ಬೆಂಗಳೂರು:ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ‘ಕಾವೋರ್ ’ಪಬ್ನಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ IAS ಅಧಿಕಾರಿ ವಿಕಾಸ್ ಮರ್ಮಠ್ (Vikas Marmat) ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಬ್ ಆ್ಯಂಡ್ ರೆಸ್ಟೋರೆಂಟ್ಗಳ ಮೇಲೆ ನಗರ ಪೊಲೀಸರು ನಡೆಸಿದ ದಾಳಿ ವೇಳೆ ಪಬ್ ನಲ್ಲಿ ಪಾನಮತ್ತರಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ಸಿಸಿಬಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಅತ್ಯಂತ ಕೀಳುಮಟ್ಟದ ಪದಗಳಿಂದ ನಿಂದಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 9–10ರ ಮಧ್ಯರಾತ್ರಿ ಬೆಂಗಳೂರಿನ ಪಬ್ಗಳು ಮತ್ತು ಬಾರ್ಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಗ್ರಾಹಕರ ಗುರುತಿನ ಚೀಟಿ ಹಾಗೂ ವಯಸ್ಸಿನ ಪರಿಶೀಲನೆ ನಡೆಸುವ ವೇಳೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ನಗರದ ಪ್ರದೇಶ ನಗರಾಭಿವೃದ್ಧಿ ಪ್ರಾಧಿಕಾರ (KADA) ದಲ್ಲಿ ಯೋಜನಾ ನಿರ್ದೇಶಕರಾಗಿ (Project Director) ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರಿ ವಿಕಾಸ್ ಮರ್ಮಟ್ ಹಾಗೂ ಪೊಲೀಸರ ನಡುವೆ ಜಟಾಪಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಳುಂಕೆ ನೀಡಿದ ದೂರಿನನ್ವಯ ವಿಕಾಸ್ ಮರ್ಮಠ್ , ಅವರ ಸಹಚರರಾದ ಅಭಯ್ ಉದಯ್ ಸಿಂಗ್ , ನಿತೀಶ್ , ರೋಶನ್
ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಹಲ್ಲೆ, ಸರಕಾರಿ ನೌಕರನ ವಿರುದ್ಧ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಇತರ ಆರೋಪಗಳನ್ವಯ ಎಫ್ ಐಆರ್ ದಾಖಲಿಸಲಾಗಿದೆ. IAS ಅಧಿಕಾರಿ ವಿಕಾಸ್ ಅವರೊಂದಿಗೆ ಸ್ನೇಹಿತರು ಎನ್ನಲಾದವರ ಪೈಕಿ ಒಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಇನ್ನಿಬ್ಬರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿ ವೇಳೆ ಜಟಾಪಟಿ
ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ನಿಯಮಗಳ ಉಲ್ಲಂಘನೆ ಪರಿಶೀಲನೆ ಸಂಬಂಧ ಇಡೀ ನಗರಾದ್ಯಂತ ಪೊಲೀಸರು 850ಕ್ಕೂ ಹೆಚ್ಚು ಪಬ್ /ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದರು. ಈ ಪೈಕಿ ರೆಸಿಡೆನ್ಸಿ ರಸ್ತೆಯಲ್ಲಿರುವ ‘ಕಾವೋರ್ ’ ಪಬ್ ಗೆ ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಅರುಣ್ ಸಾಳುಂಕೆ, ಬಿ.ಎಸ್ .ಅಶೋಕ್ , ಮಹದೇವಯ್ಯ ಹಾಗೂ ಇತರ ಸಿಬ್ಬಂದಿ ತಪಾಸಣೆಗೆ ತೆರಳಿದ್ದರು.
ವಿಕಾಸ್ ಅವರ ಹಿನ್ನೆಲೆ ಪರಿಶೀಲಿಸಿದಾಗ ಅವರು ಮೂಲತಃ ರಾಜಸ್ಥಾನದ ಜೈಪುರದವರಾದ ಇವರು ಐಐಟಿ ಕಾನ್ಪುರದಿಂದ (IIT Kanpur) ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿ, ತಮ್ಮ 23ನೇ ವಯಸ್ಸಿನಲ್ಲಿಯೇ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ 473ನೇ ರ್ಯಾಂಕ್ ಪಡೆದು 2019ರ ಬ್ಯಾಚ್ ಆಂಧ್ರಪ್ರದೇಶ ಕೆಡರ್ನ ಐಎಎಸ್ ಅಧಿಕಾರಿ ಎಂಬುದು ದೃಢಪಟ್ಟಿದೆ. ದೌರ್ಜನ್ಯವೆಸಗಿದ ವಿಕಾಸ್ ಮತ್ತು ತಂಡವನ್ನು ಅದೇ ದಿನ ವಶಕ್ಕೆ ಪಡೆಯಲಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಅಗತ್ಯ ಬಿದ್ದರೆ ಪುನಃ ವಿಚಾರಣೆಗೆ ಕರೆಸಲಾಗುವುದು,ಎಂದು ಮೂಲಗಳು ಹೇಳಿವೆ.

ಅಧಿಕಾರಿ ವರ್ಗಾವಣೆ
ಅಧಿಕಾರಿ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆದೇಶದ ಮೇರೆಗೆ ಇವರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆಂಧ್ರಪ್ರದೇಶ ಸರ್ಕಾರ ಸೂಚಿಸಿದೆ ಎಂದು ವರದಿಯಾಗಿದೆ.



