Author: Srinivas_Murthy

ನ್ಯೂಜ್ ಡೆಸ್ಕ್: ಭಾರತೀಯ ಜನತಾಪಕ್ಷದ ಎಂಎಲ್‌ಸಿ ಕೇಶವ ಪ್ರಸಾದ್ ಅವರ ವಾಹನವನ್ನು ಟೋಲ್ ಸಿಬ್ಬಂದಿ ತಡೆದು, ಅವರ ಪಾಸ್ ಮತ್ತು ಮೊಬೈಲ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿ ದರ್ಪ ಮೆರೆದಿರುವ ಘಟನೆ ನಡೆದಿದ್ದು ಸ್ಥಳೀಯ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗೊಂದಲ ಸೃಷ್ಟಿಸಿದ ಟೋಲ್ ಸಿಬ್ಬಂದಿ ವರ್ತನೆಗೆ ಎಂಎಲ್ಸಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಭಾನುವಾರ ಕರ್ನಾಟಕದ ವಿಜಯಪುರ ನಗರದ ಹೊರವಲಯದ ಬೆಂಗಳೂರು-ಸೋಲಾಪುರ ಹೆದ್ದಾರಿಯ ಟೋಲ್ ಗೇಟ್‌ನಲ್ಲಿ ನಡೆದಿದೆ ಎನ್ನಲಾಗಿದೆ.ಟೋಲ್ ಸಿಬ್ಬಂದಿ ಎಂಎಲ್‌ಸಿ ಅವರ ಪಾಸ್ ಮತ್ತು ಮೊಬೈಲ್ ಅನ್ನು ದರ್ಪದಿಂದ ಕಸಿದುಕೊಂಡು,ನೀವು ಎಂಎಲ್‌ಸಿ ಎಂದು ನಾವು ಹೇಗೆ ನಂಬಬೇಕು?ಎಂದು ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ್ದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಎಲ್‌ಸಿ ಕೇಶವ ಪ್ರಸಾದ್ ಅವರು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿಗೆ ಫೋನ್ ಮೂಲಕ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಟೋಲ್ ಸ್ಥಳೀಯ ಮುಖ್ಯಸ್ಥರು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಎದರೂರು ಗ್ರಾಮದಲ್ಲಿ ಕೈಗಾರಿಕ ವಲಯಕ್ಕೆ ಸ್ಥಾಪನೆ ಸಂಬಂದಿಸಿದಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ವೆಂಕಟಶಿವರೆಡ್ಡಿ ಮಾತನಾಡಿ ಶ್ರೀನಿವಾಸಪುರ ತಾಲೂಕಿನಲ್ಲಿ ಎರಡು ಕಡೆ ಕೈಗಾರಿಕ ವಲಯ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೆ ಇದರಲ್ಲಿ ಎದರೂರು ಗ್ರಾಮದ ಕೈಗಾರಿಕ ವಲದ ನೋಟಿಫೀಕೇಷನ್ ಆಗಿದ್ದು ಈಗ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವ ಸರ್ಕಾರ ನಿಧಾನ ಮಾಡುತ್ತಿದೆ ನಮ್ಮ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳಗಳನ್ನು ಸ್ಥಾಪಿಸುವ ಮೂಲಕ ತಾ.ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ವಾ ಎಂದು ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದರು.ಇದಕ್ಕೆ ಎದರೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಯುವ ಮುಖಂಡ ಸುರೇಶ್ ಎಂಬುವರು ಶಾಸಕ ವೆಂಕಟಶಿವರೆಡ್ಡಿ ಅವರನ್ನು ಕೆಲ ಯುಟೂಬ್ ಹಾಗು ಸಾಮಾಜಿಕ ಜಾಲತಾಣದಲ್ಲಿ ಏಕವಚನ ಪ್ರಯೋಗಿಸಿ ಮಾತನಾಡಿ ಯಾರಪ್ಪನ ಮನೆ ಆಸ್ತಿ ಎಂದೆಲ್ಲ ಪದ ಬಳಿಸಿದ್ದು ಈ ಬಗ್ಗೆ ಶಾಸಕ ವೆಂಕಟಶಿವರೆಡ್ಡಿ ಅವರು ಸುರೇಶ್ ವಿರುದ್ದ ಶ್ರೀನಿವಾಸಪುರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ದೂರು ದಾಖಲಿಸಿಕೊಂಡಿದ್ದ ಶ್ರೀನಿವಾಸಪುರದ ಪೋಲಿಸರು ಸುರೇಶ್ ಅವರನ್ನು…

Read More

ನ್ಯೂಜ್ ಡೆಸ್ಕ್:ಹಣಕ್ಕಾಗಿ ಸಂಭಂದಗಳನ್ನು ಹಾಳುಮಾಡಿಕೊಳ್ಳುವಂತ ಕಾಲಘಟ್ಟ,ಕೂತಲ್ಲೆ ಬ್ಯಾಂಕ್​ ವಂಚನೆ ಡಿಜಿಟಲ್​​ ಅರೆಸ್ಟ್​ ಮೂಲಕ ಹಣ ಕಳೆದುಕೊಳ್ಳುವಂತ ಮೊಸ, ವಂಚನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಅಂತಹ ವ್ಯವಸ್ಥೆಯಲ್ಲಿ ನಾವು ನೀವು ಇರುವಾಗ ಪೌರಕಾರ್ಮಿಕ ಮಹಿಳೆ ಕಸದ ರಾಶಿಯಲ್ಲಿ ಸಿಕ್ಕ 10 ಲಕ್ಷ ರೂಪಾಯಿಗಳನ್ನು ಅದನ್ನು ಮಾಲೀಕರಿಗೆ ಮರಳಿ ನೀಡಿರುವ ಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಇದೊಂದು ನಿಜಕ್ಕೂ ನಂಬಲು ಅಸಾಧ್ಯವಾದ ವಿಚಾರ ಹಣ ಸಿಕ್ಕರೆ ಸಾಕು ಬಾಚಿ ತಿನ್ನೊಣ ಅನ್ನುವ ಕಾಲಘಟ್ಟ ಇಂತಹ ವ್ಯವಸ್ಥೆಯಲ್ಲಿ ಬೀದಿ ಕಸ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಎಂಬವರು ದೊಡ್ಡತನ ಮೆರೆದಿದ್ದಾರೆ. ಹಣ ಕಳೆದುಕೊಂಡು ಪೇಚಾಡುತ್ತಿದ್ದ ವ್ಯಕ್ತಿಗೆ ಹಣದ ಚೀಲವನ್ನು ನೀಡುವ ಮೂಲಕ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.ಕಸದಲ್ಲಿ ಸಿಕ್ಕ ಕಂತೆಗಟ್ಟಲೆ ಹಣಪುಣೆಯ ಸದಾಶಿವ ನಗರದಲ್ಲಿ ನೈರ್ಮಲ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಅಂಜು ಮಾನೆ ಅವರು ಎಂದಿನಂತೆ ಕಸ ಸಂಗ್ರಹಿಸುತ್ತಿದ್ದಾಗ, ಔಷಧಿಯ ಚೀಲವೊಂದು ರಸ್ತೆಯ ಬಳಿ ಬಿದ್ದಿದ್ದು ಕಂಡುಬಂದಿದೆ. ಅದನ್ನು ಕಸವೆಂದು ಅವರು, ಎತ್ತಿಕೊಂಡು ತಮ್ಮ ತಳ್ಳು ಗಾಡಿಯಲ್ಲಿ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ:ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಯದರೂರು ಬಳಿ 3 ಜನ ಪುಂಡ ಯುವಕರ ಗುಂಪು ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತ ಅಟ್ಟಹಾಸ ಮೆರೆಯುತ್ತಿದ್ದನ್ನು ಅದೆ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಚಿಂತಾಮಣಿ ಮೂಲದವರು ಪುಂಡರ ವೀಲಿಂಗ್ ಹುಚ್ಚಾಟವನ್ನು ತಮ್ಮ ಮೊಬೈಲ್ ಕೆಮಾರದಲ್ಲಿ ಸೆರೆ ಹಿಡಿದಿದ್ದಾರೆ.ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ವೀಲಿಂಗ್ ಮಾಡುತ್ತಿದ್ದ ಆರು ಮಂದಿ ಯುವಕರು ಕುಡಿದ ಅಮಲಿನಲ್ಲಿ ಅರಚುತ್ತ ಕೂಗಾಡುತ್ತ ಅಟ್ಟಹಾಸದಿಂದ ರಸ್ತೆಯಲ್ಲಿ ಅಡ್ಡಾ ದಿಡ್ಡಿ ಸಾಗುತ್ತ ಮೆರೆಯುತ್ತಿದ್ದರಂತೆ.ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರು ಎದರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ಚಮಕಾಯಿಸುತ್ತ ಕಿರಿ ಕಿರಿ ಉಂಟು ಮಾಡುತ್ತ ಸಾಗುತ್ತ ಇದ್ದರು ಎನ್ನುತ್ತಾರೆ.ಪುಂಡರ ವೀಲಿಂಗ್ ಹುಚ್ಚಾಟದ ದೃಶ್ಯಗಳು,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪುಂಡರ ಹೆಡೆಮುರಿ ಕಟ್ಟುವಂತೆ ಸಾರ್ವಜನಿಕರು ಪೋಲಿಸರನ್ನು ಒತ್ತಾಯಿಸಿದ್ದಾರೆ.

Read More

ನ್ಯೂಜ್ ಡೆಸ್ಕ್:ಹಲವು ದಶಕಗಳ ಹಿಂದೆ ಸರ್ವೆ ಕಾರ್ಯ ಮುಗಿಸಿದ್ದ ಬೆಂಗಳೂರು-ಕೋಲಾರ-ಕಡಪ ರೈಲು ಮಾರ್ಗವನ್ನು ಬದಲಾಯಿಸುವ ಮೂಲಕ ಹೊಸ ಮಾರ್ಗದ ರೂಪ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ.ಭೂಸ್ವಾಧೀನದ ಸಮಸ್ಯೆ ಮುಂದಿಟ್ಟುಕೊಂಡು, ಹೊಸ ಮಾರ್ಗದ ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿರುವ ಆಂಧ್ರಪ್ರದೇಶ ಸರ್ಕಾರ 255 ಕಿ.ಮೀ ದೂರದ ಮಾರ್ಗಕ್ಕೆ ಪರ್ಯಾಯವಾಗಿ, ಕೇವಲ 75 ಕಿ.ಮೀ ಕಾಮಗಾರಿ ನಿರ್ಮಾಣದೊಂದಿಗೆ ಕಡಪ-ಬೆಂಗಳೂರು ಮಾರ್ಗದ ಯೋಜನೆ ಸಿದ್ಧಪಡಿಸಲಾಗಿರುವ ರೈಲ್ವೆ ಇಲಾಖೆ ಜಾರಿಗೆ ತರಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಕಡಪ-ಕೋಲಾರ-ಬೆಂಗಳೂರು ಮಾರ್ಗದ ರೈಲ್ವೆ ಯೋಜನೆಯನ್ನು 2008-09 ರಲ್ಲಿ ಮಂಜೂರು ಮಾಡಿದ್ದು ಅದಕ್ಕೆ ಸರ್ವೆ ಕಾರ್ಯ ಮಾಡಲಾಯಿತು.ಇದರ ಮೂಲ ರೂಪ ಇದದ್ದು ಕಡಪ – ಪೆಂಡ್ಲಿಮರಿ – ರಾಯಚೋಟಿ – ಮದನಪಲ್ಲಿ-ಮುಳಬಾಗಲು-ಬಂಗಾರಪೇಟೆ-ಕೋಲಾರದ ಮೂಲಕ ಹಾದುಹೋಗುತ್ತದೆ. ಇದು ಒಟ್ಟು ದೂರ 255 ಕಿ.ಮೀ. ಇದರಲ್ಲಿ 207 ಕಿ.ಮೀ. ಆಂಧ್ರಪ್ರದೇಶದಲ್ಲಿ ಬರುತ್ತದೆ. ರಾಜ್ಯ ಸರ್ಕಾರ ಇದರ ವೆಚ್ಚದ ಶೇಕಡಾ 50 ರಷ್ಟು ಭರಿಸುತ್ತದೆ. ಆದರೆ, 2017 ರ ವೇಳೆಗೆ, ಕೇವಲ 21.30 ಕಿ.ಮೀ. (ಕಡಪ-ಪೆಂಡ್ಲಿಮರ್ರಿ) ಮಾತ್ರ…

Read More

ನ್ಯೂಜ್ ಡೆಸ್ಕ್:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ಕಳೆದ ಎರಡು ವರ್ಷಗಳಿಂದ ಹಲವಾರು ಹೆಸರುಗಳು ತಳುಕು ಹಾಕಿಕೊಂಡು ಇನ್ನೂ ಕೆಲ ಹೆಸರುಗಳು ಮುನ್ನೆಲೆಗೆ ಬಂದಿತ್ತು  ಆದರೆ ಇಂದು ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಚ್ಚರಿ  ಹೆಸರು ಪ್ರಕಟಿಸಲಾಗಿದೆ.ಬಿಹಾರದಲ್ಲಿ  5 ಬಾರಿ ಶಾಸಕರಾಗಿ ನಿತಿನ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ ರಸ್ತೆ ಮತ್ತು ಕಟ್ಟಡಗಳ ಮಂತ್ರಿ ಆಗಿರುವ 45 ವರ್ಷದ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷ ಪದವಿಗೆ ಘೋಷಿಸಲಾಗಿದೆ.  ಬಿಜೆಪಿ ಸಂಸದೀಯ ಮಂಡಳಿ ಭಾನುವಾರ ಈ ನಿರ್ಧಾರ ತೆಗೆದುಕೊಂಡಿದ್ದು ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ. 2020 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಡ್ಡಾ ಅವರನ್ನು 2024 ರ ಲೋಕಸಭಾ ಚುನಾವಣೆ ಸೇರಿದಂತೆ ಹಲವಾರು ಪ್ರಮುಖ ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ಹಲವಾರು ಬಾರಿ ವಿಸ್ತರಿಸಲಾಗಿದೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆಗಳ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ಈ ಇತ್ತೀಚಿನ ಮರುಸಂಘಟನೆ ಮಹತ್ವ…

Read More

ಕೇರಳದ ಕೆಂಪು ಭಾವುಟದ ಅಡಿಯಲ್ಲಿ ನಡೆಯುತ್ತಿದ್ದ ರಾಜಕಾರಣದಲ್ಲಿ ಎಡಪಕ್ಷಗಳ ರಾಜಕಾರಣದ ಪ್ರಾಭಲ್ಯದ ನಡುವೆ ಕೆಸರಿ ಭಾವುಟ ಹಾರಲು ಅವಕಾಶ ಸಿಕ್ಕಿದೆ, ಕೇರಳದ 45 ವರ್ಷಗಳ ರಾಜಕೀಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಎಲ್‌ಡಿಎಫ್ ಮೈತ್ರಿ ಕೂಟ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿದೆ. ಕೇರಳದಲ್ಲಿ ಬಿಜೆಪಿಯ ಪ್ರಭಾವ ಸೀಮಿತವಾಗಿದ್ದರೂ (25 ಗ್ರಾಮ ಪಂಚಾಯತ್, 2 ಮುನ್ಸಿಪಾಲಿಟಿ), ತನ್ನದಾಗಿಸಿಕೊಂಡಿದೆ.ತಿರುವನಂತಪುರಂ ನಲ್ಲಿ ಬಿಜೆಪಿಗೆ ಸಿಕ್ಕ ಗೆಲುವು ನಗರ ಪ್ರದೇಶಗಳ ಜನರಿಗೆ ಎಡಪಕ್ಷಗಳ ಮೇಲಿನ ಬೇಸರ ಎದ್ದುಕಾಣುತ್ತಿದೆ. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ನಗರ ಪ್ರದೇಶಗಳಲ್ಲಿ ತನ್ನ ಸ್ವಂತ ಶಕ್ತಿಯ ನೆಲೆ ವಿಸ್ತರಿಸಲು ಸಿಕ್ಕಿರುವಂತ ಅವಕಾಶ ಎನ್ನುತ್ತಾರೆ ರಾಜಕೀಯ ಪಂಡಿತರು. ನ್ಯೂಜ್ ಡೆಸ್ಕ್:ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಅಚ್ಚರಿಯ ಎನ್ನುವಂತೆ ಭಾರತೀಯ ಜನತಾ ಪಕ್ಷ (BJP) ಅನೇಕ ಕಡೆಗಳಲ್ಲಿ ಗೆಲುವುಗಳನ್ನು ಕಂಡಿದ್ದು ಇದು ಎಡಪಕ್ಷಗಳ ನಿದ್ದೆ ಕೆಡಿಸಿದೆ.2026ರ ಕೇರಳದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು 2026ರಲ್ಲಿ ನಡೆಯುವ ಕೇರಳ ವಿಧಾನಸಭಾ ಚುನಾವಣೆಗೆ…

Read More

ಶ್ರೀನಿವಾಸಪುರ:ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ತಾಲೂಕಿನ ಕಮಟಂಪಲ್ಲಿ ಗೇಟ್ ಬಳಿ ಕಾರೊಂದು ಡಿಕ್ಕಿ ಹೋಡೆದು ಇಬ್ಬರು ದ್ವಿಚಕ್ರ ವಾಹನ ಸವಾರರು ತೀವ್ರವಾಗಿ ಗಾಯೊಂಡಿದ್ದು ಅವರಲ್ಲಿ ಒರ್ವ ವ್ಯಕ್ತಿಗೆ ಎರಡು ಕಾಲುಗಳು ಮುರಿದಿದ್ದು ಇಬ್ಬರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಕಾಲು ಮುರಿದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ.ಮೃತ ವ್ಯಕ್ತಿಯನ್ನು ನಾರಯಣಸ್ವಾಮಿ(53) ಎಂದು ಗಾಯಗೊಂಡಿರುವ ವ್ಯಕ್ತಿಯನ್ನು ಮಂಜುನಾಥ್ ಎನ್ನಲಾಗಿದೆ.ಇಬ್ಬರು ಕಮಟಂಪಲ್ಲಿ ಗ್ರಾಮದವರಾಗಿದ್ದು ಇವರು ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಊರಿಂದ ಹೆದ್ದಾರಿಗೆ ಬರುವಾಗ ಅಪಘಾತ ನಡೆದಿರುವುದಾಗಿ ಹೇಳಲಾಗಿದೆ.ಡಿಕ್ಕಿ ಹೋಡೆದ ಕಾರನ್ನು ವಶಕ್ಕೆ ಪಡೆದಿರುವ ಗೌವನಪಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಶ್ರೀನಿವಾಸಪುರ:ಇದೊಂದು ಹೃದಯ ವಿದ್ರಾಯಕ ಮನ ಕಲಕುವ ಘಟನೆ ನಡೆದಿದ್ದು ಹುಟ್ಟಿದ ಏಳೇ ದಿನಕ್ಕೆ ಹೆತ್ತವರನ್ನು ಕಳೆದುಕೊಂಡ ಕಂದಮ್ಮನ ಕಥೆ.ಹೆತ್ತ ಏಳು ದಿನದ ಹಸುಕಂದನನ್ನು ಅನಾಥವಾಗಿಸಿ ಅಸ್ಸಾಂ ಮೂಲದ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವಿನ ಜನನದ ಸಂಭ್ರಮ ಮಾಸುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿರುವ ಮಗುವಿನ ಹೆತ್ತವರು ಕೃತ್ಯ ಮರುಕ ಮೂಡಿಸಿದೆ.ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂನಲ್ಲಿ ಕೆಲಸಕ್ಕಾಗಿ ದೂರದ ಅಸ್ಸಾಂನಿಂದ ಬಂದಿದ್ದ ಫರಿಜಾ (22) ಮತ್ತು ರೆಹಮಾನ್ (28) ದಂಪತಿ ಸುಮಾರು ಹದಿನೈದು ದಿನಗಳಿಂದ ಫಾರಂ ಸಮೀಪ ವಾಸವಾಗಿದ್ದರು. ಸರಿಯಾಗಿ ಏಳು ದಿನಗಳ ಹಿಂದಷ್ಟೇ ಫರಿಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಬದುಕಿಲ್ಲಿ ಸಂತಸ ಪಡಬೇಕಿದ್ದ ಸಮಯದಲ್ಲಿ ದಂಪತಿ ಆತ್ಮಹತ್ಯೆಯಂತ ವಿಪರೀತ ನಿರ್ಧಾರಕ್ಕೆ ಮುಂದಾಗಲು ಕಾರಣವಾದರು ಏನು ಎಂಬುದು ಸ್ಥಳೀಯರ ಪ್ರಶ್ನೆ?ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಘಟನಾ ಸ್ಥಳಕ್ಕೆ ರಾಯಲ್ಪಾಡು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀನಿವಾಸಪುರ…

Read More

ನ್ಯೂಜ್ ಡೆಸ್ಕ್:ಪ್ರಸ್ತುತ ಭಾರತದಲ್ಲಿನ 12 ಪಿಎಸ್‌ಬಿಗಳನ್ನು ಮೆಗಾ ವಿಲೀನದ ಮೂಲಕ ನಾಲ್ಕು ಬ್ಯಾಂಕುಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬಗ್ಗೆ ಹೇಳಲಾಗುತ್ತಿದೆ. ಎಸ್‌ಬಿಐ ಸೇರಿದಂತೆ ಇನ್ನೂ 3 ದೊಡ್ಡ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಹೇಳುತ್ತಿವೆ.ಕೇಂದ್ರವು ಸಾರ್ವಜನಿಕ ವಲಯದ ಬ್ಯಾಂಕುಗಳ ಮೆಗಾ ವಿಲೀನಕ್ಕೆ ಸಿದ್ಧತೆ ನಡೆಸುತ್ತಿದ್ದು ಈಗ್ಗೆ ಐದು ವರ್ಷಗಳ ಹಿಂದೆ ಇದ್ದ 27 ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು 12 ಕ್ಕೆ ಇಳಿಸಲಾಗಿತ್ತು.ಈಗ ಕೇಂದ್ರವು ಆ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸುವ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ.ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, 2026-27 ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ಮೆಗಾ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಮೆಗಾ ವಿಲೀನದ ನಂತರ, ದೇಶದಲ್ಲಿ ಕೇವಲ 4 ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಲಾಗಿದೆ.ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ…

Read More