ಶ್ರೀನಿವಾಸಪುರ: ಕೋಲಾರ ಹಾಲು ಒಕ್ಕೂಟದ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿ ವಿಚಾರದಲ್ಲಿ ಯಾವುದೆ ಅವ್ಯವಹಾರ ಅಥವ ಅಕ್ರಮ ನಡೆದಿಲ್ಲ ಎಲ್ಲವೂ ನಿಯಮಾವಳಿಗಳಂತೆ ಕಾನೂನಾತ್ಮಕವಾಗಿ ಪಾರದರ್ಶಕತೆಯಿಂದ ನಡೆದಿದೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹನುಮೇಶ್ ಹೇಳಿದರು ಇಂದು ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ
ಕೋಲಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಪಾಳ್ಯಂ ಭೈರಾರೆಡ್ದಿ ಆರೋಪಿಸಿರುವಂತೆ ಏನು ಅಕ್ರಮಗಳು ನಡೆದಿಲ್ಲ ಶೀಬಿರದ ಕಚೇರಿ ನಿರ್ಮಾಣಕ್ಕೆ ನಿವೇಶನ ಖರಿದಿಯಲ್ಲಿ ಎಲ್ಲವೂ ಸರ್ಕಾರಿ ನಿಯಮಾವಳಿಗಳಂತೆ ಪಾರದರ್ಶಕತೆಯನ್ನು ಪಾಲನೆ ಮಾಡಿದ್ದು ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ಅನುಮೊದನೆ ಪಡೆದ ನಂತರ ೩೦೪೦ ಚದರಡಿಯ ನಿವೇಶನ ಖರೀದಿಗೆ ಅರ್ಹ ಮಾಲಿಕರಿಂದ ಅರ್ಜಿ ಅಹ್ವಾನಿಸಿ ಡಿಸೆಂಬರ್ ತಿಂಗಳಲ್ಲಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು ಅದರಂತೆ ನಿಗದಿತ ದಿನಾಂಕದ ಒಳಗೆ ಆಸಕ್ತ ಮಾಲಿಕರಿಂದ ಬಂದಂತ ಅರ್ಜಿಯನ್ನು ಪರಿಗಣಿಸಿ ದಾಖಲಾತಿಗಳನ್ನು ಕಾನೂನು ತಙ್ಞರಿಂದ ಪರಶೀಲನೆ ಮಾಡಿಸಿ ಸಂಬಂದಿಸಿದ ನಿವೇಶನಕ್ಕೆ ತಕರಾರು ಇದ್ದರೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಿದ್ದು ಯಾವುದೆ ಆಕ್ಷೇಪಗಳು ಬಾರದ ಹಿನ್ನಲೆಯಲ್ಲಿ ನಿಭಂದನೆಗಳನ್ನು ಪೂರ್ಣ ಗೊಳಿಸಿದ ನಂತರ ನೊಂದಾಯಿತ ಮೌಲ್ಯಮಾಪಕರು ಸೂಚಿಸಿದಂತೆ ಪ್ರತಿ ಚದರ ಅಡಿಗೆ ೨೩೫೦ ರಿಂದ ೨೫೦೦ ರಂತೆ ವರದಿ ಪಡೆದು ದರ ನಿಷ್ಕರ್ಶೆ ಮಾಡಿ ಪ್ರತಿ ಚದರ ಅಡಿಗೆ ೨೧೯೦ ರಂತೆ ದರ ನಿಗದಿ ಮಾಡಿಸಿ ಅಂತಿಮ ಗೊಳಿಸಿ ಸಹಕಾರ ಇಲಾಖೆ ಅನುಮೊದನೆ ಸಲ್ಲಿಸಲಾಗಿದೆ.
ಇದ್ಯಾವುದರ ಮಾಹಿತಿ ಇಲ್ಲದೆ ಮಾಜಿ ನಿರ್ದೇಶಕರು ಆರೋಪ ಮಾಡಿದ್ದಾರೆ ಎಂದ ಅವರು ಈಗಾಗಲೆ ಹಾಲು ಒಕ್ಕೂಟದ ಹೆಸರಿನಲ್ಲಿ ಇರುವಂತ ಜಮೀನು ಬಗ್ಗೆ ತಿಳಿಸಿರುವಂತೆ ಪಣಸಮಾಕನಹಳ್ಳಿ ಜಮೀನು ಶ್ರೀನಿವಾಸಪುರ ಪಟ್ಟಣದಿಂದ ದೂರ ಹೊರವಲಯದಲ್ಲಿದೆ ಇದರಿಂದ ಶೀಬಿರದ ಕಚೇರಿಗೆ ನೌಕರರು ಅಧಿಕಾರಿಗಳು ಓಡಾಡಲು ಸಾಧ್ಯವಾಗುವುದಿಲ್ಲ ಜೊತೆಗೆ ಅಲ್ಲಿ ಕಾರ್ಗೆಟೆಡ್ ಬಾಕ್ಸುಗಳ ಉತ್ಪಾದನ ಘಟಕ ನಿರ್ಮಾಣದ ಯೋಜನೆ ಇದೆ ಶೀಬಿರದ ಕಚೇರಿ ನಿರ್ಮಾಣವಾದರೆ ಉತ್ಪಾದನ ಘಟಕಕ್ಕೆ ಜಾಗದ ಕೊರತೆ ಉಂಟಾಗುತ್ತದೆ ಅಮಾನಿಕೆರೆ ಬಳಿ ಇರುವ ಜಾಗದ ಕುರಿತಾಗಿ ಕೋರ್ಟನಲ್ಲಿ ದಾವೆ ಇರುವುದರಿಂದ ಅಲ್ಲಿ ಶಿಬಿರದ ಕಚೇರಿ ನಿರ್ಮಾಣ ಸಾಧ್ಯವಾಗುವುದಿಲ್ಲ ಈ ಎಲ್ಲಾ ಸಮಸ್ಯಗಳು ಇರುವುದರಿಂದ ಎಲ್ಲಾ ತಾಲೂಕುಗಳಲ್ಲಿ ಇರುವಂತೆ ನಮ್ಮ ತಾಲೂಕಿನಲ್ಲೂ ಸ್ವಂತ ಜಾಗದಲ್ಲಿ ಶೀಬಿರದ ಕಚೇರಿ ನಿರ್ಮಾಣಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಒತ್ತಾಸೆಯಂತೆ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಉದ್ದೇಶ ಇರುವುದಾಗಿ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ದ್ವಾರಸಂದ್ರಮುನಿವೆಂಕಟಪ್ಪ,ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಕೇತಗಾನಹಳ್ಳಿನಾಗರಾಜ್,ಅಲಂಬಗಿರಿ ಅಯ್ಯಪ್ಪ,ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶ್ಯಾಗತ್ತೂರುಸುಧಾಕರ್,ನಾಗದೇನಹಳ್ಳಿ ಸೀತಾರಮರೆಡ್ದಿ ಮುಂತಾದವರು ಇದ್ದರು.
Breaking News
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
- ಶ್ರೀನಿವಾಸಪುರ ತಾಡಿಗೋಳ್ RTO ಚೆಕ್ ಪೋಸ್ಟ್ ಲೋಕಾಯುಕ್ತ ದಾಳಿ.
Sunday, October 13