ನ್ಯೂಜ್ ಡೆಸ್ಕ್:ನನ್ನದು ಕಾಂಗ್ರೆಸ್ ಸಮುದಾಯ ಸಮಾಜದ ಎಲ್ಲಾ ವರ್ಗಗಳನ್ನು ನಾನು ಪ್ರೀತಿಸುತ್ತೇನೆ ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿಯಾಗಿ ಹೇಳಿದ್ದಾರೆ.
ಅಧಿಕಾರಕ್ಕಾಗಿ ಬಣ ಬಡಿದಾಟದ ನಡುವೆ ಒಕ್ಕಲಿಗ ಸಮುದಾಯದ ನಂಜಾವದೂತ ಸ್ವಾಮೀಜಿ ಅವರೊಂದಿಗೆ ಭೇಟಿಯಾದ ಡಿಕೆ ಶಿವಕುಮಾರ್ ಅವರನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕಾಂಗ್ರೆಸ್ ನನ್ನ ಸಮುದಾಯವಾಗಿದ್ದು, ರಾಜ್ಯದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುವುದಾಗಿ ಹೇಳಿದರು.
ಯಾವುದಕ್ಕೂ ನಾನು ಆತುರಪಡುತ್ತಿಲ್ಲ ನನಗೆ ಏನೂ ಬೇಡ ನನ್ನ ಪಕ್ಷ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಸೇರಿದವನಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವಂತೆಯೇ ನನಗೇನೂ ಬೇಡ, ಆತುರಪಡಲು ಬಯಸುವುದಿಲ್ಲ ಮತ್ತು ಪಕ್ಷದ ಹೈಕಮಾಂಡ್ ಕಡೆ ತೋರಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಖಂಡಿತವಾಗಿ ದೆಹಲಿಗೆ ಹೋಗ್ತೀನಿ: ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಜೊತೆ ಸಭೆ ನಡೆಯಲಿದೆ ಎಂಬ ವದಂತಿಗಳಿದ್ದರೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕರ್ನಾಟಕದ ರೈತ ಸಮಸ್ಯೆಗಳನ್ನು ಇಟ್ಟುಕೊಳ್ಳಲು ದೆಹಲಿಗೆ ಭೇಟಿ ನೀಡುವುದಾಗಿ ಶಿವಕುಮಾರ್ ಹೇಳಿದರು.
ದೆಹಲಿಗೆ ಹೋಗುತ್ತೇನೆ.
ಅದು ನಮ್ಮ ದೇವಾಲಯ. ಕಾಂಗ್ರೆಸ್ಗೆ ದೀರ್ಘ ಇತಿಹಾಸ ಇದೆ, ದೆಹಲಿ ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತದೆ. ಅವರು ನನ್ನನ್ನು, ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಯನ್ನು ಕರೆದಾಗ, ನಾವು ಅಲ್ಲಿಗೆ ಹೋಗುತ್ತೇವೆ ಎಂದರು.
ದೆಹಲಿಯಲ್ಲಿ ಬಹಳಷ್ಟು ಕೆಲಸಗಳಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಬರುತ್ತಿದ್ದು, ಸಂಸದರನ್ನು ಭೇಟಿಯಾಗಬೇಕಾಗಿದೆ. ಏಕೆಂದರೆ ನಮ್ಮ ಕೆಲವು ಯೋಜನೆಗಳನ್ನು ಮುಂದಕ್ಕೆ ತೆಗೆದುಕೊಳ್ಳಬೇಕಾಗಿದೆ. ಮುಖ್ಯಮಂತ್ರಿ ಕೇಂದ್ರದೊಂದಿಗೆ ಸಮಸ್ಯೆಗಳನ್ನು ಚರ್ಚಿಸಬೇಕಿದೆ. ಮೆಕ್ಕೆಜೋಳದ ಸಮಸ್ಯೆ ಇದೆ. ಕೇಂದ್ರ ಸರ್ಕಾರ ರೈತರಿಗೆ ಬೆಂಬಲ ನೀಡುತ್ತಿಲ್ಲ ಅಥವಾ ಸಹಾಯ ಮಾಡುತ್ತಿಲ್ಲ. ನಾವು ಕಾರ್ಖಾನೆ ಮಾಲೀಕರ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದ್ದು ತಿಳಿಸಿದರು.
ಡಿಕೆಶಿ ಭೇಟಿಯಾದ ಕೋಲಾರ ಶಾಸಕರು
ಈ ಮಧ್ಯೆ ಮಾಲೂರಿನ ಕೆ. ವೈ. ನಂಜೇಗೌಡ, ಕೋಲಾರದ ಕೊತ್ತೂರು ಮಂಜುನಾಥ್,ಕುಣಿಗಲ್ ನ ಡಾ. ರಂಗನಾಥ್,ಪ್ರೊಫೆಸರ್ ಎಂ. ವಿ. ರಾಜೇಗೌಡ ಮತ್ತು ಮುಳಬಾಗಿಲು ಮುಖಂಡ ಆದಿ ನಾರಾಯಣ, ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



