ಸಿನಿಮಾ ಡೆಸ್ಕ್: ತೆಲಗಿನ ಖ್ಯಾತ ನಟ ಮ್ಯಾಚೋ ಸ್ಟಾರ್ ಗೋಪಿಚಂದ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ‘ತೊಲಿ ವಲಪು’ Tholi Valapu (2001) ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ‘ಜಯಂ’, ‘ನಿಜಂ’ ಹಾಗು ‘ವರ್ಷಂ’ ಚಿತ್ರಗಳ ಮೂಲಕ ಖಳನಾಯಕನಾಗಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು ಮತ್ತೆ ನಟ ನಾಯಕನಾಗಿ ತೆಲಗು ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದರು. ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ ನಂತರ, 2004ರಲ್ಲಿ ಬಿಡುಗಡೆಯಾದ ‘ಯಜ್ಞಂ’ ಚಿತ್ರದ ಮೂಲಕ ಅವರು ನಾಯಕ ನಟನಾಗಿ ದೊಡ್ಡ ಯಶಸ್ಸನ್ನು ಪಡೆದರು.
ಖಳನಾಯಕನಾಗಿ ನಟಿಸುತ್ತಿದ್ದ ಅವರು ನಾಯಕನಾಗಿ ತೆಲಗು ಸಿನಿಮಾ ರಂಗದಲ್ಲಿ ಅನೇಕ ಮಾಸ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಸರಿಯಾದ ಹಿಟ್ ಸಿನಿಮಾಗಳ ಕೊರತೆಯಿಂದ ಬಳಲುತ್ತಿರುವ ಗೋಪಿಚಂದ್, ತಮ್ಮ ವೃತ್ತಿಜೀವನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತೆಲಗು ಸಿನಿಮಾ ರಂಗದಲ್ಲಿ ಭಾರಿ ಪ್ರಚಾರ ನಡೆಯುತ್ತಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ, ಗೋಪಿಚಂದ್ ಮತ್ತೊಮ್ಮೆ Power full ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದು ಸಹ ತಮಿಳು ಸೂಪರ್ ಸ್ಟಾರ್ ಹೀರೋ ಸೂರ್ಯ ನಟಿಸಿರುವ ಚಿತ್ರದಲ್ಲಿ ಅಂತೆ ಈಗ ಆ ಮಾತು ಉದ್ಯಮದಲ್ಲಿHot Hot ಚರ್ಚೆಗೆ ಗ್ರಾಸವಾಗಿದೆ.
ಸೂರ್ಯ ನಟನೆಯ 49 ನೇ ಚಿತ್ರದಲ್ಲಿ ವಿಲನ್
‘ಮಂದಾಡಿ’ ತಮಿಳು ಚಿತ್ರದ ಮೂಲಕ ಯಶಸ್ಸು ಗಳಿಸಿದ ನಿರ್ದೇಶಕ ಮಥಿಮಾರನ್ ಪುಗಳೇಂದಿ ಅವರ ನಿರ್ದೇಶನದಲ್ಲಿ ಸೂರ್ಯ Suriya 49 ನೇ ಚಿತ್ರದಲ್ಲಿ ನಟಿಸಲಿದ್ದರಂತೆ ಇದು ತಮಿಳು ಉದ್ಯಮದಲ್ಲಿ ಕೇಳಿಬರುತ್ತಿರುವ ಸುದ್ಧಿ, ಕರಾವಳಿ ಹಿನ್ನೆಲೆಯ ಬ್ಯಾಕ್ ಗ್ರೌಂಡನಲ್ಲಿ ನಡೆಯುವ ಆಕ್ಷನ್ ಡ್ರಾಮಾ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ ನಟರ ಆಯ್ಕೆ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ, ನಿರ್ಮಾಪಕರು ಸೂರ್ಯಗೆ ಸರಿಹೊಂದುವ ಖಳನಾಯಕನಾಗಿ ಟಾಲಿವುಡ್ ನಾಯಕ ಗೋಪಿಚಂದ್ ಅವರ ಹೆಸರನ್ನು ಪರಿಗಣಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಗೋಪಿಚಂದ್ ಅವರಂತೆ ಎತ್ತರ ಮತ್ತು ತೀವ್ರತೆಯ ನೋಟ ಹೊಂದಿರುವ ನಟ ಸೂರ್ಯ ಎದುರು ನಿಂತರೆ, ಪರದೆಯ ಮೇಲಿನ ಹೋರಾಟದ ದೃಶ್ಯಗಳು ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಸಿನಿಮಾ Range ಬೇರೆ ತರಹ ಇರುತ್ತದೆ ಎಂದು ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ನಡೆಯುತ್ತಿರುವ ಚರ್ಚೆಗಳು. ಹಿಟ್ ಚಿತ್ರಗಳ ಸಾಲಿನಲ್ಲಿ ಸೂರ್ಯ
‘ಕರುಪ್ಪು’, ‘ವಿಶ್ವನಾಥನ್ ಅಂಡ್ ಸನ್ಸ್’ ಮತ್ತು ‘ದೃಶ್ಯ’ ನಂತಹ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸೂರ್ಯ ಈ ವರ್ಷ Full ಫಾರ್ಮ್ನಲ್ಲಿದ್ದಾರೆ. ಮತ್ತೊಂದೆಡೆ, ಗೋಪಿಚಂದ್ ತೆಲುಗಿನಲ್ಲಿ ‘ಭರತವರ್ಷ’ ಚಿತ್ರದೊಂದಿಗೆ ಮತ್ತೆ ಟ್ರ್ಯಾಕ್ಗೆ ಬರಲು ಶ್ರಮಿಸುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ “ನಾನು ಪ್ರಭಾಸ್ ಚಿತ್ರದಲ್ಲಿ ಮಾತ್ರ ವಿಲನ್ ಆಗಿ ಮಾಡುತ್ತೇನೆ” ಎಂದು ಹೇಳಿಕೊಂಡಿದ್ದ ಗೋಪಿಚಂದ್ ಈಗ ಸೂರ್ಯ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ. ಈ combination ಸೆಟ್ಟೇರಿದರೆ, ಇದು ತಮಿಳಿನಲ್ಲಿ ಗೋಪಿಚಂದ್ ಅವರ ಮೊದಲ ಚಿತ್ರವಾಗಿರುತ್ತದೆ. ಇದಲ್ಲದೆ, ಚಿತ್ರಮಂದಿರಗಳಲ್ಲಿ ಈ ಇಬ್ಬರು ತಾರೆಯರ ನಡುವಿನ ನಟನಾ ಸಾಮರ್ಥ್ಯ ಖಂಡಿತ ಚಿತ್ರದ ಹೈಲೈಟ್ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಸ್ಪಷ್ಟನೆ ಹೊರಬರಬೇಕಿದೆ.
Trending
- ಖ್ಯಾತ ಟಾಲಿವುಡ್ ನಟ ಮತ್ತೆ villain ಪಾತ್ರ ಮಾಡುತ್ತಾರ?
- ಕಚೇರಿ ನೌಕರನ ಅಂತ್ಯಕ್ರಿಯೆಗೆ ಹೆಗಲು ಕೊಟ್ಟು ಮಾನವೀಯತೆ ಮೆರೆದ ಸಾಹುಕಾರ!
- ಶ್ರೀನಿವಾಸಪುರ:ವೈದ್ಯರ ಸಂಘ ಆಯೋಜಿಸಿದ್ದ ಆರೋಗ್ಯ ಜಾಥಾಗೆ ಉತ್ತಮ ಪ್ರತಿಕ್ರೀಯೆ!
- ಶ್ರೀನಿವಾಸಪುರ: ಭೂ ಸಂತ್ರಸ್ತರ ಧರಣಿಗೆ ಬೆಂಬಲ ಸೂಚಿಸಿದ ರಮೇಶ್ ಕುಮಾರ್!
- ಆಧಾರ್ ಕಾರ್ಡ್ ಬದಲು VOTER ಐಡಿ ತರಲು ಕೇಂದ್ರ ಸರ್ಕಾರದ ಚಿಂತನೆ!
- KSRTC ಟಿಕೆಟ್ ದರ ಹೆಚ್ಚಳಕ್ಕೆ ಜನಸಾಮಾನ್ಯರ ಆಕ್ರೋಶ!
- ಶ್ರೀನಿವಾಸಪುರ: ತಾಲೂಕು ಆಡಳಿತಕ್ಕೆ ಶಿಷ್ಟಾಚಾರದ ಅರಿವು ಇಲ್ಲ ಆರೋಪ!
- ಶ್ರೀನಿವಾಸಪುರದಲ್ಲಿ ಅರಣ್ಯ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಯತ್ನ!
Thursday, November 19



