ಶ್ರೀನಿವಾಸಪುರ:ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಜಮೀನಿಗಳಿಗೆ ತಿರುಗಾಡಲು ಬಳಸುವ ಕಾಲುದಾರಿ, ಬಂಡಿ ದಾರಿಗಳು ದಾಖಲೆಗಳ ಪ್ರಕಾರ ಇದ್ದು ಅದನ್ನು ರೈತರಿಗಾಗಿ ತೆರವು ಮಾಡಿ ಓಡಾಡಲು ಅನುವು ಮಾಡಿಕೊಡಬೇಕು ಎಂದು ಕಂದಾಯ ಇಲಾಖೆ ಎಲ್ಲಾ ತಹಸೀಲ್ದಾರ್ಗಳಿಗೆ ಸೂಚಿಸಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಹೆಬ್ಬಟ ಅನಂತಕುಮಾರ್ ತಿಳಿಸಿದರು.
ಅವರು ತಾಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬಂಡಿದಾರಿ ತೆರವು ಮಾಡಿಸುವ ಸಲುವಾಗಿ ಜಮೀನು ಮಾಲಿಕರೊಂದಿಗೆ ಮಾತು ಕತೆ ನಡೆಸಿದ ಅವರು ರೈತರು ಕೃಷಿ ಉದ್ದೇಶಕ್ಕಾಗಿ ಕೃಷಿ ಸಲಕರಣೆಗಳನ್ನು ಮತ್ತು ಬೆಳೆ ಸಾಗಿಸಲು ಖಾಸಗಿ ಮಾಲೀಕರ ಜಮೀನುಗಳಲ್ಲಿ ತಿರುಗಾಡಲು ಸಮಸ್ಯೆ ಆಗುತ್ತದೆ ರೈತರು ಸಂಚರಿಸಲು ಯಾವುದೇ ಕಾರಣಕ್ಕೂ ಅಡ್ಡಿ ಮಾಡುವಂತಿಲ್ಲ. ಮುಳಬಾಗಿಲು-ಚಿಂತಾಮಣಿ ಹೆದ್ದಾರಿ ರಿಂಗ್ ರಸ್ತೆಯಿಂದ ಚಲ್ದಿಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಂಡಿ ರಸ್ತೆ ಸುಮಾರು ವರ್ಷಗಳಿಂದ ಇದ್ದು ನಿರ್ಲಕ್ಷ್ಯಕ್ಕೆ ಒಳಗಾಗಿ ಒತ್ತುವರಿಯಾಗಿತ್ತು ಈ ಬಗ್ಗೆ ಜಮೀನು ಮಾಲಿಕರು ಮತ್ತು ಗ್ರಾಮಸ್ಥರು ತಾಲ್ಲೂಕು ದಂಡಾಧಿಕಾರಿಗೆ ಮನವಿಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಪರಿಶೀಲಿಸಿ ತೆರವು ಮಾಡುವಂತೆ ಸೂಚನೆ ನೀಡಿದ್ದು ಅದರಂತೆ ಜಮೀನು ಮಾಲಿಕರನ್ನು ಒಪ್ಪಿಸಿ ಗ್ರಾಮ ನಕಾಶೆ ಪ್ರಕಾರ ಬಂಡಿದಾರಿ ಗುರುತಿಸಿ ತೆರವು ಮಾಡಲಾಯಿತು.ಜಮೀನು ಮಾಲೀಕರು ಸಹಕರಿಸಿದ್ದಾರೆ,ರಸ್ತೆಯನ್ನು ಗ್ರಾಮಸ್ಥರು ಹಾಗು ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ರೈತರು ಬಹುಕಾಲದಿಂದ ಬಳಸುವ ಬಂಡಿದಾರಿ ಒತ್ತುವರಿಯಾಗಿದ್ದು ಇದನ್ನು ತೆರವು ಮಾಡಲು ಜಮೀನು ಮಾಲಿಕರನ್ನು ಒಪ್ಪಿಸಿ ಸ್ವಂತ ಹಣದಿಂದ ಸುಮಾರು ಎರಡುವರೆ ಕಿಲೋಮೀಟರ್ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದು, ಇದರಿಂದ 70 ರಿಂದ 80 ರೈತರು ತಮ್ಮ ಜಮೀನುಗಳಿಗೆ ಓಡಾಡಲು ಅನುಕೂಲವಾಗಲಿದೆ ಇದಕ್ಕಾಗಿ ಸಹಕಾರ ನೀಡಿದ ಗ್ರಾಮಪಂಚಾಯಿತಿ ಸದಸ್ಯ ಹೆಬ್ಬಟ ಅನಂತಕುಮಾರ್ ಅವರಿಗೆ ಮತ್ತು ಜಮೀನು ಮಾಲಿಕರಿಗೆ ಚಲ್ದಿಗಾನಹಳ್ಳಿ ಗ್ರಾಮದ ಮುಖಂಡ ಸಂಪತ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೆಂಕಟೇಶಪ್ಪ,ಶ್ರೀಧರ್, ದೇವರಾಜ್, ಸೋಮಶೇಖರ್, ರಾಮಾಂಜಿ, ರಾಧಕೃಷ್ಣ, ಚಂದ್ರಶೇಖರ್, ಬೈರೆಡ್ಡಿ, ಸುಬ್ರಮಣಿ, ನಾರಾಯಣಸ್ವಾಮಿ,ಅಮರ್ನಾಥ್, ಮಂಜುನಾಥ್, ವಿಜಯಕುಮಾರ್ ಇನ್ನೂ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



