ನ್ಯೂಜ್ ಡೆಸ್ಕ್: ತಿರುಮಲದಲ್ಲಿ ದರುಶನಕ್ಕೆ ಬರುವ ಭಕ್ತರ ಸಂಖ್ಯೆ ಮೂರ್ನಾಲ್ಕು ದಿನಗಳಿಂದ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೋಕನ್ ಇಲ್ಲದೆ ಉಚಿತ ದರ್ಶನಕ್ಕೆ 15 ಗಂಟೆ ಸಮಯ ಹಿಡಿಯುತ್ತಿದೆ ಎನ್ನಲಾಗಿದ್ದು,ಸುಮಾರು 29 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಕಾಯುತ್ತಿದ್ದಾರೆ. ಗುರುವಾರ 58,165 ಭಕ್ತರು ದೇವರ ದರ್ಶನ ಮಾಡಿದ್ದು, 20,377 ಮಂದಿ ಮುಡಿ ಅರ್ಪಿಸಿದ್ದಾರೆ. ಸ್ವಾಮಿಯ ಹುಂಡಿಯ ಆದಾಯ ರೂ.3.60 ಕೋಟಿ ಎಂದು ಟಿಟಿಡಿ ತಿಳಿಸಿದೆ.
Author: Srinivas_Murthy
ಶ್ರೀನಿವಾಸಪುರ:ಶ್ರೀನಿವಾಸಪುರದಿಂದ ಮುಳಬಾಗಿಲುಗೆ ಹೊರಟ್ಟಿದ್ದ ಸರ್ಕಾರಿ ಬಸ್ ಗೆ ಲಾರಿಯೊಂದು ಡಿಕ್ಕಿಹೊಡೆದು ನಿಲ್ಲಿಸದೆ ವೇಗವಾಗಿ ಹೋದ ಘಟನೆ ಗುರುವಾರ ಸಂಜೆ ಶ್ರೀನಿವಾಸಪುರ ಪಟ್ಟಣದ ಮುಳಬಾಗಿಲು ವೃತ್ತದಲ್ಲಿ ನಡೆದಿರುತ್ತದೆ.ಶ್ರೀನಿವಾಸಪುರದಿಂದ ಮುಳಬಾಗಿಲು ಕಡೆಗೆ ಹೊರಟಿದ್ದ KSRTC ಬಸ್ಸು ಹೊಸ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿಕೊಂಡು ಬರಲು ಹೋಗುತ್ತಿದ್ದಾಗ ಸಂತೆ ಮೈದಾನದ ಕಡೆಯಿಂದ ಬಂದ ತಮಿಳನಾಡು ನೊಂದಣೆಯ ಲಾರಿ ವೇಗವಾಗಿ ಬಂದು ಬಸ್ಸಿನ ಬಲಬಾಗದಲ್ಲಿ ಡಿಕ್ಕಿಹೊಡೆದಿದೆ ಇದರಿಂದ ಬಸ್ಸಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.KSRTC ಬಸ್ಸಿಗೆ ಡಿಕ್ಕಿಹೊಡೆದ ತಮಿಳುನಾಡು ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಮುಳಬಾಗಿಲು ಮಾರ್ಗದಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದು, ಬಸ್ ಚಾಲಕ ಸಾರ್ವಜನಿಕರ ಸಹಕಾರದೊಂದಿಗೆ ದ್ವಿಚಕ್ರ ವಾಹದಲ್ಲಿ ಹೋಗಿ ಕೇತಗಾನಹಳ್ಳಿ ಬಳಿ ಲಾರಿಯನ್ನು ಹಿಡದಿರುತ್ತಾರೆ.ವೃತ್ತ ಇದೆ ಎಂಬ ಸೂಚನಾ ಫಲಕವಿಲ್ಲ !ಅಪಘಾತಕ್ಕೆ ಮುಖ್ಯ ಕಾರಣ ರಾಷ್ಟ್ರೀಯ ಹೆದ್ದಾರಿ ಇಂಜನಿಯರ್ ಗಳದೆ ಎಂಬುದು ಸ್ಥಳೀಯರ ಆರೋಪ ಮುಳಬಾಗಿಲು ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ ಅಲ್ಲೆ ಕೋಲಾರ-ಹೊಸಹುಡ್ಯ ರಾಜ್ಯ…
ಮುಳಬಾಗಿಲು:ಮೂರು ದ್ವಿಚಕ್ರ ವಾಹನಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಗಳಲ್ಲಿದ್ದ ಐವರು ಸಾವನಪ್ಪಿರುವ ದಾರುಣ ಘಟನೆಗೆ ಕಾರಣ ಇದೆನಾ ಎಂಬ ಪ್ರಶ್ನೆ ಉದ್ಭಸಿದೆ.ಬೊಲೆರೊ ವಾಹನ ಚಾಲಕ ಮಣಿಕಂಠ ಮೊಬೈಲ್ ನಲ್ಲಿ ಮಾತನಾಡಿಕೊಂಡು ಅಜಾಗುರುಕತೆಯಿಂದ ಚಾಲನೆ ಮಾಡಿದ ಪರಿಣಾಮ ಎದುರುಗಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂರು ದ್ವಿಚಕ್ರ ವಾಹನಗಳು ಕೆಳಗೆ ಬಿದ್ದಿವೆ ಅದರಲ್ಲಿ ಕುಳಿತವರೊಗೆ ತಲೆ ಎದೆಗೆ ತೀವ್ರವಾಗಿ ಗಾಯಗಳಾಗಿ ನಾಲ್ವರು ಸ್ಥಳದಲ್ಲಿ ಮೃತ ಪಟ್ಟರೆ ಒರ್ವ ಮಹಿಳೆ ಅಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.ಮುಳಬಾಗಿಲು ತಾಲ್ಲೂಕು ಎನ್.ವಡ್ಡಹಳ್ಳಿ-ಗುಡಿಪಲ್ಲಿ ಮಾರ್ಗದಲ್ಲಿ ಬುಧವಾರ ಸಂಜೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲ ಕೃಷಿ ಕಾರ್ಮಿಕರು ಎಂಬುದು ಧಾರುಣ,ಮೃತ ಪಟ್ಟವರು ಎಂದಿನಂತೆ ಕೃಷಿ ಕಾರ್ಯ ಮುಗಿಸಿಕೊಂಡು ಊರಿಗೆ ಹೋರಟಿದ್ದರು ಇದರಿಗೆ ಮೃತ್ಯ ಎದುರಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಇಲ್ಲದೆ ಗ್ರಾಮ ಸೇರಿಕೊಳ್ಳುವ ಅವಸರದಲ್ಲಿ ಹೋರಟವರಿಗೆ ಎದುರಿಗೆ ಮೃತ್ಯು ಬೊಲೊರೊ ವಾಹನದ ರೂಪದಲ್ಲಿ ಬಂದು ಆವರಿಸಿದೆ.ಬೊಲೊರೊ ವಾಹನ ನಡೆಸುತ್ತಿದ್ದ ಚಿಗುರು ಮೀಸೆ ಯುವಕ ಮಣಿಕಂಠ…
ಮುಳಬಾಗಿಲು: ಬೊಲೆರೊ ಟೆಂಪೊ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಐವರು ಸ್ಥಳದಲ್ಲಿಯೆ ಸಾವನಪ್ಪಿರುವ ದಾರುಣ ಘಟನೆ ಮುಳಬಾಗಿಲು ತಾಲ್ಲೂಕು ಎನ್.ವಡ್ಡಹಳ್ಳಿಯಿಂದ ಗುಡಿಪಲ್ಲಿ ಮಾರ್ಗದಲ್ಲಿ ಬುಧವಾರ ಸಂಜೆ ನಡೆದಿದೆ ಮೃತಪಟ್ಟವರೆಲ್ಲ ಕೃಷಿ ಕಾರ್ಮಿಕರು ಎಂದು ಗುರುತಿಸಲಾಗಿದೆ.ಮೃತ ಪಟ್ಟವರನ್ನು ಕೋನಂಗುಂಟೆ ಗ್ರಾಮದ ರಾಧಪ್ಪ 82,ಚಿಕ್ಕವೆಂಕಟರವಣಪ್ಪ 52,ಇತನ ಪತ್ನಿ ಅಲುವೇಲಮ್ಮ35, ನಾಗನಹಳ್ಳಿ ಗ್ರಾಮದ ಸಿ.ವೆಂಕಟರಾಮಪ್ಪ 45 ಇತನ ಪತ್ನಿ ಗಾಯಿತ್ರಮ್ಮ 40 ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿರುತ್ತಾರೆ.ಇವರೆಲ್ಲಾ ದಿನಗೂಲಿ ಕೃಷಿ ಕಾರ್ಮಿಕರಾಗಿದ್ದು ಎನ್.ವಡ್ದಹಳ್ಳಿ ಟಮ್ಯಾಟೊ ಮಂಡಿಯಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಗಳಿಗೆ ಐದು ಮಂದಿ ಮೂವರು ದ್ವಿಚಕ್ರ ವಾಹನಗಳಲ್ಲಿ ಎನ್.ವಡ್ಡಹಳ್ಳಿ-ಗುಡಿಪಲ್ಲಿ ಮಾರ್ಗದಲ್ಲಿ ಆಂಬ್ಲಿಕಲ್ ಮುಖ್ಯ ರಸ್ತೆ ಬಳಿ ಹೋಗುತ್ತಿದ್ದಾಗ ಎದರುಗಡೆ ಅಜಾಗುರುಕತೆ ಹಾಗು ಅತಿಯಾದ ವೇಗವಾಗಿ ಬಂದಂತ ಬೊಲೊರೊ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದಿದೆ ಡಿಕ್ಕಿಯಾಗುತ್ತಿದ್ದಂತೆ ದ್ವಿಚಕ್ರ ವಾಹನಗಳಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ತೀವ್ರವಾಗಿ ಗಾಯಗೊಂಡಿದ್ದ ಗಾಯಿತ್ರಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿರುತ್ತಾರೆ.ಬೊಲೊರೊ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಸ್ಥಳಕ್ಕೆ…
ನ್ಯೂಜ್ ಡೆಸ್ಕ್: ಪ್ರಿಯತಮೆಗೆ ಮೊಬೈಲ್ ಫೋನ್ ಕೊಡಿಸಲು ಹೆತ್ತಮ್ಮನನ್ನೆ ಹತ್ಯೆ ಮಾಡಿರುವ ಅಮಾನವೀಯ ಘಟನೆ ತೆಂಲಂಗಾಣದ ಖಮ್ಮಂ ನಗರದಲ್ಲಿ ಮಂಗಳವಾರ ನಡೆದಿದೆ.ಖಮ್ಮಂ ನಗರದ ಖಾನಾಪುರಕ್ಕೆ ಸೇರಿದ ಲಕ್ಷ್ಮೀನಾರಾಯಣ-ವಾಣಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಕುಡಿತಕ್ಕೆ ದಾಸರಾಗಿ ಮೋಜು ಮಸ್ಥ ಜಲ್ಸಾ ಮಾಡುತ್ತಿದ್ದು .ಕಿರಿಯ ಮಗ ಗೋಪಿನಾಥ್ ಮಂಗಳವಾರ ತನ್ನ ತಾಯಿ ಬಳಿ ಬಂದು ಹಣ ಕೇಳಿದ್ದಾನೆ. ತಾಯಿ ತನ್ನ ಬಳಿ ಹಣ ಇಲ್ಲ ಎಂದಾಗ ಮೈಮೇಲಿನ ಚಿನ್ನಾಭರಣ ನೀಡಿಸುವಂತೆ ಒತ್ತಾಯಿಸಿದ್ದಾನೆ ಆಕೆ ತಾಯಿ ಒಪ್ಪದಿದ್ದ ಕಾರಣಕ್ಕೆ ತಾಯಿ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಗೋಪಿ ತಾಯಿ ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ಮೈಲಿನ ಬಂಗಾರದ ಆಭರಣಗಳನ್ನು ತಗೆದುಕೊಂಡು ಓಡಿಹೋಗಿದ್ದಾನೆ ಕೆಲ ಹೊತ್ತಿನ ನಂತರ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆಕೆ ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮೃತಳ ಪತಿ ಲಕ್ಷ್ಮೀನಾರಾಯಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ…
ನ್ಯೂಜ್ ಡೆಸ್ಕ್: ಫೆಂಗಲ್ ಚಂಡಮಾರುತದ ಪ್ರಭಾವದ ಪರಿಣಾಮ ಸುರಿದ ಭಾರಿ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಪ್ರಮುಖ ರಾಗಿ ಹಾಗು ಅವರೆ ಬೇಳೆಗೆ ತೀವ್ರವಾದ ಹೊಡೆತ ಬಿದಿದ್ದು ಜಿಲ್ಲೆಯ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಮತ್ತೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಬಾರ ಕುಸಿತದಿಂದ ಮತ್ತೆ ಕೋಲಾರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ ಈಗಾಗಲೆ ಚಳಿಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ.ಇನ್ನೂ ಮಳೆಯಾದರೆ ವ್ಯವಸ್ಥೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ.
ನ್ಯೂಜ್ ಡೆಸ್ಕ್:ಬಿಗ್ ಬಾಸ್ ತೆಲುಗು ಸೀಸನ್ 8 ಮುಗಿದಿದ್ದು 106 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ತೆಲಗು ಖ್ಯಾತ ನಟ ಅಕ್ಕಿನೇನಿ ನಾಗರ್ಜುನ್ ಹೋಸ್ಟ್ ಆಗಿ ನಡೆಸಿಕೊಟ್ಟಿದ್ದು ಸೀಸನ್ 8 ರಲ್ಲಿ ವಿಜೇತರಾಗಿ ಹೊರಹೊಮ್ಮಿರುವುದು ಕನ್ನಡದ ಹುಡುಗ ನಿಖಿಲ್ ಅನ್ನುವುದು ವಿಶೇಷ ತೆಲಗು ಧಾರಾವಾಹಿಗಳ ಮೂಲಕ ಈಗಾಗಲೆ ತೆಲಗರ ಮನೆಮಾತಾಗಿರುವ ನಟ ನಿಖಿಲ್ ಅಂತಿಮ ಹಂತದಲ್ಲಿ ತೆಲುಗು ಹುಡುಗ ಗೌತಮ್ ಕೃಷ್ಣರನ್ನು ಎರಡನೇ ಸ್ಥಾನದಲ್ಲಿ ಕೂರಿಸಿ ವಿಜೇತರಾಗಿದ್ದಾರೆ. ಟಾಪ್-5ರಲ್ಲಿದ್ದ ಅವಿನಾಶ್, ಪ್ರೇರಣಾ ಮತ್ತು ನಬೀಲ್ ಸ್ಪರ್ದೆಯಿಂದ ಹೊರಬಿದ್ದಿದ್ದು ಅಂತಿಮವಾಗಿ ಗೌತಮ್ ಮತ್ತು ನಿಖಿಲ್ ಟಾಪ್-2ರಲ್ಲಿ ನಿಂತಿದ್ದು ಒಬ್ಬರನ್ನು ಆಯ್ಕೆ ಮಾಡಬೇಕಿದ್ದು ಖ್ಯಾತ ನಟ ನಾಗಾರ್ಜುನ ಅವರು ಅಂತಿಮವಾಗಿ, ನಿಖಿಲ್ ಅವರನ್ನು ವಿಜೇತ ಎಂದು ಘೋಷಿಸಿದ್ದಾರೆ.ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರಿಂದ ಟ್ರೋಫಿ ವಿತರಣೆಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರು ತೆಲಗು ಬಿಗ್ ಬಾಸ್ ಸೀಸನ್ 8 ರ ವಿಜೇತ ನಿಖಿಲ್ ಅವರಿಗೆ ಟ್ರೋಫಿಯನ್ನು ನೀಡಿದ್ದು 55 ಲಕ್ಷ ಚೆಕ್…
ಕೋಲಾರ:ಕೋಲಾರ ಜಿಲ್ಲೆಗೆ ಆಗಮಿಸಿದ ಆಂಧ್ರ ಪ್ರದೇಶದ ಪ್ರಭಾವಿ ಸಚಿವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಅವರ ಪುತ್ರ ಹಾಗು ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಹಾಗು ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಇಬ್ಬರು ಇಂದು ಕೋಲಾರ ನಗರದ ಆರೋಗ್ಯ ಇಲಾಖೆ ಕಚೇರಿಗೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಟಾಟಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ಡಿಜಿಟಲ್ ನರ್ವ್ ಸೆಂಟರ್ DINP ನಲ್ಲಿ ಕಾರ್ಯನಿರ್ವಹಣೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಕೋಲಾರ ತಾಲೂಕು ವೇಮಗಲ್ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿ ಡಿಜಿಟಲ್ ನರ್ವ್ ಸೆಂಟರ್ ಕುರಿತಂತೆ ಅಶಾ ಕಾರ್ಯಕರ್ತರಿಂದ ಪ್ರಾತ್ಯಕ್ಷತೆ ಪಡೆದುಕೊಂಡರು.ಕನ್ನಡದಲ್ಲೆ ಮಾತನಾಡಿದ ಆರೋಗ್ಯ ಸಚಿವಆಂಧ್ರದ ಧರ್ಮಾವರಂ ಶಾಸಕ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ರವರು ಆಶಾ ಕಾರ್ಯಕರ್ತರನ್ನು ಕನ್ನಡದಲ್ಲೆ ಮಾತನಾಡಿ ಅವರಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದಲ್ಲದೆ ಆರೋಗ್ಯ ಸೇವೆಗಳ ಕುರಿತಾಗಿ ಆಸ್ಪತ್ರೆ ಬಂದಿದ್ದ ರೋಗಿಗಳಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು. ನಮ್ಮ ಆರೋಗ್ಯ ಸಚಿವರಿಗೆ ಚನ್ನಾಗಿ ಕನ್ನಡ ಬರುತ್ತದೆ…
ಕೋಲಾರ:ಬಿಳಿ ಬಟ್ಟೆ ಹಾಕಿಕೊಂಡು ಚುನಾವಣೆಗೆ ಹೋಗುವ ಮಾತೆ ಇಲ್ಲ ಎಂದು ಪರೋಕ್ಷವಾಗಿ ಚುನಾವಣಾ ನಿವೃತ್ತಿಯ ಮಾತನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಡಿದ್ದಾರೆ.ಅವರು ಭಾನುವಾರ ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಪಂ ಮಾಜಿ ಅಧ್ಯಕ್ಷ ದಿವಂಗತ ಜನ್ನಘಟ್ಟ ವೆಂಕಟಮುನಿಯಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು.ರಮೇಶ್ ಕುಮಾರ್ ಭಾಷಣದ ಉದ್ದಕ್ಕೂ ವಿಷಾದಭರಿತವಾಗಿ ,ಮಾತನಾಡಿದರು ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿಯಾಗಿದೆ ಎಂದು ಹೇಳಿದರು ನಂತರ ನಡೆದಿದ್ದೆ ಬೇರೆ ಚುನಾವಣೆ ಸೋಲಿಗೆ ನಾನು ಹೆದರಲಿಲ್ಲ,ಚುನಾವಣೆಯಲ್ಲಿ ಸೋತೆ ನಾಲ್ಕಾಗಿತ್ತು ಈಗ 5 ನೇ ಸೋಲಾಗಿದೆ ಯಾಕೆ ಸೋತೆ ಅಂದ್ರೆ ನಂಬಿಸಿ ದ್ರೋಹ ಎಸಗಿ ಸೋಲಿಸಿದರು. ಊಟಕ್ಕೆ ಕರೆದು ವಿಷ ಇಕ್ಕಿದರು,ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು,ಜೊತೆಯಲ್ಲೆ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು,ದೇವರಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಕುತ್ತಿಗೆಗೆ ಕತ್ತಿ ಇಟ್ಟರು,ಎಂದು ಯಾರೊಬ್ಬರ ಹೆಸರು ಪ್ರಸ್ತಾಪಿಸದೆ ತಮ್ಮ ಸೋಲಿಗೆ ಕಾರಣರಾದವರು ಮಾಡಿದ ತಂತ್ರಗಳ ಬಗ್ಗೆ ತಮ್ಮದೆ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಹೇಳಿದರು.…
ಶ್ರೀನಿವಾಸಪುರ ತಾಲೂಕಿನಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದ್ದು ಮಹುಳೆಯೊಬ್ಬಳು ಮೀಟರ್ ಬಡ್ಡಿ ದಂಧೆ ಕೋರರ ಕಾಟಕ್ಕೆ ಬೆಚ್ಚಿಬಿದ್ದು ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಕೈಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ಅಕೆ ಮಗಳು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಯಾವುದೆ ಕಾನೂನಿನ ಚೌಕಟ್ಟು ಇಲ್ಲದೆ ಅವ್ಯಾಹುತವಾಗಿ ದಂಧೆ ನಡೆಸಲಾಗುತ್ತಿದೆ ಇದರ ಪರಿಣಾಮ ಸಣ್ಣ-ಪುಟ್ಟ ಸಾಲ ಪಡೆದಂತವರು ಬಡ್ಡಿ ದಂಧೆ ಕೋರರ ಕಾಟಕ್ಕೆ ಊರುಗಳನ್ನೆ ತೊರೆಯುತ್ತಿದ್ದಾರೆ. ಶ್ರೀನಿವಾಸಪುರ:ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೆಚ್ಚಿದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಮಗಳ ಮದುವೆ,ವಿದ್ಯಾಭ್ಯಾಸ ಹಾಗೂ ಕುಟುಂಬದ ಅವಶ್ಯಕ್ಕಾಗಿ ಸಾಲ ಮಾಡಿದ್ದ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಪಡೆದಿದ್ದ ಸಾಲ ತೀರಿಸಲಾಗದೆ ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಮಹಿಳೆ ಕೋಮಲಾದೇವಿ ಮಹಿಳೆ ಮೀಟರ್ ಬಡ್ಡಿ ಚಕ್ರವೂಹ್ಯಕ್ಕೆ ಸಿಲುಕಿ ಬೆಚ್ಚಿದ ಆಕೆ ಮೀಟರ್ ದಂದೆ ಕೊರರ ಹೆಸರನ್ನು ಪತ್ರದಲ್ಲಿ ಬರೆದಿಟ್ಟು…