ಮುಳಬಾಗಿಲು:ಭಾರತೀಯ ಸಂಸ್ಕೃತಿಗಳಲ್ಲಿ ಕೃಷಿ ಸಂಸ್ಕೃತಿ ಅತ್ಯಂತ ಉನ್ನತ ಪರಂಪರೆಯಲ್ಲಿತ್ತು ದೇಶದ ಮೇಲೆ ನಡೆದ ದಾಳಿಕೊರರ ಅತಿಕ್ರಮಣದ ಪರಿಣಾಮ ವಿದೇಶಿ ಪ್ರಭಾವ ನಮ್ಮ ಸಾಂಸೃತಿ ನೆಲೆಗಟ್ಟುಗಳ ಮೇಲೆ ನಡೆದು ಮನುಷ್ಯರೊಂದಿಗೆ ಈ ನೆಲದ ಮಹತ್ವದ ವ್ಯವಸಾಯದ ಸಂಪ್ರದಾಯಗಳು ಸೇರಿದಂತೆ ಜಲ ಸೇರಿದಂತೆ ಪ್ರಕೃತಿ ವಿಕೃತಿಯಾಗುವತ್ತ ಸಾಗಿದೆ ಎಂದು ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠಾಧಿಪತಿ ತಿಮ್ಮಪ್ಪಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಅವರು ಮುಳಬಾಗಿಲು ತಾಲೂಕಿನ ಅವಣಿ ಹೋಬಳಿ ಪಿಚ್ಚಗುಂಡ್ಲಹಳ್ಳಿ ಗ್ರಾಮದ ಬಂಡೆಯ ಮೇಲೆ ಭಾರತೀಯ ಕಿಸಾನ್ ಸಂಘದ ಸಹಯೋಗದಲ್ಲಿ ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಭೂಮಿ (ಮಣ್ಣು) ಪೂಜೆ,ಭತ್ತದ ರಾಶಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿದರು,ವಿದೇಶಿ ಆಡಳಿತಗಾರರ ಅಕ್ರಮಣದಿಂದ ನಮ್ಮ ಪೂರ್ವಿಕರು ಮಾಡಿಕೊಂಡು ಬರುತ್ತಿದ್ದ ಕೃಷಿ ಪದ್ಧತಿಗಳು, ಪರಂಪರೆಗಳು ಕಣ್ಮರೆಯಾಗಲು ಕಾರಣವಾಯಿತು ಈ ನೆಲದ ಧಾರ್ಮಿಕ ತಳಹದಿಗೂ ಧಕ್ಕೆಯಾಗಿ ಪರಸ್ಪರ ಸೌಹಾರ್ದತ ಭಾವನೆಗಳು ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂಗಾರು ಕೃಷಿ ಆರಂಭದಲ್ಲಿ ಹೊಲದಲ್ಲಿ ನೇಗಿಲುಕಟ್ಟಿ ಭೂಮಿ ಪೂಜೆ ನೆರವೇರಿಸಿ ಎತ್ತುಗಳಿಗೆ ಪೂಜೆ ಸಲ್ಲಿಸಿ ಗೋಗ್ರಾಸ ನೀಡಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿತ್ತು, ಗೋವುಗಳ ಗೊಬ್ಬರ, ಗಿಡಮರಗಳ ಎಲೆಗಳನ್ನು ಭೂಮಿಗೆ ಹಾಕಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ಕೃಷ್ಟ ಆಹಾರ ಪದಾರ್ಥಗಳನ್ನು ರೈತರು ಬೆಳೆದು ಸಮಾಜಕ್ಕೆ ಅನ್ನದಾತರಾಗಿದ್ದರು, ಭಾರತೀಯ ಕೃಷಿಯ ಸಂಸ್ಕೃತಿ ರಾಮಾಯಣ ಮಹಾಭಾರತ ಕಾಲದಿಂದಲೂ ಬಂದಿದೆ, ಭರತ ಮಹಾರಾಜರು ಕೃಷಿಯನ್ನು ಮಾಡುತ್ತಿದ್ದರು, ಮಹಾಭಾರತದ ಕಾಲದಲ್ಲಿ ಕೃಷಿಯನ್ನು ವೈಜ್ಞಾನಿಕವಾಗಿ ಯಾವ ರೀತಿ ಮಾಡಬೇಕು ಎಂಬುದು ಭಗವನ್ ಬಲರಾಮ ನೇಗಿಲನ್ನು, ಒನಕೆಯನ್ನು ಹಿಡಿದು ಕೃಷಿ ಮತ್ತು ಕೃಷಿ ಉತ್ಪನ್ನಗಳಿಗೆ ಸಂಸ್ಕಾರ ನೀಡುವುದನ್ನು ಯಾವ ರೀತಿ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ, ರೈತ ಬೆಳೆ ಮಾಡುವ ಮೊದಲು ಪ್ರಕೃತಿ, ಆಕಾಶ, ಭೂಮಾತೇ , ಗಂಗಾಮಾತೇ ,ಗೋಮಾತೇ ಪೂಜೆ ಮಾಡುವ ಮೂಲಕ ಕಾರ್ಯನಿರ್ವಹಿಸಿ ಉತ್ತಮ ಪರಿಸರವನ್ನು ಸಮಾಜಕ್ಕೆ ನೀಡಿದ್ದರು ಇದನ್ನು ನಮ್ಮ ಪೂರ್ವಿಕರು ಅನುಸರಿಸಿಕೊಂಡು ಬರುವ ಮೂಲಕ ಪರಿಸರಸಂರಕ್ಷರಾಗಿದ್ದರು ಎಂದರು.
ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ. ಅಪ್ಪಾಜಿಗೌಡ ಮಾತನಾಡಿ ಆಧುನಿಕ ಯುಗದಲ್ಲಿ ಪೈಪೋಟಿ ಜೀವನ ಮಾಡುತ್ತಿರುವ ನಾವು,ಮುಂದೆ ಪ್ರಕೃತಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಆಲೋಚನೆ ಇಲ್ಲದೆ ಕೃಷಿಯನ್ನು ವೈಜ್ಞಾನಿಕವಾಗಿಸುವ ಬರದಲ್ಲಿ ಭೂಮಿಗೆ ಎತೇಚ್ಚವಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಭೂಮಿಯನ್ನು ಬರಡು ಮಾಡುತ್ತಿದ್ದೇವೆ ಜೊತೆಗೆ ಮನುಕುಲಕ್ಕೆ ಮಾರಕವಾದಂತ ಕೀಟನಾಶಕಗಳನ್ನು ಅವೈಜ್ಞಾನಿಕವಾಗಿ ಬಳಸುತ್ತಿರುವುದರಿಂದ ಭೂಮಿ ನೀರು ಕಲಿಷಿತವಾಗಿದೆ ಜನರು ವಿಷಯುಕ್ತ ಆಹಾರ ಸೇವನೆ ಮಾಡುವಂತಾಗಿದೆ ಇದರಿಂದ ಹಲವಾರು ರಿತಿಯ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಈ ಬಗ್ಗೆ ಜಾಗೃತಿ ವಹಿಸಿ ಸಮಾಜವನ್ನು ಎಚ್ಚರಿಸುವ ಕೆಲಸ ತುರ್ತಾಗಿ ಆಗಬೇಕಿದೆ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬರಡು ಭೂಮಿ ಮಾಡಿದರೆ
ನೈಸರ್ಗಿಕ ಮತ್ತು ಸಾವಯುವ ಕೃಷಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಕೃಷಿಕರು ಸೇರಿದಂತೆ ಇಡೀ ಸಮಾಜದ ಆರೋಗ್ಯವನ್ನು ಕಾಪಾಡಲು ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಕೆಎಸ್ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ ಅವಣಿ ಹೋಬಳಿ ತೋಟಗಾರಿಕೆ ಅಧಿಕಾರಿ ಮುರುಗೇಶ್,ಹೊಸಕೆರೆ ಗ್ರಾಮದ ರೈತ ಹೆಚ್. ವಿ. ನಾರಾಯಣಸ್ವಾಮಿ , ಕೀಲುಹೊಳಲಿ ರೈತ ಕೃಷ್ಣಪ್ಪ,ಹೊಸಕೆರೆ ಗ್ರಾಮದ ಕೆರೆ ಅಚ್ಚುಕಟ್ಟಿನಲ್ಲಿ ತಲಾ ಎರಡು ಎಕರೆ ಜಮೀನನ್ನು ಬೇಸಿಗೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆಯಲು ಅವಕಾಶ ಮಾಡಿಕೊಟ್ಟ ಕಾರಣ 100 ಕ್ವಿಂಟಾಲ್ ಭತ್ತ ಬೆಳೆದ ಇಬ್ಬರೂ ರೈತರನ್ನು ಸನ್ಮಾನಿಸಲಾಯಿತು ಮಹಿಳಾ ಕೃಷಿಕಾರ್ಮಿಕರಿಗೆ ಅರಿಶಿಣ ಕುಂಕುಮ, ಕುಪ್ಪಸ, ಬಳೆ ಬಾಗಿನ ನೀಡಿ ಭತ್ತವನ್ನು ದಾನವನ್ನು ಮಾಡಲಾಯಿತು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



