ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಲ್ಲಿ ದಶಕಗಳಿಂದ ನಡೆದು ಬರುತ್ತಿರುವ ಜಿಡ್ಡು ಗಟ್ಟಿರುವ ರಾಜಕಾರಣಕ್ಕೆ ತಿಲಾಂಜಲಿ ಹೇಳಿ ಹೊಸ ರಾಜಕೀಯ ಶಕ್ತಿಗೆ ಅವಕಾಶ ಮಾಡಿಕೊಡಿ ಎಂದು ಗುಂಜೂರುಶ್ರೀನಿವಾಸರೆಡ್ದಿ ಹೇಳಿದರು ಅವರು ಶ್ರೀನಿವಾಸಪುರ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳುತ್ತ ಕ್ಷೇತ್ರಾದ್ಯಂತ ಚುರುಕಾಗಿ ಒಡಾಡುತ್ತ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತ ಸಂಚರಿಸುತ್ತ ಮಾತನಾಡಿದ ಅವರು ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವರು ಇಲ್ಲಿನ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಡಿಸದೆ ಇರುವುದು ದುರಂತ ಎಂದರು.
ಕ್ಷೇತ್ರದ ಯುವ ಸಮೂಹ ಜೀವನದ ಅವಕಾಶಕ್ಕಾಗಿ ನೂರಾರು ಮೈಲಿ ದೂರದ ಹೊರ ಊರುಗಳಿಗೆ ಅಲೆಯಬೇಕಾದಂತ ಪರಿಸ್ಥಿತಿ ಏರ್ಪಟ್ಟಿದೆ ಇದಕ್ಕೆಲ್ಲ ಅಂತ್ಯ ಹಾಡಬೇಕಿದ್ದು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಸುವ ಕಾರ್ಖಾನೆಗಳ ಸ್ಥಾಪನೆಯಾಗಬೇಕು ಇದಕ್ಕೆ ಮೂಲಭೂತ ವ್ಯವಸ್ಥೆಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದ ಅವರು ನಮಗೆ ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಪ್ರಯತ್ನಿಸಿತ್ತೇನೆ ಎಂದರು.
ರಾಜಕೀಯ ಶಕ್ತಿಯನ್ನು ಬಲಗೊಳಿಸಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ,ಪರೊಕ್ಷವಾಗಿ ಪಾಲ್ಗೋಳುತ್ತ ಕ್ಷೇತ್ರ ಸಂಚಾರದಲ್ಲಿರುವ ಗುಂಜೂರುಶ್ರೀನಿವಾಸರೆಡ್ದಿ ಹೋಳೂರು ಹೋಬಳಿ ಮಾರ್ಜೇನಹಳ್ಳಿ ಪಂಚಾಯತಿ ಬೆಸ್ತೇನಹಳ್ಳಿ ಗ್ರಾಮದ ಮುಖಂಡರಾದ ವೆಂಟಸ್ವಾಮಿ, ಸುರೇಶ, ವೇಣುಗೋಪಾಲ, ಚಲಪತಿ, ರಾಮೆಗೌಡ, ರವಿಪ್ರಕಾಶ್, ರಾಮಕೃಷ್ಣಪ್ಪ, ಮಂಜುನಾಥ, ಅವಿನಾಶ್, ನಾಗರಾಜ, ಕೃಷ್ಣಪ್ಪ, ಪ್ರವೀಣ್, ದೇವರಾಜು, ಮಂಜು ಮತ್ತಿತರೆ ಕಾರ್ಯಕರ್ತರನ್ನು ಮತ್ತು ರೋಣೂರು ಹೋಬಳಿ ರೋಣೂರು ಪಂಚಾಯತಿಯ ನಾರಮಾಕಲಹಳ್ಳಿ ಗ್ರಾಮದ ವಿವಿಧ ಪಕ್ಷಗಳ ಕಾರ್ಯಕರ್ತರಾದ ಹರೀಶ, ಮಂಜುನಾಥ, ಶ್ರೀರಾಮ, ಶ್ರೀರಾಮಲು, ಗೋಪಾಲಪ್ಪ, ಗುರ್ರಪ್ಪ, ವಾಲೆಪ್ಪ, ವೆಂಕಟೇಶ ರೆಡ್ಡಿ, ನರಸಿಂಹ, ಪ್ರಜ್ವಲ್, ನಾರಾಯಣ, ಈರಪ್ಪರೆಡ್ಡಿ, ವೆಂಕಟಸ್ವಾಮಿ, ಶಿವಾರೆಡ್ಡಿ ಸೇರಿದಂತೆ ಇತರೆ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ನಾರಮಾಕಲಹಳ್ಳಿಯಲ್ಲಿ ಕಾರ್ಯಕರ್ತರು ಮಾತನಾಡಿ ದಶಕಗಳ ರಾಜಕೀಯ ನಮಗೆ ಸಾಕಾಗಿದೆ ಬದಲಾವಣೆ ನೊಡೋಣ ಎಂದು ತಾವು ಇದ್ದ ಪಕ್ಷಗಳನ್ನು ತೊರೆದು ಗುಂಜೂರು ಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದರು. ಸಂದರ್ಭದಲ್ಲಿ ಜಿ.ಎಸ್.ಆರ್. ಬಣದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17