ನ್ಯೂಜ್ ಡೆಸ್ಕ್:ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಬಿಐ (CBI) ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದೆ. ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ (CPRI) ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಚೆನ್ನು ಹಾಗೂ ಸುಧೀರ್ ಗ್ರೂಪ್ ಆಫ್ ಕಂಪನೀಸ್ನ ನಿರ್ದೇಶಕ ಅತುಲ್ ಖನ್ನಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಸುಧೀರ್ ಗ್ರೂಪ್ ಆಫ್ ಕಂಪನೀಸ್ ತಯಾರಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರವಾದ ಪರೀಕ್ಷಾ ವರದಿಗಳನ್ನು ನೀಡಲು ಜಂಟಿ ನಿರ್ದೇಶಕರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮಾಹಿತಿ ಸಿಬಿಐಗೆ ಲಭ್ಯವಾಗಿತ್ತು. ಗುರುವಾರವಷ್ಟೇ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದರು. 9.5 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು red-handed ಆಗಿ ಹಿಡಿಯಲಾಗಿದೆ.
ಮನೆಯಲ್ಲಿ ಇತ್ತು ರಾಶಿ ರಾಶಿ ನಗದು!
ಬಂಧನದ ನಂತರ ಆರೋಪಿ ರಾಜಾರಾಮ್ ಮೋಹನರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಅಚ್ಚರಿಯ ಕಾದಿತ್ತು. ಶೋಧ ಕಾರ್ಯದ ವೇಳೆ ಸುಮಾರು 3.59 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಕೇವಲ ಭಾರತೀಯ ರೂಪಾಯಿ ಮಾತ್ರವಲ್ಲದೆ, ವಿವಿಧ ದೇಶಗಳ ಕರೆನ್ಸಿಗಳು ಸಹ ಪತ್ತೆಯಾಗಿವೆ.
ಅಮೆರಿಕನ್ ಡಾಲರ್, ಯೂರೋ, ಸಿಂಗಾಪುರ್ ಡಾಲರ್ಹಾಂಗ್ ಕಾಂಗ್ ಡಾಲರ್, ಸ್ವೀಡಿಷ್ ಕ್ರೋನಾಯುಎಇ ದಿರ್ಹಾಮ್ಸ್, ಮಲೇಷಿಯನ್ ರಿಂಗಿಟ್, ಇಂಡೋನೇಷಿಯನ್ ರೂಪಯ್ಯ ಹಾಗೂ ಚೀನೀ ಯುವಾನ್ ಪತ್ತೆಯಾಗಿವೆ.
ಪತ್ತೆಯಾದ ವಿದೇಶಿ ಕರೆನ್ಸಿಯ ಒಟ್ಟು ಮೌಲ್ಯ ಅಂದಾಜು 4 ಲಕ್ಷ ರೂಪಾಯಿಗೂ ಅಧಿಕ ಎನ್ನಲಾಗಿದೆ. ನಗದಿನ ಜೊತೆಗೆ ಭಾರಿ ಪ್ರಮಾಣದ ಚಿನ್ನಾಭರಣ ಮತ್ತು ಹೂಡಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ತನಿಖೆ ಮುಂದುವರಿದಿದೆ
ಸಿಕ್ಕ ಮಾಹಿತಿಯ ಪ್ರಕಾರ, ಒಟ್ಟು 3.76 ಕೋಟಿ ರೂಪಾಯಿ ಮೌಲ್ಯದ ನಗದು (ವಿದೇಶಿ ಕರೆನ್ಸಿ ಸೇರಿ) ವಶಪಡಿಸಿಕೊಳ್ಳಲಾಗಿದೆ. “ಸದ್ಯ ಶೋಧ ಕಾರ್ಯ ಮುಂದುವರಿದಿದ್ದು, ಈ ನೆಟ್ ವರ್ಕ್ ನಲ್ಲಿ ಯಾರು ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಸಿಬಿಐ ಮೂಲಗಳು ಹೇಳಲಾಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



