ಶ್ರೀನಿವಾಸಪುರ:ತಾಲೂಕಿನಲ್ಲಿ ಶ್ರೀನಿವಾಸಪುರ ಪಟ್ಟಣದ ಆರ್ಥಿಕ ವ್ಯವಹಾರಕ್ಕಿಂತ ಮುಂದಂಚಿನಲ್ಲಿರುವ ಗೌವನಪಲ್ಲಿ Gownipalli ಗ್ರಾಮಕ್ಕೆ ಕೊನೆಗೂ ಪಟ್ಟಣ ಪಂಚಾಯಿತಿ ಆಗುವ ಸೌಭಾಗ್ಯ ಇನ್ನೂ ಒದಗಿ ಬಂದಿಲ್ಲ ಜನಸಂಖ್ಯೆ ಆಧಾರವಾಗಿ ಗೌವನಪಲ್ಲಿ ಹಾಗು ಸುತ್ತಮುತ್ತಲಿನಲ್ಲಿ ಒಂದು ಕೀ.ಮಿ ಒಳಗಡೆ ಇರುವಂತ ರೆಡ್ಡಿವಾರಿಪಲ್ಲಿ, ಅದಿರಾಸಪಲ್ಲಿ,ಕೊರಕೋನಪಲ್ಲಿ ಪಾಪಿಶೆಟ್ಟಿಪಲ್ಲಿ ಗ್ರಾಮಗಳನ್ನು ಒಳಪಡಿಸಿಕೊಂಡರೆ ಪಟ್ಟಣ ಪಂಚಾಯಿತಿ ಆಗಲು ಎಲ್ಲಾ ರಿತಿಯಲ್ಲೂ ಅರ್ಹತೆ ಇದ್ದರು ಸರ್ಕಾರ ಆಸಕ್ತಿ ವಹಿಸದೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವಿಭಜಿತ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೈವಾರ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಘೊಷಿಸಿರುವ ಸರ್ಕಾರ ಗೌವನಪಲ್ಲಿ Gownipalli ವಿಚಾರದಲ್ಲಿ ನಿರ್ಲಕ್ಷ್ಯ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ 114 ಪಟ್ಟಣ ಪಂಚಾಯಿತಿಗಳು ಇದ್ದು ಅದಕ್ಕೆ ಈಗ ಹೊಸದಾಗಿ ಮತ್ತೆ ಎರಡು ಚಿಂತಾಮಣಿ ತಾಲೂಕಿನ ಕೈವಾರ ಹಾಗು ಮೈಸೂರು ಜಿಲ್ಲೆಯ ತಲಕಾಡು ಅನ್ನು ಪಟ್ಟಣ ಪಂಚಾಯಿತಿಳನ್ನಾಗಿ ಸರ್ಕಾರ ಘೋಷಿಸಿದೆ ಜನಗಣತಿ ಪ್ರಕಾರ 10 ಸಾವಿರಕ್ಕಿಂತಲೂ ಅಧಿಕವಿರುವ, 20 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯಿತಿ ಸ್ಥಾನಮಾನ ನೀಡಲು ಅವಕಾಶ ಇರುವ ಹಿನ್ನಲೆಯಲ್ಲಿ ಗೌವನಪಲ್ಲಿ ಪರಿ ಪೂರ್ಣವಾಗಿ ಪಟ್ಟಣ ಪಂಚಾಯಿತಿ ಆಗಲು ಅರ್ಹತೆ ಪಡೆದಿದೆ.ಎನ್ನುವಂತೆ ಪೋಲಿಸ್ ಠಾಣೆ, ಕಂದಾಯ ಇಲಾಖೆ ಕಚೇರಿಗಳು, ಸರ್ಕಾರಿ ಆಸ್ಪತ್ರೆ ಪದವಿ ಪೂರ್ವ ಕಾಲೇಜು,ಹಲವಾರು ಖಾಸಗಿ ವಿದ್ಯಾಸಂಸ್ಥೆಗಳು ಇವೆಲ್ಲದರ ಜೊತೆಗೆ ಇಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆ ಜಿಲ್ಲಾ ಹಾಗು ರಾಜ್ಯದ ಗಡಿಯಾಚೆಗೂ ಖ್ಯಾತಿ ಪಡೆದಿದೆ ಈ ಎಲ್ಲಾ ಲೆಕ್ಕಾಚಾರದಲ್ಲಿ ಇಲ್ಲಿನ ಗ್ರಾಪಂ ಸದಸ್ಯರು, ಮುಖಂಡರು ಗೌವನಪಲ್ಲಿ ಗ್ರಾಮಕ್ಕೂ ಪಟ್ಟಣ ಪಂಚಾಯಿತಿ ಆಗುತ್ತದೆ ಎಂಬ ಲೆಕ್ಕಾಚಾರದ ನಿರಿಕ್ಷೆಯಲ್ಲಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ.
ಪಟ್ಟಣ ಪಂಚಾಯಿತಿಗೆ ಒತ್ತಾಯಿಸಿ ಪಾದಯಾತ್ರೆ
ಗ್ರಾಮದ ಯುವ ಮುಖಂಡ ಸ್ಥಳೀಯ ಉದ್ಯಮಿ ಅಮ್ಜಾದ್ ಖಾನ್ ಎನ್ನುವರು ಎರಡು ವರ್ಷಗಳ ಹಿಂದೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನೆಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಸುವರ್ಣಸೌಧಕ್ಕೆ ಗಾಂಧಿ ಟೋಪಿ ಧರಿಸಿ ಗೌವನಪಲ್ಲಿಯಿಂದ ಬೆಳಗಾವಿಗೆ 14 ದಿನಗಳ ಪಾದಯಾತ್ರೆ ಮೂಲಕ ಹೋಗಿ ಗೌವನಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ಸರ್ಕಾರದ ನಿಯಮಾವಳಿಗಳಂತೆ ಜನಸಂಖ್ಯೆ ಹೊಂದಿರುವ ಗೌವನಪಲ್ಲಿ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿದ್ದು ಗೌವನಪಲ್ಲಿಯನ್ನು ಪಟ್ಟಣಪಂಚಾಯಿತಿಯಾಗಿ ಘೋಷಿಸಬೇಕು ಎಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಪೌರಾಡಳಿತ ಸಚಿವ ರಹಿಮ್ ಖಾನ್ ಅವರುಗಳನ್ನು ಶಾಸಕ ವೆಂಕಟಶಿವಾರೆಡ್ಡಿ ಮೂಲಕ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



