Author: Srinivas_Murthy

ಶ್ರೀನಿವಾಸಪುರ:ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ತಾಲೂಕಿನ ಕಮಟಂಪಲ್ಲಿ ಗೇಟ್ ಬಳಿ ಕಾರೊಂದು ಡಿಕ್ಕಿ ಹೋಡೆದು ಇಬ್ಬರು ದ್ವಿಚಕ್ರ ವಾಹನ ಸವಾರರು ತೀವ್ರವಾಗಿ ಗಾಯೊಂಡಿದ್ದು ಅವರಲ್ಲಿ ಒರ್ವ ವ್ಯಕ್ತಿಗೆ ಎರಡು ಕಾಲುಗಳು ಮುರಿದಿದ್ದು ಇಬ್ಬರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಕಾಲು ಮುರಿದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ.ಮೃತ ವ್ಯಕ್ತಿಯನ್ನು ನಾರಯಣಸ್ವಾಮಿ(53) ಎಂದು ಗಾಯಗೊಂಡಿರುವ ವ್ಯಕ್ತಿಯನ್ನು ಮಂಜುನಾಥ್ ಎನ್ನಲಾಗಿದೆ.ಇಬ್ಬರು ಕಮಟಂಪಲ್ಲಿ ಗ್ರಾಮದವರಾಗಿದ್ದು ಇವರು ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಊರಿಂದ ಹೆದ್ದಾರಿಗೆ ಬರುವಾಗ ಅಪಘಾತ ನಡೆದಿರುವುದಾಗಿ ಹೇಳಲಾಗಿದೆ.ಡಿಕ್ಕಿ ಹೋಡೆದ ಕಾರನ್ನು ವಶಕ್ಕೆ ಪಡೆದಿರುವ ಗೌವನಪಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಶ್ರೀನಿವಾಸಪುರ:ಇದೊಂದು ಹೃದಯ ವಿದ್ರಾಯಕ ಮನ ಕಲಕುವ ಘಟನೆ ನಡೆದಿದ್ದು ಹುಟ್ಟಿದ ಏಳೇ ದಿನಕ್ಕೆ ಹೆತ್ತವರನ್ನು ಕಳೆದುಕೊಂಡ ಕಂದಮ್ಮನ ಕಥೆ.ಹೆತ್ತ ಏಳು ದಿನದ ಹಸುಕಂದನನ್ನು ಅನಾಥವಾಗಿಸಿ ಅಸ್ಸಾಂ ಮೂಲದ ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗುವಿನ ಜನನದ ಸಂಭ್ರಮ ಮಾಸುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿರುವ ಮಗುವಿನ ಹೆತ್ತವರು ಕೃತ್ಯ ಮರುಕ ಮೂಡಿಸಿದೆ.ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂನಲ್ಲಿ ಕೆಲಸಕ್ಕಾಗಿ ದೂರದ ಅಸ್ಸಾಂನಿಂದ ಬಂದಿದ್ದ ಫರಿಜಾ (22) ಮತ್ತು ರೆಹಮಾನ್ (28) ದಂಪತಿ ಸುಮಾರು ಹದಿನೈದು ದಿನಗಳಿಂದ ಫಾರಂ ಸಮೀಪ ವಾಸವಾಗಿದ್ದರು. ಸರಿಯಾಗಿ ಏಳು ದಿನಗಳ ಹಿಂದಷ್ಟೇ ಫರಿಜಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಬದುಕಿಲ್ಲಿ ಸಂತಸ ಪಡಬೇಕಿದ್ದ ಸಮಯದಲ್ಲಿ ದಂಪತಿ ಆತ್ಮಹತ್ಯೆಯಂತ ವಿಪರೀತ ನಿರ್ಧಾರಕ್ಕೆ ಮುಂದಾಗಲು ಕಾರಣವಾದರು ಏನು ಎಂಬುದು ಸ್ಥಳೀಯರ ಪ್ರಶ್ನೆ?ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಘಟನಾ ಸ್ಥಳಕ್ಕೆ ರಾಯಲ್ಪಾಡು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀನಿವಾಸಪುರ…

Read More

ನ್ಯೂಜ್ ಡೆಸ್ಕ್:ಪ್ರಸ್ತುತ ಭಾರತದಲ್ಲಿನ 12 ಪಿಎಸ್‌ಬಿಗಳನ್ನು ಮೆಗಾ ವಿಲೀನದ ಮೂಲಕ ನಾಲ್ಕು ಬ್ಯಾಂಕುಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬಗ್ಗೆ ಹೇಳಲಾಗುತ್ತಿದೆ. ಎಸ್‌ಬಿಐ ಸೇರಿದಂತೆ ಇನ್ನೂ 3 ದೊಡ್ಡ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಹೇಳುತ್ತಿವೆ.ಕೇಂದ್ರವು ಸಾರ್ವಜನಿಕ ವಲಯದ ಬ್ಯಾಂಕುಗಳ ಮೆಗಾ ವಿಲೀನಕ್ಕೆ ಸಿದ್ಧತೆ ನಡೆಸುತ್ತಿದ್ದು ಈಗ್ಗೆ ಐದು ವರ್ಷಗಳ ಹಿಂದೆ ಇದ್ದ 27 ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು 12 ಕ್ಕೆ ಇಳಿಸಲಾಗಿತ್ತು.ಈಗ ಕೇಂದ್ರವು ಆ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸುವ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ.ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, 2026-27 ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ಮೆಗಾ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಮೆಗಾ ವಿಲೀನದ ನಂತರ, ದೇಶದಲ್ಲಿ ಕೇವಲ 4 ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ಇರುತ್ತವೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಲಾಗಿದೆ.ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ…

Read More

ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಪಲ್ಲಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಅಂಜನಿಸುತ ಫೌಂಡೇಶನ್ ಅಧ್ಯಕ್ಷ ಪ್ರದೀಪ್ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮಗಳ ಭಾಗವಾಗಿ ಇಲ್ಲಿನ ಶ್ರೀ ಅಭಯ ಆಂಜನೇಯ ಸ್ವಾಮಿ ಮೂರ್ತಿಗೆ ತುಳುನಾಡು ದಕ್ಷಿಣ ಕನ್ನಡದ ಕರಾವಳಿಯ ಪಂಜುರ್ಲಿ ದೈವದ ಅಲಂಕಾರವನ್ನು ಮಾಡಲಾಗಿತ್ತು.ಪ್ರತಿವರ್ಷವೂ ಹನುಮ ಜಯಂತಿ ಮಾರನೇ ದಿನ ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ನಡೆಯುವುದು ವಿಶೇಷ.ದೇವರ ಮೂರ್ತಿಗೆ ಅಭಿಷೇಕ ಮಾಡಿದ ನಂತರ ವಿಶೇಷವಾಗಿ ಪಂಜುರ್ಲಿ ಅಲಂಕಾರ ಮಾಡಲಾಗಿದ್ದು, ದೇವಾಲಯದಲ್ಲಿ ಪೂಜೆ ಹೋಮ ಹವನ ನೆರವೇರಿಸಲಾಯಿತು.ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಹನುಮ ಭಕ್ತರು ಆಂಜನೇಯ ದೇವಸ್ಥಾನಗಳಿಗೆ ಶಕ್ತಿ ಸ್ವರೂಪನಾದ ಹನುಮ ದೇವರ ಮೂರ್ತಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.ಕಾಂತರ ಸಿನಿಮಾ ಪ್ರಭಾವ ಪಂಜುರ್ಲಿಕಾಂತಾರ ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾದ ಪ್ರಭಾವದಿಂದಾಗಿ ಪಂಜುರ್ಲಿ ದೈವದ ಬಗ್ಗೆ ದಕ್ಷಿಣ ಭಾಗದ…

Read More

ಶ್ರೀನಿವಾಸಪುರ:ಸೆಲ್ಫಿ ಹುಚ್ಚಾಟಕ್ಕೆ ಬಿದ್ದ ಯುವಕನೊರ್ವ ರೈಲ್ವೆ ವಿದ್ಯತ್ ತಗಲಿ ಸಾವನ್ನಪ್ಪಿರುವ ಮನ ಕಲುಕುವ ಘಟನೆ ಶ್ರೀನಿವಾಸಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸಪುರದ ನಿವಾಸಿ ಕಾರ್ತಿಕ್ ಎನ್ನಲಾಗಿದ್ದು, ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ,ಅಲ್ಲಿ ನಿಲ್ಲಿಸಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಮೊಬೈಲ್ ಫೋನ್‌ನಿಂದ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡುವ ವೇಳೆ ಅವನ ಕೈ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ ವಿದ್ಯುತ್ ಹರಿದು ಯುವಕ ಪಕ್ಕದ ಮಾವಿನ ತೋಟಕ್ಕೆ ಎಸೆಯಲ್ಪಟ್ಟಿದ್ದಾನೆ.ಅವನೊಂದಿಗೆ ಹೋಗಿದ್ದ ಇನ್ನಿಬ್ಬರು ಕೆಳಗಿಂದ ಆಘಾತವನ್ನು ನೋಡುತ್ತಿದ್ದು ತಕ್ಷಣ ಕುಟುಂಬದವರಿಗೆ ಮಾಹಿತಿ ನೀಡಿದ್ದು ಪೋಷಕರು ವಿದ್ಯತ್ ಅಪಘಾತಕ್ಕೆ ಒಳಗಾದ ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಘಾತ ನಡೆದ ಮೂರು ದಿನಕ್ಕೆ ಯುವಕ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

Read More

ಶ್ರೀನಿವಾಸಪುರ:ಆಂಧ್ರದಿಂದ ಬೆಂಗಳೂರಿಗೆ ಹೋರಟಿದ್ದ ಸ್ಲೀಪರ್ ಕೋಚ್ ಬಸ್ ರಸ್ತೆ ವಿಭಜಕ್ಕೆ ಡಿಕ್ಕಿ ಹೋಡೆದು ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಬಸ್ಸಿನಲ್ಲಿದ್ದ ಮಹಿಳೆ ಮೃತ ಪಟ್ಟಿದ್ದು ಬಸ್ಸಿನಲ್ಲಿದ್ದ ಬಹುತೇಕರು ಗಾಯಗೊಂಡಿರುವ ಘಟನೆ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಸುಕಿನಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಬೆಂಗಳೂರಿನ ನಿವಾಸಿ ಅನಿತಾ(58) ಎಂದು ಗುರುತಿಸಲಾಗಿದ್ದು ಈಕೆ ಆಂಧ್ರದ ಪ್ರೊದ್ದಟೂರಿಗೆ ಪತಿಯ ಜೊತೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ವಾಪಸ್ಸು ಬರುತ್ತಿರುವಾಗ ದುರ್ಘಟನೆ ನಡೆದು ಮೃತಪಟ್ಟಿರುತ್ತಾರೆ.ಪ್ರೊದ್ದಟೂರು ಮೂಲದ ಹರಿತಾ ಟ್ರಾವಲ್ಸ್ ಬಸ್ಸು ಪ್ರೊದ್ದಟೂರಿನಿಂದ ಬೆಂಗಳೂರಿಗೆ ಹೋರಟಿದ್ದು ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮುಂಜಾನೆ ನಸುಕಿನಲ್ಲಿ ಮಂಚಿನಿಳ್ಲಕೋಟೆ ಬಳಿ ಡಿವೈಡರ್ ಗೆ ಡಿಕ್ಕಿ ಹೋಡೆದಿದೆ ಡಿಕ್ಕಿ ಹೋಡೆದ ರಭಸಕ್ಕೆ ಬಸ್ಸಿನ ಮುಂಬಾಗದ ಆಕ್ಸಿಲ್ ಸಮೇತ ಎರಡು ಚಕ್ರಗಳು ಕಳಚಿ ಬಿದಿದೆ,ಬಸ್ ರಸ್ತೆಯ ಮತ್ತೊಂದು ಬದಿಯಲ್ಲಿ ಬಸ್ ಮಗಚಿ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಮೃತ ಮಹಿಳೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ ಎನ್ನುತ್ತಾರೆ. ಹೆದ್ದಾರಿ ನಿರ್ಮಾಣ ವಿಳಂಬ ನಿರ್ಲಕ್ಷ್ಯ ಆರೋಪಕರ್ನಾಟಕದ ಗಡಿಯಿಂದ ಚಿಂತಾಮಣಿಯ…

Read More

ಶ್ರೀನಿವಾಸಪುರ:ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕು ಎಂಬ ನಿಯಮವನ್ನು ಕೋಲಾರ ಜಿಲ್ಲಾದ್ಯಂತ ಜಾರಿಮಾಡಿ ಕಳೆದ ಎಂಟೆತ್ತು ದಿನಗಳಿಂದ ಸಾರ್ವಜನಿಕವಾಗಿ ಜಾರಿಯಾಗುವಂತೆ ಆದೇಶಿಸಿ ಇದಕ್ಕಾಗಿ ಕೋಲಾರ ಜಿಲ್ಲಾ ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದರು.ಅದರಂತೆ ಇಂದು ಶ್ರೀನಿವಾಸಪುರದಲ್ಲಿ ರಸ್ತೆಗಿಳಿದ ಪೋಲಿಸರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಜನರನ್ನು ತಡೆದು ಹೆಲ್ಮೆಟ್‌ ರಹಿತ ವಾಹನ ಚಾಲನೆ ಅಪಾಯಕಾರಿ. ಅದರಲ್ಲೂ ಅಪಘಾತ ಸಂದರ್ಭಗಳಲ್ಲಿ ಶಿರಸ್ತ್ರಾಣ ಧರಿಸದ ಪರಿಣಾಮ ಮಾರಣಾಂತಿಕವಾಗಿ ಗಾಯಗೊಂಡು ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಫುಲ್ ಕ್ಲಾಸ್ ನೀಡಿದರು. ತಾಲೂಕು ಆಫಿಸ್ ಮುಂಬಾಗದಲ್ಲಿ ವೃತ್ತ ನಿರೀಕ್ಷಕ ಮೊಹಮ್ಮದ್ ಕೊಳ್ಳ ಸಬ್ ಇನ್ಸಪೇಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಪೋಲಿಸರು ಕಾರ್ಯಚರಣೆ ನಡೆಸಿ ಹೆಲ್ಮೆಟ್ ಧರಿಸದೆ ಬರು ವಾಹನ ಸವಾರರಿಗೆ ಅರಿವು ಮೂಡಿಸಿ ಎಚ್ಚರಿಕೆ ಕೊಟ್ಟು ಕಳಿಸಿದರೆ ಹೆಲ್ಮೆಟ್ ಧರಿಸಿ ಬಂದವರನ್ನು ಅಭಿನಂದಿಸಿದರು.ಹೆಲ್ಮೆಟ್ ಖಡ್ಡಾಯ ಇಂದು ಆರಂಭವಾಗಿದೆ ಇವತ್ತು ವಿನಾಯಿತಿ ಕೊಡಲಾಗುತ್ತಿದೆ ಆದರೆ ನಾಳೆಯಿಂದ ಹೆಲ್ಮೆಟ್ ಧರಿಸದೆ ಬಂದರೆ…

Read More

ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ತರಕಾರಿ ಅಂಗಡಿಗಳಿಗೆ ತನ್ನದೆ ಆದ ಇತಿಹಾಸ ಇದೆ ಇದು ಇಂದು ನಿನ್ನೆಯದಲ್ಲಿ ಐದು ದಶಕಕ್ಕೂ ಹೆಚ್ಚು ಹಳೆಯ ತರಕಾರಿ ಮಾರುಕಟ್ಟೆ ಎನ್ನಬಹುದು. ಇಲ್ಲಿ ತರಕಾರಿ ಮಾರುಕಟ್ಟೆ ಪ್ರಾಂರಭಿಸಿದ್ದು ತರಕಾರಿ ವ್ಯಾಪರಸ್ಥರಲ್ಲ ಬದಲಾಗಿ ತರಕಾರಿ ಬೆಳೆದ ರೈತರೆ ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಮಂಕರಿಯಲ್ಲಿ ತಂದು ರೈತರು ಇಲ್ಲಿ ಮಾರಾಟ ಶುರುಮಾಡಿದರು. ಶ್ರೀನಿವಾಸಪುರ:ಪಟ್ಟಣ ಆಗೆಲ್ಲ ದೊಡ್ಡದಾಗಿ ಬೆಳೆದಿರಲಿಲ್ಲ ಊರು ಅಂದರೆ ಎಂ.ಜಿ.ರಸ್ತೆ ದಕ್ಷಿಣಕ್ಕೆ ಹೋದರೆ ಸಿಗುವ ಮುಳಬಾಗಿಲು ವೃತ್ತ, ಅಲ್ಲಿ ಎಡಕ್ಕೆ ತಿರುಗಿ ಹೋದರೆ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದ ಹಳೇಪೇಟೆ,ಸುತ್ತಾಕಿ ಬಂದರೆ ವಲ್ಲಭಾಯ್ ರಸ್ತೆ,ಈಗಿನ ನೆಹರು ರಸ್ತೆ,ದಾಟಿ ಎಂ.ಜಿ.ರಸ್ತೆಯಲ್ಲಿ ಉತ್ತರಕ್ಕೆ ಹೋದರೆ ಬಸ್ ನಿಲ್ದಾಣವೃತ್ತ ಮುಂದೆ ಹೋದರೆ ತಾಲೂಕು ಆಫಿಸ್ ಇನ್ನಂದಷ್ಟು ಮುಂದೆ ಸಾಗಿದರೆ ಮಿಡ್ಲಸ್ಕೂಲ್,ಇನ್ನೊಂದೆರಡು ಹೆಜ್ಜೆ ಹಾಕಿದರೆ ಎಲೆಕ್ಟ್ರಿಕ್ ಆಫಿಸ್ ಅದಾದ ಮೆಲೆ ಕೊನೆ ಅಂದರೆ ಹೈಸ್ಕೂಲ್,ಬಸ್ಟಾಂಡ್ ನಿಂದ ಚಿಂತಾಮಣಿ ಕಡೆ ಹೋದರೆ ಅರಣ್ಯ ಇಲಾಖೆ ಕಚೇರಿ ಎನ್.ಇ.ಎಸ್ ಕ್ವಾಟ್ರಸ್ ಚಿಂತಾಮಣಿ ಸರ್ಕಲ್ ಇಷ್ಟೆ…

Read More

ಮದನಪಲ್ಲಿ:ಮದನಪಲ್ಲಿ ತಂಬಳ್ಳಪಲ್ಲೆ, ಪುಂಗನೂರು ಮತ್ತು ಪೀಲೇರು ವಿಧಾನಸಭಾ ಕ್ಷೇತ್ರಗಳಗೊಂಡ ಮದನಪಲ್ಲಿ ಜಿಲ್ಲೆಯಾಗಿ ಆಂಧ್ರ ಸರ್ಕಾರ ಘೋಷಿಸಿದೆ.ಆಂಧ್ರಪ್ರದೇಶದ ಜಿಲ್ಲಾ ಪುನರ್ ವಿಭಜನೆ ವಿಧಾನಸಭಾ ಉಪಸಮಿತಿ ನೀಡಿದ ವರದಿ ಆಧಾರದಂತೆ ಅಲ್ಲಿನ ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ನೂತನ ಜಿಲ್ಲೆಯಾಗಿ ಮದನಪಲ್ಲಿಯನ್ನು 27 ಜಿಲ್ಲೆಯಾಗಿ ಪ್ರಕಟಿಸಿದೆ. ಮದನಪಲ್ಲಿ ಜಿಲ್ಲೆಯಲ್ಲಿ.ಮದನಪಲ್ಲಿ, ನಿಮ್ಮನಪಲ್ಲಿ, ರಾಮಸಮುದ್ರ, ತಂಬಳ್ಳಪಲ್ಲೆ, ಮುಲಕಲ ಚೆರುವು, ಪೆದ್ಯಮಂಡ್ಯಂ, ಕುರಬಲಕೋಟ, ಪೆದ್ದತಿಪ್ಪಸಮುದ್ರಂ, ಬಿ.ಕೊತಕೋಟ, ಚೌಡೆಪಲ್ಲಿ, ಪುಂಗನೂರು, ಸೋಮಲ, ಪೀಲೇರು, ಗುರ್ರಮಕೊಂಡ, ಕಲಕಡ,ಸದುಂ,ಕೆವಿಪಲ್ಲಿ, ವಾಲ್ಮೀಕಿ ಪುರಂ,ಕಿರಿಕಿರಿ,ಪುಲಿಚರ್ಲ;ರೊಂಪಿಚರ್ಲ, ಕಂಭಂವಾರಿಪಲ್ಲಿ, ಸೇರಿದಂತೆ ಒಟ್ಟು 21 ಮಂಡಲ ಕೇಂದ್ರಗಳನ್ನು ಹೊಂದಿದೆ.ಒಟ್ಟು 11.05 ಲಕ್ಷ ಜನಸಂಖ್ಯೆ ಇರುತ್ತದೆ. ನೂತನ ಮದನಪಲ್ಲಿ ಜಿಲ್ಲೆಗೆ ಡಿ.ಕೊತ್ತಕೋಟ ಭಾಗದಲ್ಲಿ ಶ್ರೀನಿವಾಸಪುರ ಹಾಗೂ ಚಿಂತಾಮಣಿ ಎರಡು ತಾಲೂಕಗಳು ಗಡಿ ಹಂಚಿಕೊಂಡಿದ್ದರೆ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಶ್ರೀನಿವಾಸಪುರ ತಾಲ್ಲೂಕು ಗಡಿ ಬರುತ್ತದೆ.ರಾಮಸಮುದ್ರಂ ಮಂಡಲ ಕೇಂದ್ರಕ್ಕೆ ಒಂದೆಡೆ ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕು ಗಡಿ ಇದೆ,ಪುಂಗನೂರು ಮಂಡಲ ಭಾಗದಲ್ಲಿ ಮುಳಬಾಗಲು ತಾಲೂಕು ಗಡಿ ಹಂಚಿಕೊಂಡಿದೆ.

Read More

ನ್ಯೂಜ್ ಡೆಸ್ಕ್:ನನ್ನದು ಕಾಂಗ್ರೆಸ್ ಸಮುದಾಯ ಸಮಾಜದ ಎಲ್ಲಾ ವರ್ಗಗಳನ್ನು ನಾನು ಪ್ರೀತಿಸುತ್ತೇನೆ ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿಯಾಗಿ ಹೇಳಿದ್ದಾರೆ.ಅಧಿಕಾರಕ್ಕಾಗಿ ಬಣ ಬಡಿದಾಟದ ನಡುವೆ ಒಕ್ಕಲಿಗ ಸಮುದಾಯದ ನಂಜಾವದೂತ ಸ್ವಾಮೀಜಿ ಅವರೊಂದಿಗೆ ಭೇಟಿಯಾದ ಡಿಕೆ ಶಿವಕುಮಾರ್ ಅವರನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕಾಂಗ್ರೆಸ್ ನನ್ನ ಸಮುದಾಯವಾಗಿದ್ದು, ರಾಜ್ಯದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುವುದಾಗಿ ಹೇಳಿದರು.ಯಾವುದಕ್ಕೂ ನಾನು ಆತುರಪಡುತ್ತಿಲ್ಲ ನನಗೆ ಏನೂ ಬೇಡ ನನ್ನ ಪಕ್ಷ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಸೇರಿದವನಲ್ಲ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವಂತೆಯೇ ನನಗೇನೂ ಬೇಡ, ಆತುರಪಡಲು ಬಯಸುವುದಿಲ್ಲ ಮತ್ತು ಪಕ್ಷದ ಹೈಕಮಾಂಡ್ ಕಡೆ ತೋರಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.ಖಂಡಿತವಾಗಿ ದೆಹಲಿಗೆ ಹೋಗ್ತೀನಿ: ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಜೊತೆ ಸಭೆ ನಡೆಯಲಿದೆ ಎಂಬ ವದಂತಿಗಳಿದ್ದರೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ…

Read More