ನ್ಯೂಜ್ ಡೆಸ್ಕ್:ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದ ಸಂಬಂಧ ಎಂದು ಗಂಡ-ಹೆಂಡತಿ ನಡುವಿನ ವೈವಾಹಿಕ ಬಂಧನ ಪವಿತ್ರವಾದುದು ಅಜ್ಜ-ಅಜ್ಜಿಯರು ಅನ್ಯೋನ್ಯತೆ ಬಾಳು ಎಂದು ಭಾವಿಸಿ ದಾಂಪತ್ಯ ನೂರು ವರ್ಷದ ಬೆಳೆ ಎಂದೆಲ್ಲಾ ಹಾಡಿ ಹೋಗುಳುತ್ತಿದ್ದ ನೆಲದಲ್ಲಿ ಆಧುನಿಕತೆಯೆಯ ಅಮಲಿನಲ್ಲಿ ಗಂಡ-ಹೆಂಡತಿ ಇದ್ದಾರೆ ಬದುಕು commercial life ಮಾಡಿಕೊಂಡು ಸಣ್ಣ-ಪುಟ್ಟ ಕಾರಣಗಳಿಗಾಗಿ ಜಗಳವಾಡುತ್ತಾರೆ. ಕುಳಿತು ಮಾತನಾಡಿದರೆ ಪರಿಹಾರ ಆಗುವ ಸಮಸ್ಯೆಗಳಿಗೆ ಕೊಡಲಿ ಹಿಡಿದು ಬಡಿದಾಡುವಷ್ಟು ಮಟ್ಟಿಗೆ ಮದುವೆ ಬಂಧನವನ್ನು ಮುರಿದು ಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವು ಸಾಮಾನ್ಯ ಅನ್ನುವಷ್ಟು ಕಾಣಸಿಗುತ್ತಿದೆ. ಆಂಧ್ರದ ವಿಶಾಕಪಟ್ಟಣದ ನಂದಿಕ ಕೃಷ್ಣ ಮತ್ತು ಗೌತಮಿ ಇಬ್ಬರೂ ಪ್ರೀತಿಸಿ ಪರಸ್ಪರ ಇಷ್ಟಪಟ್ಟು ನಮ್ಮ ಪ್ರೀತಿಯ ಬದುಕು ನೂರು ವರ್ಷಗಳ ಕಾಲ ಸುಖವಾಗಿ ಇರಲಿ ಎಂದು 6 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆರಂಭದಲ್ಲಿ ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ ಎಂದಿದ್ದ ದಂಪತಿ ಮದ್ಯೆ ಅಸಮಾಧಾನ ಭುಗೆಲೆದ್ದಿದೆ ಆಗಾಗ್ಗೆ ಜಗಳವಾಡುತ್ತಿದ್ದರು.ಇಬ್ಬರ ನಡುವಿನ ಭಾಂದವ್ಯ ತೀವ್ರವಾಗಿ ಹಳಸಿದೆ ಗಂಡನಿಂದ ಬೇಸತ್ತ ಪತ್ನಿ ಯಾರು ಊಹಿಸದ ನಿರ್ಧಾರ ಮಾಡಿಯೇ ಬಿಟ್ಟಿದ್ದಾಳೆ ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆ ಹೊತ್ತಿಗೆ,ಗೌತಮಿ ಪತಿ ಮಲಗಿದ್ದಾಗ ಅವನ ಮೇಲೆ ಕುದಿಯುತ್ತಿದ್ದ ಬಿಸಿನೀರು ತಂದು ಸುರಿದಿದ್ದಾಳೆ ಇದರಿಂದ ಗಂಡ ತೀವ್ರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಈ ಘಟನೆ ಆಂಧ್ರದ ವಿಶಾಖಪಟ್ಟಣಂ ನಗರದಲ್ಲಿ ನಡೆದಿದ್ದು ಗಂಡ ಸ್ಥಳೀಯ ಕೆಜಿಎಚ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



