Author: Srinivas_Murthy

ಶ್ರೀನಿವಾಸಪುರ:ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬೀಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಭರವಸೆ ನೀಡಿದರು ಅವರು ಇಂದು ಸಂಜೆ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಅವರಣದಲ್ಲಿ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಬೆಳೆ ವಿಮೆ ಸಂಸ್ಥೆ ಹಾಗು ಮಾವು ಬೆಳೆಗಾರರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.ಅನ್ನದಾತನ ಕಷಕ್ಕೆ ಜಿಲ್ಲಾಡಳಿತ ಸದಾ ಸ್ಪಂದಿಸುತ್ತದೆ ಕಾರಣಾಂತರಗಳಿಂದ ಬೆಳೆ ವಿಮಾ ಸಂಸ್ಥೆ ವತಿಯಿಂದ ನೀಡಬೇಕಿದ್ದ ಮಾವುಬೆಳೆಗಾರರ ಕ್ಲೈಮ್ ತಡವಾಗುತ್ತಿರುವ ಕುರಿತಂತೆ ವಿಮಾ ಸಂಸ್ಥೆ ಪ್ರತಿನಿಧಿ ಹೇಳುವಂತೆ ಸಂಸ್ಥೆಯ ನಿಯಮಗಳ ಅನ್ವಯ ತಾಂತ್ರಿಕ ಮಾನದಂಡಗಳನ್ನು ಇಟ್ಟುಕೊಂಡು ಫಸಲ್‌ ಭೀಮಾದಡಿ ಬೆಳೆ ವಿಮೆ ನೋಂದಣಿಮಾಡಿದ ಬೆಳೆಗಾರರಿಗೆ ಫಸಲು ನಷ್ಟದ ಕ್ಲೈಮ್ ಹಣ ಬಿಡುಗಡೆ ಮಾಡಿದೆ ಈ ಬಗ್ಗೆ ಸಂಸ್ಥೆಯ ಮಾನದಂಡಗಳ ಬದಲಾವಣೆ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದರು.ತಹಶೀಲ್ದಾರ್ ಶೀರಿನ್ ತಾಜ್ ಮಾತನಾಡಿ ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಮಾವು ಫಸಲು ಉದುರಿ ಹೋಗಿದ್ದ ಬೆಳೆ ನಷ್ಟದ ಹಣ ಬಿಡುಗಡೆ ಸಂಬಂದ ಹಣ ಬಾರದಿರುವ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ಎನ್. ಪಿ. ಅಂಬುಜಾಕ್ಷಿ ಅವರು ಬೆಂಗಳೂರು ವಿವಿಯ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಹೆಚ್.ಆರ್. ರವೀಶ ಅವರ ಮಾರ್ಗದರ್ಶನದಲ್ಲಿ ಮೈಕ್ರೊಪ್ರೊಪಗೇಷನ್ ಅಂಡ್ ಆಪ್ಟಿಮೈಸೇಷನ್ ಆಫ್ ಎಲಿಸಿಟಾರಾಸ್ ಟು ಎನೆನಾನ್ಸ್ ದ ಸೆಕೆಂಡರಿ ಮೆಟಬೊಲೈಟ್ಸ ಇನ್ ಕೊನೇಮಾರ್ಫ ಫ್ರಾಗ್ರೆನ್ಸ್ – ಎನ್ ಇಂಪಾರ್ಟೆಂಟ್ ಮೆಡಿಸಿನಲ್ ಪ್ಲಾಂಟ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರಧಾನ ಮಾಡಿ ಗೌರವಿಸಿದೆ.ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 57 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದ ಪ್ರೊ.ಎಂ.ಜಗದೇಶ್ ಕುಮಾರ್,ಸಚಿವ ಅಶ್ವತ್ಥನಾರಾಯಣ ಮತ್ತು ಉಪಕುಲಪತಿ ಪ್ರೊ.ಎಸ್.ಎಂ.ಜಯಕರ್ ಅವರು ಅಂಬುಜಾಕ್ಷಿ ಅವರಿಗೆ ಪಿ.ಎಚ್.ಡಿ ಡಾಕ್ಟರೇಟ್‌ ಪದವಿಯನ್ನು ಪ್ರದಾನ ಮಾಡಿದರು. ವೆಂಕಟೇಶ್ವರ ಬಡಾವಣೆ ನಿವಾಸಿ ಪುರುಷೋತ್ತಮಚಾರ್ ಪತ್ನಿ ನಿವೃತ್ತ ಶಿಕ್ಷಕಿ ಎಸ್. ಸಂಪೂರ್ಣಮ್ಮ ಅವರ ಪುತ್ರಿಯಾಗಿರುವ ಅಂಬುಜಾಕ್ಷಿ ಮಾನವ ಜನಾಂಗಕ್ಕೆ ಮಾರಕವಾಗಿರುವ ಕ್ಯಾನ್ಸರ್ ನಿವಾರಕ ಔಷಧಿ ಚಂದ್ರ ಹೂವಿನ ಬಳ್ಳಿಯಲ್ಲಿ ಇದೆ ಎಂದು ಅಧ್ಯಯನ ಮಾಡಿ ಮಹಾಪ್ರಭಂದ ಮಂಡಿಸಿರುವ ಅವರ ಸಾಧನೆ ಮಾನವ ಜನಾಂಗದ…

Read More

ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯದಲ್ಲೂ ತೆಲಂಗಾಣ ರಾಜ್ಯದ ಆಡಳಿತರೂಡ ಕೆ.ಸಿ.ಚಂದ್ರಶೇಖರ್ ರಾವ್ ನೇತೃತ್ವದ BRS ಪಕ್ಷದ ಕಾರ್ಯಚಟುವಟಿಕೆ ಶುರುವಾಗಿದೆ ಇತ್ತಿಚಿಗೆ 200ಕ್ಕೂ ಹೆಚ್ಚು ಕಾರ್ಯಕರ್ತರು BRS ಪಕ್ಷದ ಸದಸ್ಯತ್ವ ಪಡೆದು ಬಿ.ಆರ್.ಎಸ್ ಸೇರಿದ್ದಾರೆ.ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಕೆಲ ಯುವ ಮುಖಂಡರು ಇತ್ತೀಚೆಗೆ ಬಿ.ಆರ್.ಎಸ್ ಪಕ್ಷದ ಹಿರಿಯ ಮುಖಂಡ ತೆಲಂಗಾಣ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ವಿನೋದ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಕರ್ನಾಟಕದ ವಿವಿಧ ಹಿಂದುಳಿದ ಸಮಾಜಗಳ ಮುಖಂಡರು BRS ಪಕ್ಷವನ್ನು ತಮ್ಮ ರಾಜ್ಯಗಳಿಗೆ ವಿಸ್ತರಿಸುವಂತೆ ಆಹ್ವಾನಿಸಿದ್ದರು. ಅದರಂತೆ ಪಕ್ಷದ ಕಾರ್ಯಚಟುವಟಿಕೆ ವಿಸ್ತರಣಾ ಕಾರ್ಯಕ್ರಮವನ್ನು BRS ಮುಖಂಡರು ಆರಂಭಿಸಿದ್ದಾರೆ.ಕರ್ನಾಟಕದ ಬೀದರ್ ತಾಲೂಕಿನ ಚಿಲ್ಲರಗಿ ಗ್ರಾಮದಲ್ಲಿ ತೆಲಂಗಾಣದ ನಾರಾಯಣಖೇಡ್ ಶಾಸಕ ಮಹಿರೆಡ್ಡಿ ಭೂಪಾಲರೆಡ್ಡಿ ನೇತೃತ್ವದಲ್ಲಿ ಕರ್ನಾಟಕದ ಕೆಲವರಿಗೆ ಬಿಆರ್‌ಎಸ್ ಪಕ್ಷದ ಸದಸ್ಯತ್ವ ನೀಡಿ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ.ಈ ಸಂದರ್ಬದಲ್ಲಿ ಅವರು ಮಾತನಾಡಿ ತೆಲಂಗಾಣ ಸಿಎಂ ಕೆಸಿಆರ್ ತೆಲಂಗಾಣದಲ್ಲಿ ಜಾರಿಗೆ ತಂದಿರುವ ಜನರ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನತೆ ಆಕರ್ಷಿತರಾಗಿದ್ದು…

Read More

ಶ್ರೀನಿವಾಸಪುರ:ವೈಕುಂಠ ಏಕಾದಶಿ ಅಂಗವಾಗಿ ತಾಲೂಕಿನ ಬಹುತೇಕ ವೈಷ್ಣವ ದೇವಾಲಯಗಳಲ್ಲಿ ವೈಕುಂಠವಾಸ ಶ್ರೀನಿವಾಸನ ನಾಮಸ್ಮರಣೆ ಭಜನೆ ನಿರಂತರವಾಗಿ ನಡೆಯಿತು.ತಾಲೂಕಿನ ಪುರಾಣ ಪ್ರಸಿದ್ಧ ಗನಿಬಂಡೆ ಶ್ರೀನಿವಾಸ ದೇವಾಲಯ,ರೊಣೂರು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯ,ಯಲ್ದೂರಿನ ಶ್ರೀ ಕೋದಂಡರಾಮ ದೇವಾಲಯ,ಅರಿಕೇರೆಯ ಶ್ರೀ ಕೋದಂಡರಾಮ ದೇವಾಲಯ, ಶ್ರೀನಿವಾಸಪುರ ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ,ಬಳೆ ಅಂಜನೇಯನ ದೇವಾಲಯದ ಶ್ರೀ ಲಕ್ಷ್ಮಿನಾರಯಣ ದೇವಾಲಯ,ಹಳೇಪೇಟೆಯ ಶ್ರೀ ಲಕ್ಷ್ಮೀ ನಾರಸಿಂಹ ದೇವಾಲಯ,ಚೀರುವನ ಹಳ್ಳಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಸಿ.ಹೊಸೂರು ಶ್ರೀ ವೇಂಕಟೇಶ್ವರ ದೇವಾಲಯ ದ್ವಾರಸಂದ್ರ ಶ್ರೀ ಲಕ್ಷ್ಮೀನಾರಸಿಂಹ ದೇವಾಲಯ. ತಾಡಿಗೋಳ್ ಶ್ರೀ ನಾರಸಿಂಹ ದೆವಾಲಯದಲ್ಲಿ ವಿಶೇಷ ಪೂಜೆ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು

Read More

ಶ್ರೀನಿವಾಸಪುರ:ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಮಹಾನ್ ಗ್ರಂಥ ಭಾರತದ ಸಂವಿಧಾನದ ಶಕ್ತಿಯ ಫಲ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹೇಳಿದರು ಅವರು ತಾಲೂಕಿನ ಆಂಧ್ರದ ಗಡಿಯಂಚಿನ ಕೊನೆಯ ಗ್ರಾಮ ಪುಲಗೂರಕೋಟೆ ಗ್ರಾಮದಲ್ಲಿ ದಲಿತ ಸೇನೆ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ತ್ತಳಿ ಅನಾವರಣ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಎಲ್ಲಾ ಸಮಾಜಗಳು ಸಮಾನತೆಯ ಬಾಳ್ವೆ ನಡೆಸಲು ಸಂವಿಧಾನ ಮುಖ್ಯ ಕಾರಣವಾಗಿದೆ ಅಂತಹ ಮಹನೀಯನ ಪುತ್ತಳಿಯ ಅನಾವರಣ ಕಾರ್ಯಕ್ಕೆ ನೆರವು ನೀಡಿರುವ ಈ ಭಾಗದ ಬುಲೆಟ್ ಗಂಗುಲಪ್ಪ ಕುಟುಂಬದ ಸದಸ್ಯರು,ಬೆಂಗಳೂರು ಆದಿತ್ಯಬಾಬು ಇತರೆ ಮುಖಂಡರ ಕಾರ್ಯ ಶ್ಲಾಘನೀಯ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೋಬಳಿಗೊಂದು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಯುವ ಸಮುದಾಯ ಮುಂದಾಗುವಂತೆ ಹೇಳಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರುಚಿನ್ನಪ್ಪರೆಡ್ಡಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ದೇಶದ ಎಲ್ಲ…

Read More

ನ್ಯೂಜ್ ಡೆಸ್ಕ್: ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತ ಅರಾಜಕತೆ ಸೃಷ್ಟಿಸುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ ಹಾದಿ ತಪ್ಪಿದ ಯುವಕರು ಹಿಂಸಾತ್ಮಕವಾಗಿ ವರ್ತಿಸುತ್ತ ಸಣ್ಣ ಪುಟ್ಟ ಕಾರಣಗಳಿಗೆ ರೌಡಿಸಂ ಮಾಡುವಷ್ಟು ಮುಂದಾಗಿದ್ದು ಅಮಾಯಕರ ಮೇಲೆ ಹಲ್ಲೆ ನಡೆಸುತ್ತ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ, ಅಸಹಾಯಕರನ್ನು ಹೊಡೆಯುವುದೇ ಹೀರೋಯಿಸಂ ಅಂತ ಕೆಲವರು ಭಾವಿಸಿಕೊಂಡಿದ್ದಾರೆ.ಮೊನ್ನೆ ಬೆಂಗಳೂರಿನ ಕುಂದಲಹಳ್ಳಿ ಘಟನೆಯಲ್ಲಿ ಯುವಕರು ನಡೆಸುತ್ತಿದ್ದ ಬೇಕರಿ ಮೇಲಿನ ದಾಳಿ ನಡೆಸಿದ ಪುಂಡರು ಬೇಕರಿಯಲ್ಲಿನ ಯುವಕರನ್ನು ಹೊಡೆದು ಅಂದರ್ ಆಗಿದ್ದಾರೆ ಅಂತಹುದೆ ಘಟನೆಯೊಂದು ಡಿಸೆಂಬರ್ 30 ರಂದು ಗುರುವಾರ ತೆಲಂಗಾಣದ ಹನ್ಮಕೊಂಡದ ನಯೀಮ್ ನಗರದಲ್ಲಿ ನಡೆದಿದೆ.ತಡಸಂಜೆ ಬಾಗಿಲು ಹಾಕುವ ಸಮಯದಲ್ಲಿ ಇಬ್ಬರು ಯುವಕರು ರಿಯಾನ್ಸ್ ಪುರುಷರ ಬ್ಯೂಟಿ ಪಾರ್ಲರ್‌ ಗೆ ಬಂದಿದ್ದಾರೆ ಅಲ್ಲಿದ್ದ ಯುವಕನಿಗೆ ಕಟಿಂಗ್ ಮಾಡಲು ಹೇಳಿದ್ದಾರೆ ಅದಕ್ಕೆ ಬ್ಯೂಟಿ ಪಾರ್ಲರ್‌ ಯುವಕ ರಾತ್ರಿಯಾಗಿದೆ ಈಗ ಸಾಧ್ಯವಿಲ್ಲ ಬೆಳಗ್ಗೆ ಬನ್ನಿ ಎಂದು ವಿನಯದಿಂದ ಹೇಳಿದ್ದಾನೆ, ಅದಕ್ಕೆ ಬಂದಿದ್ದ ಇಬ್ಬರು ಯುವಕರು ಅದೆಲ್ಲ ಆಗುವುದಿಲ್ಲ ಈಗಲೆ ಕಟಿಂಗ್ ಮಾಡುವಂತೆ ಒತ್ತಾಯಿಸಿದ್ದಾರೆ…

Read More

ನ್ಯೂಜ್ ಡೆಸ್ಕ್: ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ತಿರುಮಲ-ತಿರುಪತಿ ದೇವಾಲಯದ ವೆಬ್ ಪುಟದಲ್ಲಿ ಬಿಡುಗಡೆಯಾದ 40 ನಿಮಿಷದಲ್ಲಿ ಸಂಪೂರ್ಣವಾಗಿ ಕಾಲಿಯಾಗಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರಕ್ಕೆ ಭೇಟಿ ನೀಡಲು ಭಕ್ತರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬರುತ್ತಿದ್ದ ಹಿನ್ನಲೆಯಲ್ಲಿ 10 ದಿನಗಳ ವೈಕುಂಠ ದ್ವಾರ 300 ರೂಗಳ 2 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು TTD ‘Tirupathibalaji.ap.govv.in’ ವೆಬ್ ಸೈಟ್ ಮೂಲಕ ಇಂದು ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬಿಡುಗಡೆ ಮಾಡಿದ್ದು ಕೆವಲ 40 ನಿಮಿಷಗಳಲ್ಲಿ ಟಿಕೆಟ್‌ಗಳು ಮಾರಾಟವಾಗಿದೆ. ಟಿಕೆಟ್‌ಗಳು ಮಾರಟವಾಗಿರುವುದು ತಿಳಿಯದ ಭಕ್ತರು ಇನ್ನೂ ವೆಬ್‌ ಸೈಟ್‌ನಲ್ಲಿ ಟಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಮತ್ತೊಂದೆಡೆ, ಸರ್ವ ದರ್ಶನಂ ಜನವರಿ 1 ರಂದು ತಿರುಪತಿಯಲ್ಲಿ ಭಕ್ತರಿಗೆ ಆಫ್‌ಲೈನ್ ಮೋಡ್ ಮೂಲಕ ಟಿಟಿಡಿ ಟೋಕನ್‌ಗಳನ್ನು ಹಂಚಿಕೆ ಮಾಡುತ್ತಿದೆ. ತಿರುಪತಿಯ 9 ಕೇಂದ್ರಗಳ ಮೂಲಕ ದಿನಕ್ಕೆ 50 ಸಾವಿರದಂತೆ 5 ಲಕ್ಷ ಟಿಕೆಟ್‌ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ. ನೂತನ ವರ್ಷ…

Read More

ಶ್ರೀನಿವಾಸಪುರ:ಸಾರ್ವಜನಿಕ ಜೀವನದಲ್ಲಿ ಇರುವಂತ ವ್ಯಕ್ತಿಗಳ ಹುಟ್ಟುಹಬ್ಬದ ಕಾರ್ಯಕ್ರಮಗಳು ಸಾರ್ವಜನಿಕವಾಗಿ ಆಚರಿಸಿಕೊಂಡಾಗ ಅವರ ಬದುಕಿನಲ್ಲಿ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಹೇಳಿದರು ಅವರು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣರವರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಮತ್ತು ರಾಜಣ್ಣ ಅಭಿಮಾನಿಗಳು ತಾಲೂಕಿನ ಅರಿಕುಂಟೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸ್ವೇಟರ್ ಹಾಗು ಇತರೆ ಪರಿಕರಗಳನ್ನು ವಿತರಿಸಿ ಮಾತನಾಡಿ ಹುಟ್ಟುಹಬ್ಬದ ಆಚರಣೆ ಅರ್ಥ ಪೂರ್ಣವಾಗಿದ್ದಾಗ ಅದಕ್ಕೆ ಗೌರವ ಹೆಚ್ಚಾಗುತ್ತದೆ ಎಂದರು.ಇಂದಿರಾಭವನ್ ರಾಜಣ್ಣ ಮಾತನಾಡಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಭಿಮಾನದಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಬೆಲೆ ಕಟ್ಟಲಾಗದ್ದು ಅವರಿಗೆ ಚಿರಋಣಿ ಎಂದರು ಇದೇ ಸಂದರ್ಭದಲ್ಲಿ ಇಂದಿರಾಭವನ್ ವೃತ್ತದಲ್ಲಿ ಕೆಕ್ ಕತ್ತರಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿದರು.ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮಂಜುನಾಥಗೌಡ,ಜಗದೀಶ್,ಕಾರ್ ಬಾಬು,ಉದ್ಯಮಿ ಅಂಬೇಡ್ಕರ್ ಪಾಳ್ಯ ರವಿ, ಗೋರವಿಮಾಕಲಹಳ್ಳಿಶ್ರೀನಿವಾಸ್,ಗುರುಮೂರ್ತಿ,ಅವಲಕುಪ್ಪರಾಮಚಂದ್ರ,ಜಗನ್,ಬಿ.ಎಲ್.ದುರ್ಗ,ಪ್ರೇಮ್,ಪೂಲುಶಿವಾರೆಡ್ಡಿ ಮುಂತಾದವರು ಇದ್ದರು.

Read More

ನ್ಯೂಜ್ ಡೆಸ್ಕ್: ಕರ್ನಾಟಕದಲ್ಲೂ ಮುನ್ನಚ್ಚೆರಿಕೆಯಾಗಿ ಮುಖ್ಯಮಂತ್ರಿ ಅರೋಗ್ಯಸಚಿವರು ಅಧಿಕಾರಿಗಳ ಸಭೆ ನಡೆಸಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು ಅದರಂತೆ ಆರೋಗ್ಯ ಇಲಾಖೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಮಾಸ್ಕ್​ ಕಡ್ಡಾಯ ಸೇರಿದಂತೆ, ಸಾರ್ವಜನಿಕ ಸಭೆ,ಮದುವೆ ಸಮಾರಂಭಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಿದೆ.ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಆಸ್ಪತ್ರೆ ಇರುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್ -19 ರೋಗಿಗಳಿಗೆ ಕೆಲವು ಹಾಸಿಗೆಗಳನ್ನು ಕಾಯ್ದಿರಿಸುತ್ತವೆ. ಶೇ. 80 ರಷ್ಟು ಜನರು ಇನ್ನೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅಂತಹವರು ಕೂಡಲೇ ಡೋಸ್ ಪಡೆದುಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ.ಸಾಕಷ್ಟು ಲಸಿಕೆ ದಾಸ್ತಾನು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ.ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಬರುವವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಕೆಲ ಶಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು ಕೇಂದ್ರದ ಸಲಹೆಯನ್ನು ರಾಜ್ಯಗಳು ಅನುಸರಿಸುತ್ತಿವೆ ಎಂದಿರುತ್ತಾರೆ.ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ, ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಕೋವಿಡ್​​-19 ಪ್ರಕರಣಗಳ ಏರಿಕೆಯಾಗಿದ್ದು, ಮುಂಬರುವ ಕ್ರಿಸ್​​ಮನಸ್​…

Read More

ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಹೋಬಳಿಯ ಯಂಡ್ರಕಾಯಿಲಗುಂಟ ಗ್ರಾಮದ ದೇವಾಲಯಕ್ಕೆ ಸಮಾಜಸೇವಕ ಗೂಂಜೂರುಶ್ರೀನಿವಾಸರೆಡ್ದಿ ಧ್ವನಿವರ್ಧಕ ಹಾಗು ಇತರೆ ಪರಿಕರಗಳು ಕೊಡುಗೆಯಾಗಿ ನೀಡಿದರು.ಈ ಸಂದರ್ಬದಲ್ಲಿ ಮಾತನಾಡಿದ ಶ್ರೀನಿವಾಸರೆಡ್ದಿ ಗ್ರಾಮದ ಯುವಸಮುದಾಯ ನಮ್ಮ ಬಣಕ್ಕೆ ಸೇರ್ಪಡೆಯಾಗಿದ್ದು ಅವರು ಹಣ ಸೇರಿದಂತೆ ಇನ್ನಿತರೆ ಯಾವುದೆ ವೈಯುಕ್ತಿಕ ಆಮೀಷಕ್ಕೆ ಒಳಗಾಗದೆ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು ಅದರಂತೆ ಆರಂಭಿಕವಾಗಿ ಧ್ವನಿವರ್ಧಕ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಕೊಡುಗೆಯಾಗಿ ಕೊಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣವಾದ ಸಹಕಾರ ನೀಡುವುದಾಗಿ ಹೇಳಿದರು.ಇದೇ ಸಂದರ್ಬದಲ್ಲಿ ಹೋಳೂರು ಹೋಬಳಿಯ ಮಾರೇನಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಪೈಂಟ್ ಬಳಿಯಲು ಧನಸಹಾಯ ಮಾಡಿರುತ್ತಾರೆ.ಈ ಕಾರ್ಯಕ್ರಮದಲ್ಲಿ ಜಿ.ಎಸ್.ಆರ್ ಬಣದ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಪಠಾಣ್ ಷಫಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ,ಯಂಡ್ರಕಾಯಿಲಗುಂಟ ಗ್ರಾಮದ ವೆಂಕಟರಮಣ,ನರಸಿಂಹಯ್ಯ,ರವಣಪ್ಪ,ಮುಂತಾದವರು ಇದ್ದರು.

Read More