ನ್ಯೂಜ್ ಡೆಸ್ಕ್:ಕರ್ತವ್ಯ ನಿರತ ಪೋಲಿಸ್ ಹೆಡ್ ಕಾನ್ಸ್ಟೆಬಲ್ ಕೊರಳ ಪಟ್ಟಿ ಹಿಡಿದು ಸಾರ್ವಜನಿಕವಾಗಿ ಹಲ್ಲೆ ಮಾಡಿದಲ್ಲದೆ ಚಾಕುವಿನಿಂದ ಬೆದರಿಸಿದ ಘಟನೆಗೆ ಸಂಬಂದಿಸಿದಂತೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ಯುವಕರನ್ನು ಬಂಧಿಸಿ ಕೈಗೆ ಬೇಡಿ ತೋಡಿಸಿ ಮೆರವಣಿಗೆ ಮೂಲಕ ಕೋರ್ಟ್ ಕರೆದುಕೊಂಡು ಹೋದ ಘಟನೆ ಆಂಧ್ರದ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ನಗರದಲ್ಲಿ ನಡೆದಿರುತ್ತದೆ.
ಶ್ರೀಕಾಳಹಸ್ತಿ ರೈಲು ನಿಲ್ದಾಣದ ಬಳಿ ಲ್ಯಾಪ್ಟಾಪ್ ಕಳವು ಮಾಡಲಾಗಿದೆ ಎಂದು ಡಯಲ್ -100 ಗೆ ಬಂದ ಮಾಹಿತಿಗೆ ಸ್ಪಂದಿಸಿದ ಶ್ರೀಕಾಳಹಸ್ತಿ ಒನ್ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ರಾಮಣಯ್ಯ ಸ್ಥಳಕ್ಕೆ ಹೋಗಿದ್ದಾರೆ ಅದೇ ಸಮಯದಲ್ಲಿ, ಎರಡು ಬೈಕ್ಗಳು ಡಿಕ್ಕಿಯಾಗಿ ಇಬ್ಬರು ಯುವಕರು ಗಾಯಗೊಂಡಿದ್ದು ಅಪಘಾತಕ್ಕೆ ಕಾರಣವಾದ ಬೈಕ್ನ ಬೀಗದ ಕೈ ಅನ್ನು ಹೆಡ್ ಕಾನ್ಸ್ಟೆಬಲ್ ವಶಕ್ಕೆ ತೆಗೆದುಕೊಂಡಿದ ಬಗ್ಗೆ ಆಕ್ಷೇಪಿಸಿದ ಯುವಕರು ಹೆಡ್ ಕಾನ್ಸ್ಟೆಬಲ್ ವಿರುದ್ದ ವಾಗ್ವಾದಕ್ಕೆ ಇಳಿದಿದ್ದಾರೆ. ಹೆಡ್ ಕಾನ್ಸ್ಟೆಬಲ್ ರಮಣ್ಣಯ್ಯ ಜೊತೆ ವಾಗ್ವಾದ ನಡೆಸಿದ ಯುವಕರು ಸಾರ್ವಜನಿಕರು ತಡೆದರು ನಿರ್ಲಕ್ಷಸಿದ ಯುವಕರು ಪೋಲಿಸ್ ಅನ್ನು ಕಾಲರ್ ಹಿಡಿದು ಎಳೆದಾಡಿ ಹಲ್ಲೆ ಮಾಡಲು ಮುಂದಾಗಿದಲ್ಲದೆ ಪ್ಯಾಂಟ್ ಜೇಬಲಿದ್ದ ಚಾಕು ತೆಗೆದು ಬೆದರಿಕೆ ಹಾಕಿದ್ದಲ್ಲದೆ ಪೋಲಿಸ್ ಅನ್ನು ಸಾರ್ವಜನಿಕವಾಗಿ ನಿಂದಿಸಿದ್ದು ದೃಶ್ಯಗಳು ಅಲ್ಲಿದ್ದ ಸಿಸಿ ಟಿವಿ ಕ್ಯಾಮರದಲ್ಲಿ ದಾಖಲಾಗಿದ್ದು ಇದರ ಆಧಾರದ ಮೇಲೆ ಹೆಡ್ ಕಾನ್ಸ್ಟೇಬಲ್ ರಾಮಣ್ಣಯ್ಯ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಜಿತೇಂದ್ರ ಮತ್ತು ಶ್ರೀನಿವಾಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದ್ದು ಆರೋಪಿಗಳನ್ನು ಹೆಚ್ಚುವರಿ ಎಸ್ಪಿ ರವಿ ಮನೋಹರಾಚಾರಿ ಅವರ ಮುಂದೆ ಹಾಜರುಪಡಿಸಿ ತನಿಖೆ ನಡೆಸಿದ್ದು ಆರೋಪಿ ಶ್ರೀನಿವಾಸ್ ವಿರುದ್ಧ ಈ ಹಿಂದೆ ಸಹ ಪ್ರಕರಣ ದಾಖಲಾಗಿತ್ತು ಅಲ್ಲದೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ವೈರಲ್ ಮಾಡುವ ಉದ್ದೇಶದಿಂದ ಆರೋಪಿಗಳು ಆನ್ಲೈನ್ನಲ್ಲಿ ಚಾಕುವನ್ನು ಖರೀದಿಸಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ನಂತರ ಆರೋಪಿಗಳಿಗೆ ಕೈಕೋಳ ಹಾಕಿ ಶ್ರೀಕಾಳಹಸ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
Trending
- ಪೋಲಿಸ್ ಮೇಲೆ ಹಲ್ಲೆ ಆರೋಪ:ಕೈಕೋಳ ಹಾಕಿ ಮೆರವಣಿಗೆ!
- ತಿರುಮಲ ರೂಮ್ ಕೊಡಿಸುವ ದಂಧೆ,ನಕಲಿ ಆಧಾರ್ ಫೋಟೋ ವಶಕ್ಕೆ !
- ಆಂಧ್ರ ಚಿತ್ತೂರು-ಕುಪ್ಪಂ ನಡುವೆ ಹೊಸ ರೈಲು ಮಾರ್ಗ!
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಕೆ!
- ಕೋಲಾರ-ದೇವನಹಳ್ಳಿ ನಡುವೆ Hಕ್ರಾಸ್ ಬಳಿ ಫ್ಲೈಓವರ್ ನಿರ್ಮಾಣ!
- ಗ್ರಹ ದೋಷ ನಿವಾರಣೆಗೆ ಭೈರವಾರಾಧನೆ:ಕಾಲ ಭೈರವಾಷ್ಟಮಿ ಪೂಜೆ ಮಹತ್ವ!
- ಶ್ರೀನಿವಾಸಪುರ: ಚೌಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ ಜಯಂತ್ಯುತ್ಸವ
- ಶಿವಕುಮಾರ್ ಸಂಪುಟ ವಿಸ್ತರಣೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಗದ ಮಂತ್ರಿ ಸ್ಥಾನ!
Thursday, August 13



