ಶ್ರೀನಿವಾಸಪುರ:ಶ್ರೀನಿವಾಸಪುರದ ಶಾಸಕ ರಮೇಶಕುಮಾರ್ ಮಾತನಾಡುವುದಕ್ಕೂ ಅವರ ನಡವಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ ಎಂದು ಜೆಡಿಎಸ್ ಯುವ ಮುಖಂಡ ಹಾಗು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಯುವ ಜನತಾದಳದ ಕಾರ್ಯಕರ್ತರ ಯುವಘರ್ಜನೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರಮೇಶ್ ಕುಮಾರ್ ನಡವಳಿಕೆಯಂತೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಮಾಣ ಮಾಡಿದ್ದರು ಆದರೆ ಅವರು ಹರಸಿದ್ದು ಕೊಳಚೆ ನೀರು ಹೇಳುವುದು ಮಾತ್ರ ಶುದ್ಧವಾದ ಮಾತಾಗಿರುತ್ತದೆ ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಆದರೆ ಅವರನ್ನು ಕರೆತರುವಲ್ಲಿ ಮುಂಚೂಣಿಯಲ್ಲಿರುವ ರಮೇಶ್ ಕುಮಾರ್ ಸತತವಾಗಿ ಎರಡು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿದ್ದವರು ಇನ್ನೂ ಕೆಲ ಕಾಂಗ್ರೆಸ್‌ನ ಶಾಸಕರಿದ್ದರು, ಸಿದ್ದರಾಮಯ್ಯ ಬಂದು ಅಭಿವೃದ್ಧಿ ಮಾಡುವ ಹಾಗಿದ್ದರೆ ಇದುವರಿಗೂ ಇವರೇನು ಮಾಡ್ತಾ ಇದ್ದರು ಯಾಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿಶ್ರೀನಿವಾಸಪುರದ ಮಾವಿನ ಬೆಳೆಗಾರರು ಸಮಸ್ಯಯಲ್ಲಿದ್ದಾಗ…
Author: Srinivas_Murthy
ನ್ಯೂಜ್ ಡೆಸ್ಕ್:ನಟಸಿಂಹ ಬಾಲಕೃಷ್ಣ ನಟಿಸಿದ ವೀರಸಿಂಹರೆಡ್ಡಿ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 100 ಕೋಟಿಗೂ ಹೆಚ್ಚು ಹಣ ಬಾಚಿದಿಯಂತೆ.ಬಾಲಯ್ಯ ವಿಶ್ವರೂಪ ನಟನೆಯ ವೀರಸಿಂಹ ರೆಡ್ಡಿ ಸಿನಿಮಾ 4 ದಿನಗಳ ಕಲೆಕ್ಷನ್ ಸಿನಿ ಪಂಡಿತರಿಗೆ ಅಚ್ಚರಿ ಮೂಡಿಸಿದೆ. ಬಾಲಯ್ಯನ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ವೀರಸಿಂಹ ರೆಡ್ಡಿ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನಾಲ್ಕೇ ದಿನದಲ್ಲಿ 100 ಕೋಟಿ ಗಡಿಯನ್ನು ದಾಟಿದಿಯಂತೆ.ನಟ ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಚಿತ್ರ ಜನವರಿ 12ರಂದು ರಿಲೀಸ್ ಆಗಿದ್ದು ಚಿತ್ರ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳು ಬಾಲಯ್ಯ ವಿಶ್ವರೂಪವನ್ನು ಬೆಳ್ಳಿತೆರೆಯಲ್ಲಿ ನೋಡಿ ಹುಬ್ಬೇರಿಸುತ್ತಿದ್ದಾರೆ.ಬಾಲಕೃಷ್ಣ ಅವರ 107ನೇ ಚಿತ್ರವಾಗಿದ್ದು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಬಹಳ ಪ್ರತಿಷ್ಠೆಯಿಂದ ತಯಾರಾದ ಸಿನಿಮಾದಲ್ಲಿ ಬಾಲಯ್ಯ ಜೊತೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ.ಕನ್ನಡ ಸ್ಟಾರ್ ದುನಿಯಾ ವಿಜಯ್, ಹನಿ ರೋಸ್,ವರಲಕ್ಷ್ಮಿ ಶರತ್ ಕುಮಾರ್,ಮಲಯಾಳಂ ನಟ ಲಾಲ್,ನವೀನ್ ಚಂದ್ರ,ಮುರಳಿ ಶರ್ಮಾ,ಈಶ್ವರಿ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ವೀರಸಿಂಹ ರೆಡ್ಡಿ ಚಿತ್ರ…
ನ್ಯೂಜ್ ಡೆಸ್ಕ್:ವೇಗದ ಜೀವನದ ಬೆನ್ನುಹತ್ತಿದಂತವರು ಅನಿವಾರ್ಯ ಸಂದರ್ಬಗಳಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಜೀವನ ಮಾಡಲು ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಆದರೆ ಅದನ್ನು ಬಳಸಿಕೊಂಡಾಗ ಅದರ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ ಅದರಲ್ಲೂ ಸಂಬಳಗಾರರು ಮನೆಬಾಡಿಗೆ,ಇಎಂಐ,ಕರೆಂಟ್ ಬಿಲ್,ಗ್ಯಾಸ್ ಬಿಲ್,ವಾಟರ್ ಬಿಲ್, ಪೇಪರ್ ಬಿಲ್, ಡಿಟಿಎಚ್ ಬಿಲ್ ಹೀಗೆ ಹತ್ತಾರು ಪಾವತಿಗಳ ನಡುವೆ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮರೆತುಹೊಗಿರುತ್ತಾರೆ ಅದೇ ರೀತಿ, ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಕ್ರೆಡಿಟ್ ಕಾರ್ಡ್ ಪಾವತಿಯ ದಿನಾಂಕವನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಅಂತಿಮ ದಿನಾಂಕದೊಳಗೆ ಮಾಡಲು ಸಾಧ್ಯವಾಗದಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ.ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅವರಿಗೆ ಪರಿಹಾರ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ.ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ವಿತರಕರು 3 ದಿನಗಳವರೆಗೆ ಕ್ರೆಡಿಟ್ ಕಾರ್ಡ್ ಪಾವತಿಯ ಅಂತಿಮ ದಿನಾಂಕ ತಪ್ಪಿದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಸ್ಪಷ್ಟಪಡಿಸಿದೆ 3 ದಿನಗಳ…
ಕೋಲಾರ: ಕೋಲಾರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ(SP)ನಾರಾಯಣ ಅವರನ್ನು ವರ್ಗಾವಣೆ ಮಾಡಲಾಗಿದೆ, ಇಲ್ಲಿ ಸೇವೆ ಸಲ್ಲಿಸಿದ್ದ ಡಿ.ದೇವರಾಜ್ ಅವರನ್ನು ಇಲ್ಲಿಂದ ವರ್ಗಾಯಿಸಲಾಗಿದ್ದು ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಹೇಳಲಾಗಿದೆ.ನಾರಯಣ ಅವರು ಗುಪ್ತಚರ ಇಲಾಖೆ ಎಸ್ಪಿಯಾಗಿದ್ದವರು. ಕೋಲಾರ ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿ ಎಂ.ನಾರಾಯಣ ಶುಕ್ರವಾರ ಸಂಜೆ ನಿರ್ಗಮಿತ ಎಸ್ಪಿ ಡಿ.ದೇವರಾಜ್‌ರಿಂದ ಅಧಿಕಾರ ಸ್ವೀಕರಿಸಿದರು.ಒಟ್ಟು 6 ಐಪಿಎಸ್ ಅಧಿಕಾರಿಗಳ ವರ್ಗಾವಣೆರಾಜ್ಯ ಸರ್ಕಾರ ಇತ್ತೀಚೆಗೆ 53 ಐಪಿಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಿಸುವುದರ ಜೊತೆಗೆ ಬಡ್ತಿ ನೀಡಿತ್ತು. ಇದೀಗ 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಕೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.ಎಂ.ನಾರಾಯಣ, ಪೊಲೀಸ್ ವರಿಷ್ಠಾಧಿಕಾರಿ, ಕೋಲಾರವೈ.ಎಸ್.ರವಿಕುಮಾರ್, ಡಿಐಜಿಪಿ, ನಿರ್ದೇಶಕ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದಿವ್ಯಾ ವಿ.ಗೋಪಿನಾಥ್, ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರುಆರ್.ಚೇತನ್, ಕಲಬುರಗಿ ನಗರ ಪೊಲೀಸ್ ಕಮಿಷನರ್ಹನುಮಂತರಾಯ, ಪೊಲೀಸ್ ವರಿಷ್ಠಾಧಿಕಾರಿ, ಗುಪ್ತದಳ ಹಾವೇರಿಡಾ. ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ, ಹಾವೇರಿವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆಈ ಹಿಂದೆ 4 ಹಿರಿಯ ಐಪಿಎಸ್…
ಕೋಲಾರ: ಶ್ರೀನಿವಾಸಪುರ ಕೇಂದ್ರವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಮಾವಿನ ಬೆಳೆಗೆ ಶಾಶ್ವತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಶ್ರೀನಿವಾಸಪುರದಲ್ಲಿ ಮಾವು ಆಧಾರಿತ ಕೈಗಾರಿಗಳನ್ನು ಸ್ಥಾಪಿಸಲು ಸರ್ಕಾರಗಳು ಉತ್ತೇಜನ ನೀಡಬೇಕುಮಾವು ಕೈಗಾರಿಕಾ ಪ್ರದೇಶ (MANGO INDUSTRIAL HUB) ಎಂದು ಘೋಷಿಸಬೇಕು ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದರು ಅವರು ಕೋಲಾರ ಪತ್ರಕರ್ತರ ಭವನದಲ್ಲಿ ಮಾವು ಬೆಳಗಾರರ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾವು ಬೆಳಗಾರರ ಸಮಸ್ಯೆಗಳು ಮತ್ತು ಪರಿಹಾರಗಳು ಕುರಿತಾಗಿ ರಾಜ್ಯ ಮಟ್ಟದ ದುಂಡು ಮೇಜಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಸರ್ಕಾರಗಳು ಮಾವುಬೆಳೆಯ ವಿಚಾರದಲ್ಲಿ ಅನುಸರಿಸಿಕೊಂಡ ಬಂದ ಉದಾಸಿನತೆ ಸಾಕು ಮಾವುಬೆಳೆಗಾರನ ಕೈಹಿಡಿಯುವಂತ ಕಾರ್ಯಕ್ರಮಗಳನ್ನು ರೂಪಿಸಬೇಕು ಇದುವರಿಗೂ ನಡೆಸಿದ ಮಾವು ಮಹಾಮಂಡಳಿಗೆ ಪ್ರತಿವರ್ಷ ಕನಿಷ್ಠ 500 ಕೋಟಿ ಅನುಧಾನ ಮೀಸಲಿಡಬೇಕೆಂದು ಮಾವು ಬೆಳೆಗಾರರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಒತ್ತಾಯಿಸಿದ್ದಾರೆ.ಮಾವು ಬೆಳೆಗಾರರು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಈ ಕುರಿತು…
ಶ್ರೀನಿವಾಸಪುರ: ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಜ.12ರಂದು ಅವರೇಕಾಯಿ ಸಮೇತ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತಸಂಘ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದೆ.ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ನಡೆದಂತ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಆದಾಯಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಅವರೆಕಾಯಿ ಮಂಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿ ವರ್ಷ ಅವರೇಕಾಯಿ ಸಿಸನ್ ನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಅವರೆ ಮಂಡಿ ದಲ್ಲಾಲರು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ ಅತ್ತ ರೈತರಿಗೂ ಮೋಸಮಾಡುತ್ತ ಇತ್ತ ಸರ್ಕಾರಕ್ಕೂ ವಂಚಿಸುತ್ತಿದ್ದಾರೆ ಎಂದು ದೂರಿದರು.ಬಹುತೇಕ ದಲ್ಲಾಲರು ಕೃಷಿ ಉತ್ಪನ್ನ ಮಾರುಕಟ್ಟೆ ಪರವಾನಗಿ ಪಡೆದಿಲ್ಲಬಹುತೇಕ ಅವರೆ ಮಂಡಿ…
ಕೋಲಾರ:ಕೋಲಾರ ಕ್ಷೇತ್ರದ ಮುಖಂಡರು,ಕಾರ್ಯಕರ್ತರ ಪ್ರೀತಿ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಿಲ್ಲ,ಹಾಗಾಗಿ ನಾನು ಮುಂಬರುವಂತ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆಮಾಡುತ್ತೇನೆ,ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಮೋದನೆ ತೆಗೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದೆ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.ಅವರು ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ,ರಮೇಶ್ ಕುಮಾರ್, ಕೋಲಾರದ ಹಾಲಿ ಶಾಸಕ ಶ್ರೀನಿವಾಸಗೌಡ, ಕೃಷ್ಣಬೈರೇಗೌಡ ಸೇರಿದಂತೆ ಹಲವಾರು ಶಾಸಕರು ಮುಖಂಡರು ಸೇರಿದಂತೆ ಬಹುತೇಕ ಎಲ್ಲರೂ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಮುಖ್ಯ ನಂತರ ನಾಯಕರುಗಳು ಜನರ ಆಶೀರ್ವಾದ ಇದ್ದರೆ ನಾವು ಉಳಿಯಬಹುದು. ನಾನು ಕೆಲ ದಿನಗಳ ಹಿಂದೆ ಕೋಲಾರದ ದೇವಸ್ಥಾನ ಮಸೀದಿ ಚರ್ಚ್‌ಗೆ ಭೇಟಿ ಮಾಡಿದ್ದಾಗ ಇಲ್ಲಿನ ಜನತೆ ಸಹ ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು…
ನ್ಯೂಜ್ ಡೆಸ್ಕ್: ಕೋಲಾರದಲ್ಲಿ ಸೋಮವಾರ ಆಯೋಜಿಸಿರುವ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ದಿಸುವ ಕುರಿತಾಗಿ ಶಕ್ತಿ ಪ್ರದರ್ಶನದ ಸಭೆಗೆ ಮಾಜಿ ಸ್ಪೀಕರ್ ರಮೇಶಕುಮಾರ್ ಶ್ರೀನಿವಾಸಗೌಡ ನೇತೃತ್ವದಲ್ಲಿ ಭರದ ಸಿದ್ದತೆ ನಡೆಯುತ್ತಿದ್ದರೆ ಅತ್ತ ಕೋಲಾರದ ಸಭೆಗೆ ಬರವುದಕ್ಕೂ ಮುಂಚಿತವಾಗಿ ಸಿದ್ದರಾಮಯ್ಯ ಕೋಲಾರದ ಮಾಜಿ ಸಂಸದ ಮುನಿಯಪ್ಪ ಅವರ ಬೆಂಗಳೂರಿನ ಸಂಜಯ್ ನಗರದ ಮನೆಗೆ ತೆರಳಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.ಈ ಮೂಲಕ ಮಾಜಿ ಸಂಸದ ಮುನಿಯಪ್ಪನವರ ಮುನಿಸು ಶಮನ ಮಾಡುವ ಪ್ರಯತ್ನದ ಮೂಲಕ ಕೋಲಾರದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಂಡರ ನಡುವೆ ಯಾವುದೆ ಭಿನ್ನಮತ ಇಲ್ಲ ಎಂಬ ಸಂದೇಶ ರವಾನಿಸಿ ಕೋಲಾರಕ್ಕೆ ಬರುತ್ತಿರುವುದು ಸಿದ್ದರಾಮಯ್ಯ ಕೋಲಾರದಲ್ಲಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನುವಂತಾಗಿದೆ.ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಮಾಜಿ ಸಂಸದ,ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ,ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ನಾರಾಯಣ ಸ್ವಾಮಿ,ವಿಧಾನಪರಿಷತ್ ಸದಸ್ಯ…
ಶ್ರೀನಿವಾಸಪುರ: ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ತೆರಳಲು ಶ್ರೀನಿವಾಸಪುರದ ಓಂ ಶಕ್ತಿ ಮಾಲಧಾರಿ ಭಕ್ತರಿಗೆ ಸಮಾಜ ಸೇವಕ ಗುಂಜೂರು ಶ್ರೀನಿವಾಸರೆಡ್ದಿ ಬಸ್ಸುಗಳನ್ನು ವ್ಯವಸ್ಥೆ ಮಾಡಿರುತ್ತಾರೆ.ಇದುವರಿಗೂ ಸಾವಿರಾರು ಭಕ್ತರು ನೂರಾರು ಬಸ್ಸುಗಳಲ್ಲಿ ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿ ಅಮ್ಮನ ದೇವಾಲಯಕ್ಕೆ ಹೋಗಿಬರಲು ತಾಲೂಕಿನ ವಿವಿಧ ಭಾಗದ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಿರುವುದಾಗಿ ಗುಂಜೂರು ಶ್ರೀನಿವಾಸರೆಡ್ದಿ ಹೇಳಿದರು. ಭಕ್ತಾಧಿಗಳು ತಮಿಳುನಾಡಿನ ಮೆಲ್ ಮರವತ್ತೂರು ಓಂ ಶಕ್ತಿಅಮ್ಮನ ದೇವಾಲಯಕ್ಕೆ ತೆರಳುವ ಸಂದರ್ಭದಲ್ಲಿ ಶುಭಹಾರೈಸಿ ಮಾತನಾಡಿದ ಅವರು ಭಕ್ತರಿಗೆ ಅವಕಾಶ ಕಲ್ಪಿಸಲು ಜನರೆ ನನಗೆ ಪ್ರೇರಣೆ ಎಂದ ಅವರು ವ್ರತಾಚರಣೆ ನಮ್ಮ ಸಂಸೃತಿಯ ಪ್ರತಿಕ,ಓಂ ಶಕ್ತಿ ಮಾಲಧಾರಿ ವ್ರತಾಚರಣೆ ಮಾಡುವಂತ ಭಕ್ತರನ್ನು ಪಕ್ಷ ಜಾತಿ ಬೇದ ಇಲ್ಲದೆ ಲೋಕಕಲ್ಯಾಣಾರ್ಥವಾಗಿ ಎಲ್ಲರೀಗೂ ಉಚಿತವಾಗಿ ಬಸ್ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಿದರು.ಜನವರಿ ಮುಂದಿನ ವಾರದ ತನಕ ಬಸ್ ವ್ಯವಸ್ಥೆ ಇರುವುದಾಗಿ ತಿಳಿಸಿದರು.ಈ ಸಂದರ್ಬದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿ ರಾಜೇಂದ್ರಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ ಶ್ರೀರಾಮ್,ಯಲ್ದೂರು…
ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಪ್ರಮುಖ ರಸ್ತೆಯಾಗಿರುವ ಎಂ.ಜಿ.ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅವರೇಕಾಯಿ ಮಂಡಿಗಳ ವಹಿವಾಟು ನಡೆಸುತ್ತಿದ್ದು ವಾಹನಗಳು,ಅಂಬುಲೆನ್ಸ್ ಹಾಗೂ ಶಾಲಾ ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು ಅವರೆಮಂಡಿ ವಹಿವಾಟನ್ನು ಎ ಪಿ ಎಂ ಸಿ ಮಾರುಕಟ್ಟೆಗೆ ವರ್ಗಾಯಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಪುರಸಭೆ ಕಚೇರಿಯ ಮುಂದೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಕೋಲಾರ ಜಿಲ್ಲಾಧ್ಯಕ್ಷ ಸುಬ್ರಮಣಿ ಮಾತನಾಡಿ ಅವರೆ ಮಂಡಿ ವ್ಯಾಪರದಿಂದ ಮೂರನಾಲ್ಕು ಜನರಿಗೆ ಅನಕೂಲವಾಗಿದ್ದಾರೆ ನೂರಾರು ಜನರಿಗೆ ತೊಂದರೆ ಆಗಿದೆ ಎಂದು ದೂರಿದರು. ರಾಜಕೀಯ ಲಾಭಕ್ಕಾಗಿ ಅವರೆಮಂಡಿ ದಲ್ಲಾಲರಿಗೆ ರಸ್ತೆಯಲ್ಲಿ ವಹಿವಾಟು ನಡೆಡಸಲು ಅವಕಾಶ ನೀಡಿರುವಂತ ರಾಜಕೀಯ ವ್ಯವಸ್ಥೆ ವಿರುದ್ದ ತೀವ್ರಧಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು ಅಧಿಕಾರಿಗಳ ನಿರ್ಲಿಪ್ತತೆಯಿಂದ ವ್ಯವಸ್ಥೆ ಹಾಳಾಗುತ್ತಿರುವುದು ಪಟ್ಟಣದ ಅಭಿವೃದ್ಧಿಗೆ ಮಾರಕ ಎಂದರು.ಚಿಂತಾಮಣಿ ರಸ್ತೆ ವಿಳಂಬಕ್ಕೂ ಆಕ್ರೋಶಎಂ.ಜಿ.ರಸ್ತೆಯ ಇಂದಿರಾ ಭವನ್ ವೃತ್ತದಿಂದ ರಾಜಾಜಿ ರಸ್ತೆಯ…


