Author: Srinivas_Murthy

ನ್ಯೂಜ್ ಡೆಸ್ಕ್:ಮೊನ್ನೆಯಷ್ಟೆ ಬೆಂಗಳೂರಿನ ಯಲಹಂಕದ ಸೋಲದೇವನಹಳ್ಳಿಯ ಲೇಡಿಸ್ ಪಿಜಿಯಲ್ಲಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕನೆ ಅತ್ಯಾಚಾರ ಎಸಗಿದ ಘಟನೆ ಮಾಸುವ ಮುನ್ನವೆ ಯಲಹಂಕ ಪೋಲಿಸ್ ಠಾಣೆ ವ್ಯಾಪ್ತಿಯ PG ಯಲ್ಲಿದ್ದ ಮಹಿಳಾ ಅಧಿಕಾರಿ ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಆಗಸ್ಟ್​ 11ರಂದು ಬೆಂಗಳೂರಿನ ಉತ್ತರ ಭಾಗದ ಪ್ರತಿಷ್ಠಿತ ಜುಡಿಷಿಯಲ್ ಲೇಔಟ್​ನಲ್ಲಿರುವ ಲೇಡಿಸ್ ಪಿಜಿಯೊಂದರಲ್ಲಿ (Ladies paying guest) ನಡೆದಿದ್ದು,ಘಟನೆ ಸಂಬಂಧ ಯಲಹಂಕ ಠಾಣೆಗೆ ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಜುಡಿಷಿಯಲ್ ಲೇಔಟ್​ನ ಶಿವಾಸ್ ಲೇಡಿಸ್ ಪಿಜಿ Siva Luxury Pg For Ladies ಗೆ 15 ದಿನಗಳ ಹಿಂದಷ್ಟೇ ದಾಖಲಾಗಿದ್ದು ಆಗಸ್ಟ್​ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಬಂದಿದ್ದಾರೆ.ಮಹಿಳೆಯ ರೂಮ್​​ ಡೋರ್ ತಟ್ಟಿದ್ದಾರೆ ಪಿಜಿಯವರು ಇರಬಹುದೆಂದು…

Read More

ಬೆಂಗಳೂರು:ಬೆಂಗಳೂರಿನ ಹೆಬ್ಬಾಳದ ನೂತನ flyover ಮೇಲುಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಹಾಗು ಡಿ.ಸಿ.ಎಂ ಶಿವಕುಮಾರ್ ಇಂದು ಉದ್ಘಾಟಿಸಿದ್ದಾರೆ.ಇಂದು ಹೆಬ್ಬಾಳ ಮೇಲು ಸೇತುವೆಯನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಗಿದ್ದು ಈಗಾಗಲೇ 2 ದಿನಗಳ ಟ್ರಯಲ್ ರನ್ ನಡೆಸಲಾಗಿದೆ. ನಾಗವಾರದಿಂದ ಬರುವ ವಾಹನಗಳು ಸಿಗ್ನಲ್ ತಪ್ಪಿಸಿ ರ್‍ಯಾಂಪ್ ಮೂಲಕ ಸುಲಭವಾಗಿ ಹೋಗಲು ಸಹಾಯ ಮಾಡುತ್ತದೆ. ಆದರೆ, ಇದರಿಂದ ಮೆಖ್ರಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಬಹುದು ಎಂದು ಟ್ರಯಲ್ ರನ್ ನಲ್ಲಿ ತಿಳಿದುಬಂದಿದೆ.700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ ಕಡೆಯಿಂದ ಮೇಖ್ರೀ ವೃತ್ತದವರಿಗೆ ನಿರ್ಮಾಣ ಮಾಡಲಾಗಿದ್ದು.ಇದರ ಕಾಮಗಾರಿ 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದೆ.ಡಿ.ಸಿ.ಎಂ ಶಿವಕುಮಾರ್ ಯಜ್ಡಿ ರೈಡ್ಬೆಂಗಳೂರಿನ ನೂತನ ಹೆಬ್ಬಾಳ್ ಫ್ಲೈಓವರ್ ಉದ್ಘಾಟಿಸಲಾಗಿದ್ದು, ಈ ವೇಳೆ ಡಿಸಿಎಂ ಶಿವಕುಮಾರ್ ಅವರು ರೋಡ್ಕಿಂಗ್ ಯಜ್ಡಿ ರೈಡ್ ಮಾಡಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆಶಿ, ಹೆಬ್ಬಾಳ ಮೇಲು…

Read More

ಮೈಸೂರು:ಮದ್ಯ ಸೇವಿಸಲು ಹಣ ನೀಡದ ಪತ್ನಿಯನ್ನು ಪತಿ ಕೊಚ್ಚಿ ಕೊಲೆ ಮಾಡಿರುವ ಧಾರುಣ ಘಟನೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಪಾಪಣ್ಣ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ.ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನು ಪೀಡಿಸುತ್ತಿದ್ದ ಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿ ಗಾಯತ್ರಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಪೊಲೀಸರು ತನಿಖೆ ಕೈಗೊಂಡು ಪಾಪಣ್ಣನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More

ನ್ಯೂಜ್ ಡೆಸ್ಕ್:ಕರ್ನಾಟಕದ ಶಕ್ತಿ ಯೋಜನೆಯ ರೀತಿಯಲ್ಲೇ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ (APSRTC) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು (Free Bus)ಚಂದ್ರಬಾಬು ನೇತೃತ್ವದ NDA ಸರ್ಕಾರ ಜಾರಿಗೆ ತಂದಿದೆ. ಆಗಸ್ಟ್ 15, 2025 ರಂದು ಆಂಧ್ರಪ್ರದೇಶದ ಅಮರಾವತಿಯಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಮಹಿಳೆಯರೊಂದಿಗೆ ಬಸ್‌ನಲ್ಲಿ ಸಂಚಾರ ಆರಂಭಿಸುವ ಮೂಲಕ ಸ್ತ್ರೀ ಶಕ್ತಿ ಉಚಿತ ಬಸ್ ಪ್ರಯಾಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.ಆಂಧ್ರ ಪ್ರದೇಶದಲ್ಲಿ ನಿವಾಸ ಇರುವಂತ ಮಹಿಳೆಯರು ಮತ್ತು ಮಂಗಳಮುಖಿಯರು ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು.ಯೋಜನೆ APSRTCಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ.2024 ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಸೂಪರ್ 6 ಭರವಸೆಯ ಪ್ರಮುಖ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೂ ಒಂದಾಗಿದೆ, 19 ರಿಂದ 59,ವರ್ಷ ವಯಸ್ಸಿನ ಪ್ರತಿ ಮಹಿಳೆಗೆ ಮಾಸಿಕ 1,500 ರೂ. ನೆರವು,…

Read More

ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕೃಷ್ಣಾಷ್ಟಮಿ ಸಂಭ್ರಮ ಮನೆಮಾಡಿತ್ತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಂದು ಗೋಕುಲಾಷ್ಟಮಿ ಆಚರಿಸುವುದು ಸಂಪ್ರದಾಯ ಅದರಂತೆ ಇಂದು ಶ್ರಾವಣದ ಶನಿವಾರದ ಹಿನ್ನೆಲೆಯಲ್ಲಿ ಮೂಲ ವಿಗ್ರಹ ಶ್ರೀ ಕೋದಂಡರಾಮ ಮೂರ್ತಿಗೆ ಅಲಂಕಾರಪ್ರಿಯ ನಿಲಮೇಘ ಶ್ಯಾಮ (ನಿಲಿಬಣ್ಣದ)  ಕೃಷ್ಣಾವತಾರದ ಅಲಂಕಾರ ಮಾಡಲಾಗಿದ್ದು ಕೋದಂಡರಾಮನ ಕೊಳಲು ಇಟ್ಟು ದಾಳಿಂಬೆ ಅಲಂಕಾರ ಮಾಡಲಾಗಿ ಆಭರಣಗಳನ್ನ ತೊಡಿಸಲಾಗಿತ್ತು.ಕೋದಂಡರಾಮ ಕೃಷ್ಣಾತಾರದಲ್ಲಿ ದರ್ಶನ ನೀಡಿದ.ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಾಮನ ವಿಗ್ರಹದಲ್ಲಿ ಕೃಷ್ಣನನ್ನು ಕಂಡು ಪುಳಕಿತರಾದರು. ಈ ಸಂದರ್ಭದಲ್ಲಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ  ಇಂದಿರಾಭವನ್ ರಾಜಣ್ಣ ಮಾತನಾಡಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನ ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಎಲ್ಲೆಡೆ ಕೃಷ್ಣನನ್ನು ಆರಾಧನೆಯನ್ನು ಮಾಡಲಾಗುತ್ತದೆ.ಜನರನ್ನು ಕಷ್ಟ ಕಾರ್ಪಣ್ಯದಿಂದ ಕಾಪಾಡಿ ಸಂತಸ ನೀಡಲಿ ಎಂದು ಭಕ್ತರು ಕೃಷ್ಣನನ್ನು ಪೂಜಿಸಿ ಅರಾಧಿಸುತ್ತಾರೆ,ಈ ಹಿನ್ನಲೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೋದಂಡರಾಮ…

Read More

ಶ್ರೀನಿವಾಸಪುರ:ತ್ಯಾಗ ಬಲಿದಾನದ ಪರಿಣಾಮ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದನ್ನು ನಾವೆಲ್ಲರೂ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಇದಕ್ಕಾಗಿ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಮೌಲ್ಯಯುತವಾದ ಜೀವನ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಬೇಕು ಎಂದು ರೋಣೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀನಿವಾಸಗೌಡ ಹೇಳಿದರು, ಅವರು ಶಾಲೆಯಲ್ಲಿ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.ಕಾರ್ಯಕ್ರಮದದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ವಿ.ಗೋವಿಂದಪ್ಪ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಶಿಕ್ಷಕ ಅಮರನಾಥ್ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ:ಇಬ್ಬರು ಶಾಸಕರ ವೈಯುಕ್ತಿಕ ಕಿತ್ತಾಟದ ನಡುವೆ ಕೋಲಾರ ಹಾಲು ಒಕ್ಕೂಟವನ್ನು ಎಳೆದು ತರಬೇಡಿ ಇದು ಜಿಲ್ಲೆಯ ರೈತರ ಜೀವನಾಡಿ ಎಂದು ಕೋಮುಲ್‌ ನಿರ್ದೇಶಕ ಕೆ.ಕೆ.ಮಂಜುನಾಥ್ ಹೇಳಿದರು ಅವರು ಇಂದು ಹಾಲು ಒಕ್ಕೂಟದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗು ಶಾಸಕ ಕೆ.ವೈ.ನಂಜೇಗೌಡರ ನಡುವಿನ ವೈಯುಕ್ತಿಕ ದ್ವೇಷಕ್ಕೆ ರೈತರ ಜೀವನಾಡಿ ಹಾಲು ಒಕ್ಕೂಟದ ಹೆಸರು ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರ ಕ್ಷೇತ್ರದಿಂದ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಚುನಾಯಿತರಾದ್ದಾರೆ ಅವರು ಕೋಮುಲ್‌ ಸಭೆಗಳಲ್ಲಿ ಭಾಗವಹಿಸಿ ಚರ್ಚಿಸಿ ಸಮಸ್ಯೆ ಗೊಂದಲ ಇದ್ದರೆ ಬಗೆ ಹರಿಸಿಕೊಳ್ಳುವುದು ಉತ್ತಮ.ಹಾಲು ಒಕ್ಕೂಟಕ್ಕೆ ಮಂಜೂರಾದ ಜಮೀನು ಕುರಿತಾಗಿ ಎಸ್‌.ಎನ್‌.ನಾರಾಯಣಸ್ವಾಮಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದಿದ್ದಾರೆ ಇದರಿಂದ ಹಾಲು ಒಕ್ಕೂಟದ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿ ಒಕ್ಕೂಟದ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ವೇದಿಕೆ ಕಲ್ಪಿಸುತ್ತೇವೆ ಅಲ್ಲಿ ಕಿತ್ತಾಡಿಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿದ್ದಾರೆ ಹಿರಿಯರು ಇದ್ದಾರೆ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಅಕ್ರಮವಾಗಿ ವಾಸವಾವಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಇವರೊಂದಿಗೆ ಇನ್ನೂ ಎಂಟು ಮಂದಿ ಇರುವುದಾಗಿ ಮಾಹಿತಿ ಬಾಯ್ಬಿಟ್ಟಿದ್ದಾರೆ.ಪಟ್ಟಣದ ಪಾಲಿಟೆಕ್ನಿಕ್ ಬಯಲು ಪ್ರದೇಶದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಇದ್ದವರನ್ನು ಪೊಲೀಸರು ಬಂಧಿಸಿದ್ದಾರೆ.ಪೋಲಿಸರು ವಶಕ್ಕೆ ಪಡೆದವರಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಇದ್ದು ಅಕ್ರಮ ಬಾಂಗ್ಲಾ ವಲಸಿಗರು ಬಾಂಗ್ಲಾದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವರು ಎಂದು ತಿಳಿದುಬಂದಿದೆ.ಈ ಸಂಬಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯೂಜ್ ಡೆಸ್ಕ್:ಕಲ್ಪತರು ನಾಡು ತುಮಕೂರಿನಿಂದ ಕೋಲಾರಕ್ಕೆ ಬರಲು ಈ ರಸ್ತೆ ಬಳಸಿದರೆ ಅಂದಾಜು ಒಂದು ಗಂಟೆ ಸಾಕು ಇನ್ನೂ ಚಿಕ್ಕಬಳ್ಳಾಪುರಕ್ಕೆ ಬಹುಶಃ ನಲವತೈದು ನಿಮಿಷ ಆದರೆ ಸಾಕು ಎನ್ನುತ್ತಾರೆ ವಾಹನ ಚಾಲಕರು.ಈ ರಸ್ತೆ ಬಳಸುವದರಿಂದ ಬೆಂಗಳೂರಿನ ಜನದಟ್ಟಣೆ ರಸ್ತೆಗಳಲ್ಲಿನ ಸಂಚಾರದ ದೀರ್ಘಕಾಲಿಕ ಕಿರಿಕಿರಿ Trafficಯಿಂದ ಸಾಕಪ್ಪ ಸಾಕು ಎಂದು ಬಳಲುವುದು ತಪ್ಪಿಸಲು ಮತ್ತು ಅಂತರ-ರಾಜ್ಯ ಪ್ರಯಾಣಿಕರಿಗೆ ಈ ಹೆದ್ದಾರಿ ನಿರ್ಣಾಯಕ ಬೈಪಾಸ್ ಆಗಿರುತ್ತದೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮಾತು. ಯಾವುದು ಈ ರಸ್ತೆಹಾಗಾದರೆ ಇದು ಯಾವ ರಸ್ತೆ ಎಂದರೆ ಇದು ಬೆಂಗಳೂರು ಉತ್ತರ ಜಿಲ್ಲೆ ಡಾಬಸ್ ಪೇಟೆಯಿಂದ ತಮಿಳುನಾಡಿನ ಹೊಸೂರಿನವರೆಗೆ ವಿಸ್ತರಿಸಿರುವ ನೂತನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ರಸ್ತೆ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ NHAI ಭಾರತ್‌ಮಾಲಾ ಪರಿಯೋಜನಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.NHAI ಅಧಿಕಾರಿಗಳು ಹೇಳುವಂತೆ STRR ನಾಲ್ಕರಿಂದ ಆರು ಪಥಗಳ ಪ್ರವೇಶ-ನಿಯಂತ್ರಿತ ಹೆದ್ದಾರಿಯಾಗಿದ್ದು, ಈ ಕೆಳಗಿನ ಪ್ರಮುಖ ನಗರಗಳಾದ ಡಾಬಸ್…

Read More

ಶ್ರೀನಿವಾಸಪುರ:ಪಟ್ಟಣದ ಸರೋಜಿನಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನವಾಗಿದೆ.ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನೆ ಮೂರು ದಿನಗಳ ಕಾಲ ನಡೆಯಿತು ಭಾನುವಾರ ದಿಂದ ಪೂರ್ವಾರಾಧನೆ,ಸೋಮವಾರ ಮಧ್ಯಾರಾಧನೆ ಹಾಗೂ ಮಂಗಳವಾರ ಉತ್ತರಾರಾಧನೆ ನಡೆದು ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.ಆರಾಧನೆ ಅಂಗವಾಗಿ ಶ್ರೀನಿವಾಸ ದೇವರು ಹಾಗು ಮುಖ್ಯಪ್ರಾಣ ದೇವರು ಸಮೇತ ಶ್ರೀ ರಾಘವೇಂದ್ರ ಬೃಂದಾವನವನ್ನು ವಿಶೇಷ ಅಲಂಕಾರ ಮಾಡಲಾಗಿದ್ದು ಪ್ರತಿದಿನ ಪೂಜೆ, ಅಭಿಷೇಕ, ಸೇರಿದಂತೆ ಸಂಜೆ ಹೊತ್ತು ಭಜನೆ ಪ್ರವಚನ ಹಾಗು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು.

Read More