ಶ್ರೀನಿವಾಸಪುರ:ಗುರುವಾರ ಹಾಗು ಶುಕ್ರವಾರ ರಾತ್ರಿ ಸಮಯದಲ್ಲಿ ಅರ್ಭಟಿಸುತ್ತ ಸುರಿದ ಧಾರಾಕಾರ ಮಳೆಗೆ ಶ್ರೀನಿವಾಸಪುರ ಪಟ್ಟಣದ ಜನತೆ ತತ್ತರಿಸಿ ಹೋಗಿದ್ದಾರೆ. ಗುಡುಗು ಸಹಿತ ಆರ್ಭಟದ ಭಾರೀ ಮಳೆಗೆ ಈಚಲಕುಂಟೆ ಸ್ಲಂ ಮನೆಗಳು,ಕೋರ್ಟ್ ಅವರಣ ಎ.ಪಿ.ಎಂ.ಸಿ ಆವರಣ ಜಲಾವೃತವಾದರೆ ಕೋಲಾರ ನ್ಯೂಸರ್ಕಲ್, ಡಿಗ್ರಿ ಕಾಲೇಜ್ ಹಿಂಬದಿಯ ಭಾಗದಲ್ಲಿ ಒತ್ತುವರಿಯಾಗಿ ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆಗಳಿಗೆ ಕೊಳ್ಳೂರು ಭಾಗದಿಂದ ರಾಜಕಾಲುವೆಯಲ್ಲಿ ಬರುವ ಮಳೆ ನೀರು ಮನೆಗಳಿಗೆ ನುಗ್ಗಿದೆ, ತಾಲೂಕಿನ ಕೆಲವೊಂದು ಕೆರೆಗಳು ಕೊಡಿ ಬಿದ್ದಿವೆ.ತಾಲೂಕಿನಾದ್ಯಂತ ಬಹುತೇಕ ಕಡೆ ಧಾರಾಕಾರ ಮಳೆಯಾಗಿದೆ. ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಗಳು ಇದ್ದು ಸಣ್ಣ-ಪುಟ್ಟ ಕೆರೆಗಳು ತುಂಬಿ ಹರಿಯುತ್ತಿವೆ ಹೊಸ ಬಸ್ ನಿಲ್ದಾಣ ಇದಕ್ಕೂ ಮುಂಚೆ ಈಚಲಕುಂಟೆ ಕೆರೆಯಂಗಳವಾಗಿದ್ದರೆ ಕೋರ್ಟ್ ಆವರಣ ಈಚಲಕುಂಟೆ ಕೆರೆ ಅಚ್ಚುಕಟ್ಟು ಆಗಿತ್ತು ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ದೊಡ್ಡಮಟ್ಟದಲ್ಲಿ ನೀರು ಹರಿಯುತ್ತಿರುವ ಹಿನ್ನಲೆಯಲ್ಲಿ ಚಿಕ್ಕದಾಗಿ ನಿರ್ಮಿಸಿರುವ ರಾಜಕಾಲುವೆಗಳು ನೀರು ಹರಿವಿಗೆ ಸಾಕಾಗದೆ ಸಾಯಿ ಬಾಬಾ ದೇವಾಲಯದ ಮುಂಬಾಗ ರಸ್ತೆ ಮೆಲೆ ನೀರು ಹರಿದಿದೆ.ಕೊಳ್ಳೂರಿಗೆ ಹೊಂದಿಕೊಂಡಿರುವ ದೊಡಮಲದೊಡ್ಡಿ ಗ್ರಾಮ ಅಕ್ಷರಶಃ ದ್ವೀಪದಂತಾಗಿದೆ.
ತಾಲೂಕಿನ ಉತ್ತರ ಭಾಗದಲ್ಲಿ ದೊಡ್ಡ ಕೆರೆಗಳು ಇದ್ದು ಅವುಗಳಲ್ಲಿ ಪಾಪಶೆಟ್ಟಿಪಲ್ಲಿ ಕೆರೆ,ಬಾಲರೆಡ್ಡಿ ಕೆರೆ,ಕೊಂಡಾಮರಿ,ಕಶೇಟ್ಟಿಪಲ್ಲಿ,ಇಲ್ದೋಣಿ ಗುಂದೇಡು,ರಾಯಪಾಡು ಪೈ ಕೆರೆ ಅಡವಿಬೈರಗಾನಪಲ್ಲಿ ಕೆರೆ, ಕೂರಿಗೆ ಪಲ್ಲಿ ಸೇರಿದಂತೆ ಹಲವು ಕೆರೆಗಳು ಕೊಡಿ ಬಿದ್ದಿವೆ,ಕೆರೆಗಳು ತುಂಬಿ ಹರಿಯುವ ನೀರು ಬೀರಂಗಿ ಹಳ್ಳ ಸೇರಿ ಅನಾಯಸವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ ಇಲ್ಲಿ ಯಾವುದೆ ತಡೆ ಇಲ್ಲದ ಕಾರಣ ನಮ್ಮಲ್ಲಿ ಬಿದ್ದ ಮಳೆ ನೀರು ಆಂಧ್ರದ ಪಾಲಾಗುತ್ತಿದೆ ಎನ್ನುತ್ತಾರೆ ಗಡಿ ಭಾಗದ ಗ್ರಾಮಸ್ಥರು.
ತಾ.ದೊಡ್ಡ ಕೆರೆ ಎಂದೆ ಖ್ಯಾತಿ ಪಡೆದಿರುವ ಕೋಡಿಪಲ್ಲಿ ಕೆರೆಗೆ ಅರ್ದಕ್ಕೆ ನೀರು ಬಂದಿದ್ದು ಇಂದು ನಾಳೆ ಮಳೆ ಸುರಿದರೆ ಕೆರೆ ತುಂಬುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಕೆಸರು ಗದ್ದೆಗಳಾಗಿವೆ ಮಾವಿನ ತೋಟಗಳು
ಧಾರಕಾರ ಮಳೆಯಿಂದಾಗಿ ತಾಲೂಕಿನಲ್ಲಿ ಮಾವಿನ ತೋಟಗಳು ಕೆಸರು ಗದ್ದೆಗಳಾಗಿದ್ದು ನೀರು ಹರಿಯಲು ಜಾಗ ಇಲ್ಲದೆ ಮೊಣಕಾಲುದ್ದ ಮಳೆ ನೀರು ತೋಟಗಳಲ್ಲೆ ನಿಂತಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



