- ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ
- ಓರ್ವ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ
- ನಾಗರಭಾವಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ನ್ಯೂಜ್ ಡೆಸ್ಕ್:ಕ್ಲಾಸ್ ನಲ್ಲಿ ಪಾಠ ಕೇಳುತಿದ್ದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಕರೆಸಿ ಜಗಳ ತಗೆದು ಚಾಕುವಿನಿಂದ ಇರಿದು ಹತ್ಯೆಗಯ್ಯಲಾಗಿದೆ ಎಂದು ಪೋಲಿಸರು ಹೇಳುತ್ತಾರೆ. ಬೆಂಗಳೂರಿನ ನಾಗರಬಾವಿಯ ಭಾಗದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಗರಬಾವಿಯ ಮಹೇಶ್ ಪಿಯು ಕಾಲೇಜಿನ ಬಿಕಾಂ ವಿದ್ಯಾರ್ಥಿ ಯೋಗೇಶ್ (19) ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದಲ್ಲದೆ, ನೃತ್ಯದಲ್ಲೂ ಆಸಕ್ತಿ ಹೊಂದಿದ್ದ ಎನ್ನುತ್ತಾರೆ ಎಂದಿನಂತೆ ಕಾಲೇಜಿಗೆ ಬಂದಿದ್ದ ಯೋಗೇಶ್ ತರಗತಿಯಲ್ಲಿ ಕ್ಲಾಸ್ ಕೇಳುತ್ತಿದ್ದಾಗ ಯಾರೋ ಫೋನ್ ಮಾಡಿ ಹೊರಗಡೆ ಬರುವಂತೆ ಕರೆದಿದ್ದಾರೆ. ಆತ ತನ್ನ ಸ್ನೇಹಿತನೊಂದಿಗೆ ಹೊರಗೆ ಬಂದಾಗ, ಅಲ್ಲಿ ಆತನ ಸಹಪಾಠಿ ಭುವನ್ ಮತ್ತು ಇತರ 5-6 ಯುವಕರ ಗುಂಪು ಕಾಯುತ್ತಿತ್ತು. ಯಾವುದೋ ಹಳೆಯ ವೈಷಮ್ಯದ ವಿಚಾರದಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ಆಗಿದೆ, ಈ ಸಂದರ್ಭದಲ್ಲಿ ನಾಲ್ಕೈದು ಜನರಿದ್ದ ಗುಂಪಿನಲ್ಲೊಬ್ಬ ಯೋಗೇಶ್ನ ಎದೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳುತ್ತಾರೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಯೋಗೀಶ್ನನ್ನು ಸ್ನೇಹಿತರು ತಕ್ಷಣ ಬೈಕ್ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳ ಗುಂಪಿನಲ್ಲಿ ಯೋಗೇಶ್ ಅವರ ಸಹಪಾಠಿಯೂ ಇದ್ದರು ಎಂದು ವರದಿಯಾಗಿದೆ. ಕಾಲೇಜಿನ ಹಿಂಭಾಗದ ಜಿಮ್ ಬಳಿ ಘಟನೆ ನಡೆದಿದ್ದು ಘಟನೆ ಕುರಿತು ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ನಡುವೆ ಗಲಾಟೆ ಉಂಟಾಗಲು ಕಾರಣವೇನು ಮತ್ತು ಚಾಕು ಇರಿತ ನಡೆಸಿದ ವಿದ್ಯಾರ್ಥಿ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



