ಶ್ರೀನಿವಾಸಪುರ:ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಜನಪ್ರತಿನಿಧಿಗಳಾದ ನಾವು ಜನರ ಎದರು ಪ್ರಮಾಣಿಕರಾಗಿ ಸ್ಪಷ್ಟತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ವೆಂಕಟಶಿವಾರೆಡ್ಡಿ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಹೇಳಿದರು.ಅವರು ಇಂದು ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಸಮಕಾಲಿನ ರಾಜಕಾರಣಿಗಳಾದ ನಾವಿಬ್ಬರು ಇವತ್ತು ರಾಜಕಾರಣದ ಸಂಧ್ಯಾಕಾಲದಲ್ಲಿ ಇದ್ದೀವಿ ನಮ್ಮ ಸಾರ್ವಜನಿಕ ಜೀವನದಲ್ಲಿ ಮಾತು ನಡವಳಿಕೆ ಸ್ಪಷ್ಟವಾಗಿರಬೇಕು ಸತ್ಯ ಮುಚ್ಚಿಟ್ಟು ಮಾತನಾಡಬಾರದು ಎಂದ ಅವರು ಕಾನೂನು ಬದ್ದವಾಗಿ ಭೂಮಿಯ ಹಕ್ಕನ್ನು ಪಡೆದು ಕೊಂಡಿದ್ದ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ಅರಣ್ಯ ಇಲಾಖೆ ತೊಂದರೆ ನೀಡುತ್ತಿರುವ ವಿಷಯ ಪ್ರಸ್ತಾಪಿಸಿ ಮಾತನಾಡಿ ಇವತ್ತು ರೈತರು ಎದರಿಸುತ್ತಿರುವ ಜಮೀನು ಸಮಸ್ಯೆಗೆ ಅವರು ಅನುಭವಿಸುತ್ತಿರುವ ಕಷ್ಟಗಳಿಗೆ ಕಾರಣ ಯಾರು ಎಂಬುದು ಸ್ಪಷ್ಟವಾಗಬೇಕಿದೆ ಎಂದು ವೆಂಕಟಶಿವಾರೆಡ್ಡಿ ಹೇಳಿದರು. ರೈತರ ಜಮೀನು ಅರಣ್ಯ ಇಲಾಖೆಗೆ ಇಂಡಿಕರಣ ಆಗಿರುವುದು ಶ್ರೀನಿವಾಸಪುರ ತಾಲೂಕಿನಲ್ಲಿ ಮಾತ್ರ ಇದು ಗಂಭೀರವಾದ ವಿಚಾರ,ರೈತರ ಭೂಮಿ ಇಂಡಿಕರಣವಾದಾಗ 2021 ರಲ್ಲಿ ರಮೇಶ್ ಕುಮಾರ್ ಶಾಸಕರಾಗಿದ್ದರು, ಇದಾದ ನಂತರ ಸುಮಾರು ಏಳು…
Author: Srinivas_Murthy
ಶ್ರೀನಿವಾಸಪುರ:ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಇಂದು ಪಟ್ಟಣದಲ್ಲಿರುವ ರಾಸುಗಳಿಗೆ ಅಲಂಕಾರ ಮಾಡಿ ಸಂಪ್ರದಾಯದಂತೆ ಅವುಗಳನ್ನು ಮುಳಬಾಗಿಲು ರಸ್ತೆಯಲ್ಲಿ ಹೊಗಳಗೆರೆ ತಿರುವಿನಲ್ಲಿ ಇರುವ ಕಾಟಮರಾಯ ದೇವಾಲಯದ ಬಳಿ ಕರೆತಂದು ಪೂಜಿಸುವ ಮೂಲಕ ಸಂಭ್ರಮದಿಂದ ಸಂಕ್ರಾಂತಿಯನ್ನ ಆಚರಿಸಲಾಯಿತು. ಕಿಚ್ಚು ಹಾಕಿ ಸಂಭ್ರಮಿಸಿದರು.ಸಿಂಗರಿಸಿದ ಹಸು ಮತ್ತು ಎತ್ತುಗಳನ್ನು ಗೋಧೂಳಿ ಲಗ್ನದಲ್ಲಿ ಕಾಟಮರಾಯ ದೇವಾಲಯದ ಆವರಣಕ್ಕೆ ಕರೆತರಲಾಗುತ್ತದೆ ಅಲ್ಲಿ ಸಂಪ್ರದಾಯದಂತೆ ಅಪ್ಪೂರೊಳ್ಳು ಕುಟುಂಬಿಕರು ಗೋವುಗಳ ಕಾಲು ತೊಳೆದು ಪೂಜೆ ಮಾಡುತ್ತಾರೆ ನಂತರ ವಾಡಿಕೆಯಂತೆ ದೇವಾಲಯದ ಆವರಣದಲ್ಲಿ ಬೃಹತ್ ಎತ್ತರದಲ್ಲಿ ಹಾಕಲಾದ ಕಟ್ಟಿಗೆಗಳಿಗೆ ಅಗ್ನಿ ಸ್ಪರ್ಷ ಮಾಡಿ ಕಿಚ್ಚು ಹಚ್ಚುತ್ತಾರೆ ಬೆಂಕಿ ಉರಿದಷ್ಟು ರೈತರ ಜಾನುವಾರುಗಳ ಶ್ರೇಯಸ್ಸು ಹೆಚ್ಚುತ್ತದೆ ಮತ್ತು ರಕ್ಷಣೆ ಸಿಗುತ್ತದೆ ಎಂಬ ಉದ್ದೇಶದಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಟ್ಟಿಗೆ ರಾಶಿ ಹಾಕಿ ಕಿಚ್ಚನ್ನು ಉರಿಸಲಾಗುತ್ತದೆ ಎಂದು ಊರಿನ ಹಿರಿಯರು ಸಂಪ್ರದಾಯದ ಮಹತ್ವ ತಿಳಿಸಿಕೊಟ್ಟರು.ನಮ್ಮ ಸಂಪ್ರದಾಯ ಸಂಸೃತಿ ಮುಂದಿನ ಪೀಳಿಗೆಗೆ ಕರೆದೊಯುವಂತಾಗಬೇಕು ಮುಂದಿನ ವರ್ಷಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಇಲ್ಲಿಗೆ ಕರೆ ತರಲು ಯುವ ಸಮುದಾಯ ಮುಂದೆ…
ಸಿನಿ ಡೆಸ್ಕ್:ತೆಲಗು ಸಿನಿಮಾ ರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರೋ ನಿರ್ದೇಶಕ most lucky director ಅನಿಲ್ ರಾವಿಪುಡಿ ನಿರ್ದೇಶನದ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ “ಮನ ಶಂಕರ ವರಪ್ರಸಾದ್ ಗಾರು” ಸಿನಿಮಾದಲ್ಲಿ , ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ವಿಕ್ಟರಿ ವೆಂಕಟೇಶ್, ಕ್ಯಾಥರೀನ್ ಟ್ರೆಸಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 12 ರಂದು ಸೋಮವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ.ಬಾಲಿವುಡ್‌ನ ಹಿರಿಯ ನಟಿ ಜರೀನಾ ವಹಾಬ್, ಸಚಿನ್ ಖೇಡೆಕರ್, ಶರತ್ ಸಕ್ಸೇನಾ, ಹರ್ಷವರ್ಧನ್, ಅಭಿನವ್ ಗೋಮಠಂ ಮತ್ತು ರಘು ಬಾಬು ಅಂತಹ ಜನರು ಈ ಸಿನಿಮಾದಲ್ಲಿ ನಟಿಸಿರೋದು ಪ್ರಮುಖ ಆಕರ್ಷಣೆಯಾಗಿದ್ದು ಅನಿಲ್ ರಾವಿಪುಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾಹು ಗಾರಾಪಾಟಿ ಮತ್ತು ಸುಸ್ಮಿತಾ ಕೊನಿದೇಲಾ ಬಂಡವಾಳ ಹೂಡಿದ್ದಾರೆತಾಂತ್ರಿಕ ವರ್ಗದಲ್ಲಿ ಕ್ಯಾಮೆರಾ ಸಮೀರ್ ರೆಡ್ಡಿ,ಸಂಕಲನ ತಮ್ಮಿರಾಜು ಜವಾಬ್ದಾರಿ ಹೊತ್ತಿದ್ದಾರೆ. ಸಂಕ್ರಾಂತಿ ಫೇಮ್ ಭೀಮ್ಸ್ ಸಿಸಿರೋಲಿಯೋ ಸಂಗೀತದ ನೀಡಿದ್ದರೆ ಎ.ಎಸ್. ಪ್ರಕಾಶ್…
ಚಿಂತಾಮಣಿ:ಅತಿವೇಗವಾಗಿ ಬೆಳೆಯುತ್ತಿರುವ ಚಿಂತಾಮಣಿ Chintamani ನಗರದ ವ್ಯಾಪ್ತಿಯಲ್ಲಿ ದಿನೆ ದಿನೆ ಜನದಟ್ಟನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಇದರಿಂದ ಸಂಚಾರ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ ಇದಕ್ಕಾಗಿ ನಗರದ ಉತ್ತರ ಭಾಗದ ಬಾಗೇಪಲ್ಲಿ ವೃತ್ತದಿಂದ ಚೇಳೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸುವುದಾಗಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ Dr. M C. Sudhakar ಹೇಳಿದರು.ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಬುಕ್ಕನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಸುಮಾರು 42 ಲಕ್ಷ ರೂಪಾಯಿಗಳ ಕಾಮಗಾರಿಗೆ ಸಂಬಂದಿಸಿದಂತೆ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿ ತಿಳಿಸಿದರು.ಬುಕ್ಕನಹಳ್ಳಿ,ಚೊಕ್ಕರೆಡ್ಡಿಹಳ್ಳಿ,ಮುಂತಕದಿರೇನಹಳ್ಳಿ ಗ್ರಾಮಗಳ ಮಾರ್ಗವಾಗಿ ಬಾಗೇಪಲ್ಲಿ ವೃತ್ತದಿಂದ ಚೇಳೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಿದರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಇದನ್ನು ಪರಿಗಣಿಸಬೇಕು ಎಂದು ಬುಕ್ಕನಹಳ್ಳಿ,ಮುಂತಕದಿರೇನಹಳ್ಳಿ ಗ್ರಾಮಗಳ ಜನರು ಸಚಿವರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವರು ಬೈಪಾಸ್ ರಸ್ತೆ ಕನಿಷ್ಠ 50 ಅಡಿ ಅಗಲ ಇದ್ದರೆ ವಾಹನ ಸಂಚಾರಕ್ಕೆ ಸುಗಮವಾಗಿರುತ್ತದೆ…
ಶ್ರೀನಿವಾಸಪುರ:ಆದಿ ಜಾಂಭವ ಸಮುದಾಯ ಭವನ ನಿರ್ಮಾಣ ಸಂಬಂಧ ಸರ್ಕಾದಿಂದ ಜಮೀನು ಮಂಜೂರು ಮಾಡಿಸುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಆದಿಜಾಂಭವ ಸಮುದಾಯದ ಮುಖಂಡರ ಬೇಡಿಕೆಯಂತೆ ಪಟ್ಟಣದ ಹೊರವಲಯದ ಕೋಲಾರ ರಸ್ತೆಯಲ್ಲಿ ಮ್ಯಾಂಗೋ ವ್ಯಾಲಿ ಶಾಲೆಯ ಬಳಿ ಸರ್ವೇ ನಂಬರ್ 187 ರಲ್ಲಿ ಸುಮಾರು ಒಂದು ಎಕರೆ 25 ಗುಂಟೆ ಜಮೀನಿಗೆ ಸಂಬಂದ ಪಟ್ಟಂತೆ ಸ್ಥಳ ಪರಶೀಲನೆ ನಡೆಸಿ ಮಾತನಾಡಿ ಈ ಸ್ಥಳವನ್ನು ಆದಿ ಜಾಂಭವ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಿಸಲು ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಹೇಳಿದರು.ನಿರ್ಮಾಣ ಸಂಬಂಧ ಶಾಸಕರ ವಿಧಿಯಿಂದ 10 ಲಕ್ಷ ರೂಪಾಯಿ ಸಹಾಯ ನೀಡುವುದಾಗಿ ಘೋಷಿಸಿದರು.ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ತಮ್ಮ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.ಕಟ್ಟಡ ಕಾರ್ಮಿಕರಿಗೆ ಸಮುದಾಯ ಭವನಕಟ್ಟಡ ಕಾರ್ಮಿಕರಿಗೂ ಸಮುದಾಯ ಭವನ ನಿರ್ಮಾಣ ಮಾಡುವ ಸಂಬಂದ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದು 3 ಕೋಟಿ ರೂಪಾಯಿಗಳು ಮಂಜೂರಾತಿ ಹಂತದಲ್ಲಿ ಇದೆ ಕಾರ್ಮಿಕ ಸಚಿವರ ಜೊತೆ…
ನ್ಯೂಜ್ ಡೆಸ್ಕ್:ದಾಳಿಕೊರ ಮತಾಂಧ ಮೊಹ್ಮದ್ ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲಾ ಮಣ್ಣು ಮುಕ್ಕಿ ಸಮಾಧಿಯಾದರು.ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು.ಆದರೆ ಭಗವಾನ್ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ಅಚಲವಾಗಿ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊಹ್ಮಮದ್ ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಕಳದಿದೆ ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.ಶಿವನ ಮೊದಲ ಜ್ಯೋತಿರ್ಲಿಂಗವಾದ ಸೋಮನಾಥ ದೇವಾಲಯದ ನೆಲದಲ್ಲಿ ಪ್ರಧಾನಿ ಮೋದಿ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಿದರಲ್ಲದೆ, ಸ್ವಾಭಿಮಾನ, ಶೌರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸ್ಪಷ್ಟ ಸಂದೇಶವನ್ನು ಸಹ…
ಸಿನಿ ಡೆಸ್ಕ್:ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: A Fairy Tale For Grown-Ups’ ಚಿತ್ರವು ಘೋಷಣೆಯಾದ ದಿನದಿಂದಲೂ ಭಾರಿ ಸುದ್ದಿಯಲ್ಲಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಕೆಜಿಎಫ್ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್, 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಇದರಲ್ಲಿ ಯಶ್ ‘ರಾಯ’ ಎಂಬ ಹೆಸರಿನ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದು ಅವರ ಹಿಂದಿನ ಚಿತ್ರಗಳಿಗಿಂತಲೂ ಹೆಚ್ಚು ರಗಡ್ ಮತ್ತು Dark ಶೇಡ್‌ನಿಂದ ಕೂಡಿದೆ.ಟೀಸರ್‌ನಲ್ಲಿ ಯಶ್ ಅವರ ಎಂಟ್ರಿ ಅತ್ಯಂತ ಮಾಸ್ ಆಗಿದ್ದು, ದೊಡ್ಡ ಹ್ಯಾಟ್ ಧರಿಸಿ, ಬಾಯಲ್ಲಿ ಸಿಗಾರ್ ಸೇದುತ್ತಾ ಶತ್ರುಗಳನ್ನು ಧೂಳೀಪಟ ಮಾಡುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರಾಯ’ ಹೆಸರಿನ ಈ ಪಾತ್ರವು ಭೂಗತ ಲೋಕದ ಹೊಸ ಆಯಾಮವನ್ನು ತೆರೆದಿಡುವ ಮುನ್ಸೂಚನೆ ನೀಡಿದೆ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್ ಅಂತರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ಯಶ್ ಅವರ ವಿಭಿನ್ನ ಮ್ಯಾನರಿಸಂ ಅಭಿಮಾನಿಗಳಿಗೆ ಕೂತುಹಲ…
ನ್ಯೂಜ್ ಡೆಸ್ಕ್:ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಬಿಐ (CBI) ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದೆ. ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ (CPRI) ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಚೆನ್ನು ಹಾಗೂ ಸುಧೀರ್ ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕ ಅತುಲ್ ಖನ್ನಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.ಕಾರ್ಯಾಚರಣೆ ನಡೆದಿದ್ದು ಹೇಗೆ?ಸುಧೀರ್ ಗ್ರೂಪ್ ಆಫ್ ಕಂಪನೀಸ್ ತಯಾರಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರವಾದ ಪರೀಕ್ಷಾ ವರದಿಗಳನ್ನು ನೀಡಲು ಜಂಟಿ ನಿರ್ದೇಶಕರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮಾಹಿತಿ ಸಿಬಿಐಗೆ ಲಭ್ಯವಾಗಿತ್ತು. ಗುರುವಾರವಷ್ಟೇ ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದರು. 9.5 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು red-handed ಆಗಿ ಹಿಡಿಯಲಾಗಿದೆ.ಮನೆಯಲ್ಲಿ ಇತ್ತು ರಾಶಿ ರಾಶಿ ನಗದು!ಬಂಧನದ ನಂತರ ಆರೋಪಿ ರಾಜಾರಾಮ್ ಮೋಹನರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಅಚ್ಚರಿಯ ಕಾದಿತ್ತು. ಶೋಧ ಕಾರ್ಯದ ವೇಳೆ ಸುಮಾರು 3.59 ಕೋಟಿ ರೂಪಾಯಿ ನಗದು…
ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿ ವ್ಯಾಪಾರ ನಡೆತ್ತಿರುವುದರಿಂದ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದ್ದು ಶಾಲ ವಾಹನಗಳು ಅಂಬುಲೆನ್ಸ್ ಓಡಾಡಲು ಸಮಸ್ಯೆಯಾಗಿದ್ದು ಇದರಿಂದ ಅವರೆಕಾಯಿ ಮಂಡಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಅಗ್ರಹಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಮುಖಂಡರು ತರಕಾರಿ ಅಂಗಡಿಗಳ ವೃತ್ತದಲ್ಲಿ ಇಂದು ಗುರುವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಹಾಗು ಪುರಸಭೆ ಮಾಜಿ ಸದಸ್ಯ ಮುತ್ತಕಪಲ್ಲಿ ಸರ್ದಾರ ನೇತೃತ್ವದಲ್ಲಿ ವ್ಯಾಪಾರಸ್ಥರ ಗುಂಪು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಲು ಬಂದು ಮಾತನಾಡಿ ನಿಮ್ಮ ಪ್ರತಿಭಟನೆಯನ್ನು ನವೆಂಬರ್ ತಿಂಗಳಲ್ಲೆ ಮಾಡುವ ಮೂಲಕ ವಿರೋಧ ಮಾಡಿದ್ದರೆ ನಾವು ಇಲ್ಲಿ ವ್ಯವಹಾರ ಮಾಡುತ್ತಿರಲಿಲ್ಲ ಎಂದು ಸಮಜಾಯಿಸಿ ಕೊಟ್ಟರು ಇದಕ್ಕೆ ರೈತ ಹೋರಾಟಗಾರರು ಒಪ್ಪದೆ ನೀವು ಯಾವ ಆಧಾರದಲ್ಲಿ ಜನ ವಸತಿ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ವಹಿವಾಟು ನಡೆಸುತ್ತಿರ ಈ ಬಗ್ಗೆ ನಿಮಗೆ ಇದರ ಕುರಿತಾದ ಮಾಹಿತಿ ಇರಬೇಕು ನಿಮಗೆ ಅನುಮತಿ ನೀಡಿರುವ ಅಧಿಕಾರಿಗಳಿಗೆ ಅರಿವು ಇರಬೇಕು ಎಂದು ಪ್ರತಿಭಟನೆ…
ನ್ಯೂಜ್ ಡೆಸ್ಕ್:ಬಳ್ಳಾರಿ ಈ ಹಿಂದೆ ಗಣಿ ದೂಳಿನಿಂದಲೇ ಸದಾ ಸುದ್ದಿಯಲ್ಲಿತ್ತು ಈಗ ಬಳ್ಳಾರಿ ರಾಜಕೀಯ ಪಾರುಪತ್ಯಕ್ಕಾಗಿ ರಕ್ತ-ಸಿಕ್ತ ಕದನ ಸಾಕ್ಷಿಯಾಗಿದೆ.ಹೊಸ ವರ್ಷದ ದಿನವೇ ಪಿಸ್ತೂಲ್ ಸದ್ದಿನ ಶಬ್ದಕ್ಕೆ ಗಣಿ ನಾಡು ಬಳ್ಳಾರಿ ನಡುಗಿ ಹೋಗಿದೆ. ಬಳ್ಳಾರಿ ನಗರದಲ್ಲಿ ಇರುವ ಗಂಗಾವತಿ ಶಾಸಕ ಹಾಗು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಮನೆ ಬಳಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂದಿತ ಕಾರ್ಯಕ್ರಮದ ಬ್ಯಾನರ್ ಕಟ್ಟಿದ ವಿಚಾರವನ್ನು ಮುಂದಿಟ್ಟುಕೊಂಡು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಢಂ ಢಂ ಎಂದು ಗಾಳಿಯಲ್ಲಿ ಸುಮಾರು ಬಾರಿ ಫೈರಿಂಗ್ ಮಾಡಲಾಗಿದ್ದು ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನುವುದು ಜಗಜಾಹಿರವಾಗಿದೆ.ಜನವರಿ 01 ರಂದು ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅಂದರೆ ಅಪ್ಪಟ ತೆಲಗಿನ ರಾಯಮಸೀಮೆ ಫ್ಯಾಕ್ಷನ್ ಸಿನಿಮಾಗಳ ಶೈಲಿಯಲ್ಲಿ ಫೈಟಿಂಗ್ ಮತ್ತು ಫೈರಿಂಗ್ ಆಗಿದ್ದು ಗಲಭೆಯಲ್ಲಿ ಅಮಾಯಕನೊರ್ವ ಮೃತಪಟ್ಟಿದ್ದಾನೆ,…


