ಶ್ರೀನಿವಾಸಪುರ:ಇಬ್ಬರು ಶಾಸಕರ ವೈಯುಕ್ತಿಕ ಕಿತ್ತಾಟದ ನಡುವೆ ಕೋಲಾರ ಹಾಲು ಒಕ್ಕೂಟವನ್ನು ಎಳೆದು ತರಬೇಡಿ ಇದು ಜಿಲ್ಲೆಯ ರೈತರ ಜೀವನಾಡಿ ಎಂದು ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್ ಹೇಳಿದರು ಅವರು ಇಂದು ಹಾಲು ಒಕ್ಕೂಟದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗು ಶಾಸಕ ಕೆ.ವೈ.ನಂಜೇಗೌಡರ ನಡುವಿನ ವೈಯುಕ್ತಿಕ ದ್ವೇಷಕ್ಕೆ ರೈತರ ಜೀವನಾಡಿ ಹಾಲು ಒಕ್ಕೂಟದ ಹೆಸರು ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಕ್ಷೇತ್ರದಿಂದ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಚುನಾಯಿತರಾದ್ದಾರೆ ಅವರು ಕೋಮುಲ್ ಸಭೆಗಳಲ್ಲಿ ಭಾಗವಹಿಸಿ ಚರ್ಚಿಸಿ ಸಮಸ್ಯೆ ಗೊಂದಲ ಇದ್ದರೆ ಬಗೆ ಹರಿಸಿಕೊಳ್ಳುವುದು ಉತ್ತಮ.
ಹಾಲು ಒಕ್ಕೂಟಕ್ಕೆ ಮಂಜೂರಾದ ಜಮೀನು ಕುರಿತಾಗಿ ಎಸ್.ಎನ್.ನಾರಾಯಣಸ್ವಾಮಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದಿದ್ದಾರೆ ಇದರಿಂದ ಹಾಲು ಒಕ್ಕೂಟದ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿ ಒಕ್ಕೂಟದ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇದಿಕೆ ಕಲ್ಪಿಸುತ್ತೇವೆ ಅಲ್ಲಿ ಕಿತ್ತಾಡಿ
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿದ್ದಾರೆ ಹಿರಿಯರು ಇದ್ದಾರೆ ಅವರಿಗೆ ಬುದ್ದಿ ಹೇಳುವಷ್ಟು ನಾವು ದೊಡ್ಡವರಲ್ಲ ಅವರಲ್ಲಿ ವಿನಂತಿಸಿಕೊಳ್ಳುತ್ತೇವೆ ನಿಮ್ಮಿಬ್ಬರ ನಡುವೆ ವೈಯುಕ್ತಿಕ ದ್ವೇಷ ಇದ್ದರೆ ನಿಮ್ಮ ಪ್ರತಿಷ್ಠೆಗೆ ತಕ್ಕಂತೆ ಕೋಲಾರದಲ್ಲಿ ವೇದಿಕೆ ಕಲ್ಪಿಸುತ್ತೇವೆ ಅಲ್ಲಿ ಎಷ್ಟು ಹೊತ್ತಾದರು ಚರ್ಚೆ ಮಾಡಿ ಕಿತ್ತಾಡಿ ಅದು ಬಿಟ್ಟು ಅನಾವಶ್ಯಕವಾಗಿ ಕೋಮೂಲ್ ಹೆಸರನ್ನು ಮುಂದಿಟ್ಟು ಕಿತ್ತಾಡುವುದು ಸರಿಯಲ್ಲ.
ಕೋಟಿ ಆದಾಯ ತರುತ್ತಿದೆ ಸೋಲಾರ್ ಪ್ಲಾಂಟ್
ಕೋಲಾರ ಹಾಲು ಒಕ್ಕೂಟದ ಜಮೀನಿನಲ್ಲಿ ಅಳವಡಿಸಿರುವ ಸೋಲಾರ್ ಪ್ಲಾಂಟ್ ನಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು ಅಂದಾಜು ಕೋಟಿ ರೂಪಾಯಿಗಳ ಆದಾಯ ಬರುತ್ತಿದೆ ಇದು ಸಣ್ಣ ಮೊತ್ತ ಅಲ್ಲ, ಇದನ್ನು ತೀವ್ರವಾಗಿ ಪರಿಗಣಿಸಿಬೇಕು ಹಾಗೆ ಇವತ್ತಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ರೈತಾಪಿ ಕುಟುಂಬಗಳನ್ನು ಕಾಪಾಡುತ್ತಿರುವುದು ಹೈನೋದ್ಯಮ ಹಾಗಾಗಿ ಕೋಲಾರ ಹಾಲು ಒಕ್ಕೂಟವನ್ನು ಕಾಪಾಡಿಕೊಂಡು ಹಾಲು ಉತ್ಪಾದಕರ ಹಿತ ಕಾಯುವ ಜವಬ್ದಾರಿ ನಿರ್ದೇಶಕಾರದ ನಮ್ಮೆಲ್ಲರ ಮೇಲಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ನರಸಿಂಹಮೂರ್ತಿ,ಯುವಮುಖಂಡ ಬಂಕ್ ಮಂಜು,ವೆಂಕಟಾದ್ರಿ ಮುಂತಾದವರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



