ಬೆಂಗಳೂರು: ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ FKCCI ನೂತನ ಅಧ್ಯಕ್ಷರಾಗಿ ಟಿ.ಸಾಯಿರಾಮ್ ಪ್ರಸಾದ್, ಹಿರಿಯ ಉಪಾಧ್ಯಕ್ಷರಾಗಿ ಬಿ.ಪಿ.ಶಶಿಧರ್ ಹಾಗೂ ಉಪಾಧ್ಯಕ್ಷರಾಗಿ ಎನ್.ಸತೀಶ್ ಅವರು ಆಯ್ಕೆ ಆಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಸಾಯಿರಾಮ್ ಪ್ರಸಾದ್ ವ್ಯಾಪಾರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅನುಭವ ಹೊಂದಿದ್ದು 1962ರಿಂದ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ ತಮ್ಮ ಕುಟುಂಬದ ಹಿರಿಯರಾದ M/s. C V Thimmaiah and Co. ಹೆಸರಿನಲ್ಲಿ ಅಕ್ಕಿ ವ್ಯಾಪಾರ ಹೊಂದಿದ್ದು, ತಮ್ಮ ಕುಟುಂಬದ ಪಾರಂಪರಿಕ ಅಕ್ಕಿ ಮಂಡಿ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿರುವ ಸಾಯಿರಾಂ ಪ್ರಸಾದ್ ವ್ಯಾಪಾರಿಗಳು ಹಾಗೂ ಕೈಗಾರಿಕಾ ವಲಯದ ಮಾರುಕಟ್ಟೆ ಸವಾಲುಗಳನ್ನು ಬಲ್ಲವರು. FKCCI ಉಪಾಧ್ಯಕ್ಷರಾಗಿ ಮತ್ತು ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಎಪಿಎಂಸಿ ಸಮಿತಿಯ ನಿರ್ದೇಶಕರಾಗಿ, ಬೆಂಗಳೂರು ಧಾನ್ಯ ವ್ಯಾಪಾರಿಗಳ ಸಂಘದ ಕಾರ್ಯದರ್ಶಿಯಾಗಿ ಮತ್ತು ಧಾನ್ಯ ವ್ಯಾಪಾರಿಗಳ ಸಹಕಾರ ಬ್ಯಾಂಕ್ನ ನಾಯಕರಾಗಿ ಮಾರುಕಟ್ಟೆಯ ಮೂಲಸೌಕರ್ಯ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಪಿ.ಶಶಿಧರ್ ಅವರು ಬಿ.ಇ ಪದವೀಧರರು, ಮಷಿನಿಂಗ್ ಕಾಂಪೊನೆಂಟ್ಸ್ ತಯಾರಿಸುವ ಕಾರ್ತಿಕ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕರಾಗಿದ್ದು ಹತ್ತಾರು ವರ್ಷಗಳಿಂದ FKCCI ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೈಗಾರಿಕಾ, ಕಾರ್ಮಿಕ, ರಫ್ತು ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಸೇರಿದಂತೆ ವಿವಿಧ ಪ್ರಮುಖ ಸಮಿತಿಗಳ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿಯೂ ಇವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರವಾಗಿ ಸೇವೆ ಸಲ್ಲಿಸಿದ್ದಾರೆ.
ಉಪಾಧ್ಯಕ್ಷರಾಗಿ ಅಯ್ಕೆಯಾಗಿರುವ ಎನ್.ಸತೀಶ್ ಅವರು ಅನುಭವ, ತಾಂತ್ರಿಕ ಜ್ಞಾನ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದೆ
ಉದ್ಯಮ ಕ್ಷೇತ್ರದ ಆಶಯಗಳಿಗೆ ಹೊಸ ನಾಯಕತ್ವ
ಅಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಅವರ ಸುದೀರ್ಘ ವ್ಯಾಪಾರ ಅನುಭವ, ಹಿರಿಯ ಉಪಾಧ್ಯಕ್ಷ ಬಿ.ಪಿ. ಶಶಿಧರ್ ಅವರ ಕೈಗಾರಿಕಾ ಮತ್ತು ಸಂಘಟನಾ ಹಿನ್ನೆಲೆ ಹಾಗೂ ಉಪಾಧ್ಯಕ್ಷ ಎನ್. ಸತೀಶ್ ಅವರ ಸೇರ್ಪಡೆಯೊಂದಿಗೆ FKCCI 2026–27ನೇ ಸಾಲಿಗೆ ಹೊಸ ನಾಯಕತ್ವದಲ್ಲಿ ಆಶಾಭಾವನೆ ಮೂಡಿಸಿದೆ.
ಕರ್ನಾಟಕದ ವ್ಯಾಪಾರ, ಕೈಗಾರಿಕೆ, ರಫ್ತು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಸೇವಾ ಕ್ಷೇತ್ರಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುವ FKCCI, ರಾಜ್ಯದ ಉದ್ಯಮ ಸಮುದಾಯ ಮತ್ತು ಸರ್ಕಾರದ ನಡುವೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
Trending
- ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ
- ಬೆಂಗಳೂರಿಗೂ ಬಂದ ಆನೆ, ವ್ಯಕ್ತಿ ಮೇಲೆ ದಾಳಿ ಸಾವು!
- ಪತ್ರಕರ್ತರಿಗೆ ರೈಲ್ವೆ ಪಾಸ್ ಜಾರಿಗೊಳಿಸಲು ಸಚಿವ ಸೋಮಣ್ಣಗೆ ಪತ್ರಕರ್ತರ ಸಂಘ ಮನವಿ!
- ಶ್ರೀನಿವಾಸಪುರ:ಭಗತ್ ಸಿಂಗ್ ಜಯಂತಿ ಯಲ್ದೂರು ಯುವಕರಿಂದ ದೇಶಭಕ್ತಿ ಓಟ
- ವಿಧ್ವಂಸಕ ಕೃತ್ಯಗಳಿಗೆ ಸಂಚು, ಇಬ್ಬರು ಶಂಕಿತ ಉಗ್ರರ ಬಂಧನ!
- ಪದವೀಧರ ಚುನಾವಣೆ ನೀತಿ ಸಂಹಿತೆ ಪಾಲಿಸಲು DC ಸೂಚನೆ.
- ಚಿರಂಜೀವಿ”ಕಾಕಾ”ಸಿನಿಮಾ ಪಾತ್ರದ ಹೆಸರು”ಕದರಿ ಕಾಳಿದಾಸು”!
- ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಡ್ರೋನ್ ಟೆಸ್ಟಿಂಗ್ ಹಬ್!
Monday, September 28



