Author: Srinivas_Murthy

ಶ್ರೀನಿವಾಸಪುರ:ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ MLA ಟಿಕೆಟ್ ಆಕಾಂಕ್ಷಿಯಾಗಿರುವ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗು ಮಾಜಿ ಸಂಸದ ಮುನಿಯಪ್ಪನವರ ಆಪ್ತವಲಯದಲ್ಲಿ ಗುರ್ತಿಸಿಕೊಂಡಿರುವ ದಳಸನೂರು ಗೋಪಾಲಕೃಷ್ಣ ಈಗಿನಿಂದಲೆ ಫುಲ್ ಆಕ್ಟಿವ್ ಆಗಿದ್ದಾರೆ ಈಗಾಗಲೆ ಕ್ಷೇತ್ರಾದ್ಯಂತ ಟೂರ್ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದು 12 ರಂದು ಶನಿವಾರ ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.ದಳಸನೂರು ಗೋಪಾಲಕೃಷ್ಣ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕತ್ವ ಬದಲಾದರು ಪಕ್ಷದಲ್ಲಿ ನಿಷ್ಠಾವಂತ ಮುಖಂಡನಾಗಿ ಕಳೆದ 4 ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಗುರ್ತಿಸಿಕೊಂಡಿದ್ದಾರೆ.ಕಳೆದ ಲೊಕಸಭೆ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಕೆ ಎಚ್ ಮುನಿಯಪ್ಪನವರಿಗೆ ವ್ಯಕ್ತಪಡಿಸಿಕೊಂಡು ಹಾಲಿ ಶಾಸಕ ರಮೇಶ್ ಕುಮಾರ್ ಅವರಿಂದ ಅಂತರ ಕಾಪಾಡಿಕೊಳ್ಳುವ ಮೂಲಕ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ರೆಬಲ್ ಸ್ಟಾರ್‍ ಆಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ಕಾರ್ಯಕರ್ತರ ಸಭೆ:ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿ ಕಾರ್ಯಕರ್ತರ ಸಭೆ ನಡೆಸುತ್ತಿರುವುದಾಗಿ ಮಾಧ್ಯಮದವರೊಂದಿಗೆ ಮಾತನಾಡಿ ತಿಳಿಸಿದ ಅವರು 1994…

Read More

ಶ್ರೀನಿವಾಸಪುರ: ಕೌಟಂಬಿಕ ಕಲಹದ ನ್ಯಾಯ ಪಂಚಾಯಿತಿಯಲ್ಲಿ ಮಾತನಾಡಿದ್ದ ವ್ಯಕ್ತಿ ಅನುಮಾನ್ಪದವಾಗಿ ಮೃತಪಟ್ಟಿರುತ್ತಾನೆ ಮೃತನ ಕಡೆಯವರು ಎದುರಾಳಿ ಮಾಡಿದ ಹಿನ್ನಲೆಯಲ್ಲಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಗೌವವಿಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕೋಡಿಪಲ್ಲಿ ಪಂಚಾಯಿತಿಯ ಕರಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ.ಮೃತ ವ್ಯಕ್ತಿಯನ್ನು ವೆಂಕಟರವಣಪ್ಪ (55) ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿಯ ಮೊಮ್ಮಗಳ ಗಂಡ ಗಣೇಶನೆ ವೆಂಕಟರಮಣಪ್ಪನನ್ನು ಕೊಲೆಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.ಕೊಲೆ ವಿಷಯ ಹೊರಬಿಳುತ್ತಿದ್ದಂತೆ ಮೃತನ ಮನೆಯವರು ಮೊಮ್ಮಗಳ ಗಂಡ ಗಣೇಶನ ಸೋದರ ಮಾವ ಲಚ್ಚನ್ನನ ಮನೆಗೆ ಬೆಂಕಿ ಹಾಕಿದ್ದು ಮನೆ ಹಾಗು ಪೀಠೋಪಕರಣಗಳು ಹಾಗೂ ಬಟ್ಟೆಗಳು ಭಸ್ಮವಾಗಿದೆಮೃತನ ಮೊಮ್ಮಗಳಾದ ಶೋಬಾಳನ್ನು ಚಿಂತಾಮಣಿ ತಾಲೂಕಿನ ಬಟ್ಟಲಪಲ್ಲಿ ಮಾವುಕೆರೆ ಗ್ರಾಮದ ಗಣೇಶನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು ದಾಂಪತ್ಯ ಜೀವನದ ಕುರಿತಾಗಿ ದಂಪತಿ ನಡುವಿನ ಜಗಳಕ್ಕೆ ಎರಡು ದಿನಗಳ ಹಿಂದಿನ ರಾತ್ರಿ ಗ್ರಾಮದಲ್ಲಿನ್ಯಾಯ ಪಂಚಾಯತಿ ಮಾಡಲಾಗಿದೆ ಈ ಸಂದರ್ಭದಲ್ಲಿ ಎರಡು ಕುಟುಂಬದವರ ನಡುವೆ ಮಾತಿಗೆ ಚಕಮಕಿ ನಡೆದಿರುತ್ತದೆ ಇದು ಗಲಾಟೆಗೆ ತಿರುಗಿದೆ ಇದರಿಂದ ಮೊಮ್ಮಗಳ ಗಂಡ ಗಣೇಶ್…

Read More