ಸಿನಿ ಡೆಸ್ಕ್:ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: A Fairy Tale For Grown-Ups’ ಚಿತ್ರವು ಘೋಷಣೆಯಾದ ದಿನದಿಂದಲೂ ಭಾರಿ ಸುದ್ದಿಯಲ್ಲಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಕೆಜಿಎಫ್ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್, 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಇದರಲ್ಲಿ ಯಶ್ ‘ರಾಯ’ ಎಂಬ ಹೆಸರಿನ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದು ಅವರ ಹಿಂದಿನ ಚಿತ್ರಗಳಿಗಿಂತಲೂ ಹೆಚ್ಚು ರಗಡ್ ಮತ್ತು Dark ಶೇಡ್ನಿಂದ ಕೂಡಿದೆ.
ಟೀಸರ್ನಲ್ಲಿ ಯಶ್ ಅವರ ಎಂಟ್ರಿ ಅತ್ಯಂತ ಮಾಸ್ ಆಗಿದ್ದು, ದೊಡ್ಡ ಹ್ಯಾಟ್ ಧರಿಸಿ, ಬಾಯಲ್ಲಿ ಸಿಗಾರ್ ಸೇದುತ್ತಾ ಶತ್ರುಗಳನ್ನು ಧೂಳೀಪಟ ಮಾಡುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರಾಯ’ ಹೆಸರಿನ ಈ ಪಾತ್ರವು ಭೂಗತ ಲೋಕದ ಹೊಸ ಆಯಾಮವನ್ನು ತೆರೆದಿಡುವ ಮುನ್ಸೂಚನೆ ನೀಡಿದೆ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್ ಅಂತರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ಯಶ್ ಅವರ ವಿಭಿನ್ನ ಮ್ಯಾನರಿಸಂ ಅಭಿಮಾನಿಗಳಿಗೆ ಕೂತುಹಲ ಮೂಡಿಸಿದೆ.
ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್ ದಾಸ್ Geetu Mohandas.ನಿರ್ದೇಶಿಸುತ್ತಿದ್ದು,ಸಂಗೀತ ರಾಜೀವ್ ರವಿ ಹಾಗು ರವಿ ಬಸ್ರೂರ್ ಜವಾಬ್ದಾರಿ ಹೊತ್ತಿದ್ದಾರೆ ‘ಅ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಟೀಸರ್ ಹೇಳುವಂತೆ ಇದು ಸಾಧಾರಣ ಸಾಹಸ ಚಿತ್ರ ಅಲ್ಲ ಆಳವಾದ ಕಥಾಹಂದರ ಹೊಂದಿರುವ ಗ್ಯಾಂಗ್ಸ್ಟರ್ gangster action thriller ಸಿನಿಮಾ ಕಥೆಯಾಗಿದ್ದು ಯಶ್ ಅವರ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.‘ಟಾಕ್ಸಿಕ್’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.
ಬಾರಿ ಬಜೆಟ್ ಬಾರಿ ಮೊತ್ತದ ಸಂಭಾವನೆ
ಸುಮಾರು 300 ರಿಂದ 500 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ತಯಾರಾಗುತ್ತಿರುವ ಟಾಕ್ಸಿಕ್ ಸಿನಿಮಾ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಯಶ್ ‘ರಾಯ’ ಪಾತ್ರ moost powerfull ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಕ್ಷನ್ ಪ್ರಿಯರಿಗೆ ಇದೊಂದು ರಸದೌತಣ ಸಿಗುವ ನಿರೀಕ್ಷೆ ಇದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕಾಗಿ ನಾಯಕ ನಟ ಯಶ್ ಅವರು ಸುಮಾರು 50 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಾಯಕಿಯರ ಸಂಭಾವನೆಯೂ ಸಹ ಎಲ್ಲರ ಹುಬ್ಬೇರಿಸುವಂತಿದ್ದರೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಸುಮಾರು 15 ಕೋಟಿ ಪಡೆದಿದ್ದಾರಂತೆ,ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟಿಸುತ್ತಿದ್ದು ಅವರು 12 ರಿಂದ 18 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕನ್ನಡದ ಪ್ರತಿಭಾನ್ವಿತ ನಟಿ ರುಕ್ಮಿಣಿ ವಸಂತ್ Rukmini Vasanth ಅವರಿಗೆ ಅಂದಾಜು 5 ಕೋಟಿ ರೂಪಾಯಿ ನೀಡಲಾಗಿದಿಯಂತೆ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ತಲಾ 2 ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇನ್ನೂಳಿದಂತೆ ಸಿನಿಮಾದಲ್ಲಿ ನಟಿಸುತ್ತಿರುವ ನಟ-ನಟಿಯರಿಗೆ ಬೃಹತ್ ಮೊತ್ತದಲ್ಲಿ ಸಂಭಾವನೆ ನೀಡಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. 2026ರ ಮಾರ್ಚ್ 19 ರಂದು ಸಿನಿಮಾ ಪ್ರಪಂಚದಾದ್ಯಂತ ತೆರೆಗೆ ಬರಲಿದ್ದು ಇಷ್ಟು ದೊಡ್ಡ ತಾರಾಗಣ ಮತ್ತು ಭಾರಿ ಹೂಡಿಕೆಯೊಂದಿಗೆ ತಯಾರಾಗಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದ್ದು ಇಂಗ್ಲೀಷ್ ಸೇರಿದಂತೆ ಆರು ಭಾಷೆಯಲ್ಲಿ ಸಿನಿಮಾ ಆಗಿರುವ ಹಿನ್ನಲೆಯಲ್ಲಿ ಇದೊಂದು pan world move ಎಂದು ಹೇಳಲಾಗುತ್ತಿದೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



