ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಎದರೂರು ಗ್ರಾಮದಲ್ಲಿ ಕೈಗಾರಿಕ ವಲಯಕ್ಕೆ ಸ್ಥಾಪನೆ ಸಂಬಂದಿಸಿದಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ವೆಂಕಟಶಿವರೆಡ್ಡಿ ಮಾತನಾಡಿ ಶ್ರೀನಿವಾಸಪುರ ತಾಲೂಕಿನಲ್ಲಿ ಎರಡು ಕಡೆ ಕೈಗಾರಿಕ ವಲಯ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೆ ಇದರಲ್ಲಿ ಎದರೂರು ಗ್ರಾಮದ ಕೈಗಾರಿಕ ವಲದ ನೋಟಿಫೀಕೇಷನ್ ಆಗಿದ್ದು ಈಗ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವ ಸರ್ಕಾರ ನಿಧಾನ ಮಾಡುತ್ತಿದೆ ನಮ್ಮ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳಗಳನ್ನು ಸ್ಥಾಪಿಸುವ ಮೂಲಕ ತಾ.ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ವಾ ಎಂದು ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದರು.
ಇದಕ್ಕೆ ಎದರೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಯುವ ಮುಖಂಡ ಸುರೇಶ್ ಎಂಬುವರು ಶಾಸಕ ವೆಂಕಟಶಿವರೆಡ್ಡಿ ಅವರನ್ನು ಕೆಲ ಯುಟೂಬ್ ಹಾಗು ಸಾಮಾಜಿಕ ಜಾಲತಾಣದಲ್ಲಿ ಏಕವಚನ ಪ್ರಯೋಗಿಸಿ ಮಾತನಾಡಿ ಯಾರಪ್ಪನ ಮನೆ ಆಸ್ತಿ ಎಂದೆಲ್ಲ ಪದ ಬಳಿಸಿದ್ದು ಈ ಬಗ್ಗೆ ಶಾಸಕ ವೆಂಕಟಶಿವರೆಡ್ಡಿ ಅವರು ಸುರೇಶ್ ವಿರುದ್ದ ಶ್ರೀನಿವಾಸಪುರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ದೂರು ದಾಖಲಿಸಿಕೊಂಡಿದ್ದ ಶ್ರೀನಿವಾಸಪುರದ ಪೋಲಿಸರು ಸುರೇಶ್ ಅವರನ್ನು ಠಾಣೆಗೆ ಕರೆಯಿಸಿ ಅವರಿಂದ ಸಮಜಾಯಿಸಿ ಬರೆಸಿಕೊಂಡು ಮುಂದಿನ ದಿನಗಳಲ್ಲಿ ಹೀಗೆಲ್ಲಾ ಮಾತನಾಡಬಾರದು ಈ ರಿತಿಯಾಗಿ ನಡೆದು ಕೊಳ್ಳಬಾರದು ಎಂದು ತಿಳುವಳಿಕೆ ಹೇಳಿ ಕಳಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



