ನ್ಯೂಜ್ ಡೆಸ್ಕ್: ಕಲಿಯುಗದ ಪ್ರತ್ಯಕ್ಷ ದೈವ ಸಪ್ತಗಿರಿವಾಸ ವೆಂಕಟೇಶ್ವರನ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸುವುದು ಸಹಜ ಆಗಮಿಸುವಂತ ಭಕ್ತರಿಗೆ ಉಳಿದುಕೊಳ್ಳಲು ಕೊಠಡಿಗಳ ಅವಶ್ಯಕತೆ ಇರುತ್ತದೆ.ಇತ್ತ ಕೊಠಡಿಗಳನ್ನು ಕೊಡುವಂತ ಟಿಟಿಡಿ ಕಚೇರಿಯಲ್ಲಿ ಕೊಠಡಿಗಳು ಕಾಲಿ ಇರುವುದಿಲ್ಲ ಸಾವಿರಾರು ಭಕ್ತರು ತಿರುಮಲ ಕಾಯುತ್ತಲೇ ಇರುತ್ತಾರೆ. ಕೆಲವರು ಇದನ್ನೇ ಅವಕಾಶವಾಗಿ ಬಳಸಿಕೊಂಡು, ನಕಲಿ ಆಧಾರ್ ಕಾರ್ಡ್ಗಳು ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ಅಕ್ರಮವಾಗಿ ಪಡೆದುಕೊಂಡಿದ್ದ ಕೊಠಡಿಗಳನ್ನು ಭಕ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಲ್ಲಾಳಿಗಳ ಗ್ಯಾಂಗ್ ಅನ್ನು ತಿರುಮಲ ಟೂ ಟೌನ್ ಪೊಲೀಸರು ಮತ್ತು ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಅನುಮಾನಸ್ಪದವಾಗಿ ಒಡಾಡುತ್ತಿದ್ದ ಆರು ಜನರನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಗ್ಯಾಂಗ್ ರಚಿಸಿಕೊಂಡು ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಠಿಸಿ ಅವುಗಳಲ್ಲಿ ಅವರ ಫೋಟೋಗಳನ್ನು ಮಾರ್ಫಿಂಗ್ ಮಾಡಿಸಿ ಟಿಟಿಡಿ ಸಿಆರ್ಒ ಕಚೇರಿಯಲ್ಲಿ ಬಳಸಿ ಕೊಠಡಿ ಪಡೆಯುತ್ತ ಇದ್ದರು ಎನ್ನಲಾಗಿದ್ದು.
ತಿರುಮಲ ದರ್ಶನ ಪಡೆಯಲು ಬರುವವರನ್ನು ಗುರಿಯಾಗಿಸಿಕೊಂಡು ಅವರಿಗೆ ಹೆಚ್ಚಿನ ಬೆಲೆಗೆ ಕೊಠಡಿಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ಬೆಲೆಗೆ ಕೊಠಡಿಗಳನ್ನು ಮಾರಾಟ ಮಾಡುವುದಲ್ಲದೆ, ಪಿಎಸಿ -5 ನಲ್ಲಿ ಚಾರ್ಜ್ ಮಾಡಲು ಭಕ್ತರು ಮರೆತು ಹೋದ ಮೊಬೈಲ್ ಫೋನ್ಗಳನ್ನು ಸಹ ಕದಿಯುತ್ತಿದ್ದರಂತೆ. ಬಂಧಿತರನ್ನು ಬಿ. ಶ್ರೀನಿವಾಸ್, ಈರಪ್ಪ ಕಾಳಪ್ಪ, ವಿಷ್ಣುವರ್ಧನ್, ಅಮುಲ್ ಕುಮಾರ್ ಸಿಂಗ್, ಎಸ್. ಪ್ರಕಾಶ್ ಮತ್ತು ಪಿ. ಸಂದೀಪ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೊಠಡಿ ಬುಕಿಂಗ್ ಮತ್ತು ನಕಲಿ ಗುರುತಿನ ದಾಖಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಲಾದ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಿರುಮಲದಲ್ಲಿ ಕೊಠಡಿಗಳನ್ನು ಅಧಿಕೃತ ಟಿಟಿಡಿ ಕೌಂಟರ್ಗಳು ಮತ್ತು ಅಧಿಕೃತ ಆನ್ಲೈನ್ ಕಾರ್ಯವಿಧಾನಗಳ ಮೂಲಕ ಮಾತ್ರ ರೂಮಗಳನ್ನು ಪಡೆಯಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ನಕಲಿ ಆಧಾರ್ ಕಾರ್ಡ್ಗಳು ಅಥವಾ ಇತರ ಗುರುತಿನ ದಾಖಲೆಗಳ ಮೂಲಕ ಕೊಠಡಿಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಜನರನ್ನು ನಂಬಬೇಡಿ ಎಂದು ಅವರಿಗೆ ಸೂಚಿಸಿದ್ದು ಕೊಠಡಿ ಕೊಡಿಸುವ ದಲ್ಲಾಳಿಗಳು, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಭಕ್ತರನ್ನು ವಂಚಿಸಲು ಪ್ರಯತ್ನಿಸುವವರನ್ನು ಕಂಡರೆ, ತಕ್ಷಣ ಪೊಲೀಸ್ ತುರ್ತು ಸೇವೆ 112 ಅಥವಾ ಸಂಬಂಧಪಟ್ಟ ಟಿಟಿಡಿ ಜಾಗೃತ ಅಧಿಕಾರಿಗಳಿಗೆ ತಿಳಿಸಲು ತಿಳಿಸಲಾಗಿದೆ.
Trending
- ತಿರುಮಲ ರೂಮ್ ಕೊಡಿಸುವ ದಂಧೆ,ನಕಲಿ ಆಧಾರ್ ಫೋಟೋ ವಶಕ್ಕೆ !
- ಆಂಧ್ರ ಚಿತ್ತೂರು-ಕುಪ್ಪಂ ನಡುವೆ ಹೊಸ ರೈಲು ಮಾರ್ಗ!
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಕೆ!
- ಕೋಲಾರ-ದೇವನಹಳ್ಳಿ ನಡುವೆ Hಕ್ರಾಸ್ ಬಳಿ ಫ್ಲೈಓವರ್ ನಿರ್ಮಾಣ!
- ಗ್ರಹ ದೋಷ ನಿವಾರಣೆಗೆ ಭೈರವಾರಾಧನೆ:ಕಾಲ ಭೈರವಾಷ್ಟಮಿ ಪೂಜೆ ಮಹತ್ವ!
- ಶ್ರೀನಿವಾಸಪುರ: ಚೌಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ ಜಯಂತ್ಯುತ್ಸವ
- ಶಿವಕುಮಾರ್ ಸಂಪುಟ ವಿಸ್ತರಣೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಗದ ಮಂತ್ರಿ ಸ್ಥಾನ!
- ಶ್ರೀನಿವಾಸಪುರ:ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಟ್ಟಣದ ರಸ್ತೆ ವೃತ್ತಗಳು!
Monday, August 10



