ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿ ವ್ಯಾಪಾರ ನಡೆತ್ತಿರುವುದರಿಂದ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದ್ದು ಶಾಲ ವಾಹನಗಳು ಅಂಬುಲೆನ್ಸ್ ಓಡಾಡಲು ಸಮಸ್ಯೆಯಾಗಿದ್ದು ಇದರಿಂದ ಅವರೆಕಾಯಿ ಮಂಡಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಅಗ್ರಹಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಮುಖಂಡರು ತರಕಾರಿ ಅಂಗಡಿಗಳ ವೃತ್ತದಲ್ಲಿ ಇಂದು ಗುರುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಹಾಗು ಪುರಸಭೆ ಮಾಜಿ ಸದಸ್ಯ ಮುತ್ತಕಪಲ್ಲಿ ಸರ್ದಾರ ನೇತೃತ್ವದಲ್ಲಿ ವ್ಯಾಪಾರಸ್ಥರ ಗುಂಪು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಲು ಬಂದು ಮಾತನಾಡಿ ನಿಮ್ಮ ಪ್ರತಿಭಟನೆಯನ್ನು ನವೆಂಬರ್ ತಿಂಗಳಲ್ಲೆ ಮಾಡುವ ಮೂಲಕ ವಿರೋಧ ಮಾಡಿದ್ದರೆ ನಾವು ಇಲ್ಲಿ ವ್ಯವಹಾರ ಮಾಡುತ್ತಿರಲಿಲ್ಲ ಎಂದು ಸಮಜಾಯಿಸಿ ಕೊಟ್ಟರು ಇದಕ್ಕೆ ರೈತ ಹೋರಾಟಗಾರರು ಒಪ್ಪದೆ ನೀವು ಯಾವ ಆಧಾರದಲ್ಲಿ ಜನ ವಸತಿ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ವಹಿವಾಟು ನಡೆಸುತ್ತಿರ ಈ ಬಗ್ಗೆ ನಿಮಗೆ ಇದರ ಕುರಿತಾದ ಮಾಹಿತಿ ಇರಬೇಕು ನಿಮಗೆ ಅನುಮತಿ ನೀಡಿರುವ ಅಧಿಕಾರಿಗಳಿಗೆ ಅರಿವು ಇರಬೇಕು ಎಂದು ಪ್ರತಿಭಟನೆ ಮುಂದುವರೆಸಿದರು ಅಷ್ಟರಲ್ಲಿ ಪೋಲಿಸರು ಮತ್ತು ಪುರಸಭೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಅವರೆಕಾಯಿ ವ್ಯಾಪರಸ್ಥರು ರಸ್ತೆಯಲ್ಲಿ ಇಟ್ಟಿದ್ದ ತೂಕದ ಯಂತ್ರ ಅವರೆಕಾಯಿ ಮೂಟೆಗಳನ್ನು ವಶಕ್ಕೆ ಪಡೆದಾಗ ವ್ಯಪಾರಸ್ಥರು ವಿರೋಧಿಸಿದರು ಇದು ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಪ್ರತಿಭಟನಾನಿರತರು ಬೆಂಬಲಿಸಿದರು ಇದಕ್ಕೆ ವ್ಯಪಾರಸ್ಥರು ವಿರೋಧಿಸಿದಾಗ ಪ್ರತಿಭಟನಾನಿರತರು ಮತ್ತು ವ್ಯಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು ವ್ಯಪಾರಸ್ಥರ ಪರವಾಗಿ ಪ್ರಕಾಶ್ ಮಾತನಾಡಿ ನೀವು ಸುಕಾಸುಮ್ಮನೆ ಪ್ರತಿಭಟನೆ ಮಾಡುವ ಮೂಲಕ ಇಲ್ಲಿನ ಸೌಹಾರ್ದತೆ ಕೆಡೆಸುವುದು ಸರಿಯಿಲ್ಲ ಊರಿನ ವ್ಯಾಪರಸ್ಥರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಾಗ ಕೆಲ ಕಾಲ ವ್ಯಾಪಾರಸ್ಥರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು ಪೋಲಿಸರ ಸಮಯ ಪ್ರಜ್ಞೆಯಿಂದ ಎರಡು ಕಡೆಯವರನ್ನು ಸಮಾಧಾನ ಪಡಿಸಿದರು.
ಕ್ಷಮೆಯಾಚನೆಗೆ ಅಗ್ರಹ
ಶಾಂತಿಯುತವಾಗಿ ಪ್ರತಿಭಟನಾನಿರತರಾಗಿದ್ದ ನಮ್ಮ ವಿರುದ್ದ ವ್ಯಪಾರಸ್ಥರು ಹಾಗು ಕಾಂಗ್ರೆಸ್ ಮುಖಂಡರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಇದಕ್ಕಾಗಿ ವ್ಯಪಾರಸ್ಥರು ಮುಖಂಡರು ಬಳಿ ಕ್ಷಮೆ ಯಾಚಿಸುವಂತೆ ಕನ್ನಡ ಪರ ಹೋರಾಟಗಾರರು ಮತ್ತು ರೈತರು ಒತ್ತಾಯಿಸಿದರು.
ಅವರೆಕಾಯಿ ವಹಿವಾಟು ಇಲ್ಲೆ ನಡೆಸುತ್ತೇವೆ.
ನಾವು ಅವರೆಕಾಯಿ ಮಂಡಿ ವಹಿವಾಟು ಇಲ್ಲೆ ನಡೆಸುತ್ತೇವೆ.ಇಲ್ಲಿ ಅವರೆಕಾಯಿ ವಹಿವಾಟ ಇಂದು ನಿನ್ನೆಯಿಂದ ನಡೆಯುತ್ತಿಲ್ಲ ಕಳೆದ 30-40 ವರ್ಷಗಳಿಂದ ಇಲ್ಲೆ ನಡೆಯುತ್ತಿದೆ ಈಗ ನಾವು ಮುಂದುವರೆಸಿಕೊಂಡು ಬರುತ್ತ ಇದ್ದೇವೆ ನಾವು ಯಾವುದೆ ಕಾರಣಕ್ಕೂ ಬೆರೆಡೆಗೆ ಹೋಗಲ್ಲ ಎಂದು ವ್ಯಾಪಾರಸ್ಥರು ಹೇಳಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



