Close Menu
ಚ.ಶ್ರೀನಿವಾಸಮೂರ್ತಿ ಸಾರಥ್ಯದಲ್ಲಿ ಸುದ್ದಿ ಪುಟ
    Facebook X (Twitter) Instagram
    Trending
    • ಶ್ರೀನಿವಾಸಪುರ: ಸರ್ಕಾರಿ ಕಚೇರಿಗಳ ಆವರಣವೇ ಕಾರ್ಗತ್ತಲು: ಸರ್ಕಾರಿ ವ್ಯವಸ್ಥೆ ಇದೇನಾ?
    • ನಾಯಿ ಕಾಟ ತಡೆಯಿರಿ:ಕಮಿಷನರ್ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ!
    • ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!
    • ಬಿಜೆಪಿ ಶಾಸಕನ ಹೊತ್ತು ಮೆರೆದ ಪೊಲೀಸರು; ವಿಡಿಯೋ ವೈರಲ್,ಸಿಬ್ಬಂದಿ ವರ್ಗಾವಣೆ!
    • ಅದ್ದೂರಿಯಾಗಿ ನಡೆದ ಕುರುಡುಮಲೆ ಶ್ರೀ ವಿನಾಯಕನ ಬ್ರಹ್ಮೋತ್ಸವ!
    • ಯೂನಿವರ್ಸಿಟಿ ಎಡವಟ್ಟು: ಬಿಕಾಂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆ!
    • ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.
    • ಮೇಕಲ ನಾರಾಯಣಸ್ವಾಮಿ ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ Boss
    Saturday, September 19
    Facebook X (Twitter) Instagram
    ಚ.ಶ್ರೀನಿವಾಸಮೂರ್ತಿ ಸಾರಥ್ಯದಲ್ಲಿ ಸುದ್ದಿ ಪುಟಚ.ಶ್ರೀನಿವಾಸಮೂರ್ತಿ ಸಾರಥ್ಯದಲ್ಲಿ ಸುದ್ದಿ ಪುಟ
    • ಮುಖಪುಟ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ಸಂಸ್ಕೃತಿ
    • ಅಪಘಾತ
    • ತಾಂತ್ರಿಕ
    • ಕ್ರೀಡೆ
    • ಆರೋಗ್ಯ
    • ಅಡುಗೆರುಚಿ
    • ಕೃಷಿ
    • ವಾಣಿಜ್ಯ
    • ಸಿನಿಮಾ
    • ಪಬ್ಲಿಕ್ ರಿಪೋರ್ಟರ್ / ಜನಸುದ್ಧಿ
    • ಕ್ರೈಂ
    • ಅಂಕಣ
    ಚ.ಶ್ರೀನಿವಾಸಮೂರ್ತಿ ಸಾರಥ್ಯದಲ್ಲಿ ಸುದ್ದಿ ಪುಟ
    Home»ಸಂಸ್ಕೃತಿ»ಶ್ರೀನಿವಾಸಪುರ: ಚೌಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ ಜಯಂತ್ಯುತ್ಸವ
    ಸಂಸ್ಕೃತಿ

    ಶ್ರೀನಿವಾಸಪುರ: ಚೌಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ ಜಯಂತ್ಯುತ್ಸವ

    Srinivas_MurthyBy Srinivas_MurthyAugust 4, 2026Updated:August 4, 2026No Comments

    ಶ್ರೀಶ್ರೀನಿವಾಸಪುರ:ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಅದ್ಧೂರಿಯಾಗಿ ಚಾಮುಂಡೇಶ್ವರಿ ಜಯಂತ್ಯುತ್ಸವ ಆಚರಿಸಲಾಯಿತು. ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಬೆಳಗ್ಗಿನಿಂದಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದಿವ್ಯ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣ್ಯಂ ಅವರು ವಿವಿಧ ಬಗೆಯ ಹೂವುಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು, ಅಲಂಕೃತ ರೂಪದಲ್ಲಿ ದೇವಿಯ ದರ್ಶನ ಭಕ್ತರನ್ನು ಭಕ್ತಿಪರಶರನ್ನಾಗಿಸಿತು. ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಆವರಣವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಊರಿನ ಯುವಕ ಮಂಡಳಿ ಸದಸ್ಯರು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಡೆಯಲು ಅನವು ಮಾಡಿದ್ದರು.
    ಜಯಂತ್ಯುತ್ಸವದ ಅಂಗವಾಗಿ ಪ್ರಸಾದ ವಿತರಣೆ ಅನ್ನಧಾನ ಏರ್ಪಡಿಸಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.ಭಕ್ತರ ಸಂಭ್ರಮದ ವಾತಾವರಣದಲ್ಲಿ ಶ್ರೀ ಚಾಮುಂಡೇಶ್ವರಿ ಜಯಂತ್ಯುತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

    ಯಲ್ದೂರು ಪಟಾಲಮ್ಮನ ಗುಡಿಯಲ್ಲಿ ಜಯಂತ್ಯುತ್ಸವ
    ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಯಲ್ದೂರಿನಲ್ಲಿ ನಲೆಸಿರುವ ಗ್ರಾಮಸ್ಥರ ಆರಾಧ್ಯ ದೇವರು ಶ್ರೀ ಪಟಾಲಮ್ಮ ದೇವಾಲಯಲ್ಲಿ ಶ್ರೀ ಚಾಮುಂಡೇಶ್ವರಿ ಜಯಂತ್ಯುತ್ಸವ ಭಕ್ತಿ ಭಾವದಿಂದ ಆಚರಿಸಲಾಯಿತು. ಸಂಜೆ ಶ್ರೀ ಪಟಾಲಮ್ಮದೇವಿಯನ್ನು ಭವ್ಯವಾಗಿ ಅಲಂಕರಿಸಿದ ಹೂವಿನ ಪಲ್ಲಕ್ಕಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವರ ಪಲ್ಲಕ್ಕಿ ಸಾಗುವ ಮಾರ್ಗದುದ್ದಕ್ಕೂ ಭಕ್ತರು ಆರತಿ ಬೆಳಗಿ, ಭಕ್ತಿಭಾವದಿಂದ ಸ್ವಾಗತಿಸಿದರು. ಭಕ್ತರ ಸಮ್ಮುಖದಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ ಯಶಸ್ವಿಯಾಗಿ ನೆರವೇರಿತು.

    Chamundeshwari Jayanti Celebrated gkvenkatashivareddy kolar Kolar district srinivasapura ಶ್ರೀನಿವಾಸಪುರ

    Related Posts

    ಶ್ರೀನಿವಾಸಪುರ: ಸರ್ಕಾರಿ ಕಚೇರಿಗಳ ಆವರಣವೇ ಕಾರ್ಗತ್ತಲು: ಸರ್ಕಾರಿ ವ್ಯವಸ್ಥೆ ಇದೇನಾ?

    September 18, 2026

    ಶ್ರೀನಿವಾಸಪುರ:ಶಬರಿಮಲೆ ಅಲಂಕಾರದಲ್ಲಿ ಗಣೇಶೋತ್ಸವ:18 ಮೆಟ್ಟಿಲುಗಳೇ ಆಕರ್ಷಣೆ!

    September 16, 2026

    ಶ್ರೀನಿವಾಸಪುರ ಸೇರಿ 108 ಪಟ್ಟಣಗಳಿಗೆ ರಿಂಗ್ Road ಭಾಗ್ಯ,ಸಂಪುಟ ಒಪ್ಪಿಗೆ.

    September 11, 2026
    vcsnews

    ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ vcsnewz.com ಅಂತರ್ಜಾಲ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.ಪಕ್ಷಪಾತವಿಲ್ಲದೆ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತ, ಎಲ್ಲರೂ ಸಮಾನರು ಎನ್ನುತ್ತ, ಯಾರೊಂದಿಗೂ ವೈಯ್ಯುಕ್ತಿಕ ಭಿನ್ನಾಭಿಪ್ರಾಯವಿಲ್ಲದೆ. ತಪ್ಪು ಮಾಡುವ ವ್ಯಕ್ತಿಯನ್ನು/ವ್ಯವಸ್ಥೆಯನ್ನು ನಿರ್ಭಯವಾಗಿ ಟೀಕಿಸುತ್ತ. ಒಳ್ಳೆಯದನ್ನು ಗೌರವಿಸುತ್ತ. ಓದುಗರಿಗೆ ನ್ಯಾಯೋಚಿತ ಸುದ್ಧಿಗಳನ್ನು ಜವಾಬ್ದಾರಿಯುತವಾಗಿ ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ.
    ಡಿಜಿಟಲ್‌ ಮಾಧ್ಯಮದಲ್ಲಿ ಅಂತರ್ಜಾಲ ಪತ್ರಿಕೆ ಅಥಾವ ವೆಬ್ ಸೈಟ್‌(webpage)ಗೆ ಮೊದಲ ಆದ್ಯತೆ ನೀಡಿದ್ದು ವಿಶೇಷ ಅಂದಾಗ ಮಾತ್ರ youtube ಯೂಟ್ಯೂಬ್ ದೃಶ್ಯಮಾಧ್ಯಮದಲ್ಲಿ ಸುದ್ದಿ ಮುಟ್ಟಿಸುವಂತ ಪ್ರಯತ್ನ ಮಾಡುತ್ತೇವೆ. ಇದರೊಂದಿಗೆ "ಈ ನೆಲದ ಪ್ರಭ" ಕನ್ನಡ ಪತ್ರಿಕೆಯನ್ನು ಹೊರತರಲಾಗಿದೆ, ಬರುವಂತ ದಿನಗಳಲ್ಲಿ ಒದುಗರ,ಕೇಳುಗರ ಹಾಗೆ ನೋಡುಗರ ನೀರಿಕ್ಷೆಗಳನ್ನು ಪೋರೈಸಲು ಮೊಬೈಲ್‌ ಆಪ್‌ ಹಾಗು ಇ- ರೆಡಿಯೋE.redio ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಸದಾಕಾಲ ಓದುಗರ ಸಹಕಾರ ಆಶಿಸುತ್ತ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ಕೋರುತ್ತ


    ಚ.ಶ್ರೀನಿವಾಸಮೂರ್ತಿ
    vcsnews
    • ಮುಖಪುಟ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ಸಂಸ್ಕೃತಿ
    • ಅಪಘಾತ
    • ತಾಂತ್ರಿಕ
    • ಕ್ರೀಡೆ
    • ಆರೋಗ್ಯ
    • ಅಡುಗೆರುಚಿ
    • ಕೃಷಿ
    • ವಾಣಿಜ್ಯ
    • ಸಿನಿಮಾ
    • ಪಬ್ಲಿಕ್ ರಿಪೋರ್ಟರ್ / ಜನಸುದ್ಧಿ
    • ಕ್ರೈಂ
    Copyright © 2026 vcsnewsmedianetwork | All Right Reserved

    Type above and press Enter to search. Press Esc to cancel.