ಶ್ರೀನಿವಾಸಪುರ:ಶ್ರೀನಿವಾಸಪುರದ ಶಾಸಕ ರಮೇಶಕುಮಾರ್ ಮಾತನಾಡುವುದಕ್ಕೂ ಅವರ ನಡವಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ ಎಂದು ಜೆಡಿಎಸ್ ಯುವ ಮುಖಂಡ ಹಾಗು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಯುವ ಜನತಾದಳದ ಕಾರ್ಯಕರ್ತರ ಯುವಘರ್ಜನೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರಮೇಶ್ ಕುಮಾರ್ ನಡವಳಿಕೆಯಂತೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಮಾಣ ಮಾಡಿದ್ದರು ಆದರೆ ಅವರು ಹರಸಿದ್ದು ಕೊಳಚೆ ನೀರು ಹೇಳುವುದು ಮಾತ್ರ ಶುದ್ಧವಾದ ಮಾತಾಗಿರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಆದರೆ ಅವರನ್ನು ಕರೆತರುವಲ್ಲಿ ಮುಂಚೂಣಿಯಲ್ಲಿರುವ ರಮೇಶ್ ಕುಮಾರ್ ಸತತವಾಗಿ ಎರಡು ಬಾರಿ ಶಾಸಕರಾಗಿದ್ದರು ಮಂತ್ರಿಯಾಗಿದ್ದವರು ಇನ್ನೂ ಕೆಲ ಕಾಂಗ್ರೆಸ್ನ ಶಾಸಕರಿದ್ದರು, ಸಿದ್ದರಾಮಯ್ಯ ಬಂದು ಅಭಿವೃದ್ಧಿ ಮಾಡುವ ಹಾಗಿದ್ದರೆ ಇದುವರಿಗೂ ಇವರೇನು ಮಾಡ್ತಾ ಇದ್ದರು ಯಾಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ
ಶ್ರೀನಿವಾಸಪುರದ ಮಾವಿನ ಬೆಳೆಗಾರರು ಸಮಸ್ಯಯಲ್ಲಿದ್ದಾಗ ಸ್ಪಂದಿಸಿ ಅವರ ಕಷ್ಟಗಳನ್ನು ಅರಿತು ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಅವರನ್ನು ಕೈ ಹಿಡಿದು ಕಾಪಾಡಿ ಸಮಸ್ಯೆಗಳನ್ನು ಬಗೆಹರೆಸಿದ್ದರು,ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಕಣ್ಣಿರು ಒರೆಸಿದ್ದು ಕುಮಾರಸ್ವಾಮಿ,ಅಷ್ಟೆ ಅಲ್ಲ ರೈತರ ಸಾಲಮನ್ನಾ ಮಾಡಿ ಅವರನ್ನು ಋಣ ಮುಕ್ತರನ್ನಾಗಿಸಿ ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಕಾಂಗ್ರೆಸ್ ನವರು ಏನು ಅಂದರೆ ರಾಹುಲ್ ಗಾಂಧಿಯವರನ್ನು ಜೋಡೋ ಯಾತ್ರೆ ಮಾಡಿಸಿದ್ದೆ ದೊಡ್ದ ಸಾಧನೆ ಎಂದು ಬಿಂಬಸಿಕೊಂಡು ಹೋರಟಿದ್ದಾರೆ.
ಇಷ್ಟೆಲ್ಲಾ ಮಾತನಾಡುತ್ತಿರುವ ಕಾಂಗ್ರೆಸ್ ನವರು ರಾಜ್ಯದ ಜನತೆಗೆ ನೀಡಿರುವ ಆಶ್ವಾಸನೆ ಏನು ಯಾವತ್ತಾದರು ನಾವು ಇಂತಹ ಕಾರ್ಯಕ್ರಮ ಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರ ಆದರೆ ನಾವು ಜೆಡಿಎಸ್ ನವರು ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾಡಿನ ಜನತೆಗೆ ಇಂತಹುದೆ ಕಾರ್ಯಕ್ರಮ ನೀಡುತ್ತೇವೆ ಎಂದು ಮಾತು ಕೊಟ್ಟಿರುವ ಏಕೈಕ ವ್ಯಕ್ತಿ ಕುಮಾರಣ್ಣ ಎಂದರು.
ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿರುವ ಡಿಸಿಸಿ ಬ್ಯಾಂಕ್.
ಕೋಲಾರದ ಡಿಸಿಸಿ ಬ್ಯಾಂಕ್ ರೈತರನ್ನು ಕರೆದು ಕರೆದು ಸಾಲ ನೀಡುತ್ತಿದೆ ಈ ಮೂಲಕ ರೈತರನ್ನು ಮತ್ತೆ ಸಾಲಗಾರರನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.ಕುಮಾರಣ್ಣ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ.
ನಂದಿನಿ ನಮ್ಮ ರೈತರ ಹೆಮ್ಮೆ
ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಅದು ಯಾರಪ್ಪನ ಮನೆ ಆಸ್ತಿಯಲ್ಲ, ಅಮುಲ್ಗೆ ನಂದಿನಿಯನ್ನು ಸೇರಿಸುತ್ತೇವೆ ಎಂದರೆ ಅದು ಯಾರಪ್ಪನ ಆಸ್ತಿ ಎಂದು ಪ್ರಶ್ನಿಸಿದ ಅವರು.ಅದನ್ನು ಅಮುಲ್ ಜೋತೆ ಸೇರಿಸುವುದಾಗಿ ಅಮಿತ್ ಶಾ ಹೇಳುತ್ತಾರೆ ಅದನ್ನು ಬಿಟ್ಟು ಹೋಗಲು ಬಿಡುವುದಿಲ್ಲ ಎಂದ ಅವರು ಕೋಲಾರ ಸಿಲ್ಕ್-ಮಿಲ್ಕ್-ಚಿನ್ನಕ್ಕೆ ಖ್ಯಾತಿ ಪಡೆದುಕೊಂಡಿದೆ ಅವರು ಮನೆ ಮನೆಗೂ ಎರಡು ಹಸು ಕಟ್ಟಿಕೊಂಡು ಜೀವನ ಮಾಡುತ್ತಿರುವ ರೈತಾಪಿ ಕುಟುಂಬದ ಆಸ್ತಿ ನಂದಿನಿ ಇಲ್ಲಿನ ಜನರ ಶ್ರಮ ಎಂದರು.
ಬಿಜೆಪಿ ಯವರು ಮಾತೇತ್ತಿದರೆ ಡಬಲ್ ಎಂಜಿನ್ ಸರಕಾರ ಇದೆ ಎನ್ನುತ್ತಾರೆ ಅವರಿಂದ ಜಿಲ್ಲೆಗೆ ಕೊಡುಗೆ ಏನು ಎಂದ ಅವರು ಮುಂದೆ ಬಿಜೆಪಿ ಸರಕಾರ ಬಂದರೆ ಇಂತಹ ಕಾರ್ಯಕ್ರಮ ಜಾರಿಗೆ ತರುತ್ತೇವೆ ಎಂದು ಎಲ್ಲೂ ಹೇಳದ ಅವರು ಚುನಾವಣೆಗೆ ಜನರ ಮುಂದೆ ಏನೆಂದು ಹೇಳುತ್ತಾರೆ ಕುಮಾರಸ್ವಾಮಿ ಪಂಚರತ್ನ ಯೋಜನೆಗಳನ್ನು ರೂಪಿಸಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಅಂತಹ ಶಕ್ತಿ ಹೊಂದಿರುವ ಏಕೈಕ ಪಕ್ಷ ಜೆಡಿಎಸ್ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ವಿಧಾನಪರಿಷತ್ ಸದಸ್ಯ ತೂಪಲ್ಲಿಚೌಡರೆಡ್ಡಿ, ಕೆ.ಜಿಎಫ್ ಅಭ್ಯರ್ಥಿ ಡಾ.ರಮೇಶ್ ಬಾಬು, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ, ಮುಖಂಡರಾದ ವಕ್ಕಲೇರಿ ರಾಮು,ಭೀಮಗುಂಟಪಲ್ಲಿಶಿವಾರೆಡ್ದಿ,ಗೀರಿಶ್ ಮುಂತಾದವರು ಇದ್ದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13