ಶ್ರೀನಿವಾಸಪುರ: ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಾಗಿ (MANAGER) ಶ್ರೀನಿವಾಸಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ, ವರ್ಗಾವಣೆಯಾಗಿರುವ ಪಿ. ಭರತ್ ಕುಮಾರ್ ರೆಡ್ಡಿ ಅವರಿಗೆ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ತಮ್ಮ ಕರ್ತವ್ಯನಿಷ್ಠೆ, ಸರಳ ನಡೆ, ಗ್ರಾಹಕರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಬ್ಯಾಂಕ್ನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಬ್ಯಾಂಕ್ಗೆ ಬರುವ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹರಿಸಲು ಅವರು ಪ್ರಯತ್ನಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷವಾಗಿ ಗ್ರಾಹಕರನ್ನು ಆಪ್ಯಾಯತೆಯಿಂದ ಮಾತಾನಾಡುತ್ತ ಬ್ಯಾಂಕಿಂಗ್ ಸೇವೆಗಳ ಕುರಿತು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುತ್ತಿದ್ದರು. ಅವರ ಸೇವಾ ಅವಧಿಯಲ್ಲಿ ಯೂನಿಯನ್ ಬ್ಯಾಂಕ್ ಶ್ರೀನಿವಾಸಪುರದ ಶಾಖೆ ಹಾಗು ಗ್ರಾಹಕರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದು ಮಟ್ಟಕನಸಂದ್ರನಾರಯಣಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ಗಾವಣೆಯಾಗದ ಬ್ಯಾಂಕ್ ವ್ಯವಸ್ಥಾಪಕ ಪಿ. ಭರತ್ ಕುಮಾರ್ ರೆಡ್ಡಿ, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ವರ್ಗಾವಣೆ ಸೇವೆಯ ಒಂದು ಭಾಗವಾಗಿದ್ದು, ಶ್ರೀನಿವಾಸಪುರದಲ್ಲಿ ದೊರೆತ ಪ್ರೀತಿ ಮತ್ತು ಆತ್ಮೀಯತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿ,ಹೇಮವಾಣಿ,ಹರಿ.ಮನೋಜ್,ಪಣಿಬಾಬು,ಬೈರಾರೆಡ್ಡಿ,ಗಂಗಾ,ಸುಮಾ ರಘುಪ್ರಕಾಶ್ ಹಾಗು ನೂತನ ವ್ಯವಸ್ಥಾಪಕ ಗಂಗಾಶೀರಿಷ ಜೋತೆಗೆ ಗ್ರಾಹಕರು, ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ವರ್ಗಾವಣೆಯಾದ ವ್ಯವಸ್ಥಾಪಕರಿಗೆ ಶುಭ ಹಾರೈಸಿ, ಮುಂದಿನ ಸೇವಾ ಬದುಕು ಯಶಸ್ವಿಯಾಗಲಿ ಎಂದು ಹಾರೈಸಿದರು.ಇದೆ ಸಂದರ್ಭದಲ್ಲಿ ನೂತನ ಮೇನೆಜರ್ ಗಂಗಾಶಿರಿಷ ಅವರಿಗೆ ಸ್ವಾಗತ ಕೋರಿದರು.
Trending
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
- ಚಿಂತಾಮಣಿ ಪಾಲಿಟೆಕ್ನಿಕ್ ಮೈದಾನದಲ್ಲಿ ದಸರಾ ಉತ್ಸವದ ವೈಭವ!
- ಶ್ರೀನಿವಾಸಪುರ:ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಸಿ.ಟಿ. ರವಿ ಚಾಲನೆ
- ಚಿಂತಾಮಣಿ:ಲಾಂಗ್ ನಿಂದ ಕೊಚ್ಚಿ ವಿವಾಹಿತ ಮಹಿಳೆ ಬರ್ಬರ ಹತ್ಯೆ !
- ಹಣ್ಣಿನ ಹೆಸರಿನಿಂದ ಆರಂಭವಾಗುವ ಅಪರೂಪದ ಗ್ರಾಮ ‘ಪಣಸಮಾಕಲಹಳ್ಳಿ’!
- ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಬಿಜೆಪಿಗೆ ಸೇರುತ್ತಾರ?
- ಪುಲಗೂರುಕೋಟೆಯಲ್ಲಿ ಖತರ್ನಾಕ್ ಕಳ್ಳರ ಹಾವಳಿ!
Friday, October 16



