ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಬಯಕೆ ನನಗೂ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಪರಿಷತ್ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ YANಹೊಸದಾಗಿ ಬಾಂಬ್ ಸಿಡಿಸಿದ್ದಾರೆ. ಅವರು ತಾಲೂಕಿನಲ್ಲಿ ನಡೆದಂತ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಂತರ ತಮ್ಮ ಸ್ವಗ್ರಾಮ ಯಚ್ಚನಹಳ್ಳಿಯ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ಅಭ್ಯರ್ಥಿಯಾಗುವ ಬಯಕೆ ವ್ಯಕ್ತಪಡಿಸಿದರು, ನಾನೇನು ರಾಜಕೀಯ ಸನ್ಯಾಸಿಯಲ್ಲಾ ಎಂದ ಅವರು ಭಾರತೀಯ ಜನತಾ ಪಕ್ಷ, ಪ್ರಾದೇಶಿಕ ಪಕ್ಷ ಅಲ್ಲ ರಾಷ್ಟ್ರೀಯ ಪಕ್ಷ, ಪಕ್ಷದ ಸಿದ್ದಾಂತ ಇರುವಂತವರನ್ನು ಗುರುತಿಸಿ ಟಿಕೆಟ್ ಕೋಡಲಾಗುತ್ತದೆ, ಕುಟುಂಬ ರಾಜಕಾರಣದ ಪ್ರಾದೇಶಿಕ ಪಕ್ಷಗಳಾದರೆ ಅಪ್ಪ ಮಕ್ಕಳು ಕೂತು ಸೇರಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ ಇಲ್ಲಿ ಅದೇಲ್ಲ ನಡೆಯಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಹಣದ ಚೀಲ ಹೊತ್ತು ಕ್ಷೇತ್ರದಲ್ಲಿ ತಿರುಗುತ್ತಿರುವರಿಗೆ ಟಾಂಗ್ ನೀಡಿದರು.
ಕಾಂಗ್ರೇಸ್ ಜನರನ್ನು ಯಾಮಾರಿಸುತ್ತದೆ.
ಉಚಿತ ಪಡಿತರ ಅಕ್ಕಿ ಕಡಿಮೆ ಮಾಡಿರುವ ಬಗ್ಗೆ ಮಾತನಾಡಿ ಕಾಂಗ್ರೇಸ್ ಜನರನ್ನು ಯಾಮಾರಿಸುತ್ತದೆ ಮೋಸ ಮಾಡುವದರಲ್ಲಿ ಕಾಂಗ್ರೇಸ್ ದೇಶದಲ್ಲಿ ನಂಬರ್ ಒನ್ ಎಂದ ಅವರು 29 ಬೆಲೆಯ ಅಕ್ಕಿಯನ್ನು ಕೇಂದ್ರಲ್ಲಿರುವ ಬಿಜೆಪಿ ಸರ್ಕಾರ ನೀಡಿದರೆ ಅದನ್ನು 3 ರೂಪಾಯಿ ಚೀಲಕ್ಕೆ ಸಿದ್ದರಾಮಯ್ಯನ ಫೋಟೋ ಅಂಟಿಸಿ ಇದು ಕಾಂಗ್ರೇಸ್ ಸರ್ಕಾರದ್ದು ಎಂದು ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಹಂಚಲಾಯಿತು ಎಂದು ಆರೋಪಿಸಿದರು.ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ ಪ್ರಿಯಾಂಕ ಗಾಂಧಿಯನ್ನು ಕರೆಸಿ 2000 ಕೊಡ್ತಿವಿ ಅಂತ ಹೇಳಿಸುತ್ತಾರೆ ಅದಕ್ಕೆ ನೂರೆಂಟ್ ಕಂಡಿಶನ್ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಹಾಗೂ ಕಾಂಗ್ರೇಸ್ ನವರು ಅಧಿಕಾರಕ್ಕೆ ಬಂದರೆ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುತ್ತೇವೆಂಬ ಎಂದು ಹೇಳಿಕೊಂಡು ಒಡಾಡುತ್ತಿದ್ದಾರೆ ಸಾಲ ಮನ್ನಾ ಅನ್ನುವುದೆ ದೊಡ್ಡ ಬೋಗಸ್, ನಿಜವಾದ ರೈತರಿಗೆ ಸಾಲ ಸಿಗುತ್ತಿಲ್ಲ ರೈತರ ಹೆಸರಲ್ಲಿ ಮದ್ಯವರ್ತಿಗಳು ಲೂಠಿಮಾಡುತ್ತಿದ್ದಾರೆ ಸಾಲ ಮನ್ನಾ ಜಾರಿಮಾಡಿಸಿ ಮದ್ಯವರ್ತಿಗಳು ಗುಂಡುಗಾಗಿದ್ದಾರೆ ಎಂದು ದೂರಿದರು, ಇದಕ್ಕೆಲ್ಲ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಬಿಜೆಪಿ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆ ಜಾರಿಗೆ ತಂದು ರೈತರ ಖಾತೆಗೆ ನೇರವಾಗಿ 10 ಸಾವಿರ ಹಾಕಲಾಗುತ್ತಿದೆ ಎಂದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13