ್ರಮಗಳು ನಡೆದಿಲ್ಲ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರಿದಿಯಲ್ಲಿ ಎಲ್ಲವೂ ಸರ್ಕಾರಿ ನಿಯಮಾವಳಿಗಳಂತೆ ಪಾರದರ್ಶಕತೆಯನ್ನು ಪಾಲನೆ ಮಾಡಿದ್ದು ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ಅನುಮೊದನೆ ಪಡೆದ ನಂತರ ೩೦೪೦ ಚದರಡಿಯ ನಿವೇಶನ ಖರೀದಿಗೆ ಅರ್ಹ ಮಾಲಿಕರಿಂದ ಅರ್ಜಿ ಅಹ್ವಾನಿಸಿ ಡಿಸೆಂಬರ್ ತಿಂಗಳಲ್ಲಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು ಅದರಂತೆ ನಿಗದಿತ ದಿನಾಂಕದ ಒಳಗೆ ಆಸಕ್ತ ಮಾಲಿಕರಿಂದ ಬಂದಂತ ಅರ್ಜಿಯನ್ನು ಪರಿಗಣಿಸಿ ದಾಖಲಾತಿಗಳನ್ನು ಕಾನೂನು ತಙ್ಞರಿಂದ ಪರಶೀಲನೆ ಮಾಡಿಸಿ ಸಂಬಂದಿಸಿದ ನಿವೇಶನಕ್ಕೆ ತಕರಾರು ಇದ್ದರೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಿದ್ದು ಯಾವುದೆ ಆಕ್ಷೇಪಗಳು…
ಶ್ರೀನಿವಾಸಪುರ: ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ಜಯರಾಮೇಗೌಡ ಕಾರ್ಯದರ್ಶಿಯಾಗಿ ಪಿ.ಸಿ.ನಾರಯಣಸ್ವಾಮಿ ಆಯ್ಕೆಯಾಗಿರುತ್ತಾರೆ ಇಂದು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆ ನಡೆದು ಅಧ್ಯಕ್ಷ ಕಾರ್ಯದರ್ಶಿ ಹಾಗು ವಿವಿದ ಸ್ಥಾನಗಳಿಗೆ ಆಯ್ಕೆಯಾದರು.ಶ್ರೀನಿವಾಸಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಜಯರಾಮೇಗೌಡ,ಪ್ರಧಾನ ಕಾರ್ಯದರ್ಶಿ ಪಿ ಸಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಟಿ ವಿ ನಾರಾಯಣಸ್ವಾಮಿ,ಖಜಾಂಚಿಯಾಗಿ ಜಿ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಯರಾಮೇಗೌಡ ಮಾತನಾಡಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ 5 ನೇ ಬಾರಿಗೆ ಆಯ್ಕೆಯಾಗಿರುತ್ತೇನೆ,ವಕೀಲರ ಸಮಸ್ಯೆಗಳಿಗೆ ಹಿರಿಯ ಹಾಗೂ ಕಿರಿಯರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ ಸಂಘವನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿ ಮಾಡುವುದಾಗಿ ಹೇಳಿದ ಅವರು ನನ್ನ ಆಯ್ಕೆಗೆ ಸಹಕಾರ ನೀಡಿದ ವಕೀಲರ ಸಂಘದ ಸದಸ್ಯರಿಗೆ ಚಿರಋಣಿಯಾಗಿ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಹಿರಿಯ ವಕೀಲ ಕೊಡಿಚೆರವುನಾರಯಣಸ್ವಾಮಿ,ಶೆಟ್ಟಿಶ್ರೀನಿವಾಸ್,ಕೆ.ಶ್ರೀನಿವಾಸನ್ ಚಲಪತಿ,ಸೌಭಾಗ್ಯವತಿ,ಶ್ರೀನಿವಾಸಗೌಡ ಮುಂತಾದವರು ಇದ್ದರು.
ಶ್ರೀನಿವಾಸಪುರ:ಕೋಲಾರ ಹಾಲು ಒಕ್ಕೂಟದ ಶ್ರೀನಿವಾಸಪುರ ತಾಲೂಕು ನಿರ್ದೇಶಕ ಹನುಮೇಶ್ ಒಕ್ಕೂಟದ ಹೆಸರಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಿವೇಶನ ಖರೀದಿಸಿ ಒಕ್ಕೂಟಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂಬೈರಾರೆಡ್ಡಿ ಆರೋಪಿಸಿದರು.ಅವರು ಇಂದು ಪಟ್ಟಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ ಶ್ರೀನಿವಾಸಪುರ ಪಟ್ಟಣದಲ್ಲಿರುವ ಹಾಲು ಒಕ್ಕೂಟದ ಶೀಭಿರ ಕಚೇರಿಗೆ ಕಟ್ಟಡ ಕಟ್ಟಿಸಲು ಎಂದು ಖಾಸಗಿ ವ್ಯಕ್ತಿಗಳಿಂದ ನಿವೇಶನ ಖರೀದಿಸಲು ಮುಂದಾಗಿ ಅದಕ್ಕೆ ದುಬಾರಿ ಲೆಕ್ಕ ತೊರಿಸಿ ಹಾಲು ಒಕ್ಕೂಟಕ್ಕೆ ದಾಖಲೆ ಸಲ್ಲಿಸಿದ್ದು ಇದರಲ್ಲಿ 30-40 ಲಕ್ಷ ರೂಪಾಯಿಗಳ ಹಣ ಲಪಟಾಯಿಸುವಂತ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.ಪಟ್ಟಣದ ಹೊರವಲಯದಲ್ಲಿ ಪಣಸಮಾಕನಹಳ್ಳಿ ಬಳಿ ಸುಮಾರು 10 ಎಕರೆ ಪ್ರದೇಶ ಹಾಗೆ ಸರ್ಕಾರಿ ಕಚೇರಿ ಕಟ್ಟಲು ಅಂದಾಜಿಸಿರುವ ಅಮಾನಿ ಕೆರೆ ಬಳಿ ಅಂದಾಜು 2 ಎಕರೆ ಜಾಗವನ್ನು ಸ್ಥಳೀಯ ಶಾಸಕರ ಸಹಕಾರದಿಂದ ಹಾಲು ಒಕ್ಕೂಟದ ಹೆಸರಿನಲ್ಲಿ ಮಂಜೂರಾಗಿದೆ ಇದರಲ್ಲಿ 10 ಎಕರೆ ಪ್ರದೇಶದಲ್ಲಿ ಹಾಲು ಒಕ್ಕೂಟದಿಂದ ಹಾಲಿನ ಪುಡಿ ತಯಾರಿಕ ಘಟಕ ನಿರ್ಮಾಣ…
ಶಿಡ್ಲಘಟ್ಟ:ನೂರು ದೇವಾಲಯಗಳನ್ನು ಕಟ್ಟುವ ಬದಲು ಹಳೆಯ ದೇವಾಲಯ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ ದೇವಾಲಯಗಳು ಗ್ರಾಮದ ಇತಿಹಾಸದ ಪ್ರತೀಕ. ಗ್ರಾಮಗಳ ದೇವಾಲಯಗಳನ್ನು ಪೂರ್ವಜರು ನಿರ್ಮಿಸಿ ದೇವತೆಗಳನ್ನು ಆರಾಧಿಸಿದ್ದ ಪರಂಪರೆ ನಮ್ಮದು ಅದನ್ನು ಮುಂದುವರಿಸಿಕೊಂಡು ಹೋಗಲು ಇಂದಿನ ಪೀಳಿಗೆ ಮುಂದಾಗಬೇಕು ಎಂದು ಶಿಡ್ಲಘಟ್ಟ ಪುರಸಭೆ ಮಾಜಿ ಸದಸ್ಯ ಹಾಗು ಅಯೋದ್ಯನಗರದ ನಾಮಧಾರಿ ನಗರ್ತ ಸಮಾಜದ ಮುಖಂಡ ಕೆ.ಎಂ.ವಿನಾಯಕ್ ಹೇಳಿದರು.ಕೆ.ಎಂ.ವಿನಾಯಕ ಅವರ ಪಟ್ಟಣದ ಪ್ರತಿಷ್ಠಿತ ಕೊಪರಪ್ಪನವರ ಕುಟುಂಬದ ವತಿಯಿಂದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಂಡಿಗನಾಳ ಬಳಿಯ ಶಿಲೇಮಾಕನಹಳ್ಳಿಯಲ್ಲಿ ನೂರಾರು ವರ್ಷಗಳ ಪುರಾತನವಾದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಕೊಪ್ಪರನವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.ಚಿಕ್ಕರಾಜಪ್ಪನವರಕ್ಯಾಶಪ್ಪ ಅವರ ಕೆ.ರತ್ನಪ್ಪ ಮತ್ತು ಕೃಷ್ಣಪ್ಪ ನವರ ತೋಟದಲ್ಲಿನ ಪುರಾತನವಾಗಿದ್ದ ಶ್ರೀಈರಣ್ಣಸ್ವಾಮಿ ಮತ್ತು ಅಕ್ಕಯ್ಯಮ್ಮ ಹಾಗೂ ತಿಮ್ಮಕ್ಕದೇವಿ ದೇವತೆಗಳ ದೇವಾಲಯ ಜೀರ್ಣೋದ್ಧಾರ ಮಾಡಿ ಲೋಕಾರ್ಪಾಣೆ ಮಾಡಲಾಯಿತು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ದೇವಾಲಯ ಜೀರ್ಣೋದ್ಧಾರ,ವಿಮಾನ ಗೋಪುರ,ಕಳಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವವನ್ನು…


