ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕೃಷ್ಣಾಷ್ಟಮಿ ಸಂಭ್ರಮ ಮನೆಮಾಡಿತ್ತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಂದು ಗೋಕುಲಾಷ್ಟಮಿ ಆಚರಿಸುವುದು ಸಂಪ್ರದಾಯ ಅದರಂತೆ ಇಂದು ಶ್ರಾವಣದ ಶನಿವಾರದ ಹಿನ್ನೆಲೆಯಲ್ಲಿ ಮೂಲ ವಿಗ್ರಹ ಶ್ರೀ ಕೋದಂಡರಾಮ ಮೂರ್ತಿಗೆ ಅಲಂಕಾರಪ್ರಿಯ ನಿಲಮೇಘ ಶ್ಯಾಮ (ನಿಲಿಬಣ್ಣದ) ಕೃಷ್ಣಾವತಾರದ ಅಲಂಕಾರ ಮಾಡಲಾಗಿದ್ದು ಕೋದಂಡರಾಮನ ಕೊಳಲು ಇಟ್ಟು ದಾಳಿಂಬೆ ಅಲಂಕಾರ ಮಾಡಲಾಗಿ ಆಭರಣಗಳನ್ನ ತೊಡಿಸಲಾಗಿತ್ತು.
ಕೋದಂಡರಾಮ ಕೃಷ್ಣಾತಾರದಲ್ಲಿ ದರ್ಶನ ನೀಡಿದ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಾಮನ ವಿಗ್ರಹದಲ್ಲಿ ಕೃಷ್ಣನನ್ನು ಕಂಡು ಪುಳಕಿತರಾದರು. ಈ ಸಂದರ್ಭದಲ್ಲಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ ಇಂದಿರಾಭವನ್ ರಾಜಣ್ಣ ಮಾತನಾಡಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನ ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಎಲ್ಲೆಡೆ ಕೃಷ್ಣನನ್ನು ಆರಾಧನೆಯನ್ನು ಮಾಡಲಾಗುತ್ತದೆ.ಜನರನ್ನು ಕಷ್ಟ ಕಾರ್ಪಣ್ಯದಿಂದ ಕಾಪಾಡಿ ಸಂತಸ ನೀಡಲಿ ಎಂದು ಭಕ್ತರು ಕೃಷ್ಣನನ್ನು ಪೂಜಿಸಿ ಅರಾಧಿಸುತ್ತಾರೆ,ಈ ಹಿನ್ನಲೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೋದಂಡರಾಮ ಸ್ವಾಮಿಗೆ ನೀಲ ಮೇಘಶಾಮ ಕೃಷ್ಣನ ಅಲಂಕಾರ ಮಾಡಿ ವಿಶೇಷ ಪೂಜೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು ಎಂದರು.ಪೂಜಾ ಕೈಂಕರ್ಯ ಗಳನ್ನು ದೇವಾಲಯದ ಪ್ರಧಾನ ಅರ್ಚಕ ರಾಜಗೋಪಾಲಾಚಾರ್ಯ ನಡೆಸಿಕೊಟ್ಟರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



