ಶ್ರೀನಿವಾಸಪುರ:ರಾಜ್ಯದಲ್ಲಿರುವ ಆಡಳಿತ ರೂಡ ಬಿಜೆಪಿ ಸರ್ಕಾರ ದಲಿತ ಸಮುದಾಯಗಳಿಗೆ ನ್ಯಾಯೋಚಿತವಾದ ಮೀಸಲಾತಿ ಜಾರಿಮಾಡಲು ಉಪ ಸಮಿತಿ ರಚಿಸಿ ಚುನಾವಣೆ ಗಿಮಿಕ್ ಮಾಡುತ್ತಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಆರೋಪಿಸಿದರು.ಅವರು ಮಾದಿಗ ದಂಡೋರ ಮೀಸಲಾತಿ ಹೊರಾಟ ಸಮಿತಿ ಶ್ರೀನಿವಾಸಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಪಾಲ್ಗೋಂಡಿದ್ದ ಅವರು ದಲಿತ ಸಮುದಾಯಗಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡವಳಿಕೆಗಳ ವಿರುದ್ದ ಕಿಡಿ ಕಾರಿದರು,ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಉಪ ಸಮಿತಿ ರಚನೆ ಮಾಡಿ ಅದಕ್ಕೆ ಕಾನೂನು ಮಂತ್ರಿ ಮಾಧುಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಬಿಜೆಪಿ ಸರ್ಕಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತ ಸಮುದಾಯಗಳನ್ನು ದಾರಿ ತಪ್ಪಿಸುವಂತ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಮುಂದಾಗಿದೆ ಎಂದು ದೂರಿದರು ಸಮುದಾಯಕ್ಕೆ ಅನ್ಯಾಯ ಮಾಡದೆ ಚಳಿಗಾಲ ಅಧಿವೇಶನದಲ್ಲಿ ಮೊದಲ ದಿನವೆ ಸದಾಶಿವ ಆಯೋಗ ವರದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.ಸರ್ಕಾರ ಈ ಬಗ್ಗೆ ಮುಂದಾಗದಿದ್ದರೆ ಮಾದಿಗ ಸಮುದಾಯದ…
Author: Srinivas_Murthy
ಶ್ರೀನಿವಾಸಪುರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಇತ್ತಿಚಿಗೆ ಅಧಿಕಾರಿಗಳ ಅಸಡ್ಡೆಗೆ ತುತ್ತಾಗಿದೆ ಕಾಟಾಚಾರಕ್ಕೆ ನಡೆಯುತ್ತಿದೆಯೋನೋ ಎಂಬಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ರೂಪಿತವಾಗುತ್ತಿದೆ.ಶ್ರೀನಿವಾಸಪುರ ತಾಲ್ಲೂಕಿನ ಆಂಧ್ರದ ಗಡಿಯಂಚಿನ ಮಟ್ಟಕನ್ನಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆರಳೆಣಿಕೆ ಸಾರ್ವಜನಿಕರು ಮಾತ್ರ ಹಾಜರಿದ್ದು ಬಹುತೇಕ ಶಾಲ ವಿದ್ಯಾರ್ಥಿಗಳು ದೊಡ್ಡಸಂಖ್ಯೆಯಲ್ಲಿ ಹಾಜರಾಗಿ ಶಾಮಿಯಾನದಲ್ಲಿ ಹಾಕಲಾಗಿದ್ದ ಚೇರುಗಳನ್ನು ಕಾಲಿ ಇಡದೆ ಕುಳತಿದ್ದರು.ಸಾರ್ವಜನಿಕರ ಬಳಿಗೆ ಸರ್ಕಾರದ ಆಡಳಿತ ತಲುಪಲು ರಾಜ್ಯ ಸರ್ಕಾರ ಮಹತ್ವಕಾಂಕ್ಷಿಯಾಗಿ ರೂಪಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೆ ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತ ಸರ್ಕಾರವನ್ನು ಜನರತ್ತ ತಗೆದುಕೊಂಡು ಹೋದರೆ ಇತ್ತ ಶ್ರೀನಿವಾಸಪುರದಂತ ಹಿಂದುಳಿದ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೆ ಗೈರಾಗಿದ್ದರು ಇನ್ನು ತಾಲೂಕು ದಂಡಾಧಾರಿಗಳು ಬಾರದೆ ಸ್ಥಳಿಯ ಮಟ್ಟದ ಬೆರಳಣಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಬಂದಿದ್ದರು. ಗ್ರಾಮವಾಸ್ತವ್ಯದ ಕುರಿತಾಗಿ ಜನಸ್ನೇಹಿ ಕಾರ್ಯಕ್ರಮ ರೂಪಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ನೃತ್ಯ ನೋಡಿಕೊಂಡು ಸಮಯ ಕಳೆದಿದ್ದು ತಾಲೂಕು ಆಡಳಿತದ…
ಶ್ರೀನಿವಾಸಪುರ:ಕರ್ನಾಟಕದ ರೈತರ,ಗ್ರಾಮೀಣ ಜನರ ಹಾಗು ಸಾಮಾನ್ಯ ಜನರ ಬವಣೆ ನೀಗಿಸಿ ಅವರು ಅಭಿವೃದ್ಧಿಯಾಗಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಿದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಹೇಳಿದರು ಅವರು ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯ ಅಡಳಿತದಿಂದ ರಾಜ್ಯ ವಿವಿಧ ಸಮಸ್ಯೆಗಳಿಂದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಮಾತನಾಡಿ ಜನಸಾಮಾನ್ಯರ ಬದುಕಿನಲ್ಲಿ ಆಶಾಕಿರಣವಾಗಿರುವ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ಪಟಾಕಿ ಸಿಡಿಸಿ ಕೆಕ್ ಕತ್ತರಿಸಿ ಸಂಭ್ರಮಿಸಿದರು.ಈ ಸಂದರ್ಬದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ,ಅಂಬೇಡ್ಕರ್ ಪಾಳ್ಯ ರವಿ,ಕಾರ್ ಬಾಬು, ಮಂಜುನಾಥಗೌಡ,ನಾಗದೇನಹಳ್ಳಿ ಚೌಡರೆಡ್ಡಿ,ಜಗದೀಶ್,ನಿವೃತ್ತ ಶಿಕ್ಷಕ ವೆಂಕಟರೆಡ್ಡಿ ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್: ಶ್ರೀ ವೇದನಾರಾಯಣ ಸ್ವಾಮಿ ದೇವಾಲಯದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನ ದಶಾವಾತರಗಳಲ್ಲಿ ಒಂದಾದ ಮತ್ಸ್ಯಅವತಾರ (ಮೀನಿನ) ರೂಪದಲ್ಲಿ ದರ್ಶನ ನೀಡುವ ಶ್ರೀ ವೇದನಾರಾಯಣಸ್ವಾಮಿ ದೇವಾಲಯ ಕ್ಷೇತ್ರದ ಇತಿಹಾಸದಲ್ಲಿರುವಂತೆ ಸೋಮಕಾಸುರ ಎಂಬ ರಾಕ್ಷಸನು ಬ್ರಹ್ಮ ದೇವರಿಂದ ವೇದಗಳನ್ನು ಕದ್ದು ಸಮುದ್ರ ಗರ್ಭದಲ್ಲಿ ಬಚ್ಚಿಟ್ಟಿದ್ದಾಗ ಶ್ರೀ ಮಹಾ ವಿಷ್ಣುವು ಮತ್ಸ್ಯಅವತಾರ (ಮೀನಿನ) ರೂಪದಲ್ಲಿ ಹೋಗಿ ಸಮುದ್ರದ ಗರ್ಭದಲ್ಲಿದ್ದ ಸೋಮಕಾಸುರನನ್ನು ಕೊಂದು ಬ್ರಹ್ಮದೇವನಿಗೆ ವೇದಗಳನ್ನು ಪುನಃ ವಾಪಸ್ಸು ತಂದುಕೊಟ್ಟ ಸ್ಥಳ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇದನ್ನು ವೇದಪುರಿ,ವೇದಾರಣ್ಯ ಕ್ಷೇತ್ರ, ಹರಿಕಂಠಪುರವೆಂದೂ ಕರೆಯಲಾಗುತ್ತಿತ್ತು. ಈ ಸ್ಥಳದಲ್ಲಿ ಪಲ್ಲವರ ಯುಗದ ಆಡಳಿತದಲ್ಲಿ ಭೂದೇವಿ ಶ್ರೀದೇವಿ ಸಮೇತರಾಗಿ ಶ್ರೀ ಕರಿಯ ಮಾಣಿಕ್ಯ ಪೆರುಮಾಳ್ ಎಂಬ ಈ ಸಣ್ಣ ದೇವಾಲಯ ನಿರ್ಮಿಸಲಾಗಿತ್ತು.ನಂತರದಲ್ಲಿ ವಿಜಯನಗರ ಸಾಮ್ರಾಜ್ಯಾಧಿಶ ಶ್ರೀಕೃಷ್ಣದೇವರಾಯ 1517 ರಲ್ಲಿ ಕುಂಭಕೋಣಂನತ್ತ ಹೋಗುವಾಗ ದಾರಿಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ಹರಿಕಂಠಪುರದಲ್ಲಿ ಬಿಡಾರ ಹೂಡಿದನು.ಆಗ ಇಲ್ಲಿನ ದೇವಾಲಯದ ಮಹತ್ವ ಅರಿತು ದೇವಾಲವನ್ನು ಅಭಿವೃದ್ಧಿ ಮಾಡಿ ನಿರ್ಮಾಣಕ್ಕೆ ಸಹಕಾರ ನೀಡಿದ…
ನ್ಯೂಜ್ ಡೆಸ್ಕ್: ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಹೆಲಿಕಾಪ್ಟರ್ ಖರಿದಿಸಿ ಅದಕ್ಕೆ ಪೂಜೆ ಮಾಡಿಸಲು ಯಾದಾದ್ರಿಯ ಬೆಟ್ಟದ ಮೇಲಿನ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಸಾಮಾನ್ಯವಾಗಿ ಹೊಸದಾಗಿ ಖರೀದಿಸಿದ ದ್ವಿಚಕ್ರವಾಹನಕ್ಕೊ, ನಾಲ್ಕು ಚಕ್ರದ ಕಾರು ಟೆಂಪೊ ವಾಹನಗಳನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುವುದು ಮಾಮೂಲು, ಆದರೆ ತೆಲಂಗಾಣ ರಾಜ್ಯದ ಕರಿಂನಗರ ಪ್ರತಿಮಾ ಮೆಡಿಕಲ್ ಕಾಲೇಜು ಮಾಲಿಕ ಮತ್ತು ತೆಲಂಗಾಣದ ಪ್ರಭಾವಿ ಉದ್ಯಮಿ ಪ್ರತಿಮಾ ಗ್ರೂಪ್ಸ್ ಮಾಲೀಕ ಬೋಯನಪಲ್ಲಿ ಶ್ರೀನಿವಾಸ್ ರಾವ್ ಏರ್ಬಸ್ ಎಸಿಹೆಚ್ 135 ಹೆಲಿಕಾಪ್ಟರ್ ಅನ್ನು 5.7 ಮಿಲಿಯನ್ ಯುಎಸ್ ಡಾಲರ್ ಕೊಟ್ಟು ಖರೀದಿಸಿದ್ದಾರೆ ಅದಕ್ಕೆ ಪೂಜೆ ಸಲ್ಲಿಸಲು ತಮ್ಮ ಇಷ್ಟ ದೈವ ಯಾದಾದ್ರಿಯ ಬೆಟ್ಟದ ಮೇಲಿನ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಂದು ಅದಕ್ಕೆ ವಾಹನ ಪೂಜೆ ಮಾಡಿಸಿದ್ದಾರೆ.!ಕುಟುಂಬಸಮೇತವಾಗಿ ಶ್ರೀನಿವಾಸ್ ರಾವ್ ಹೆಲಿಕಾಪ್ಟರ್ನಲ್ಲಿಯೇ ದೇವಸ್ಥಾನಕ್ಕೆ ಬಂದು ಮೂವರು ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ.ಉದ್ಯಮಿ ಶ್ರೀನಿವಾಸ್ ರಾವ್ ತೆಲಂಗಾಣದ ಪ್ರಭಾವಿ ಬಿಜೆಪಿ ಮುಖಂಡ…
ನ್ಯೂಜ್ ಡೆಸ್ಕ್: ವಿಶ್ವವಿಖ್ಯಾತ ನಟಸಾರ್ವಭೌಮ ನಟ ದಿವಂಗತ NTR ಮಗಳ ಮಗ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ನಾರಾಚಂದ್ರಬಾಬು ನಾಯ್ಡು ಮಗ ಆಂಧ್ರದ ಮಾಜಿ ಸಚಿವ ನಾರಾ ಲೋಕೇಶ್ ಮತ್ತು ಕನ್ನಡದ ಖ್ಯಾತ ನಟ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ ಇಬ್ಬರು ಹೈದರಾಬಾದ್‌ನ ಹೋಟಲೊಂದರಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋಗಳು ಸಾಮಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ ಅತ್ತ ಚಿತ್ರರಂಗ ಇತ್ತ ರಾಜಕೀಯ ರಂಗದಲ್ಲಿ ಕೂತುಹಲ ಕೆರಳಿಸಿದೆ.’KGF’ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗದಲ್ಲಿ ಸುದ್ದಿಯಾಗಿದ್ದಾರೆ ಅವರು ಎಲ್ಲೆ ಒಡಾಡಿದರು ಸುದ್ದಿಯಾಗುತ್ತದೆ ಇತ್ತ ರಾಜಕೀಯ ರಂಗದಲ್ಲಿ ಪ್ರಾಖ್ಯಾತಿ ಪಡೆದಿರುವ ತೆಲಗು ದೆಶಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಲೋಕೆಶ್ ಗೆ ಅಧಿಕಾರ ಇಲ್ಲದಿದ್ದರು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಗ ನಟ ಬಾಲಕೃಷ್ಣ ಅಳಿಯ ಎಂದು ಖ್ಯಾತಿ ಇರುವ ಹಿನ್ನಲೆಯಲ್ಲಿ ಆತನ ಒಡಾಟವು ಸಾಕಷ್ಟು ಸುದ್ದಿಯಾಗುತ್ತದೆ.ಡಿಸೆಂಬರ್ 15 ಹೈದರಾಬಾದ್‌ಗೆ ಭೇಟಿ ನೀಡಿದ್ದ ಯಶ್ ಹೋಟೆಲ್ ವೊಂದರಲ್ಲಿ ಇಬ್ಬರು…
ಶ್ರೀನಿವಾಸಪುರ: ಮಾಂಡೋಸ್ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು ಹಾಗು ನೀರಾವರಿ ಪ್ರಾಜೆಕ್ಟ್ ಗಳು ಬರ್ತಿಯಾಗಿ ತುಂಬಿ ಭೋರ್ಗೆರುಯುತ್ತ ಆಂಧ್ರದ ಕಡೆ ಹರಿಯುತ್ತಿವೆ.ನೆಲವಂಕಿ ಹೋಬಳಿಯ ಗೋರವಿಮಾಕಲಹಳ್ಳಿ,ಜೋಡಿಕೊತ್ತಪಲ್ಲಿ,ಕುರುಪಲ್ಲಿ,ಚಿಕ್ಕಒಬಳನಾಯಕನ ಕೆರೆ,ದೊಡ್ದಒಬಳನಾಯಕನಕೆರೆ,ಇಲ್ದೋಣಿ ಕೆರೆ ಕೋಡಿಬಿದ್ದಿವೆ,ಇವುಗಳಿಂದ ಹರಿಯುವ ನೀರು ಗುಂದೇಡು ಕೆರೆಗೆ ಹರಿದು ಅಲ್ಲಿಂದ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಹಾದು ಹೋಗಿರುವ ಗುಂದೇಡು ದೊಡ್ದ ಹಳ್ಳದ ಮೂಲಕ ನಿಮ್ಮನಪಲ್ಲಿ ನಾಲೆ ಮೂಲಕ ಜಾಲಗೊಂಡ್ಲಹಳ್ಳಿ ಪ್ರಾಜೇಕ್ಟ್ ಸೇರುತ್ತದೆ.ಪುಲಗೂರಕೋಟೆಯ ನಾಯಿನಚರವುಕೆರೆ ಅಭಿವೃದ್ದಿ!ತಾಲೂಕು ಪುಲಗೋರಕೋಟೆ ಭಾಗದ ಕೊತ್ತಗಡ್ದ-ಗಂಗಾಪುರ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ಸಾಲಿನ ಕಣಿವೆ ಪ್ರದೇಶದಲ್ಲಿ ಬರುವಂತ ನಾಯಿನಚರವು ಕೆರೆಗೆ ಬೆಟ್ಟಗಳಿಂದ ದೊಡ್ದಮಟ್ಟದಲ್ಲಿ ನೀರು ಹರಿದು ಬರುತ್ತದೆ ಇಲ್ಲಿ ನೀರು ನಿಲ್ಲಲು ಸಾಧ್ಯವಾಗದೆ ನೇರವಾಗಿ ಕೆರೆ ನೀರು ನೇರವಾಗಿ ಆಂಧ್ರದ ಚಂಬಕೂರು-ರಾಮಸಮುದ್ರಂ ಭಾಗದ ಕೆರೆಗಳ ಪಾಲಾಗುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ಕೋಡಿಬಿದ್ದ ನಾಯಿನಚರವು ಕೆರೆಯ ನೀರನ್ನು ಹಿಮ್ಮುಖವಾಗಿ ಹರಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಯೋಜನೆ ರೂಪಿಸಿದ್ದು ಕೆರೆಕಟ್ಟೆ ಅಭಿವೃದ್ದಿ ಪಡಿಸಿ ಕೋಡಿ ಎತ್ತರಿಸಿ ನಾಲೆ ನಿರ್ಮಿಸಿ…
ಶ್ರೀನಿವಾಸಪುರ:ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಂಡೂಸ್ ಚಂಡಮಾರುತದ ಚಳಿ-ಮಳೆಯಲ್ಲಿ ನೆಂದು ಪರೆದಾಡಿದ ವಿದ್ಯಾರ್ಥಿಗಳು!ಇಂದು ವಾರಾಂತ್ಯ ಶನಿವಾರ ಮಾರ್ನಿಂಗ್ ಸ್ಕೂಲ್ ವಿದ್ಯಾರ್ಥಿಗಳ ಕಥೆ ಇದು,ಸುರಿಯುವ ಮಳೆಯಲ್ಲೆ ಶಾಲೆಗೆ ಬಂದ ಮಕ್ಕಳು ಮಳೆಯಲ್ಲಿ ನೆನೆದು ಮುದ್ದೆಯಾದರೂ,ಇದು ಪಟ್ಟಣ ಶಾಲೆಗಳ ಪರಿಸ್ಥಿತಿಯಾದರೆ ಗ್ರಾಮೀಣ ಭಾಗದ ಕೆಲ ಶಾಲೆಯ ಶಿಕ್ಷಕರು ಮನೆಯಲ್ಲೆ ಕುಳಿತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಸದಸ್ಯರನ್ನು ಫೊನ್ ಮೂಲಕ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಶಾಲೆಗಳಿಗೆ ರಜೆ ಘೋಷಿಸಿದರೆ, ಇನ್ನೂಳಿದಂತೆ ಶಿಕ್ಷಕರು ಮಳೆ-ಗಾಳಿ ಲೆಕ್ಕಿಸದೆ ಶಾಲೆಗೆ ಹೋಗಿ ಮಕ್ಕಳು ಬಾರದ ಹಿನ್ನಲೆಯಲ್ಲಿ ಊರಿನ ಮುಖಂಡರ,ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯ ಪಡೆದು ಶಾಲೆಗೆ ರಜೆ ಘೋಷಿಸಿ ಬಂದಿರುತ್ತಾರೆ.ಭಾರತೀಯ ಹವಾಮಾನ ಇಲಾಖೆ (IMD) ಸೂಚಿಸಿರುವಂತೆ ಮಾಂಡೂಸ್ ಚಂಡಮಾರುತ ಎಫೆಕ್ಟ್ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದ್ದು ಕೋಲಾರ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶನಿವಾರ-ಭಾನುವಾರ ಯಲ್ಲೋ ಅಲರ್ಟ್ ಘೋಷಣೆಯಾಗಿದೆ ಇಷ್ಟೆಲ್ಲ ಮುನ್ಸೂಚನೆ ಇದ್ದರು ಕೋಲಾರ ಜಿಲ್ಲಾಡಳಿತ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೆ ಮುಂಜಾಗ್ರತೆ ವಹಿಸಿ ಕೋಲಾರ…
ನ್ಯೂಜ್ ಡೆಸ್ಕ್:ಮಂಡೂಸ್ ಚಂಡಮಾರುತ ಆಂಧ್ರದ ಕರಾವಳಿಯನ್ನು ದಾಟಿದೆ.ಪುದುಚೇರಿ-ಶ್ರೀಹರಿಕೋಟಾ ನಡುವೆ ಮಹಾಬಲಿಪುರಂ ಬಳಿ ಮಧ್ಯಾರಾತ್ರಿ 1:30 ರಲ್ಲಿ ಕರಾವಳಿಯನ್ನು ದಾಟಿದ್ದು ಸಂಜೆ ವೇಳೆಗೆ ದುರ್ಬಲವಾಗುವ ಸಾಧ್ಯತೆ ಇದೆ ಎಂದು ತಙ್ಞರ ಅಭಿಪ್ರಾಯ.ಇದರ ಎಫೆಕ್ಟ್ ನಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ,ರಾಮನಗರ, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಆಂಧ್ರದ ಚಿತ್ತೂರು,ಅನ್ನಮಯ್ಯ ಮತ್ತು ವೈಎಸ್‌ಆರ್ ಜಿಲ್ಲೆಗಳಲ್ಲಿ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಎಂದು ಐಎಂಡಿ ತಿಳಿಸಿದೆ. ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲೂ ಹಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.ಚಂಡಮಾರುತವು ಆಂಧ್ರ ಕರಾವಳಿಯನ್ನು ದಾಟಿದ್ದರೂ,ನಾಳೆಯವರೆಗೂ ಜನರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಅಧಿಕಾರಿಗಳು ಸೂಚಿಸಿದ್ದಾರೆ.ಮಂಡೂಸ್ ಚಂಡಮಾರುತ ಪರಿಣಾಮ ಶುಕ್ರವಾರ ರಾತ್ರಿ ಬೆಂಗಳೂರು ಸೇರಿದಂತೆ ಕೆಲವಡೆ 4.3 ಮಿಮೀ ಮಳೆಯಾಗಿದ್ದು, ಶನಿವಾರ ಬೆಳಗ್ಗೆ ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.
ನ್ಯೂಜ್ ಡೆಸ್ಕ್:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಮಾಂಡಸ್ ಚಂಡಮಾರುತದಿಂದ ಕೋಲಾರ,ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯ ಜೊತೆಗೆ ಸಾಧಾರಣ ಮಳೆ ಅಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಹೇಳಿದೆ.ಇಂದು ಸಂಜೆಯ ಹೊತ್ತಿಗೆ ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗುವ ಸಾದ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಮೋಡ ಕವಿದ ವಾತಾವರಣ ಮುಂದುವರೆಯಲಿದೆ.ತಮಿಳುನಾಡಿನಲ್ಲಿ ಮಾಂಡೋಸ್ ಚಂಡಮಾರುತ ಅಬ್ಬರ ಜೋರಾಗಿದ್ದು ಸೈಕ್ಲೋನ್ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಅಂದಾಜು 6ಮಿ.ಮೀ ಮಳೆ ಸಾಧ್ಯತೆ ಇದೆ. ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು,ಮಂಡ್ಯ,ಚಾಮರಾಜನಗರ,ತುಮಕೂರು,ಚಿಕ್ಕಮಂಗಳೂರು,ರಾಮನಗರದಲ್ಲಿ ಡಿಸೆಂಬರ್ 13 ರವರಿಗೂ ಯಲ್ಲೊ ಅಲರ್ಟ್ ಗೋಷಿಸಲಾಗಿದೆ ಆಂಧ್ರದ ರಾಯಲಸೀಮಾ ಜಿಲ್ಲೆ ಸೇರಿದಂತೆ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜಾ ನೀಡಿ ರೆಡ್ ಅಲರ್ಟ್ ಘೋಷಿಸಲಾಗಿದೆ.ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ “ಮಾಂಡೋಸ್” ಚಂಡಮಾರುತವು ಸುಮಾರು 12 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತ ನೈಋತ್ಯಕ್ಕೆ ಪ್ರಯಾಣಿಸುತ್ತದೆ ಟ್ರಿಂಕೋಮಲಿಯಿಂದ 240 ಕಿಮೀ ಉತ್ತರ-ಈಶಾನ್ಯಕ್ಕೆ (ಶ್ರೀಲಂಕಾ), ಜಾಫ್ನಾದಿಂದ 270…


