ನ್ಯೂಜ್ ಡೆಸ್ಕ್:ಸಂವೇದನಾಶೀಲ ಚಿಂತಕ ಹಾಗು ಹಿರಿಯ ಪತ್ರಕರ್ತ ಡಿ ಉಮಾಪತಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ನೀಡುವ ‘ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ವ್ಯವಸ್ಥೆಯಲ್ಲಿ ಸಾಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳು ಅದೆಷ್ಟೇ ಕಲುಷಿತಗೊಂಡಿದ್ದು ಅವುಗಳ ನಡುವೆಯೇ ಇದ್ದು ಅವುಗಳನ್ನು ಮಾನವೀಯಗೊಳಿಸುವ,ನ್ಯಾಯಬದ್ಧಗೊಳಿಸುವ ಹಾಗೂ ಆ ದಿಕ್ಕಿನಲ್ಲಿ ಜನಸಮುದಾಯಗಳನ್ನು ವೈಚಾರಿಕವಾಗಿ ಜಾಗೃತ ಗೊಳಿಸುವತ್ತ ಚಳವಳಿ ಮಾದರಿಯಲ್ಲಿ ಬರೆಯುವುದು, ಬದುಕುವುದು ನೈಜ ಪತ್ರಕರ್ತನ ಗುಣಲಕ್ಷಣಗಳಾಗುತ್ತವೆ” ಎಂದು ಪತ್ರಕರ್ತರ ಸಂಘ ಹೇಳಿದೆ.
ಪ್ರಶಸ್ತಿ ಮತ್ತು ಫಲಕ ಒಳಗೊಂಡಿರುವ ಪ್ರಶಸ್ತಿಯನ್ನು ಬಾಗಲಕೋಟೆ ಪತ್ರಕರ್ತ ಸುಭಾಷ್ ಹೊದ್ಲೂರು ಅವರು ಅಂಬೇಡ್ಕರ್ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಗೆ ದತ್ತಿನಿಧಿ ಸ್ಥಾಪಿಸಿದ್ದು 2021-22 ಸಾಲಿನಿಂದ ನೀಡಲಾಗುತ್ತಿದೆ ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು ತಿಳಿಸಿದ್ದಾರೆ.
“ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್. ಅವರ ಹೆಸರಿನಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳೊಂದಿಗೆ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಪ್ರಶಸ್ತಿಯನ್ನು ಡಿ.ಉಮಾಪತಿ ಅವರಿಗೆ ನೀಡುವ ಮೂಲಕ ಗೌರವಿಸಲಾಗುತ್ತಿದೆ”ಎಂದು ತಿಳಿಸಿದೆ.
ಕಳೆಬಾರಿ ‘ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಗೆ ನೀಡಲಾಗಿತ್ತು. ಈ ಬಾರಿ ಡಿ.ಉಮಾಪತಿ ಅವರಿಗೆ ನೀಡಲಾಗುತ್ತಿದೆ.
ಅಂಬೇಡ್ಕರ್ ಅವರ ಬದುಕು ಮತ್ತು ಆಶಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು,ರಾಜ್ಯ ಮತ್ತು ರಾಷ್ಟ್ರ ರಾಜಕಾರಣ, ಸಾಮಾಜಿಕ ವ್ಯವಸ್ಥೆಯೊಳಗಿನ ಅನಿಷ್ಟಗಳ ಕುರಿತು ರಾಜಿಯಿಲ್ಲದೆ ವರದಿ ಮಾಡುವ ಮೂಲಕ ಸತ್ಯ-ನ್ಯಾಯ-ಪ್ರೀತಿಯ ಧ್ಯೇಯಗಳೊಂದಿಗೆ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಆಡಂಬರ ವಿಲ್ಲದೆ ಸೇವೆ ಸಲ್ಲಿಸುತ್ತಿರುವ ಡಿ.ಉಮಾಪತಿ ಅವರ ಆಯ್ಕೆ ಮೌಲ್ಯಗಳನ್ನು ಹೆಚ್ಚಿಸಿದೆ ವೈಚಾರಿಕತೆಯ ಚಿಂತನಾ ಪತ್ರಕರ್ತ ಡಿ.ಉಮಾಪತಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಬೇಡ್ಕರ್ ಹೆಸರಿನ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದ್ದು ಕಲುಷಿತ ವ್ಯವಸ್ಥೆಯಲ್ಲಿ ಮಾಣಿಕ್ಯದಂತೆ ಹೊಳೆಯುವ ಅವರ ಕಾರ್ಯವೈಖರಿ ಸಮಾಜಕ್ಕೆ ಹಾಗು ಯುವ ಪೀಳಿಗೆಯ ಪತ್ರಕರ್ತರಿಗೆ ಮಾದರಿಯಾಗಿದೆ ಡಿ.ಉಮಾಪತಿ ಅವರನ್ನು vcs media network ಅಭಿಮಾನದ ಅಭಿನಂದನೆ ಸಲ್ಲಿಸುತ್ತದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



