ನೂಜ್ ಡೆಸ್ಕ್:ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿ ಮದುವೆಯಾದ ಮೇಷ್ಟ್ರು ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.ಪ್ರೇಮಿಯ ಜೊತೆ ಹೋದ ಮಗಳ ನೆನೆದು ಕಣ್ಣೀರುಡುತ್ತಿರುವ ವಿದ್ಯಾರ್ಥಿನಿಯ ಪೋಷಕರು.
ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರು ನಂತರ ಶಾಲೆ ಮೇಷ್ಟ್ರು ಆದರೆ ಇಲ್ಲೊಬ್ಬ ಶಿಕ್ಷಕ ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೇಮ ಪಾಠ ಹೇಳಿ ಪ್ರೀತಿಗೆ ಬೀಳಿಸಿಕೊಂಡು ಮದುವೆಯಾಗಿರುವ ಘಟನೆ
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ,ಸ್ಥಳೀಯ ಖಾಸಗಿ ಬಿಎಡ್ ಕಾಲೇಜು ಉಪನ್ಯಾಸಕ ಬೆಂಕಿಪುರದ ನಿವಾಸಿ ಯಶೋಧ್ ಕುಮಾರ್ ಹಾಗೂ ಕಾಲೇಜಿನ ಬಿ.ಎಡ್ ವಿಧ್ಯಾರ್ಥಿನಿ ಚಿಕ್ಕಹುಣಸೂರು ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡಿದ್ದಾರೆ. ನಂತರ ರಕ್ಷಣೆಗಾಗಿ ಪೊಲೀಸರ ಮೊರೆಗೆ ಹೋಗಿದ್ದಾರೆ.
ಮಗಳನ್ನು ಶಿಕ್ಷಕಿಯನ್ನು ಮಾಡಬೇಕು ಎಂಬ ಕನಸುಕಂಡ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡುವ ಸಜ್ಜೇಗೌಡ, ಸಾಲ ಸೋಲ ಮಾಡಿ ಮಗಳು ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್ ಕಾಲೇಜಿಗೆ ಸೇರಿಸಿದ್ದರು ಡಿಎಡ್ ಮುಗಿಸಿದ ಪೂರ್ಣಿಮಾ ಮನೆಯಲ್ಲಿದ್ದಳು. ಡಿಎಡ್ ವ್ಯಾಸಂಗ ಮಾಡುವಾಗಲೇ ತನಗೆ ಪಾಠ ಮಾಡುತ್ತಿದ್ದ ಮೇಷ್ಟ್ರೀಗೆ ಮನಸ್ಸು ಕೊಟ್ಟು ಇಬ್ಬರೂ ಪ್ರೀತಿಗೆ ಬಿದಿದ್ದರು ಇದು ಪೂರ್ಣಿಮಾಳ ಪೋಷಕರಿಗೆ ತಿಳಿದು ವಿರೋಧ ವ್ಯಕ್ತಪಡಿಸಿ ಬುದ್ದಿಹೇಳಿ ಎಚ್ಚರಿಸಿದ್ದರು.
ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಹೋದವಳು
ಡಿ.26ರ ಗುರುವಾರ ಕಾಲೇಜಿನಿಂದ ಸರ್ಟಿಫಿಕೇಟ್ ತರಬೇಕಿದೆ ಎಂದು ಹೇಳಿ ಹೋದ ಪೂರ್ಣಿಮಾ,ಮನೆ ಬಾರದೆ ಇರುವುದು ನೋಡಿ ಅನುಮಾನಗೊಂಡ ಪೋಷಕರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ದಾಖಲಿದ್ದರು ಇತ್ತ ಮನೆಯವರಿಗೆ ಕೈಕೊಟ್ಟ ಪುರ್ಣಿಮಾ ತನ್ನ ಪ್ರಿಯಕರನ ಯಶೋಧ್ ಕುಮಾರ್ ಜೊತೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಪೋಲಿಸ್ ಠಾಣೆಯಲ್ಲಿ ಪೋಷಕರಿಗೆ ಪಾಠ
ಈ ನಡುವೆ ಬಿಳಿಕೆರೆ ಪೋಲಿಸ್ ಠಾಣೆ ಪೋಲಿಸರು ಪ್ರೇಮಿಗಳನ್ನು ಠಾಣೆಗೆ ಕರೆಸಿ ಎರಡು ಕುಟುಂಬದವರನ್ನು ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ ಪ್ರೇಮಿಗಳಾಗಿದ್ದ ನಾವು ಪ್ರೀತಿಸಿ ಮದುವೆಯಾಗಿದ್ದೇವೆ ನಮಗೆ ರಕ್ಷಣೆ ನೀಡಿ ನಾವು ಒಟ್ಟಿಗೆ ಇರುತ್ತೇವೆಂದು ಪಟ್ಟು ಹಿಡಿದ ಪರಿಣಾಮ, ಪೊಲೀಸರು ಪೋಷಕರಿಗೆ ತಿಳುವಳಿಕೆ ಮೂಡಿಸಿ ವಿವಾಹ ನೋಂದಾಯಿಸಿಕೊಳ್ಳುವಂತೆ ಪ್ರೇಮಿಗಳಿಗೆ ಸೂಚಿಸಿ ಕಳುಹಿಸಿದ್ದಾರೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



