Author: Srinivas_Murthy

ಶ್ರೀನಿವಾಸಪುರ:ಅರಣ್ಯ ಪ್ರದೇಶ ನಿರ್ವಹಣೆ ಗುತ್ತಿಗೆ ಪಡೆದಿದ್ದ ವ್ಯಕ್ತಿಯೋರ್ವ ಅನಧಿಕೃತವಾಗಿ ಮರಕಡಿದು ಸಾಗಿಸುತ್ತಿರುವುದನ್ನು ಸ್ಥಳೀಯರು ತಡೆದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಮರಗಳ್ಳತನ ಮಾಡಿದವರು ರಾಜರೋಷವಾಗಿ ಹತ್ತಾರು ಲೋಡ್ ಮರಗಳನ್ನು ರಾಯಲ್ಪಾಡು ಹೋಬಳಿಯ ಗುಂಟಿಪಲ್ಲಿ ಅರಣ್ಯಪ್ರದೇಶದಿಂದ ಸಾಗಿಸಿರುವುದಾಗಿ ಹೇಳಲಾಗಿದೆ.ಸಣ್ಣ ಪುಟ್ಟ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವ ಟೆಂಡರ್ ಪಡೆದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಬೃಹದಾಕಾರವಾಗಿ ಬೆಳೆದು ನಿಂತಿದ್ದ ನೀಲಗಿರಿ ಹಾಗು ಇನ್ನಿತರೆ ಮರಗಳನ್ನು ಆಧುನಿಕ ಯಂತ್ರಗಳನ್ನು ಬಳಸಿ ಕಡಿದು ಅವುಗಳನ್ನು ಜೆ.ಸಿ.ಬಿ ಮೂಲಕ ಲಾರಿಗಳಿಗೆ ತುಂಬಿಸಿ ಸಾಗಾಣೆ ಮಾಡುತ್ತಿರುವ ಕುರಿತಾಗಿ ಗುಂಟಪಲ್ಲಿ ಅರಣ್ಯ ಭಾಗದ ಸ್ಥಳೀಯರ ಆರೋಪ,ಸುಮಾರು ಒಂದೂವರೆ ತಿಂಗಳಿಂದ ಬುಡ ತೆಗೆಯುವ ನೆಪದಲ್ಲಿ 40-50 ವರ್ಷಗಳ ನೂರಾರು ನೀಲಗಿರಿ ಇನ್ನಿತರೆ ಮರಗಳನ್ನು ರಾಜಾರೋಷವಾಗಿ ಮಾರಾಟ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿನಿತ್ಯ ಲಾರಿಗಳ ಮೂಲಕ ಬಾರಿ ಗಾತ್ರದ ದಿಮ್ಮೆಗಳನ್ನು ಶ್ರೀನಿವಾಸಪುರ-ಕೋಲಾರ ಮಾರ್ಗವಾಗಿ ಮಾಲೂರು ಗಡಿ ತಲುಪಿಸಲಾಗುತ್ತಿದೆ,ಇದಕ್ಕೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳ ಬೆಂಬಲ ಇದೆ…

Read More

ಶ್ರೀನಿವಾಸಪುರ:ಅಕ್ರಮ ಸಂಬಂಧ ತಿಳಿದ ಅತ್ತೆ ನಮ್ಮ ಜೀವನಕ್ಕೆ ತೊಂದರೆ ಮಾಡುತ್ತಾಳೆ ಎಂದು ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಆತ್ತೆಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಎಮ್.ತುಮ್ಮಲಪಲ್ಲಿ ಗ್ರಾಮದಲ್ಲಿ ನಡೆದಿದೆ.ಹಲ್ಲೆ ಆರೋಪದಲ್ಲಿ ಸೊಸೆ ರೇಖಾ ಮತ್ತು ಆಕೆಯ ಪ್ರಿಯಕರ ಶಶಿಕುಮಾರ್‌ ರವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಅತ್ತೆ ರಮಣಮ್ಮ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಎಮ್.ತುಮ್ಮಲಪಲ್ಲಿ ಗ್ರಾಮದ ಮಂಜುನಾಥರೆಡ್ಡಿ ಆಂಧ್ರಪ್ರದೇಶದ ರೇಖಾ ಎಂಬಾಕೆಯನ್ನು ಕಳೆದ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅದರೆ ಇತ್ತಿಚಿಗೆ ಸೊಸೆ ರೇಖಾ ಮೊಬೈಲ್ ಖಾಯಾಲಿಗೆ ಬಿದ್ದಿದ್ದಾಳೆ ಅಷ್ಟೆ ಅಲ್ಲದೆ ಶಶಿಕುಮಾರ್‌ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿದ್ದಾಳೆ ಜೊತೆಗೆ ಪ್ರಿಯಕರ ಕೊಟ್ಟ ಮೊಬೈಲ್ ಅನ್ನು ಮನೆಯಲ್ಲಿ ಯತೇಚ್ಚವಾಗಿ ಬಳಸುವುದು, ನಡೆಯಿತಿತ್ತು ಇದು ಮನೆಯಲ್ಲಿ ಅತ್ತೆ ಸೊಸೆ ನಡುವೆ ರಾದ್ದಾಂತಕ್ಕೆ ಕಾರಣವಾಗಿದೆ ರೇಖಾ ಗಂಡ ಹಾಲು ವಾಹನದ ಚಾಲಕನಾಗಿದ್ದು ಹೆಚ್ಚಾಗಿ ಮನೆಯಲ್ಲಿ ಇರುತ್ತಿರಲಿಲ್ಲ,ಇದು ರೇಖಾ ಹಾಗು…

Read More

ಹಾಸನ:ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಘೋರ ಅಪಘಾತದಲ್ಲಿ ಕ್ಯಾಂಟರ್ ಹರಿದು 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೀಗಾಗಿ ಮೃತರ ಸಂಖ್ಯೆ ಈಗ 10ಕ್ಕೆ ಏರಿಕೆಯಾಗಿದೆ.20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ವಯ್ಯನ ಕೊಪ್ಪಲು ಗ್ರಾಮದ ಚಂದನ್ (26) ಸಾವನ್ನಪ್ಪಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿ. ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಗಿದೆ ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.ಜೆಡಿಎಸ್ ದೇವೇಗೌಡರಿಂದಲೂ…

Read More

ಶ್ರೀನಿವಾಸಪುರ:ವಿದ್ಯಾರ್ಥಿಗಳ ಕೊರತೆ ಶಿಥಲವಾದ ಕಟ್ಟಡಗಳು ಸಾರಿಗೆ ವ್ಯವಸ್ಥೆ ಕೊರತೆ ಹೀಗೆ ನಾನಾ ರಿತಿಯ ಸಮಸ್ಯೆಗಳಿಂದ ಇಂದು ದೊಡ್ದ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದೆ.ಆದರೆ ಇಲ್ಲೊಂದು ಸರ್ಕಾರಿ ಶಾಲೆ ಇವೆಲ್ಲದಕ್ಕೂ ಭಿನ್ನ ಎನ್ನುವಂತೆ ಪುಟ್ಟ ಗ್ರಾಮ ಕಶೆಟ್ಟಿಹಳ್ಳಿಯ ಉನ್ನತೀಕೃತ ಸರ್ಕಾರಿ ಶಾಲೆಯಲ್ಲಿ ಭರ್ಜರಿ ನೂರ ಇಪತ್ತು ವಿಧ್ಯಾರ್ಥಿಗಳ ಸಂಖ್ಯೆ ಹೊಂದಿದ್ದು ಇಂತಹ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕಲು ಸ್ಥಳೀಯವಾಗಿ ಷಡ್ಯಂತರ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಇಂದು ಶಾಲ ವಿದ್ಯಾರ್ಥಿಗಳು ಗ್ರಾಮಸ್ಥರು ಶಾಲ ಆವರಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಪಟ್ಟಬದ್ರರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಪ್ರಗತಿ ಪರ ರೈತ ರಾಮಚಂದ್ರಾರೆಡ್ಡಿ ಹಲವಾರು ವರ್ಷಗಳಿಂದ ಉತ್ತಮವಾಗಿ ಯಾವುದೆ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಕಶೆಟ್ಟಿಹಳ್ಳಿ ಸರ್ಕಾರಿ ಶಾಲೆಯನ್ನು ಕೆಲ ಪಟ್ಟಬದ್ರರು ತಮ್ಮ ಬೆಳೆ ಬೆಯಿಸಿಕೊಳ್ಳುವ ಸಲುವಾಗಿ ಇಲ್ಲಿನ ಶಿಕ್ಷಕರ ವಿರುದ್ದ ಇಲ್ಲಸಲ್ಲದ ಸಬೂಬು ಹೇಳಿ ವರ್ಗಾವಣೆ…

Read More

ನ್ಯೂಜ್ ಡೆಸ್ಕ್: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮೊನ್ನೆ ಭಾನುವಾರ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಬಳಿಕ ಮದ್ದೂರು ಪ್ರಕ್ಷುಬ್ದ ಸ್ಥಿತಿ ತಲುಪಿ ಬೂದಿ ಮುಚ್ಚಿದ ಕೆಂಡದಂತಿತ್ತು ಇದಕ್ಕಾಗಿ ಮದ್ದೂರಿನಲ್ಲಿ ಹಿಂದೂಪರ ಸಂಘಟನೆಗಳು ಬುಧವಾರ ಇಂದು ಅದ್ಧೂರಿಯಾಗಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಜನಸಾರದ ನಡುವೆ ನಡೆಯಿತು.ಮದ್ದೂರು ಪಟ್ಟಣದಲ್ಲಿ ಪ್ರತಿಷ್ಟಾಪಿಸಿದ್ದ ಸುಮಾರು ಹತ್ತು ಗಣಪತಿ ಮೂರ್ತಿಗಳನ್ನು ಮತ್ತು ತಾಲೂಕಿನ ವಿವಿಧ ಗ್ರಾಮಗಳ 18ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಮದ್ದೂರು ಪಟ್ಟಣದಲ್ಲಿ ಅಬ್ಬರ ಮತ್ತು ಆಡಂಬರದೊಂದಿಗೆ ಒಟ್ಟು 28 ಗಣಪತಿ ಮೂರ್ತಿಗಳ ವಿಸರ್ಜನ ಮೆರವಣಿಗೆಯನ್ನು ಬಿಗಿ ಪೋಲಿಸ್ ಭದ್ರತೆ ನಡುವೆ ಮಾಡಲಾಯಿತು ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ ಶಕ್ತಿ ಪ್ರದರ್ಶನದಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದ ಯುವಕ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.ಮದ್ದೂರು ಪಟ್ಟಣದ ಕಾಶಿ ವಿಶ್ವನಾಥ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹೊಳೆಬೀದಿ,ಪೇಟೆ ಬೀದಿ, ಟಿಬಿ ಸರ್ಕಲ್‌, ಹಳೆ ಬೆಂಗಳೂರು-ಮೈಸೂರು ರಸ್ತೆ ಸೇರಿದಂತೆ ಸುಮಾರು ಮೂರು ಕಿಲೋ ಮೀಟರ್‌ ದೂರ ಸಂಚರಿಸಿ…

Read More

ನ್ಯೂಜ್ ಡೆಸ್ಕ್:ಆಂಧ್ರದ ಪ್ರಭಾವಿ ಸಚಿವ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ Andhra Pradesh ಶಿಕ್ಷಣ ಮತ್ತು ಐಟಿ ಇಲಾಖೆ ಮಂತ್ರಿ ನಾರಾಲೋಕೇಶ್ Nara Lokesh ಅವರು ಸಾಮಾಜಿಕ ಆಧ್ಯಾತ್ಮಿಕ ಕೇಂದ್ರವಾದ ನಾಗಂಗಲದ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಮಠ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದರುಈ ಸಂದರ್ಭದಲ್ಲಿ ನಾರಾಲೋಕೇಶ್ www.naralokesh.in ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಗದ್ದುಗೆಗೆ ಪುಜೆ ಸಲ್ಲಿಸಿ ಕ್ಷೇತ್ರದ ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಭೇಟಿ ಮಾಡಿದರು ಈ ಸಂದರ್ಭದಲ್ಲಿ ಮಠದ ಸಂಪ್ರದಾಯದಂತೆ ಶ್ರೀಗಳು ಮಂತ್ರಿಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಆಶೀರ್ವಾದ ಮಾಡಿದರು.ಕೆಲ ಹೊತ್ತು ಮಾತುಕತೆ ನಡೆಸಿದರು. ಮಠದ ಕಾರ್ಯಚಟುವಟಿಕೆಗಳ ಮಾಹಿತಿ ಪಡೆದ ಸಚಿವಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲೆಗಳು, ಮೆಡಿಕಲ್ ಕಾಲೇಜು, ಆಸ್ಪತ್ರೆ, ವಿಶ್ವವಿದ್ಯಾಲಯಗಳಿಗೆ ಸಚಿವ ಭೇಟಿ ಇತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೈಗೊಂಡಿರುವ ವಿವಿಧ ಸೇವಾ, ಆಧ್ಯಾತ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ…

Read More

ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಮಂಜಲನಗರ ಗ್ರಾಮದಲ್ಲಿ ಕಮ್ಮಸಂದ್ರ ಗ್ರಾಮಕ್ಕೆ ಹೋಗುವ ದಾರಿಯಲ್ಲಿನ ಮಾವಿನ ತೋಪಿನಲ್ಲಿ ಹದಿಮೂರನೆ ಶತಮಾನದಲ್ಲಿ ಹೊಯ್ಸಳ ಅರಸರ Hoysala dynasty ಆಳ್ವಿಕೆಯಲ್ಲಿ ನಿರ್ಮಾಣವಾದದ್ದೆಂದು ಹೇಳಲಾದ ದೇವಾಲಯ ಪತ್ತೆಯಾಗಿದೆ.ಮಂಜಲನಗರದ ಗ್ರಾಮದ ಜಯಕುಮಾರ್ ಅವರ ವಿನಂತಿ ಮೇರೆಗೆ ಇತಿಹಾಸಕಾರರು ಹಾಗು ಶಾಸನ ತಜ್ಞ ಪ್ರೋ,ಕೆ. ಆರ್.ನರಸಿಂಹನ್, ಮತ್ತು ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿಕೊಟ್ಟು ಮಂಜಲನಗರದ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು ಪುರಾವೆಗಳ ಆಧಾರದಲ್ಲಿ ದೇವಾಲಯ ಹದಿಮೂರನೆ ಶತಮಾನ ಅಂದರೆ 1288 ಇಸವಿಯಲ್ಲಿ ಹೊಯ್ಸಳರ ಅರಸ ರಾಮನಾಥನ ಕಾಲಕ್ಕೆ ಸೇರಿದ್ದು ಅಂದಾಜಿಸಗಿದೆ.  Hoysala administration ಅರಸ ರಾಮನಾಥನ ಬಲವೖದ್ಧಿಗೆ ಆತನ ಮಂತ್ರಿ, ಪ್ರಮುಖ ಅಧಿಕಾರಿಗಳು ವೆಟ್ಟಪಲ್ಲಿಗೆ ಸೇರಿದ ಜಮೀನುಗಳನ್ನು ಧರ್ಮವಾಗಿ ಬಿಟ್ಟಿದ್ದಾರೆ ಎಂದು ಶಾಸನ ತಜ್ಞರು ಹೇಳುತ್ತಾರೆ. ಹೊಯ್ಸಳರ ಕಾಲದ ದೇವಾಲಯವಾದರು ಇದನ್ನು ಚೋಳರ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ ಎನ್ನಲಾಗಿದೆ ಈ ದೇವಾಲಯದಲ್ಲಿ ಈಗ್ಗೆ ನಲವತ್ತೖದು ವರ್ಷಗಳ ಹಿಂದೆ ಪೂಜಾದಿ ಕಾರ್ಯಗಳು…

Read More

ಶ್ರೀನಿವಾಸಪುರ:ಊರು ಬಿಟ್ಟು ಯಾರು ವಲಸೆ ಹೋಗಬೇಡಿ ಇಲ್ಲೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಿ ಎಲ್ಲೋ ದೂರದ ನಗರಗಳಿಗೆ ವಲಸೆ ಹೋದರೆ ಅಲ್ಲಿ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆ ಸೆಕ್ಯೂರಿಟಿ ಅಥಾವ ಪಾನಿ ಪೂರಿ ಹಾಕುವಂತ ಕೆಲಸ ಸಿಗುತ್ತದೆ, ಭೂಮಿ ಮೇಲೆ ಯಾರು ಅಥಾವ ಏನು ಶಾಶ್ವತ ಅಲ್ಲ,ಇರುವಷ್ಟು ಕಾಲ ಇಲ್ಲೆ ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ ಬದುಕು ಸವಿಸಬಹುದು ಎಲ್ಲವನ್ನು ರಾಜಕೀಕರಣ ಮಾಡುವುದು ಸೂಕ್ತ ಅಲ್ಲ ಎಲ್ಲರೂ ಅಣ್ಣ-ತಮ್ಮಂದಿರಂತೆ ಬಾಳಿ ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಸದಾ ಕಾಲ ಇರುತ್ತೇನೆ ನಿಮ್ಮ ಕಷ್ಟ-ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ K. R. Ramesh Kumar ಹೇಳಿದರು. ಅವರು ತಾಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾಗತ್ತೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೊದಲನೆ ಮಹಡಿ ಉದ್ಘಾಟಿಸಿ ಮಾತನಾಡಿದರು.ಎಲ್ಲರೂ ನನ್ನವರೇ ಯಾರು ಕೆಟ್ಟವರು ಅಂತ ನಾನು ಎಕ್ಸರೇ ಮಾಡಿ ನೋಡುವ ಅವಶ್ಯಕತೆ ನನಗೆ ಬೇಗಿಲ್ಲ ಎಲ್ಲರೂ ಒಳ್ಳೆಯವರೆ ತಂದೆ-ತಾಯಿ ಬದುಕಿರುವಾಗಲೆ…

Read More

ನ್ಯೂಜ್ ಡೆಸ್ಕ್:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಹಾಸ್ಟೆಲ್ ನಲ್ಲಿ ಇರುವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ,ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ರಾಯಚೂರು ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ ವಾರ್ಡನ್ ದೇವರಾಜ್ ಅವರನ್ನು ಅಮಾನತು ಮಾಡಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಹಾಸ್ಟೆಲ್ ನಲ್ಲಿ ವಾಸ್ತವಿಕ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದಾರೆಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಲಾಗಿ,ಭ್ರಷ್ಟಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.ಉಪಲೋಕಾಯುಕ್ತರ ಸಾಹಸ ಕಾರ್ಯಚರಣೆ ಭ್ರಷ್ಟಾಚಾರ ಬಯಲುಆಗಸ್ಟ್ 28 ರಂದು ರಾತ್ರಿ 8 ಗಂಟೆ ವೇಳೆ ಸುರಿಯುತ್ತಿದ್ದ ಭಾರೀ ಮಳೆಯ ನಡುವೆಯೂ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹಾಸ್ಟೆಲ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಈ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಬಯೋ-ಮೆಟ್ರಿಕ್ ಹಾಜರಾತಿಯ ಪ್ರಕಾರ ಹಾಸ್ಟೆಲ್ ನಲ್ಲಿ ಕೇವಲ 159…

Read More

ಶ್ರೀನಿವಾಸಪುರ:ಮೊನ್ನೆಯಷ್ಟೆ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಸುಣ್ ಕಲ್ಲು ಅರಣ್ಯ ಪ್ರದೇಶ ಬಳಿ ಬೊಲೊರೋ ಜೀಪಲ್ಲಿ ಸುಮಾರು 40 ವರ್ಷದ ವ್ಯಕ್ತಿಯೊಬ್ಬನ ಶವ ಸಿಕ್ಕಿದ್ದು ಈ ಬಗ್ಗೆ ರಾಯಲ್ಪಾಡು ಪೋಲಿಸರು ಅದರ ಜಾಡು ಹಿಡಿದು ಹೋದಾಗ ಕೊಲೆಯ ರಹಸ್ಯವೊಂದು ಬಯಲಾಗಿದೆ.ಕಾರಿನಲ್ಲಿ ಪತ್ತೆಯಾದ ಮೃತದೇಹ ಪೊಲೀಸರು ಪರಿಶೀಲನೆ ಮಾಡಿದಾಗ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ ಮೃತ ವ್ಯಕ್ತಿಯ ಕೈ ಕಾಲುಗಳನ್ನು ವೈಯರ್ ನಿಂದ ಕಟ್ಟಿದ್ದು ಗಮನಿಸಿದರೆ ದೂರದಲ್ಲಿ ಎಲ್ಲೋ ಕೊಂದು ಕಾರಿನಲ್ಲಿ ಮೃತದೇಹ ಇಟ್ಟು ಪರಾರಿಯಾದ ಬಗ್ಗೆ ಪೊಲೀಸರು ಶಂಕಿಸಿದ್ದರು ಅದರಂತೆ ಮೃತದೇಹ 40 ವರ್ಷದ ವೆಂಕಟರವಣ ಎಂಬುದು ಎಂದು ಪತ್ತೆ ಹಚ್ಚಿದ್ದಾರೆ.ಸುಣ್ ಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಎಸ್. ಗೊಲ್ಲಪಲ್ಲಿ ನಿವಾಸಿ ವೆಂಕಟರವಣ ಎಂದು ಗುರುತಿಸಿದ್ದು ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಇತನದು ಮೂಲತಃ ಮುಳಬಾಗಿಲು ತಾಲೂಕು ಬೆಟ್ಟೆವಾರಿಪಲ್ಲಿ ನಿವಾಸಿ ಸುಮಾರು 20 ವರ್ಷಗಳ ಹಿಂದೆ ಎಸ್. ಗೊಲ್ಲಪಲ್ಲಿ ಗ್ರಾಮದ ಕದಿರಮ್ಮ ಎಂಬಾಕೆಯನ್ನು ವಿವಾಹವಾಗಿ ಹೆಂಡತಿ ಮನೆಯಲ್ಲಿ ವಾಸಕ್ಕೆ…

Read More