Author: Srinivas_Murthy

ಚಿಂತಾಮಣಿ:ಗಣರಾಜ್ಯೋತ್ಸವ ಪ್ರಯುಕ್ತ ತೋಟಗಾರಿಕಾ ಇಲಾಖೆ ವತಿಯಿಂದ ಸಸ್ಯ ಕಾಶಿ ಎಂದೇ ಹೆಸರಾಗಿರುವ ಲಾಲ್‌ಬಾಗ್‌ ನಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ 217ನೇ ಫಲ ಪುಷ್ಪ ಪ್ರದರ್ಶನದಲ್ಲಿ ರಾಮಾಯಣ ಮಹಾಕಾವ್ಯ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನದಲ್ಲಿ ಚಿಂತಾಮಣಿಯ ಖ್ಯಾತ ವ್ಯಾಪರಸ್ಥ ಕಾರುಪಾಕುಲ ಕುಟುಂಬದ ನಾಗಹರ್ಷ ಅವರ ಪತ್ನಿ ಹಾಗು ಮಧುಬನಿ ಚಿತ್ರ ಕಲಾವಿದೆ ರಶ್ಮಿಹರ್ಷ ಅವರು ತೆಂಗಿನಗರಿಗಳಿಂದ ಪ್ರಾಕೃತಿಕವಾಗಿ ನಿರ್ಮಿಸಿದ್ದ ರಾಮಂದಿರದ ಕಲಾಕೃತಿಗೆ ತೀರ್ಪುಗಾರರು ಉತ್ತಮ ಫಲಿತಾಂಶ ನೀಡಿದ್ದಾರೆ.ಜನವರಿ 16 ರಿಂದ ಜನವರಿ 26ರ ವರೆಗೆ ನಡೆದಂತ ಫಲ ಪುಷ್ಪ ಪ್ರದರ್ಶನದಲ್ಲಿ ಹಲವಾರು ಕಲಾವಿದರು ತಮ್ಮದೆ ಆದ ಪರಿಕಲ್ಪನೆಯಲ್ಲಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಘಟನಾವಳಿಗಳನ್ನು ಪ್ರಾಕೃತಿಕವಾಗಿ ಆಕರ್ಷಕ ಪುಷ್ಪಗಳಲ್ಲಿ ಅರಳಿಸಿದ್ದರು ಇದರಲ್ಲಿ ಚಿಂತಾಮಣಿ ಕಲಾವಿದೆ ರಶ್ಮಿಹರ್ಷ ಅವರು ತಮ್ಮ ಕೈಚಳಕದಿಂದ ತೆಂಗಿನಗರಿಗಳಿಂದ ಅಯೋಧ್ಯೆ ರಾಮಮಂದಿರವನ್ನು ಹಸಿರು ಬಣ್ಣದಲ್ಲಿ ವೈವಿದ್ಯಮಯವಾಗಿ ನಿರ್ಮಿಸಿ ಕಲಾತ್ಮಕ ಸ್ಪರ್ಶ ನೀಡಿದ್ದರು ಅದು ನೋಡುಗರನ್ನು ಆಕರ್ಷಿಸಿ ತೀರ್ಪುಗಾರರ ಮೆಚ್ಚುಗೆ ಗಳಿಸಿ ಪ್ರಥಮ ಬಹುಮಾನ ಪಡೆದಿದೆ.ಖ್ಯಾತ ಚಲನಚಿತ್ರ ನಟಿ ಪ್ರೇಮಾ ಅವರು ಸಹ…

Read More

ಶ್ರೀನಿವಾಸಪುರ:ಇದೊಂದು ರಾಷ್ಟ್ರೀಯ ಹೆದ್ದಾರಿ ಇದು ಮೂರು ರಾಜ್ಯಗಳ ನಡುವೆ ಕೊಂಡಿಯಾಗಿರುವ ರಸ್ತೆ ಪ್ರತಿ ದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಒಡಾಡುತ್ತವೆ ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆ ಚಿಂತಾಮಣಿವೃತ್ತದಿಂದ ರೈಲ್ವೆ ಸೇತುವೆ ಮಾರ್ಗವಾಗಿ ಎ.ಪಿ.ಎಂ.ಸಿ ಮಾರುಕಟ್ಟೆವರಿಗೂ ರಸ್ತೆಯ ಎರಡು ಬದಿಯಲ್ಲಿ ದಾರಿ ಉದ್ದಕ್ಕೂ ವಾಹನ ರೀಪೇರಿಗಳ ಗ್ಯಾರೆಜು ಕಾಣ ಸಿಗುತ್ತದೆ ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ರಸ್ತೆ ನೋಡಲು ಕೊಂಪೆಯಂತಾಗಿದೆ ಎಂದು ಜನತೆ ದೂರುತ್ತಾರೆ.ಫುಟ್‌ ಪಾತ್‌ ಇಲ್ಲದ ರಾಷ್ಟ್ರೀಯ ಹೆದ್ದಾರಿ.ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸದಾ ವಾಹನಗಳ ಸಂಚಾರದಿಂದ ಕೂಡಿದ್ದು ಇಲ್ಲಿ ಫುಟ್‌ ಪಾತ್‌ ಅತಿಕ್ರಮಣವಾಗಿ ದಾರಿ ಉದ್ದಕ್ಕೂ ವಾಹನ ರಿಪೇರಿಗಳ ಗ್ಯಾರೆಜು ನಿರ್ಮಿಸಿಕೊಂಳ್ಳಲಾಗಿದೆ ಪಾದಚಾರಿ ಮಾರ್ಗವೇ ಇಲ್ಲದಂತಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ದಾರಿ ಉದ್ದಕ್ಕೂ ಗ್ಯಾರೆಜ್ ಮಯವಾಗಿದ್ದು ರಿಪೇರಿಗೆ ತರುವಂತ ಕ್ಯಾಂಟರ್ ಟಾಟಾಸುಮೋ ಟಾಟಾ ಲಗ್ಗೇಜ್ ವಾಹನಗಳ ರೀಪೇರಿ ಮಾಡಲು ಪುಟ್ ಪಾತ್ ಹಾಗು ರಸ್ತೆಯ ಕೆಲ ಭಾಗ ಬಳಸಿಕೊಂಡು ದಿನಗಟ್ಟಲೆ…

Read More

ಶ್ರೀನಿವಾಸಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಗ್ರಾಮಗಳ ಅಭಿವೃದ್ದಿಗೆ ಅನಕೂಲವಾಗಿದ್ದು ಇದನ್ನು ಸದ್ಬಳಿಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ಒಗ್ಗೋಡಿ ಗ್ರಾಮಗಳನ್ನು ಅಭಿವೃದ್ಧಿ ಪತದತ್ತ ಸಾಗಲು ಮುಂದಾಗುವಂತೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಕುಮಾರ್.ಪಿ.ಬಾಗೇವಾಡಿ ಹೇಳಿದರು.ಅವರು ಇಂದು ತಾಲೂಕಿಗೆ ಭೇಟಿ ನೀಡಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ನಂತರ ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಗ್ರಾಮಕ್ಕೆ ಭೇಟಿ ಕೊಟ್ಟು ಮಾತನಾಡಿದರು. ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸಭೆ, ವಾರ್ಡ್ ಸಭೆಗಳನ್ನು ನಡೆಸಿ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸಿ ಆಯಾ ಗ್ರಾಮಗಳಿಗೆ ಸಂಬಂದಿಸಿದಂತೆ ಕುಡಿಯುವ ನೀರಿಗೆ ಆದತ್ಯೆ ನೀಡಿ ಬೀದಿ ದೀಪ ಇನ್ನಿತರೆ ಅಗತ್ಯ ಕಾಮಗಾರಿಗಳಿಗೆ ಪಟ್ಟಿಯನ್ನು ಮಾಡುವಂತೆ ಸೂಚಿಸಿದರು.ಇ-ಸ್ವತ್ತುಖಾತೆಗೆ ಅರ್ಜಿಗಳು ಬಂದಾಗ ಸಕಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಗೆಹರಿಸಿ ಜೆ.ತಿಮ್ಮಸಂದ್ರ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಾಗಾರವನ್ನು ವಿಕ್ಷಿಸಿದರು. ಗ್ರಾಮಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳ ದಾಖಲೆಗಳನ್ನು ಹಾಗು ಇತರೆ ದಾಖಾಲೆಗಳ ಪರಿಶೀಲಿಸಿದ ಅವರು ಆಲವಾಟ ಶಾಲೆಗೆ ಭೇಟಿ…

Read More

ನಿಜ ಶರಣ ಅಂಬಿಗರ ಚೌಡಯ್ಯನವರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಕಂದಾಚಾರಗಳನ್ನು ತೊಡೆದುಹಾಕಲು ಬಸವಣ್ಣನ ತತ್ವಾದರ್ಶಗಳನ್ನು ಎತ್ತಿ ಹಿಡಿದು ಸಮಾಜದ ಚಿಂತಕರಾಗಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾಗಿದ್ದರು ಇಂತಹ ಆದರ್ಶ ಪುರುಷನ ಜಯಂತಿ ಆಚರಣೆಗೆ ತಾಲ್ಲೂಕು ಆಡಳಿತದ ಉದಾಸಿನತೆ ತೊರುವುದು ಒಳ್ಳೆಯ ಬೆಳವಣಿಗೆ ಅಲ್ಲ ಜನ ನೋಡಿ ಮಣೆ ಹಾಕುವ ಸಂಸ್ಕೃತಿಯಿಂದ ಸಮಾಜದಲ್ಲಿ ಸೌಹಾರ್ದತೆ ಕದಡುತ್ತದೆ ಅಂಬಿಗರ ಚೌಡಯ್ಯನವರ ಕಾರ್ಯಕ್ರಮದ ಪೂರ್ವಬಾವಿ ಸಭೆಗೆ ಸಮಾಜದ ಬಂಧುಗಳನ್ನು ಅಹ್ವಾನಿಸದೆ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ ಈ ಬಗ್ಗೆ ತಾಲೂಕು ಆಡಳಿತ ತಮ್ಮ ಧೋರಣೆ ಬದಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಾಲೂಕು ಬೆಸ್ತರ ಸಂಗದ ಅಧ್ಯಕ್ಷ ಹಾಗು ವಾಣಿಜ್ಯೋದ್ಯಮಿ ಕೋಟೇಶ್ ಹೇಳಿದರು. ಶ್ರೀನಿವಾಸಪುರ:ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಕಾಯಕದ ಜೊತೆ ಜೊತೆಗೆ ಸಮಾಜದದಲ್ಲಿನ ಅಸಮಾನತೆ ಹೋಗಲಾಡಿಸಲು, ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹಾನ್ ಪುರುಷ ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳನ್ನು ಎಲ್ಲರು ಪಾಲಿಸಬೇಕಾಗಿದೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂಧ್ರ ಹೇಳಿದರು.ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ…

Read More

ಶ್ರೀನಿವಾಸಪುರ:ಶಾಸಕ ವೆಂಕಟಶಿವಾರೆಡ್ಡಿ ಅವರ 77 ನೇ ವರ್ಷದ ಹುಟ್ಟು ಹಬ್ಬವನ್ನು ಶ್ರೀನಿವಾಸಪುರ ತಾಲೂಕು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೆಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟಶಿವಾರೆಡ್ಡಿ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಆಯೋಜಿದ್ದ ವಿಶೇಷ ವೇದಿಕೆ ಸಮಾರಂಭಕ್ಕೆ ಆಗಮಿಸಿದ ಶಾಸಕ ವೆಂಕಟಶಿವಾರೆಡ್ಡಿತಾಲೂಕಿನ ವಿವಿಧಡೆಯಿಂದ ಆಗಮಿಸಿದ್ದ ಅಭಿಮಾನಿಗಳಿಂದ ಶುಭಹಾರೈಕೆಗಳನ್ನು ಸ್ವೀಕರಿಸಿದರು, BARTHDAY ಅಂಗವಾಗಿ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷ ಶಂಕರರೆಡ್ಡಿ ತರಸಿದ್ದ 77 ಕೆ.ಜಿ ತೂಕದ ಕೆಕ್ ಕತ್ತರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಂಕರರೆಡ್ಡಿ ಜೆ.ತಿಮ್ಮಸಂದ್ರ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ವಾಟರ್ ಫೀಲ್ಟರ್ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಭಾವಿ ಮುಖಂಡ ಸಿ.ಎಮ್.ಆರ್ ಶ್ರೀನಾಥ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ, ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ,ಶಿವಪುರಗಣೇಶ್,ಬಿಇಒ ಮುನಿಶಾಮಪ್ಪ, ಕಲ್ಲೂರುಸುರೇಶ್, ಕಾರ್ ಬಾಬು, ಪೂಲುಶಿವಾರೆಡ್ಡಿ, ಸ್ಟುಡಿಯೋವೇಣು, ಕಲ್ಲೂರುಮನಿಶ್,ಗೋರವಿಮಾಕಲಹಳ್ಳಿಶ್ರೀನಿವಾಸ್,ದಲಿತ ಮುಖಂಡ ಹೂವಳ್ಳಿಕೃಷ್ಣಪ್ಪ,ಯುವಮುಖಂಡ ಅಂಬರೀಶ್,ಕುಮ್ಮಗುಂಟೆ ಮಂಜು, ಪಾತಪಲ್ಲಿಚೌಡರೆಡ್ಡಿ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ:ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಲೋಳ್ಳಗಡ್ಡ ಗ್ರಾಮದ ಒಂಟಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹಾಡು ಹಗಲೆ ಕಳ್ಳತನವಾಗಿತ್ತು,ಜನವರಿ 7 ರಂದು ನಡು ಮಧ್ಯಾನಃ ಮನೆಯ ಮಾಲೀಕ ಆನಂದಪ್ಪ ಕೆಲಸದ ನಿಮಿತ್ತ ರಾಯಲ್ಪಾಡುಗೆ ಹೋಗಿದ್ದರೆ ಅವರ ಪತ್ನಿ ಕೂಲಿ ಕೆಲಸಕ್ಕೆ ತೆರಳಿದ್ದರು ಈ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ 25 ಗ್ರಾಂ ತೂಕದ ಎರಡು ನಕ್ಲೆಸ್,55 ಸಾವಿರ ನಗದು, ಮೊಬೈಲ್ ಸಮೇತ ಕದ್ದೊಯಿದ್ದರು.ಮನೆಯ ಮಾಲೀಕ ರಾಯಲ್ಪಾಡು ವಿನಿಂದ ವಾಪಸ್ಸು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಮನೆ ಮಾಲಿಕ ಕಳ್ಳತನ ನಡೆದ ಜನವರಿ 7 ರಂದು ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ರಾಯಲ್ಪಾಡು ಪೊಲೀಸರು ಕಾರ್ಯಚರಣೆ ನಡೆಸಿ ಹದಿನೈದು ದಿನಗಳ ಅಂತರದಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಪ್ರಕರಣದ ಬಗ್ಗೆ ಕೋಲಾರ ಜಿಲ್ಲಾ ಎಸ್.ಪಿ. ನಿಖಿಲ್,ಮಾರ್ಗದರ್ಶನದಲ್ಲಿ ರಾಯಲ್ಪಾಡು ಸಬ್ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿ ಲಕ್ಷ್ಮಿನಾರಾಯಣ,ನಾರಾಯಣಸ್ವಾಮಿ, ಸದಾಶಿವ, ಸಂತೋಷ್…

Read More

ಶ್ರೀನಿವಾಸಪುರ:ಗ್ರಾಮೀಣ ಜನರ ಆರೋಗ್ಯ ಜಾಗೃತಿಗಾಗಿ ಉಚಿತ ಆರೋಗ್ಯ ಶಿಬಿರಗಳು ಅಗತ್ಯವಾಗಿ ಸಹಕಾರಿಯಾಗುತ್ತವೆ ಎಂದು ಬೆಂಗಳೂರಿನ ಖ್ಯಾತ ವೈದೇಹಿ ಆಸ್ಪತ್ರೆ ನಿರ್ದೇಶಕ ಚೈತನ್ಯ ಅದಿಕೇಶವುಲು ಹೇಳಿದರು.ಅವರು ಸೋಮವಾರ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕೈವಾರ ಯೋಗಿನರಾಯಣ ಐಕೈತಾ ಟ್ರಸ್ಟ್ ಸಹಯೋಗದಲ್ಲಿ ವೈದೇಹಿ ಆಸ್ಪತ್ರೆ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದಿನ ದಿನಮಾನಗಳಲ್ಲಿ ಸಣ್ಣ ಮಟ್ಟದ ವಾಂತಿ-ಬೇದಿಯಂತ ರೋಗಗಳು ಬಂದರೆ ಮನುಷ್ಯ ಭಯ ಕಾಡುತಿತ್ತು , ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಜೀವನ ಪದ್ದತಿ ಬದಲಾಗಿ ಒತ್ತಡದ ಜೀವನ ನಡೆಸುತ್ತ ರಕ್ತದೊತ್ತಡ,ಸಕ್ಕರೆ ಕಾಯಿಲೆಗಳು ಆವರಿಸಿಕೊಳ್ಳುತ್ತಿದೆ ಹೃದ್ರೋಗ ಹಾಗು ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗುತ್ತಿದೆ ಹಿಂದೆ ಇವೆಲ್ಲ ಶ್ರೀಮಂತರ ಕಾಯಿಲೆಗಳು ಎನ್ನುವ ಕಾಲ ಇತ್ತು ಈಗಿನ ಜೀವನ ಶೈಲಿಯಿಂದ ಬಡವ ಶ್ರೀಮಂತ ಎನ್ನುವ ಬೇದಭಾವ ಇಲ್ಲದೆ ಜನರನ್ನು ಕಾಯಿಲೆಗಳು ಆವರಿಸಿಕೊಳ್ಳುತ್ತಿದೆ ಆರ್ಥಿಕವಾಗಿ ಅನಕೂಲವಂತರು ತಕ್ಕಮಟ್ಟಿಗೆ ಕರ್ಚು ಮಾಡಿ ಕಾಯಿಲೆ ವಾಸಿ ಮಾಡಿಕೊಳ್ಳುತ್ತಾರೆ ಆರ್ಥಿಕವಾಗಿ ಅನಕೂಲ ಇಲ್ಲದವರು ಗ್ರಾಮೀಣ ಭಾಗದ ಸಾಮಾನ್ಯ ಜನತೆ ಉಚಿತ ಶಿಬಿರಗಳ…

Read More

ಶ್ರೀನಿವಾಸಪುರ:ನ್ಯಾಯಲಯದ ಸೂಚನೆಯಂತೆ 2010 ಹಾಗು 2013 ಆದೇಶದಂತೆ ನಿಯಮಾವಳಿಯಲ್ಲಿ ಕಂದಾಯ ಇಲಾಖೆ ಅನುಸರಿಸುವ ವಿಧಾನದಂತೆ ಸರ್ವೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.ಹೈಕೋರ್ಟ್ ಸೂಚನೆಯಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಇಲಾಖೆಯ ಭೂ ವಿವಾದ ಎನ್ನಲಾದ ಹೊಸಹುಡ್ಯ ಗ್ರಾಮದ ಜಿನಗಲಕುಂಟೆ ಸರ್ವೇ ನಂಬರ್ 1 ಹಾಗೂ 2 ರಲ್ಲಿನ ಜಮೀನು ಅನ್ನು ಎರಡು ದಿನಗಳ ಕಾಲ ಸರ್ವೆ ಮಾಡಿದ ನಂತರ ಹೇಳಿಕೆ ನೀಡಿದ ಅವರು ಜನವರಿ 30 ರ ಒಳಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ನೀಡಿದ ಸೂಚನೆಂತೆ ಪಿರ್ಯಾದುದಾರರಿಗೆ ನೋಟೀಸ್ ನೀಡಿ ಸರ್ವೆ ಕಾರ್ಯವನ್ನು ರೊವರ್ ಯಂತ್ರ ಬಳಸಿ ಸುಮಾರು 25 ಮಂದಿ ಕಂದಾಯ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಹಾಗು ಅರಣ್ಯ ಇಲಾಖೆಯ 15 ಜನ ಮಾಪಕರು ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ.ಗುಂಟರ್ಸ್ ಚೈನ್ ಬ್ರಿಟಿಷ್ ಕಾಲದಿಂದ ಬಳಕೆಯಲ್ಲಿದೆ ಅರಣ್ಯ ಇಲಾಖೆಫಾರೆಸ್ಟ್ ಸೆಟಲ್ ಮೆಂಟ್ ಮ್ಯಾಪ್ ಅವಶ್ಯಕತೆ ಇಲ್ಲ ಇದಕ್ಕೆ…

Read More

ಇದು ಸರ್ಕಾರಿ ಗೋಮಾಳ ಆಗಿರುವುದರಿಂದ ಸರ್ವೆ ಇಲಾಖೆ ಸರ್ವೆಯರುಗಳೆ ಇದನ್ನು ಅಳೆಯಬೇಕಿದೆ.ಸರ್ವೆ ಸೆಟಲ್ ಮೆಂಟ್ ಗೆ ನಾನು ಬದ್ದ, ಆದರೆ ಅರಣ್ಯ ಇಲಾಖೆ ಸರ್ವೆಗೆ ನನ್ನ ವಿರೋಧವಿದೆ. ರೆವಿನ್ಯೂ ರೆಕಾರ್ಡ್‌ ನಲ್ಲಿ ಈಗಲೂ ಗೋಮಾಳ ಅಂತಾನೆ ಇದೆ.ನಾನು ಒತ್ತುವರಿದಾರನ್ನಲ್ಲ.ನಾನು ಖರೀದಿದಾರ ಈ ಬಗ್ಗೆ 2012 ರಲ್ಲಿ ಹೈ ಕೋರ್ಟ್ ಈ ಬಗ್ಗೆ ಹೇಳಿದೆ. ಇದು ರಾಜಕೀಯ ದುರದ್ದೇಶ ಅವರಂದುಕೊಂಡಂತೆ ಯಾವುದೆ ಘರ್ಷಣೆಗೆ ಇಲ್ಲಿ ಅವಕಾಶ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು. ಶ್ರೀನಿವಾಸಪುರ:ಸರ್ವೆ ಮಾಡಿ ಎಂದು ನಾನೆ ಅರ್ಜಿ ಹಾಕಿದ್ದೆ ಈಗ ನೀವು ಬಂದಿದ್ದೀರ ನಾನ್ಯಾಕೆ ಇದಕ್ಕೆ ಅಡ್ಡಿ ಮಾಡಲಿ ಎಂದು ಮಾಜಿ ಸ್ಪೀಕರ್ ರಮೇಶಕುಮಾರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.ತಾಲೂಕಿನ ರಾಯಲ್ಪಾಡು ಹೋಬಳಿ ಹೊಸಹುಡ್ಯ ಕಂದಾಯ ವೃತ್ತದ ಸರ್ವೆ ನಂ 1 ಮತ್ತು 2 ರಲ್ಲಿನ 61.39 ಎಕರೆ ಜಿನಗಲಕುಂಟೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಆರೋಪ ಪ್ರಕರಣದ ಹಿನ್ನಲೆಯಲ್ಲಿ ಇಂದು ಬುಧವಾರ ಸರ್ವೆ ಕಾರ್ಯ ಮಾಡಲು ಜಿಲ್ಲಾಧಿಕಾರಿ ಎಂ.ಆರ್.ರವಿ…

Read More

ಶ್ರೀನಿವಾಸಪುರ:ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಒಂದೇ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಘಟನೆ ನಡೆದಿರುತ್ತದೆ.ಮೃತ ಪಟ್ಟಿರುವ ವ್ಯಕ್ತಿಗಳನ್ನು ಆಂಧ್ರದ ತಿರುಪತಿ ನಗರದ ಕಟ್ಟಕಿಂದಪಾಳ್ಯಂನ ಪ್ರಕಾಶ್(49)ಹಾಗು ಕಡಪದ ಶಿಕ್ಷಕ ಮಾರುತಿ ಶಿವಕುಮಾರ್(55)ಎಂದು ಗುರಿತಿಸಲಾಗಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳು ತಿರುಪತಿ ನಗರದ ಅಶೋಕನಗರದಲ್ಲಿ ವಾಸಿ ಆನಂದ್ ಜೊತೆಗೂಡಿ ಈಟಿಯಾಸ್ ಕಾರಿನಲ್ಲಿ ಬೆಂಗಳೂರಿಗೆ ಹೋಗಿದ್ದು ಕೆಲಸ ಮುಗಿಸಿ ಭಾನುವಾರ ವಾಪಸ್ಸು ಆಂಧ್ರಕ್ಕೆ ಹೋಗುತ್ತಿದ್ದಾಗ ಸುಣ್ಣಕಲ್ ಗೇಟ್ ಮತ್ತು ಮದರಂಕಂಪಲ್ಲಿ ಗೇಟ್ ನಡುವಿನ ತಿರುವಿನಲ್ಲಿ ಮದನಪಲ್ಲಿ ಕಡೆಯಿಂದ ನೆಲಮಂಗಲಕ್ಕೆ ಹೋರಟ್ಟಿದ್ದ ಮಹೇಶ್ ಎನ್ನುವರ ಮಹೆಂದ್ರ ಎಸ್ ಯು ವಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ನಡೆದಿರುತ್ತದೆ.ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು.

Read More