ನ್ಯೂಜ್ ಡೆಸ್ಕ್:ಬಯಲು ಸೀಮೆ ಮಲೆನಾಡಿನಂತೆ ಆಗಲಿದ್ದು ಮಲೆನಾಡು ಬಯಲು ಸೀಮೆಯಂತಾಗುತ್ತೆ ಮುಂದಿನ ಸಂಕ್ರಾಂತಿ ತನಕ ಸಿದ್ಧರಾಮಯ್ಯ ಸರ್ಕಾರಕ್ಕೆ ಯಾವುದೆ ತೊಂದರೆ ಇರುವುದಿಲ್ಲ ಎಂದು ಕೋಡಿಮಠದ ಮಹಾಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ಅವರು ಧಾರವಾಡದಲ್ಲಿ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಸರಾದ ನಿಜವಾದ ಅರ್ಥ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಎರಡೂವರೆ ವರ್ಷಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎನ್ನಲಾಗುತ್ತಿದ್ದು ಇದಕ್ಕೆ ಭಿನ್ನವಾಗಿ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದು ಸಿಎಂ ಸಿದ್ಧರಾಮಯ್ಯ ಅವರಿಗೆ, ಸಂಕ್ರಾಂತಿ ತನಕ ಯಾವುದೇ ತೊಂದರೆ ಹಾಗು ಭಯವೂ ಇಲ್ಲ. ಸಂಕ್ರಾಂತಿ ಬಳಿಕ ಆ ಬಗ್ಗೆ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.
ಈ ಹಿಂದೆಯೇ ಹೇಳಿದಂತೆ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂದ ಅವರು ಬಯಲು ಸೀಮೆ ಮಲೆನಾಡು ಆಗಿದೆ ಎಂಬುದಾಗಿ ಉಚ್ಚರಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



