ಶ್ರೀನಿವಾಸಪುರ:ಈ ತಾಲೂಕಿನ ಜೀವನಾಡಿ ಬೆಳೆಯಾಗಿರುವ ಮಾವು ಬೆಳೆ ಬಿಸಿಲಿನ ತಾಪಮಾನದಿಂದ ಕುಂಠಿತವಾಗಿತ್ತು ಬುಧವಾರ ಸುರಿದ ಮಳೆಯಿಂದ ಅಳಿದುಳಿದ ಮಾವುಬೆಳೆ ನೆಲದ ಪಾಲಾಗಿದೆ ರೈತರು ನಷ್ಟಕ್ಕೊಳಗಾಗಿದ್ದಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಗುರುವಾರ ಸಂಸದ ಮಲ್ಲೇಶ್ ಬಾಬು ಜೊತೆಗೂಡಿ ಮಳೆಯಿಂದ ನಷ್ಟಕ್ಕೆ ಒಳಗಾದ ಕಸಬಾ ಹೋಬಳಿ ದೊಡಮಲದೊಡ್ಡಿ ಸೇರಿದಂತೆ ಗ್ರಾಮಗಳ ವ್ಯಾಪ್ತಿಯ ಮಾವಿನ ತೋಟಗಳಿಗೆ ಭೇಟಿ ನೀಡಿದ್ದ ಅವರು ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡಲು ವಹಿಸಬೇಕಾದ ಕ್ರಮದ ಕುರಿತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಅವರಿಗೆ ಸೂಚಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ವರದಿ ನೀಡಿ ಪರಿಹಾರ ಕುರಿತಾಗಿ ವಿಪತ್ತು ನಿರ್ವಹಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಮಾವು ಬೆಳೆ ತಾಪಮಾನದ ತೀವ್ರ ಏರಿಕೆ, ಅಕಾಲಿಕ ಮಳೆಯಿಂದ ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗುತ್ತಿರುವುದು ದುರಂತ ಎಷ್ಟೊ ಜನ ರೈತರು ಬೆಳೆ ವಿಮೆ ಸಹ ಮಾಡಿಸಿರುವುದಿಲ್ಲ ಆದ್ದರಿಂದ ರೈತರಿಗೆ ಅಗತ್ಯ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ…
Author: Srinivas_Murthy
ಶ್ರೀನಿವಾಸಪುರ: ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಇರುವಂತ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ನರಸಿಂಹ ಜಯಂತಿ ಅಂಗವಾಗಿ ಇದೆ ಪ್ರಥಮ ಬಾರಿಗೆ ರಥೋತ್ಸವ ಆಯೋಜಿಸಿದ್ದು ರಥೋತ್ಸವ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಸ್ಥಾನದಲ್ಲಿ ಮೂಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥದಲ್ಲಿ ಭಕ್ತರು ಎಂ.ಜಿ.ರಸ್ತೆಯಲ್ಲಿ ತೇರನ್ನು ಎಳೆದು ಪುನಿತರಾದರು. ಪ್ರಥಮ ಬಾರಿಗೆ ಆಯೋಜಿಸಿದ್ದ ರಥೋತ್ಸವಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಶಾಸಕ ವೆಂಕಟಶಿವಾರೆಡ್ಡಿ ಹಾಗು ಸಂಸದ ಮಲ್ಲೇಶ್ ಬಾಬು ರಥೋತ್ಸವದ ಪೂಜೆಯಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
ಶ್ರೀನಿವಾಸಪುರ:ಶ್ರೀನಿವಾಸಪುರದ ಜೀವನಾಡಿ ಮಾವುಬೆಳೆ ಬುಧವಾರ ಸಂಜೆ ಸುರಿದ ಆರ್ಭಟದ ಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲದ ಪಾಲಾಗಿದೆ. ಮಾವು ಬೆಳೆ ಇಲ್ಲಿನ ರೈತರ ಬದುಕಿನ ಬೆಳೆಯಾಗಿದೆ.ತಾಲೂಕಿನ ಕಸಬಾ ಹೋಬಳಿ ಆಲವಾಟ, ದೊಡಮಲದೊಡ್ಡಿ, ಆರಿಕುಂಟೆ, ಚಕ್ಕಾರ್ಲಾಪಲ್ಲಿ ಬಂಡಪಲ್ಲಿ ತಾಡಿಗೊಳ್ ಪಂಚಾಯಿತಿಯ ಕೆಲ ಗ್ರಾಮಗಳು ನೆಲವಂಕಿ ಹೋಬಳಿಯ ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಮಾವಿನ ಬೆಳೆ ಇಂದು ಸುರಿದ ಗಾಳಿ ಸಹಿತ ಮಳೆಯಿಂದ ಧರೆಗುರಳಿದೆ.ತಾಪಮಾನ ಹೆಚ್ಚಳದಿಂದ ಮರದಲ್ಲೇ ಬಾಡುತ್ತ ನಿಧಾನಗತಿಯಲ್ಲಿ ಬೆಳವಣಿಗೆ ಆಗುತ್ತಿದ್ದ ಮಾವಿನಬೆಳೆ ಬಿರುಗಾಳಿ ಮಳೆಗೆ ನೆಲಕ್ಕೆ ಉದುರಿ ತೋಟದ ತುಂಬೆಲ್ಲಾ ಹರಡಿದೆ..ಆಲಿಕಲ್ಲು ಬಿದ್ದಿದ್ದರಿಂದ ಗಿಡದಲ್ಲಿ ಉಳಿಯುವ ಕಾಯಿಗಳೂ ಗಾಯಗೊಂಡು ಕಪ್ಪು ಕಲೆಗಳಿಂದ ಹಾಳಾಗುತ್ತವೆ. ರೈತರು ಬಂಡವಾಳ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.ಸರ್ಕಾರ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವ ಮೂಲಕ ಮಾವು ಬೆಳೆಗಾರರನ್ನು ರಕ್ಷಿಸುವಂತೆ ರೈತರು ಮನವಿ ಮಾಡಿದ್ದಾರೆ.
ಶ್ರೀನಿವಾಸಪುರ: ಕೊನೆ ಉಸಿರು ಇರುವ ತನಕ ನಿಮ್ಮೊಂದಿಗೆ ಇರುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾಗಿ ನುಡಿದರು.ಅವರು ತಾಲೂಕಿನ ಅಡ್ಡಗಲ್ ಪಂಚಾಯಿತಿ ವ್ಯಾಪ್ತಿಯ ಎ.ವ್ಯಾಪಲಪಲ್ಲಿ ಗ್ರಾಮದಲ್ಲಿ 135 ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದ ನಂತರ ಗ್ರಾಮದ ಯುವಕರೊಂದಿಗೆ ಪಂದ್ಯಾವಳಿಗಳನ್ನು ವಿಕ್ಷಿಸಿದ ಅವರು ಗ್ರಾಮಸ್ಥರ ಆಪ್ಯಾಯಿತೆ ಕಂಡು ಭಾವುಕರಾದರು ಭೂಮಿ ಮೇಲೆ ಹಣ, ಆಸ್ತಿ ಬೇಕು ಎನ್ನುವವರು ಬಡವ, ದರಿದ್ರರರು, ಬದುಕಲು ಸಾಕಾಗುವಷ್ಟು ಹಣ ಸಾಕು ಎನ್ನುವವರು ಶ್ರೀಮಂತರು. ನಾನು ಕೋಟ್ಯಾದಿಪತಿ ಅಲ್ಲ,ನಾನು ಹಣ ಅಂತಸ್ತು ಮಾಡಬೇಕು ಎಂದು ಯಾವತ್ತು ಆಲೋಚನೆ ಮಾಡಿಲ್ಲ ನೀವೆ ನನ್ನ ಆಸ್ತಿ ನಿಮ್ಮಂತೆ ಸರಳವಾಗಿ ಜೀವನ ಮಾಡುತ್ತ ನಿಮ್ಮೊಂದಿಗೆ ಇರುತ್ತೇನೆ, ಗ್ರಾಮಸ್ಥರು ನನ್ನ ಕುಟುಂಬ ಎಂದು ಭಾವಿಸಿದ್ದೇನೆ ಭಗವಂತ ನನಗೆ ಆಯಸ್ಸು, ಆರೋಗ್ಯ ಕೋಡಬೇಕು ಅಷ್ಟೆ ನಾನು ಇಡೀ ಜೀವನಪೂರ್ತಿ ನಿಮ್ಮೊಂದಿಗೆ ಇರಲು ಬಯಸುತ್ತೇನೆ ಎಂದರು.ನನ್ನ ಅಧಿಕಾರವಧಿಯಲ್ಲಿ ಎ.ವ್ಯಾಪಲಪಲ್ಲಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಕಾರ್ಯಗಳನ್ನು…
ನ್ಯೂಜ್ ಡೆಸ್ಕ್:ಕೋಲಾರ ಜಿಲ್ಲೆಯ ಮುಳಬಾಗಿಲು ಗಡಿಯಂಚಿನ ಆಂಧ್ರದ ಚಿತ್ತೂರು ಜಿಲ್ಲೆಯ ವಿ,ಕೋಟ ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ಪತ್ರಕರ್ತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.ಹತ್ಯೆಗೊಳಗಾದ ವ್ಯಕ್ತಿಯನ್ನು ವಿ.ಕೋಟ ಪಟ್ಟಣದ ಆಂಧ್ರ ಜ್ಯೋತಿ ಪತ್ರಿಕೆಯ ವರದಿಗಾರ ಹಿರಿಯ ಪತ್ರಕರ್ತ ಜಗನ್ಮೋಹನ್ ರೆಡ್ಡಿ(51) ಎಂದು ಗುರುತಿಸಲಾಗಿದೆ.ಹತ್ಯೆಗೊಳಗಾದ ಜಗನ್ಮೋಹನ್ ರೆಡ್ಡಿ ಮಂಗಳವಾರ ಬೆಳಿಗ್ಗೆ, ಎಂದಿನಂತೆ ವಾಕಿಂಗ್ ಮಾಡುತ್ತಿರುವಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಭೀಕರವಾಗಿ ಕೊಚ್ಚಿ ಕೊಂದಿದ್ದು ಅವರೊಂದಿಗೆ ಇದ್ದ ಮತ್ತೊಬ್ಬ ಪತ್ರಕರ್ತ ಮಣಿ ಅವರ ಮೇಲೂ ಹಲ್ಲೆ ನಡೆಸಲಾಗಿದ್ದು ಅವರು ತಪ್ಪಿಸಿಕೊಂಡಿದ್ದಾರೆ ದುಷ್ಕರ್ಮಿಗಳ ಗುಂಪು ಹರಿತವಾದ ಆಯುದಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಜಗನ್ಮೋಹನ್ ರೆಡ್ಡಿ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಪ್ರಾಣ ಬಿಟ್ಟಿರುವುದಾಗಿ ಹೇಳಲಾಗಿದೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಲಮನೇರಿಗೆ ಸ್ಥಳಾಂತರಿಸಿದ್ದಾರೆ.ಹತ್ಯೆ ಘಟನೆ ವಿ.ಕೋಟ ಪಟ್ಟಣದಲ್ಲಿ ಸಂಚಲನ ಮೂಡಿಸಿದೆ. ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ ಜಗನ್ಮೋಹನ್ ರೆಡ್ಡಿ ಎಲ್ಲರೊಂದಿಗೆ ಆಪ್ಯಾಯಿತೆಯಿಂದ ಬೆರೆಯುತ್ತಿದ್ದರು ಇವರಿಗೆ ಪತ್ನಿ, ಒಬ್ಬ ಪುತ್ರಿ…
ನ್ಯೂಜ್ ಡೆಸ್ಕ್:ಕೇರಳದಲ್ಲಿ ಬಿಸಿಲ ಬೇಗೆ ಏರುತ್ತಿದ್ದು ನೆತ್ತಿ ಸುಡುವ ಸೂರ್ಯನಿಂದ ಆಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಜನರು ಸ್ವಯಂ ಲಾಕ್ಡೌನ್ಗೆ ಒಳಗಾಗುವಂತೆ ಕೇರಳ ಸಿಎಂ ಪಿಣರಾಯ್ ವಿಜಯನ್ ಕರೆ ನೀಡಿದ್ದಾರೆ ಜನತೆ ಆದಷ್ಟು ಬೆಳಗ್ಗೆ 11ರಿಂದ 3ರ ನಡುವೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿರುತ್ತಾರೆ.ಕೇರಳದ ಪಾಲಕ್ಕಾಡ್, ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ದಾಖಲೆಯ ಉಷ್ಣಾಂಶ ಕುರಿತು ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನೀಡಿತ್ತು.ಮೂರು ಜಿಲ್ಲೆಗಳಲ್ಲಿ ತಾಪಮಾನ ಏರುತ್ತಿದ್ದು, 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ವರದಿಯಾಗಿದೆ. ಹೆಚ್ಚಿನ ಒಣಹವೆಯಿಂದಾಗಿ, ಶಾಖದ ಪರಿಣಾಮವೂ ಹೆಚ್ಚಲಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಜನರು ತಮ್ಮ ಆರೋಗ್ಯ ಸುರಕ್ಷತೆಯ ಬಗ್ಗೆ ಸ್ವಯಂ ಕಾಳಜಿಗೆ ಮುಂದಾಗಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.ಏಪ್ರಿಲ್ 27ರವರೆಗೆ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿ ಮತ್ತು ಆರ್ದ್ರ ಹವಾಮಾನ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ಕೊಟ್ಟಿದೆ.ಬಿಸಿಲ ತಾಪ ಹೆಚ್ಚುತ್ತಿದ್ದು, ಜನರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು…
ಶ್ರೀನಿವಾಸಪುರ:ವಾಸವಿ ಮಾತೆ ಅನ್ಯಾಯದ ವಿರುದ್ಧ ಹೋರಾಡಿ,ಅಗ್ನಿ ಪ್ರವೇಶ ಮಾಡಿ, ಅಹಿಂಸೆಯ ಮೂಲಕ ಲೋಕಕ್ಕೆ ಮಾದರಿಯಾದ ಜಗನ್ಮಾತೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಶ್ರೀವಾಸವಿ ಕನ್ಯಕಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸವಿ ಜಯಂತಿ ಶುಭಾಶಯಕೋರಿ ಮಾತನಾಡಿದರು.ವಾಸವಿ ಮಾತೆಯನ್ನು ಆರಾಧಿಸುವ ಆರ್ಯ ವೈಶ್ಯ ಸಮಾಜದವರು ಅಹಿಂಸೆ ಮತ್ತು ತ್ಯಾಗವನ್ನು ನಂಬಿದ ಜನಾಂಗವಾಗಿದ್ದು ಎಲ್ಲರೊಂದಿಗೂ ಹೊಂದಿಕೊಂಡು ಹೋಗುವಂತ ಸಹೃದಯಿಗಳು ಎಂದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಆರ್ಯ ವೈಶ್ಯ ಸಮಾಜ ಶಿಸ್ತಿನೊಂದಿಗೆ ಯೋಚಿಸಿ ತೀರ್ಮಾನ ಮಾಡುವ ಸಮಾಜ. ಅವರು ದುಡಿಮೆಯ ಲೆಕ್ಕಾಚಾರದಲ್ಲಿ ಸಮಾಜಕ್ಕೂ ಕೊಡುಗೆ ನೀಡುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಬೀಮಗುಂಟಪಲ್ಲಿಶಿವಾರೆಡ್ಡಿ,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ ಆರ್ಯವೈಶ್ಯ ಮಂಡಳಿ ಪ್ರಮುಖರಾದ ಎಸ್.ಬಿ.ಅಮರನಾಥ್,ಯೈಆರ್.ಎಸ್.ಪ್ರಕಾಶ್.ಸೂರ್ಯನಾರಯಣಶೆಟ್ಟಿ, ಸತ್ಯನಾರಯಣಶೆಟ್ಟಿ,ಜೆರಾಕ್ಸ್ ಬದ್ರಿ,ಸುಜಯ್,ಮ್ಯಾಂಗೋ ವ್ಯಾಲಿ ಅಮರನಾಥ್,ಅಂಜನಾದ್ರಿ ನಾಗರಾಜ್,ಸೀತಾರಾಮ್ ಮುಂತಾದವರು ಇದ್ದರುಮಾಜಿ ಸ್ಪೀಕರ್ ಭೇಟಿಮೂರು ದಿನಗಳ ಕಾಲ ಆಯೋಜಿಸಿದ್ದ ವಾಸವಿ ಜಯಂತಿ ಅಂಗವಾಗಿ ಎರಡನೆ ದಿನವಾದ ಶನಿವಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕನ್ಯಾಕಪರಮೇಶ್ವರಿ ದೇವಾಲಯಕ್ಕೆ…
ಕೋಲಾರ:ಆನ್ಲೈನ್ ಮೂಲಕ ಗ್ರಾಹಕ ಆದೇಶ ಮಾಡಿದ್ದ ವಸ್ತು ಬದಲಿಗೆ ಬೆರೊಂದು ಪ್ರಾಡಕ್ಟ್ ನೀಡಿದಲ್ಲದೆ ಈ ಬಗ್ಗೆ ದೂರು ಸಲ್ಲಿಸಿದರು ಪರಿಗಣಿಸಿದೆ ನಿರ್ಲಕ್ಷ್ಯವಹಿಸಿದ ಆರೋಪಕ್ಕಾಗಿ ಕೋಲಾರ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ದೂರುದಾರನಿಗೆ ಬಡ್ಡಿಸಮೇತ ಹಾಗು ವ್ಯಾಜ್ಯದ ಖರ್ಚು ಭರಿಸುವಂತೆ ರಿಲಿಯನ್ಸ್ ಸಂಸ್ಥೆಗೆ ಆದೇಶ ಮಾಡಿದೆ.ಕೋಲಾರ ನಗರದ ಜವಹರ್ ಬಾಬು ಎನ್ನುವ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಿಲಿಯನ್ಸ್ ರಿಟೈಲ್ ಲಿ. ಭಾಗವಾಗಿ ಕೋಲಾರದ ರಿಲಿಯನ್ಸ್ ಸ್ಮಾರ್ಟ್ ಪಾಯಿಂಟ್ ಗೆ ಜಿಯೋಮಾರ್ಟ್ ಮೂಲಕ ಮನೆ ಬಳೆಕೆಗಾಗಿ ಉಜಾಲ್ ಲಿಕ್ವಿಡ್ ಡಿಟರ್ಜೆಂಟ್ ಆನ್ಲೈನ್ ಮೂಲಕ ಆರ್ಡರ್ ಮಾಡಲಾಗಿತ್ತು. ಇದಕ್ಕಾಗಿ ಮೊಬೈಲ್ ಮೂಲಕ ಪೇಮೆಂಟ್ ಸಹ ಮಾಡಿದ್ದು ಆದರೆ ಆರ್ಡರ್ ಮಾಡಿದ ವಸ್ತು ಕಳಿಸದೆ ಕಡಿಮೆ ಮೌಲ್ಯದ ಬೆರೊಂದು ಪ್ರಾಡಕ್ಟ್ ಅನ್ನು ಕಳಿಸಿದ್ದು ಈ ಬಗ್ಗೆ ಜವಹರ್ ಬಾಬು ಸ್ಮಾರ್ಟ್ ಪಾಯಿಂಟ್ ತಿಳಿಸಿದ್ದರು ಯಾವುದೆ ಪ್ರಯೋಜನೆ ಆಗದ ಹಿನ್ನಲೆಯಲ್ಲಿ ತಮಗಾದ ವ್ಯತ್ಯಾಸದ ಕುರಿತು ತಾವು ಆರ್ಡರ್ ಮಾಡಿದ ವಸ್ತು ಕೋಡಿ…
ಶ್ರೀನಿವಾಸಪುರ:ರಣ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ ಬೆಂಕಿಯಂತ ಕಿರಣಗಳು ಜನರ ಮೇಲೆ ಬಿಳುತಿದ್ದು ಬಿಸಿಲ ಪ್ರತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲ ತಾಪ ಮಾನ 36-37 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು,ರಣ ರಣ ಬಿಸಿಲಿನ ಆರ್ಭಟಕ್ಕೆ ಜನ ಹೈರಾಣರಾಗಿದ್ದಾರೆ.ಜೀವನಾಡಿ ಮಾವಿಗೂ ಮಾರಕಬಿಸಿಲ ತಾಪಕ್ಕೆ ಶ್ರೀನಿವಾಸಪುರ ಜೀವನಾಡಿ ಮಾವಿಗೆ ಮಾರಕವಾಗಿದೆ.ತೀವ್ರವಾದ ಬಿಸಿಲು ಮತ್ತು ನೀರಿನ ಕೊರತೆಯಿಂದಾಗಿ ಮಾವಿನ ಕಾಯಿಗಳು ದೊಡ್ಡದಾಗುವ ಮುನ್ನವೇ ನೆಲಕ್ಕೆ ಉದುರಿ ಹೋಗುತ್ತಿವೆ,ಜೊತೆಗೆ ಮಾವಿನ ಬೆಳೆಗೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ ಬಿಸಿಲಿನ ತಾಪ ಹೀಗೆಯೇ ಮುಂದುವರೆದರೆ ಮಾವಿನ ಇಳುವರಿ ಕಡಿಮೆಯಾಗುತ್ತದೆ ಎಂದು ಮಾವು ಬೆಳೆಗಾರರು ಆತಂಕದಿಂದ ಹೇಳುತ್ತಾರೆ.ಬಿಸಿಲಿನ ತಾಪ ತಾಳಲಾಗದೆ ಜನತೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು,ಬಿಸಿಲಿನ ಧಗೆಗೆ ಜನಜೀವನ ತತ್ತರಿಸಿದೆ,ಮನೆಯಿಂದ ಹೊರಗೆ ಬರಲು ಭಯ ಬೀಳುತ್ತಿದ್ದಾರೆ.ಸೂರ್ಯನ ಆರ್ಭಟಕ್ಕೆ ಕಾಂಕ್ರೀಟ್ ರಸ್ತೆ, ಕಟ್ಟಡಗಳು ಹಾಗು ಮನೆಯ ಚಾವಣಿ ಕಾದ ಕಾವಲಿಯಂತಾಗಿವೆ. ಡಾಂಬರು ರಸ್ತೆಗಳು ಬಿಸಿಲ ತಾಪನ್ನು…
ನ್ಯೂಜ್ ಡೆಸ್ಕ್:ಭಾರತದ ತಂತ್ರಜ್ಞಾನ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯನ್ನು ದೇಶದ ಮೊತ್ತಮೊದಲ ‘ಕ್ವಾಂಟಮ್ ವ್ಯಾಲಿ’ (Quantum Valley) ಎಂದು ಘೋಷಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ ಸುಮಾರು 10,000 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ನಿಗದಿಪಡಿಸಲಾಗಿದೆ.ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಸಾಂಪ್ರದಾಯಿಕ ಕಂಪ್ಯೂಟರ್‌ಗಳಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಕೆಲಸ ಮಾಡುವ ತಂತ್ರಜ್ಞಾನವಾಗಿದ್ದು ಇದು ರಕ್ಷಣೆ, ಔಷಧ ಸಂಶೋಧನೆ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದಿಯಂತೆ.ಅಮರಾವತಿಯ ಈ ವ್ಯಾಲಿಯಲ್ಲಿ ಜಾಗತಿಕ ಮಟ್ಟದ ಸಂಶೋಧನಾ ಪ್ರಯೋಗಾಲಯಗಳು, ಐಟಿ ಕಂಪನಿಗಳ ಕ್ವಾಂಟಮ್ ವಿಭಾಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದ್ದು. ಐಐಟಿ (IIT) ಮತ್ತು ಐಐಎಸ್ಸಿ (IISc) ಯಂತಹ ಸಂಸ್ಥೆಗಳು ಇಲ್ಲಿ ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.ಈ ಯೋಜನೆಯಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 50,000 ಕ್ಕೂ ಹೆಚ್ಚು ಉನ್ನತ ತಂತ್ರಜ್ಞಾನದ ಉದ್ಯೋಗಗಳು ಸೃಷ್ಟಿಯಾಗುವ…


