ನ್ಯೂಜ್ ಡೆಸ್ಕ್:ಮಹಿಳಾ ಐಎಎಸ್ ಅಧಿಕಾರಿಗೆ ಅನಪೇಕ್ಷಿತ ಸಂದೇಶಗಳನ್ನು ಕಳುಹಿಸಿರುವುದು ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನೀಡಿರುವ ದೂರಿನ ಪ್ರಕರಣ ಆಡಳಿತಾರೂಢ ಪಕ್ಷದ ಶಾಸಕನ ವಿರುದ್ಧವೇ ದಾಖಲಾಗಿರುವುದರಿಂದ ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಳ್ಳಕುರಿಚಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ. ಅರುಳ್ ವಿಗ್ನೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 27ರ ಶುಕ್ರವಾರ ಸಂಜೆ ಕಳ್ಳಕುರಿಚಿಯಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.
ಕಳ್ಳಕುರಿಚಿ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಆಡಳಿತ ರೂಡ ಪಕ್ಷದ ಶಾಸಕ ಸಿ. ಅರುಳ್ ವಿಗ್ನೇಶ್ ವಿರುದ್ಧ ನವೆಂಬರ್ 23ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು.
ಶಾಸಕರು ತಮ್ಮ ಮೊಬೈಲ್ಗೆ ಅನುಚಿತ ಹಾಗೂ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು ಮತ್ತು ತಮ್ಮೊಂದಿಗೆ ಅನಪೇಕ್ಷಿತ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬುದು ದೂರಿನ ಪ್ರಮುಖ ಆರೋಪವಾಗಿದೆ.
ಇದರ ಆಧಾರದ ಮೇಲೆ ಕಳ್ಳಕುರಿಚಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನವೆಂಬರ್ ತಿಂಗಳ ಆರಂಭದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದೆ ಎಂದು ಹೇಳಲಾಗಿದ್ದು ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶದ ನಂತರ ತನಿಖೆಗೆ ಹಿರಿಯ ಅಧಿಕಾರಿಗಳ ನೇಮಕವಾಗಿ ಪ್ರಕರಣ ದಾಖಲಾದ ನಂತರವೂ ತನಿಖೆಯ ಪ್ರಗತಿ ಹಾಗೂ ಅಧಿಕಾರಿಗಳ ಕ್ರಮದ ಕುರಿತು ಪ್ರಶ್ನೆಗಳು ಎದ್ದಿದ್ದವು. ಈ ಸಂಬಂಧ ವಕೀಲೆಯೊಬ್ಬರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ನಿರ್ದೇಶನ ನೀಡಿದರು.ಇದರಂತೆ ತಿರುಪ್ಪೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃಷ್ಟಿ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಯಿತು. ಚೆನ್ನೈ ಪೊಲೀಸ್ ಇಲಾಖೆಯ ಐಜಿಪಿ ಎನ್. ಕಾಮಿನಿ ಅವರಿಗೆ ತನಿಖೆಯ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಲಾಯಿತು.
ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡಬಾರದು ಮತ್ತು ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿತು. ಮ್ಯಾಜಿಸ್ಟ್ರೇಟ್ ಮುಂದೆ ಮೂರು ಗಂಟೆಗಳ ಕಾಲ ಹೇಳಿಕೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ನವೆಂಬರ್ 26ರಂದು ಗುರುವಾರ ಮಹಿಳಾ ಜಿಲ್ಲಾಧಿಕಾರಿ ಕಳ್ಳಕುರಿಚಿ ಜಿಲ್ಲಾ ಫಾಸ್ಟ್ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿ ಸುಮಾರು ಮೂರು ಗಂಟೆಗಳ ಕಾಲ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಇದಕ್ಕೂ ಮೊದಲು ತನಿಖಾಧಿಕಾರಿ ಶೃಷ್ಟಿ ಸಿಂಗ್ ಹಾಗೂ ಮೇಲ್ವಿಚಾರಣಾಧಿಕಾರಿ ಐಜಿಪಿ ಎನ್. ಕಾಮಿನಿ ಅವರು ಜಿಲ್ಲಾಧಿಕಾರಿಯ ಶಿಬಿರ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರ ಸಾಕ್ಷಿಗಳಿಂದಲೂ ಮಾಹಿತಿ ಸಂಗ್ರಹಿಸಲಾಯಿತು. ಜಿಲ್ಲಾಧಿಕಾರಿಯ ಪತಿಯೂ ಆಗಿರುವ ವಿಲ್ಲುಪುರಂ ಜಿಲ್ಲಾಧಿಕಾರಿ ಎಸ್. ಶೇಖ್ ಅಬ್ದುಲ್ ರಹಮಾನ್ ಅವರನ್ನೂ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರಂತೆ.
ಶಾಸಕನ ಬಂಧನ
ನವೆಂಬರ್ 27ರ ಶುಕ್ರವಾರ ಸಂಜೆ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭುವನೇಶ್ವರಿ ನೇತೃತ್ವದ ಪೊಲೀಸ್ ತಂಡ ಶಾಸಕರ ನಿವಾಸಕ್ಕೆ ತೆರಳಿ ಬಂಧನ ವಾರಂಟ್ ತೋರಿಸಿ ಅವರನ್ನು ವಶಕ್ಕೆ ಪಡೆದುಕೊಂಡಿತು.
ಇದಕ್ಕೂ ಮುನ್ನ ನವೆಂಬರ್ 25ರಂದು ಪೊಲೀಸರು ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.
ಬಂಧನದ ಸಂದರ್ಭದಲ್ಲಿ ಶಾಸಕರ ನಿವಾಸದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಂಧನದ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳು ಹಾಗೂ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಯಾವೆಲ್ಲಾ ಕಾನೂನು ಸೆಕ್ಷನ್ಗಳಡಿ ಪ್ರಕರಣ?
ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಮುಖವಾಗಿ ನಾಲ್ಕು ಸೆಕ್ಷನ್ಗಳನ್ನು ಉಲ್ಲೇಖಿಸಲಾಗಿದೆ.ಸೆಕ್ಷನ್ 75: ಲೈಂಗಿಕ ಕಿರುಕುಳ.ಸೆಕ್ಷನ್ 78: ಮಹಿಳೆಯನ್ನು ಹಿಂಬಾಲಿಸುವುದು (Stalking).ಸೆಕ್ಷನ್ 79: ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದ ಮಾತು ಅಥವಾ ವರ್ತನೆ.
ಸೆಕ್ಷನ್ 132: ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಉದ್ದೇಶದ ಹಲ್ಲೆ ಅಥವಾ ಬಲಪ್ರಯೋಗ.ಇದರ ಜೊತೆಗೆ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
Trending
- ತಮಿಳುನಾಡು ಅಧಿಕಾರಿಗೆ ಅನಪೇಕ್ಷಿತ ಸಂದೇಶ ಕಳಿಸಿದ ಪ್ರಕರಣ ಆಡಳಿತರೂಡ ಶಾಸಕನ ಬಂಧನ!
- ತಾಲೂಕು ಅಧಿಕಾರಿಗಳು ಪ್ರಭಾವಿಗಳ ಕೈಗೊಂಬೆಯಾಗಿ ವರ್ತನೆ ಶಾಸಕ ವೆಂಕಟಶಿವಾರೆಡ್ಡಿ ಆರೋಪ!
- ತಿರುಪ್ಪರಂಕುಂದ್ರಂ ದೀಪ:ಕೋರ್ಟ್ ಮುಂದೆ ತಪ್ಪೊಪ್ಪಿಕೂಂಡು ಕ್ಷಮೆ ಯಾಚಿಸಿದ ತಮಿಳುನಾಡು ಸರ್ಕಾರ!
- Tamil Nadu:ತಿರುಪ್ಪರಂಕುಂದ್ರಂ ಕೊನೆಗೂ ಬೆಳಗಿದ ಕಾರ್ತಿಕ ದೀಪ!
- ತಾಲೂಕು ಆಡಳಿತ,ಪೊಲೀಸ್ ಇಲಾಖೆ ವಿರುದ್ಧ ಶಾಸಕ ವೆಂಕಟಶಿವಾರೆಡ್ಡಿ ಧರಣಿ!
- ಶ್ರೀನಿವಾಸಪುರ: ಸಿರಿಧ್ಯಾನ ರತ್ನಮ್ಮನಿಗೆ FKCCI ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ!
- ಶ್ರೀನಿವಾಸಪುರ: ಕೀರ್ತಿ ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಚಿನ್ನದ ಪದಕ ವಿಜೇತೆ ತಾಡಿಗೋಳ್ ದಿವ್ಯಾ!
- ಖ್ಯಾತ ಟಾಲಿವುಡ್ ನಟ ಮತ್ತೆ villain ಪಾತ್ರ ಮಾಡುತ್ತಾರ?
Sunday, November 29



