ಶ್ರೀನಿವಾಸಪುರ: ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಹಾಗು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಲಪತಿ ಎಂಬ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ
ಪಡೆದಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿ ಮಲ್ಲಂಪಲ್ಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿರುತ್ತದೆ.
ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯಲ್ಲಿ ಬುಧವಾರ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಶಿವರಾತ್ರೇಶ್ವರ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಮಾಡಿದ ಜಮೀನುಗಳಲ್ಲಿ ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ಕಂಬ ನಟ್ಟು ಅರಣ್ಯ ಪ್ರದೇಶಕ್ಕೆ ಆವರಣ ನಿರ್ಮಾಣ ಮಾಡಿ ಗಿಡ ನಾಟಿ ಮಾಡಲು ಮುಂದಾಗಿರುತ್ತಾರೆ ಈ ಸಂದರ್ಭದಲ್ಲಿ ಸ್ಥಳೀಯ ರೈತರು ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ರೈತರ ನಡುವೆ ಸಂಘರ್ಷ ನಡೆದಿದೆ ಭೂಮಿಗೆ ಸಂಬಂಧಿಸಿದಂತೆ ಸಂತ್ರಸ್ತರೆಂದು ಹೇಳಲಾದ ಚಲಪತಿ, ವೆಂಕಟಸ್ವಾಮಿ, ರಾಮಚಂದ್ರಪ್ಪ ಮತ್ತು ಚಂದ್ರಪ್ಪ ಅವರು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ ಚಲಪತಿ ಎಂಬಾತ ಮಚ್ಚು ತಂದು ಹೈಡ್ರಾಮ ಸೃಷ್ಟಿಸಿ ಅರಣ್ಯ ಗಿಡಗಳನ್ನು ನಾಟಿ ಮಾಡುತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ನಡುವೆ ಮಾತಿನ ಚಕಮುಖಿ ನಡೆದಿದೆ ಅರಣ್ಯ ಅಧಿಕಾರಿಗಳು ಚಲಪತಿಗೆ ಬುದ್ದಿವಾದ ಹೇಳಿದರು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ಎಸಿಎಫ್ ಶಿವರಾತ್ರೇಶ್ವರ ತಿಳಿಸಿದ್ದಾರೆ ಘಟನೆಯಲ್ಲಿ ಅರಣ್ಯ ಇಲಾಖೆಯ ಡಿಆರ್ಎಫ್ಒ ನವೀನ್, ವಾಚರ್ ಸೋಮಶೇಖರ್ ಹಾಗೂ ಗಾರ್ಡ್ ಜಮೀರ್ ಅವರು ಗಾಯಗೊಂಡಿದ್ದು ಗಾಯಳುಗಳನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ.ಈ ಬಗ್ಗೆ ರಾಯಲ್ಪಾಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Trending
- ಶ್ರೀನಿವಾಸಪುರದಲ್ಲಿ ಅರಣ್ಯ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಯತ್ನ!
- vcsnewz ಸುದ್ದಿEffect:ಕೊಳವೆ ಬಾವಿ ಸುತ್ತ,ಕಸ ಸ್ವಚ್ಛ ಮಾಡಿದ ಶ್ರೀನಿವಾಸಪುರ ಪುರಸಭೆ!
- ಸೀಗರೇಟ್ ಸಾಲ ನೀಡದ ಅಂಗಡಿ ಮಾಲೀಕನ ಕೊಚ್ಚಿ ಕೊಲೆ!
- Municipal:34 ವರ್ಷ ದಿನಗೂಲಿ ಟೈಪಿಸ್ಟ್ ಆಗಿದ್ದ ಮಹಿಳೆ ಸೇವೆ ಖಾಯಂಗೆ ಹೈಕೋರ್ಟ್ ಸೂಚನೆ.
- ಸರ್ಕಾರಿ ಬಸ್ ನಲ್ಲಿ ಸೀಟು ಕಿತ್ತಾಟ ರೌಡಿಗಳಿಂದ ಮಹಿಳೆಯರ ಮೇಲೆ ಹಲ್ಲೆ!
- ಶ್ರೀನಿವಾಸಪುರ:ಪದವೀಧರ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ತ್ರಿಮೂರ್ತಿಗಳು ಒಂದಾದರ?
- ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
Wednesday, October 28



