ಶ್ರೀನಿವಾಸಪುರ: ಪಟ್ಟಣದ ಅಕ್ಬರ್ ರಸ್ತೆಯಲ್ಲಿರುವ ಕುಡಿಯುವ ನೀರಿನ ಕೊಳವೆಬಾವಿ ಸುತ್ತಮುತ್ತ ಕಸದ ರಾಶಿ ಬಿದ್ದಿರುವ ಕುರಿತು VCSNEWZ ವರದಿ ಪ್ರಕಟಿಸಿದ ಬೆನ್ನಲ್ಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊಳವೆಬಾವಿ ಸುತ್ತಲಿನ ಪ್ರದೇಶದಲ್ಲಿ ಪುರಸಭೆ ಸಿಬ್ಬಂದಿ ಇಂದು ಸ್ವಚ್ಛ ಮಾಡಿದ್ದಾರೆ.
ಎಂ.ಜಿ. ರಸ್ತೆ ಸೇರಿದಂತೆ ಪಟ್ಟಣದ ಹಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಕೊಳವೆಬಾವಿ ಇದಾಗಿದ್ದು ಇದರ ಸುತ್ತಲೂ ಪ್ಲಾಸ್ಟಿಕ್ ಕವರ್ಗಳು, ಮನೆಯ ಕಸ ಹಾಗೂ ತ್ಯಾಜ್ಯವನ್ನು ಎಸೆಯಲಾಗಿತ್ತು. ಈ ಕುರಿತು ಸಾರ್ವಜನಿಕರ ಗಮನ ಸೆಳೆದ VCSNEWZ ವರದಿಗೆ ಸ್ಪಂದಿಸಿದ ಶ್ರೀನಿವಾಸಪುರ ಪುರಸಭೆ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಗಮನಾರ್ಹವಾಗಿದೆ.
ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಸ್ಥಳೀಯರ ಆಗ್ರಹ!
ಅಕ್ಬರ್ ರಸ್ತೆಯಲ್ಲಿ ವಾಸಿಸುವಂತ ಕೆಲವು ನಿವಾಸಿಗಳು ತಮ್ಮ ಮನೆಗಳ ಕಸವನ್ನು ಪ್ಲಾಸ್ಟಿಕ್ ಕವರ್ಗಳಲ್ಲಿ ತುಂಬಿಕೊಂಡು ಬಂದು ಕೊಳವೆಬಾವಿ ಬಳಿ ಎಸೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುಡಿಯುವ ನೀರಿನ ಮೂಲದ ಸುತ್ತ ಇಂತಹ ನಿರ್ಲಕ್ಷ್ಯ ಸಲ್ಲದು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನು ಗುರುತಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ, ಮತ್ತೆ ಕಸ ಸಂಗ್ರಹವಾಗದಂತೆ ಪುರಸಭೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ಕುಡಿಯುವ ನೀರಿನ ಮೂಲದ ಸ್ವಚ್ಛತೆ ಕಾಪಾಡುವುದು ಪುರಸಭೆಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ.
ಪುರಸಭೆ ಸಿಬ್ಬಂದಿ ಹೆಚ್ಚರಿಕೆ
ಕುಡಿಯುವ ನೀರಿನ ಕೊಳವೆಬಾವಿ ಸುತ್ತಮುತ್ತ ಕಸದ ರಾಶಿ ಸ್ವಚ್ಚಮಾಡಿಸಿದ ಪುರಸಭೆ ಕಸ ನಿರ್ವಹಣಾ ಸುಪರವೈಸರ್ ರೂಪಾ ಮಾತನಾಡಿ ಕಸ ಸೇರಲು ಕಾರಣಕರ್ತರಾದವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿವುದು ಹಾಗೆ ಕಸ ಬೀಳುತಿದ್ದ ನಿವೇಶನದಲ್ಲಿ ಕಸ ಕಾಲಿ ಮಾಡಿಸಿದ್ದೇವೆ ನಿವೇಶನದ ಮಾಲಿಕರು ಕಸ ಹಾಕಲು ಅವಕಾಶ ನೀಡದಂತೆ ಆವರಣ ನಿರ್ಮಾಣ ಮಾಡಿಕೊಳ್ಳುವಂತೆ ಸೂಚಿಸಿದರು.
Trending
- vcsnewz ಸುದ್ದಿEffect:ಕೊಳವೆ ಬಾವಿ ಸುತ್ತ,ಕಸ ಸ್ವಚ್ಛ ಮಾಡಿದ ಶ್ರೀನಿವಾಸಪುರ ಪುರಸಭೆ!
- ಸೀಗರೇಟ್ ಸಾಲ ನೀಡದ ಅಂಗಡಿ ಮಾಲೀಕನ ಕೊಚ್ಚಿ ಕೊಲೆ!
- Municipal:34 ವರ್ಷ ದಿನಗೂಲಿ ಟೈಪಿಸ್ಟ್ ಆಗಿದ್ದ ಮಹಿಳೆ ಸೇವೆ ಖಾಯಂಗೆ ಹೈಕೋರ್ಟ್ ಸೂಚನೆ.
- ಸರ್ಕಾರಿ ಬಸ್ ನಲ್ಲಿ ಸೀಟು ಕಿತ್ತಾಟ ರೌಡಿಗಳಿಂದ ಮಹಿಳೆಯರ ಮೇಲೆ ಹಲ್ಲೆ!
- ಶ್ರೀನಿವಾಸಪುರ:ಪದವೀಧರ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ತ್ರಿಮೂರ್ತಿಗಳು ಒಂದಾದರ?
- ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
Tuesday, October 27



